Chanakya Niti: ಗಂಡನಲ್ಲಿ ಈ ಗುಣಗಳಿದ್ರೆ ಹೆಂಡತಿ ಸಂತೃಪ್ತಿಯಿಂದ ಇರ್ತಾಳೆ; ಸಂಸಾರವಾಗುತ್ತೆ ಜೇನಿನಂತೆ ಮಧುರ

Chanakya Niti about Couple: ಆಚಾರ್ಯ ಚಾಣಕ್ಯರ ಪ್ರಕಾರ, ಗಂಡನಲ್ಲಿ ಕೆಲವು ವಿಶೇಷ ಗುಣಗಳಿದ್ದರೆ ಪತ್ನಿ ತೃಪ್ತಿಯಿಂದಿರುತ್ತಾಳೆ. ಈ ಐದು ಗುಣಗಳು ಗಂಡನಲ್ಲಿದ್ದರೆ ಸಾಂಸಾರಿಕ ಜೀವನ ಸುಂದರವಾಗಿರುತ್ತದೆ.

Chanakya Niti If a husband has these qualities his wife will be satisfied mrq

ಮಹಾನ್ ಆರ್ಥಶಾಸ್ತ್ರಜ್ಞರಾಗುರುವ ಆಚಾರ್ಯ ಚಾಣಕ್ಯರು, ಮಾನವರ ಜೀವನಶೈಲಿ ಮತ್ತು ಸಂಬಂಧಗಳ ಕುರಿತು ಹಲವು ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯರು ನೀಡಿದ ಸಲಹೆಗಳನ್ನು "ಚಾಣಕ್ಯ ನೀತಿ" ಎಂದು ಕರೆಯಲಾಗುತ್ತದೆ. ಚಾಣಕ್ಯ ನೀತಿಯಲ್ಲಿ ಪತಿ-ಪತ್ನಿ ಮಧುರ ಸಂಬಂಧಕ್ಕಾಗಿ ಏನು ಮಾಡಬೇಕು ಅನ್ನೋದನ್ನು ತಿಳಿಸಲಾಗಿದೆ. ಚಾಣಕ್ಯ ನೀತಿಯಲ್ಲಿ ಹೇಳಾದ ನೀತಿಗಳನ್ನು ಗಂಡ -  ಹೆಂಡತಿ ಅಳವಡಿಸಿಕೊಂಡ್ರೆ ಸಂಸಾರ ಸುಂದರವಾಗಿ ಸಾಗುತ್ತದೆ. ಸಾಂಸರಿಕ ಬದುಕು ಜೇನಿನಂತೆ ಮಧುರವಾಗಿರಲು ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.  ಇದಕ್ಕಾಗಿ ಕೆಲವು ವಿಶೇಷ ಗುಣಗಳ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ.  ಗಂಡನಲ್ಲಿ ಈ ವಿಶೇಷ ಗುಣಗಳಿದ್ರೆ ಪತ್ನಿ ತೃಪ್ತಿಯಿಂದಿರುತ್ತಾಳೆ. 

1.ಜಾಗರೂಕರಾಗಿರೋದು
ತನ್ನ ಮಡದಿ, ಮಕ್ಕಳು ಮತ್ತು ಕುಟುಂಬದ ಕರ್ತವ್ಯಗಳನ್ನು ಪೂರೈಸಲು ಸದಾ ಜಾಗರೂಕನಾಗಿರಬೇಕು. ಕುಟುಂಬದ ಸುರಕ್ಷತೆಗಾಗಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶತ್ರುಗಳಿಂದ ಕುಟುಂಬವನ್ನು ರಕ್ಷಿಸಲು ಸದಾ ಬದ್ಧನಾಗುವ ಗುಣವನ್ನು ಹೊಂದಬೇಕಾಗುತ್ತದೆ. ಉದಾಹರಣೆಗೆ ಎಷ್ಟೇ ಆಳವಾದ ಗಾಢ ನಿದ್ದೆಯಲ್ಲಿದ್ದರೂ, ಸಣ್ಣದಾದ ಶಬ್ದವಾದರೂ ಎಚ್ಚರಗೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. 

Latest Videos

2.ನಿಷ್ಠೆ
ಪುರುಷ ತನ್ನ ಕೆಲಸ ಮತ್ತು ಹೆಂಡತಿಗೆ ನಿಷ್ಠನಾಗಿರಬೇಕು. ಈ ಎರಡೂ ವಿಷಯಗಳಲ್ಲಿ ಗಂಡ ಎಂದಿಗೂ ಮೋಸ ಮಾಡುವ ಗುಣವನ್ನು ಹೊಂದಿರಬಾರದು. ಯಾವುದಾದ್ರೂ ಒಂದರಲ್ಲಿ ತನ್ನ ಪ್ರಾಮಾಣಿಕತೆ ಕಳೆದುಕೊಂಡ್ರೆ ಅದು ಇಡೀ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಪರಿಚಿತ ಮಹಿಳೆಯನ್ನು ನೋಡಿದ ನಂತರವೂ ಕಾಮೋದ್ರೇಕಗೊಳ್ಳುವ ಪುರುಷನ ಮನೆಯಲ್ಲಿ ಯಾವಾಗಲೂ ಕಲಹವಿರುತ್ತದೆ. ಇಂತಹ ಗುಣವುಳ್ಳ ಪುರುಷನೊಂದಿಗೆ ಯಾವ ಮಹಿಳೆಯೂ ಸಂತೋಷವಾಗಿರುವುದಿಲ್ಲ. 

3.ಶೌರ್ಯ
ತನ್ನ ಗಂಡ ನಿರ್ಭೀತ ಮತ್ತು ಧೈರ್ಯಶಾಲಿಯಾಗಿರಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ತನ್ನನ್ನು ರಕ್ಷಿಸಲು ಗಂಡ ಸದಾ ಯಾವಾಗಲೂ ಮುಂದಿರುತ್ತಾನೆ ಎಂಬ ಅನಿಸಿಕೆ ಮಹಿಳೆಯಲ್ಲಿ ಉಂಟಾದ್ರೆ ಮಾತ್ರ ಸಾಂಸರಿಕ ಜೀವನ ಸುಂದರವಾಗಿರುತ್ತದೆ. ಹೆಂಡತಿ ಮತ್ತು ಕುಟುಂಬಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಲು ಹಿಂಜರಿಯಬಾರದು. ಪುರುಷರು ಎಲ್ಲಾ ಸಂದರ್ಭಗಳಲ್ಲಿ ಧೈರ್ಯಶಾಲಿಗಳಾಗಿರಬೇಕು ಎಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Chanakya Niti: ಈ ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಪವರ್‌ಫುಲ್‌ ಅಂತಾರೆ ಚಾಣಕ್ಯ!

4.ತೃಪ್ತಿ
ಪತ್ನಿಯ ಎಲ್ಲಾ ಆಸೆಗಳನ್ನು ಈಡೇರಿಸೋದು ಗಂಡನ ಮೊದಲ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ದೈಹಿಕ ಮತ್ತು ಮಾನಸಿಕವಾಗಿ ಪತ್ನಿಯನ್ನು ಗಂಡ ತೃಪ್ತಿಪಡಿಸಬೇಕಾಗುತ್ತದೆ. ಹೀಗಾದಾಗ ಮಾತ್ರ ಜೋಡಿ ಯಾವಾಗಲೂ ಸಂತೋಷವಾಗಿರುತ್ತಾರೆ. ಮಾನಸಿಕವಾಗಿ ಪತ್ನಿಯನ್ನು ತೃಪ್ತಿಪಡಿಸುವ ಗಂಡ ಯಾವಾಗಲೂ ತನ್ನ ಹೆಂಡತಿಯ ನೆಚ್ಚಿನ ವ್ಯಕ್ತಿಯಾಗಿ ಉಳಿಯುತ್ತಾನೆ.

5.ಯಶಸ್ಸು
ಆಚಾರ್ಯ ಚಾಣಕ್ಯ ಹೇಳುವಂತೆ, ತನ್ನ ಗಂಡ ಯಶಸ್ವಿಯಾಗಿರಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಗಂಡ ತಾನು ದುಡಿಯುವ ಹಣವನ್ನು ಪೋಲು ಮಾಡದೇ ಉಳಿತಾಯ ಮಾಡಬೇಕೆಂದು ಮಹಿಳೆ ಬಯಸುತ್ತಾರೆ. ಈ ಗುಣವಿರುವ ಪುರುಷರು ಯಶಸ್ಸನ್ನು ಪಡೆಯುತ್ತಾರೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಇಂತಹ ಜಾಗದಲ್ಲಿ ಮಾತ್ರ ಎಂದಿಗೂ ಮನೆ ಕಟ್ಟಬೇಡಿ, ಜೀವನದುದ್ದಕ್ಕೂ ಸಮಸ್ಯೆ ಪಕ್ಕಾ

vuukle one pixel image
click me!