ಮಾನವ ಜೀವನದಲ್ಲಿ ತಪಸ್ಸಿಗಿಂತ ಶಾಂತಿ, ನೆಮ್ಮದಿಗಿಂತ ಸಂತೋಷ, ತೃಷೆಗಿಂತ ರೋಗ ಮತ್ತು ಕರುಣೆಗಿಂತ ಧರ್ಮವಿಲ್ಲ ಎಂದು ಆಚಾರ್ಯರು ಹೇಳುತ್ತಾರೆ. ಆಚಾರ್ಯ ಚಾಣಕ್ಯರ ಈ ತತ್ವಗಳನ್ನು ಅಳವಡಿಸಿಕೊಂಡರೆ ಇರುವ ಮನೆಯೇ ಸ್ವರ್ಗವಾಗುವುದರಲ್ಲಿ ಅನುಮಾನವಿಲ್ಲ.
ಆಚಾರ್ಯ ಚಾಣಕ್ಯರು ಮಾನವ ಜೀವನದಲ್ಲಿ ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ಹಲವು ಮಾರ್ಗಗಳನ್ನು ನೀಡಿದ್ದಾರೆ. ಯಶಸ್ಸಿನ ಸೂತ್ರಗಳು, ಸಂತೋಷದ ಜೀವನದ ಗುಟ್ಟು, ಮನುಷ್ಯ ಹೇಗಿರಬೇಕು, ಹೇಗೆ ಬದುಕಬೇಕು ಎಂಬುದೆಲ್ಲವೂ ಅವರ ಚಾಣಕ್ಯ ನೀತಿಗಳಲ್ಲಿ ಮಿಳಿತವಾಗಿವೆ. ಅವರ ನೀತಿ ಶಾಸ್ತ್ರದ ಶ್ಲೋಕಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪಾಲಿಸಿದರಾದರೆ ಯಾರಾದರೂ ತಮ್ಮ ಜೀವನವನ್ನು ಯಶಸ್ವಿಗೊಳಿಸಬಹುದು. ಮಾನವ ಜೀವನದಲ್ಲಿ ತಪಸ್ಸಿಗಿಂತ ಶಾಂತಿ, ನೆಮ್ಮದಿಗಿಂತ ಸಂತೋಷ, ತೃಷೆಗಿಂತ ರೋಗ ಮತ್ತು ಕರುಣೆಗಿಂತ ಧರ್ಮವಿಲ್ಲ ಎಂದು ಆಚಾರ್ಯರು ಹೇಳುತ್ತಾರೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹೇಳುತ್ತಾರೆ, ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ಸ್ವರ್ಗದಂತೆ ಸಂತೋಷವಾಗಿರಿಸಿಕೊಳ್ಳಬೇಕಾದರೆ, ನಾಲ್ಕು ವಿಷಯಗಳನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ. ಅವರ ಈ ಮಾತುಗಳು ಖಂಡಿತವಾಗಿಯೂ ನೂರಕ್ಕೆ ನೂರು ಸತ್ಯವಾಗಿವೆ. ಮನೆಯನ್ನು ಸ್ವರ್ಗಸದೃಶವಾಗಿರಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಕೆಳಗಿನ ಶ್ಲೋಕದ ಮೂಲಕ ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.
क्षान्ति तुल्यं तपो नास्ति सन्तोषान्न सुखं परम् ।
नास्ति तृष्णा समो व्याधिः न च धर्मो दयापरः ॥
शांति है सबसे बड़ा तप
ತಾತ್ಪರ್ಯ: ಸಹನೆಗೆ ಸಮಾನವಾದ ತಪಸ್ಸು ಇಲ್ಲ, ಸಂತೋಷಕ್ಕೆ ಸಮಾನವಾದ ತೃಪ್ತಿ ಇಲ್ಲ.
ರೋಗಕ್ಕೆ ಸಮಾನವಾದ ಬಾಯಾರಿಕೆ ಇಲ್ಲ ಹಾಗೂ ಕರುಣೆಗೆ ಸಮಾನವಾದ ಧರ್ಮವಿಲ್ಲ
ಈ ಮಾತುಗಳನ್ನು ವಿವರವಾಗಿ ನೋಡೋಣ.
Ganesh Visarjan 2022: ಗಣೇಶ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ಯಾವುದು?
ತಾಳ್ಮೆಯೇ ಶ್ರೇಷ್ಠ ತಪಸ್ಸು
ಮಾನವ ಜೀವನವನ್ನು ಶ್ಲೋಕಗಳ ಮೂಲಕ ವಿವರಿಸುತ್ತಾ ಆಚಾರ್ಯ ಚಾಣಕ್ಯರು ಸಹನೆಗಿಂತ ದೊಡ್ಡ ತಪಸ್ಸು ಇಲ್ಲ ಎಂದು ಹೇಳುತ್ತಾರೆ. ಪರಿಸ್ಥಿತಿ ಏನೇ ಇರಲಿ, ಒಬ್ಬನು ಸಹನೆಯನ್ನು ಕಾಪಾಡಿಕೊಳ್ಳಬೇಕು. ತಾಳ್ಮೆಯನ್ನು ಪಡೆಯುವುದಕ್ಕಿಂತ ದೊಡ್ಡ ತಪಸ್ಸು ಮತ್ತೊಂದಿಲ್ಲ. ಅಂದರೆ, ಯಶಸ್ಸಿಗೆ, ಮನುಷ್ಯನು ಸದಾ ತಾಳ್ಮೆ ಕಂಡುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ತೃಪ್ತಿಗಿಂತ ಮಿಗಿಲಾದ ಸಂತೋಷವಿಲ್ಲ
ಆಚಾರ್ಯ ಚಾಣಕ್ಯರು ಹೇಳುವಂತೆ ಜೀವನದಲ್ಲಿ ನೆಮ್ಮದಿಗಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಸಂತೋಷವಾಗಿರಲು, ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ತೃಪ್ತಿಯ ಭಾವವನ್ನು ಇಟ್ಟುಕೊಳ್ಳಬೇಕು. ಸಂತೃಪ್ತಿಯಿಂದ ಮಾತ್ರ ಮನುಷ್ಯನ ಬದುಕಿನ ದೋಣಿ ಸಾಗಲು ಸಾಧ್ಯ. ಮನದಲ್ಲಿ ಸಂತೃಪ್ತಿ ಇಲ್ಲದವನು ಅನಾವಶ್ಯಕವಾಗಿ ಕಷ್ಟದಲ್ಲಿ ಅಲೆಯುತ್ತಾನೆ. ನಮ್ಮಲ್ಲಿ ಏನಿದೆಯೋ ಅದರಲ್ಲೇ ತೃಪ್ತಿ ಪಡೆಯುವ ಸ್ವಭಾವ ಬೆಳೆಸಿಕೊಳ್ಳಬೇಕು.
ಕಳಂಕ ಚತುರ್ಥಿ 2022: ಇಂದು ಚಂದ್ರನನ್ನು ನೋಡಿದ್ರೆ ಅಪವಾದ ತಪ್ಪಿಸೋಕೆ ಈ ಕೆಲಸ ಮಾಡಿ
ಕಡುಬಯಕೆ ದೊಡ್ಡ ರೋಗ
ಆಚಾರ್ಯ ಚಾಣಕ್ಯರು ಕಡುಬಯಕೆ ಮನುಷ್ಯನೊಳಗಿನ ದೊಡ್ಡ ಕಾಯಿಲೆ ಎಂದು ನಂಬುತ್ತಾರೆ. ಜೀವನದಲ್ಲಿ ಬೇಕುಗಳು ಮುಗಿಯುವುದೇ ಇಲ್ಲ. ಒಂದು ಕೊಳ್ಳುತ್ತಲೇ ಮತ್ತೊಂದು, ಮತ್ತೊಂದು ಸಿಕ್ಕರೆ ಮಗದೊಂದು ಬೇಕೆನಿಸುತ್ತದೆ. ಈ ರೀತಿಯ ಅಪರಿಮಿತ ಬಯಕೆಗೆ ಬ್ರೇಕ್ ಹಾಕಬೇಕು. ತೃಷ್ಣ ಅಥವಾ ಅಭಿಲಾಷ ಎಂಬ ಹೆಸರಿನ ಈ ಕಾಯಿಲೆಗೆ ಒಳಗಾದ ಯಾವುದೇ ವ್ಯಕ್ತಿ ತನ್ನ ಜೀವನದುದ್ದಕ್ಕೂ ಓಡುತ್ತಾನೆ ಮತ್ತು ಅಲೆದಾಡುತ್ತಾನೆ. ಈ ರೋಗವು ವ್ಯಕ್ತಿಯನ್ನು ಶಾಂತಿಯಿಂದ ಬದುಕಲು ಅನುಮತಿಸುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ದುರಾಸೆಯಲ್ಲಿ ಉಸಿರುಗಟ್ಟುತ್ತಲೇ ಇರುತ್ತಾನೆ.
ಕರುಣೆ ದೊಡ್ಡ ಧರ್ಮ
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಎಲ್ಲಾ ಧರ್ಮಗಳಲ್ಲಿ ದಯೆಗೆ ಅತ್ಯುನ್ನತ ಸ್ಥಾನವನ್ನು ನೀಡಿದ್ದಾರೆ. ಆಚಾರ್ಯರು ಹೇಳುವಂತೆ ಯಾವುದೇ ಜೀವಿಗಳ ಮೇಲೆ ಕರುಣೆ ತೋರುವವನು ಪಾಪಕರ್ಮಗಳಲ್ಲಿ ಎಂದಿಗೂ ಭಾಗಿಯಾಗುವುದಿಲ್ಲ. ಕರುಣೆ ಇರುವ ವ್ಯಕ್ತಿಯ ಮನಸ್ಸಿನಲ್ಲಿ ದೋಷಗಳು ಬೆಳೆಯುವುದಿಲ್ಲ.