ಮೀನದಲ್ಲಿ ಪಂಚಗ್ರಹ ಯೋಗ, ಈ ಹೊಸ ವರ್ಷದಲ್ಲಿ ಸಿನಿಮಾ ಮನರಂಜನಾ ಕ್ಷೇತ್ರಕ್ಕೆ ನೀರಸ

Published : Mar 25, 2025, 11:34 AM ISTUpdated : Mar 25, 2025, 11:38 AM IST
ಮೀನದಲ್ಲಿ ಪಂಚಗ್ರಹ ಯೋಗ, ಈ ಹೊಸ ವರ್ಷದಲ್ಲಿ ಸಿನಿಮಾ ಮನರಂಜನಾ ಕ್ಷೇತ್ರಕ್ಕೆ ನೀರಸ

ಸಾರಾಂಶ

ಯುಗಾದಿಯಂದು ಸಂವತ್ಸರ ಬದಲಾಗುತ್ತದೆ, ಈ ಬಾರಿ ವಿಶ್ವಾವಸು ಸಂವತ್ಸರ ಸಂವತ್ಸರಗಳಲ್ಲಿ 39ನೇಯದು. ವರ್ಷದ ಆಗು ಹೋಗುಗಳ ಬಗ್ಗೆ ಜ್ಯೋತಿಷ್ಯ ತಜ್ಞ ಹರೀಶ್ ಕಶ್ಯಪ್ ಹೇಳಿದ್ದಾರೆ.   

ವಿಶ್ವಾವಸು ಸಂವತ್ಸರಗಳಲ್ಲಿ 39ನೇಯದು.ಯುಗಾದಿಯ ಶುಭಾರಂಭವು ಭಾನುವಾರ, ಪ್ರತಿಪದ ರೇವತಿ ಚಂದ್ರ ಐಂದ್ರ ಯೋಗದಲ್ಲಿದೆ , ವಸಂತ ಋತು ಚೈತ್ರ ಮಾಸದ ಶುಭ ಕಾಲದಲ್ಲಿ ಆರಂಭವಾಗುತ್ತದೆ. 31 ಮಾರ್ಚ್ ಸೋಮವಾರ ಅಕ್ಷಯ ಮುಹೂರ್ತವಿದ್ದು ಎಲ್ಲಾ ಶುಭ ಕಾರ್ಯಗಳಿಗೆ ಪ್ರಶಸ್ತವಾಗಿದೆ. ಪ್ರಾತ: ಮೀನ  ಉದಯ ಲಗ್ನವಿದ್ದು, ರವಿ ಶನಿ ಶುಕ್ರ ಬುಧ ಚಂದ್ರ ಪಂಚಗ್ರಹಯೋಗ ಇದ್ದುಎಲ್ಲಾ ಗ್ರಹವುಯುತಿಗೊಳ್ಳುವ  ಅತ್ಯಪರೂಪ ಯೋಗವಿದೆ. ಈ ಪಂಚಗ್ರಹ ಯೋಗ ಫಲವು ದೈತ್ಯ ದೇಶಗಳು, ಆಚಾರ ಹೀನರು, ತೋಳದಂಥ ಕಾದಾಡುವ ಗುಣದವರು ವೃದ್ದಿಯಾಗುವ ಫಲ.

ಈ ಸಂವತ್ಸರದ ಫಲವು ದೇಶದಲ್ಲಿ ಬಹುತೇಕ ಮಹಾಮಳೆ, ಸಸ್ಯ ಧಾನ್ಯ ವೃದ್ದಿ, ಯಜ್ಞ ಯಾಗಗಳು ನಡೆಯುವುದು, ಮಧ್ಯ ದೇಶದಲ್ಲಿ ಕಳ್ಳ ಕಾಕರ ಉಪಟಳ ಹೆಚ್ಚುವುದು. ಗುರು 14 ಮೇ ವರೆಗೆ ವೃಷಭದಲ್ಲಿದ್ದು, ಅಕ್ಟೋಬರ್ ನಲ್ಲಿ ಮಿಥುನಕ್ಕೆ ಸಾಗಿ ನಂತರ ವಕ್ರೀಯಾಗುತ್ತಾನೆ. ರಾಜ, ಸೇನೆ, ಮೇಘ ಅಧಿಪತಿ ರವಿಯಾಗಿರುವನು, ಮಂತ್ರಿ ಚಂದ್ರನು, ಸಸ್ಯಾಧಿಪ ಗುರುವು, ದಾನ್ಯಾಧಿಪ ಕುಜ. ರಸಾಧಿಪ ಶನಿಯು. ನೀರಸಾಧಿಪ ಬುಧ, ಪಶು ನಾಯಕ ಯಮ.

ವರ್ಷ ಫಲ ನೋಡುವುದಾದರೆ ರವಿ ಚಂದ್ರುರು ರಾಜ ಮಂತ್ರಿತ್ವ ಉಳ್ಳ ವರ್ಷ, ದೇಶ ದೇಶಗಳ ಆಳ್ವಿಕೆಯಲ್ಲಿ ಸಾಮರಸ್ಯ ಮೂಡುವುದು ಸಮುದ್ರ  ಆಕಾಶ ಮಾರ್ಗಗಳ ವ್ಯಾಪಾರಗಳು ವೃದ್ದಿ, ಕಳ್ಳ ಸಾಗಾಣೆ, ಮಾದಕ ದ್ರವ್ಯಗಳ ಅತೀವ ಹಾವಳಿ, ಮಿತ್ರ ಕ್ಷೇತ್ರ ವಹಿವಾಟು, ಹೂಡಿಕೆ ವ್ಯಾಪಾರಗಳು ಚೆನ್ನಾಗಿ ನಡೆವುದು, ನೇರ ಯುದ್ದಗಳನ್ನು ಮಾಡದೇ ಮೋಸ ಯುದ್ದ ನಡೆಸುವವರು. ಔಷಧಿ, ವಿಷ ಮದ್ದುಗಳು, ಧರ್ಮ ನಿಂದನೆಗಳು ಮೊದಲಾದವುಗಳು ಯುದ್ದಗಳಂತೆ ನಡೆಸುವವರು, ಇವರನ್ನು ಮಟ್ಟ ಹಾಕಲು  ಸರ್ಕಾರಕ್ಕೆ ಬಹುಕಷ್ಟವದಾರು, ಸಾಹಸದಿಂದ ಹತ್ತಿಕ್ಕುತ್ತಾರೆ. ಸಿನಿಮಾ ಮನರಂಜನೆ ಕ್ಷೇತ್ರವು  ನೀರಸವಾಗಲಿದೆ. ವೈದ್ಯಕೀಯ ಕ್ಷೇತ್ರ, ತಂತ್ರಜ್ಞಾನ, ವಿತ್ತ ಕ್ಷೇತ್ರಗಳಲ್ಲಿ ಉದ್ಯೋಗ ಬೇಡಿಕೆ ಹೆಚ್ಚಳವಾಗುತ್ತೆ.

07.9. 2025 ರ ಚಂದ್ರಗ್ರಹಣ ( ರಾಹು ಗ್ರಸ್ತ), 03.03. 2026 ಚಂದ್ರಗ್ರಹಣ ( ಕೇತುಗ್ರಸ್ತ) ಎರಡು ಮಾತ್ರ ಪೂರ್ವ ದೇಶಗಳಿಗೆ ಕಾಣಿಸುವುದು, ಆಚರಣೆ ಉಂಟು. ಒಟ್ಟಾರೆಯಾಗಿ ಈ ನೂತನ ಸಂವತ್ಸರವು ಶನಿಯ ಕೇಂದ್ರಚಾರದಿಂದ ಮುಕ್ತವಾಗಿದೆ. ಶುಭ ಅಧಿಕವಾಗಿದ್ದು, ನೆಮ್ಮದಿ ಇರುತ್ತದೆ. ಭಾರತದ ಪಾಲಿಗೆ ಶುಭ ಅಧಿಕ ವಿದ್ದು ವ್ಯವಹಾರ, ಧಾರ್ಮಿಕತೆ ಮತ್ತು ಆಡಳಿತಗಳಲ್ಲಿ ಅಪೂರ್ವ ಸಾಧನೆ ಕಾರ್ಯಗಳು ಮೂಡುವುದಕ್ಕೆ ವಿಫಲ ಅವಕಾಶಗಳಿವೆ.

ದೇವತಾ ಅನುಗ್ರಕ್ಕಾಗಿ ಮಹಾಕ್ಷೇತ್ರಗಳಲ್ಲಿ ಧಾರ್ಮಿಕ ನೇತಾರರು ವಿವಿಧವಾಗಿ , ಶ್ರೀ ವಿಷ್ಣು, ಮಹಾ ದುರ್ಗೆ, ರುದ್ರ ಯಾಗಗಳನ್ನು ಶ್ರೀ ಗುರು ಆಜ್ಞೆಗಳಿಂದ ಮಾಡಿ. ಮೇ ಕಳೆಯುವವರೆಗೆ ಪಾಪಗ್ರಹ ದೋಷವು ಅತೀವವಾಗಿ ಇದ್ದು, ಶಾಸ್ತ್ರೋಕ್ತ ದೇವತಾ ಕಾರ್ಯಗಳು ಹೆಚ್ಚು ಮಾಡುತ್ತೀರಬೇಕು.

PREV
Read more Articles on
click me!

Recommended Stories

ಅದೃಷ್ಟ ಬಾಗಿಲು ತಟ್ಟುತ್ತಿದೆ, ಈ 6 ರಾಶಿ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತದೆ
ಆದಿತ್ಯ ಮಂಗಳ ಯೋಗದಿಂದ ಫುಲ್‌ ಅದೃಷ್ಟ, ಫೆಬ್ರವರಿ 26 ರವರೆಗೆ 4 ರಾಶಿಗೆ ರಾಜಯೋಗ