ಮನೆಯಲ್ಲಿರುವ ಈ ಮಸಾಲೆ ವಸ್ತು ಪರ್ಸ್ ಸೇರಿದ್ರೆ ಆಗುತ್ತೆ ಮ್ಯಾಜಿಕ್

By Roopa Hegde  |  First Published Jul 5, 2024, 12:55 PM IST

ಶ್ರೀಮಂತರಾಗ್ಬೇಕು, ಕೆಟ್ಟ ದೃಷ್ಟಿ ಬೀಳ್ಬಾರದು, ಸಾಲ ತೀರಬೇಕು ಎನ್ನುವ ಜನರು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಪೂಜೆ ಮಾಡ್ಬೇಕಾಗಿಲ್ಲ. ನಿಮ್ಮ ಪರ್ಸ್ ನಲ್ಲಿ ಕೆಲವೇ ಕೆಲವು ವಸ್ತುಗಳನ್ನು ಇಟ್ಕೊಂಡ್ರೆ ಸಾಕು. 
 


ಅಡುಗೆ ಮನೆಯಲ್ಲಿರುವ ಮಸಾಲೆ ವಸ್ತುಗಳು ಅಡುಗೆ ರುಚಿಯನ್ನು ಮಾತ್ರ ಹೆಚ್ಚಿಸೋದಿಲ್ಲ. ಅವು ಔಷಧಿ, ಪೂಜೆ ಸೇರಿದಂತೆ  ಬೇರೆ ಕೆಲಸಕ್ಕೂ ಬಳಕೆ ಆಗ್ತವೆ. ಕೆಲ ಮಸಾಲೆಗಳಿಗೆ ವಾಸ್ತು ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. ಅವುಗಳನ್ನು ನೀವು ಪರ್ಸ್ ಅಥವಾ ಜೇಬಿನಲ್ಲಿ ಇಟ್ಕೊಂಡು ಹೋದ್ರೆ ಚಮತ್ಕಾರಿ ಬದಲಾವಣೆ ಕಾಣಬಹುದು. ಆರ್ಥಿಕ ಸಮಸ್ಯೆ, ಉದ್ಯೋಗ, ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಿಸುವ ವಸ್ತುಗಳು ಯಾವುವು ಅಂತಾ ನಾವು ಹೇಳ್ತೇವೆ. 

ನಿಮ್ಮ ಜೊತೆ ಈ ವಸ್ತು ತೆಗೆದುಕೊಂಡು ಹೋಗಲು ಮರೆಯಬೇಡಿ : 

Tap to resize

Latest Videos

ಲವಂಗ (Cloves) : ಲವಂಗವು ನಿಮ್ಮ ಅಡುಗೆಮನೆಯಲ್ಲಿ ಬಳಸುವ ಮಸಾಲೆ. ಇದನ್ನು ಪೂಜೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ಬಳಸಲಾಗುತ್ತದೆ. ನಿಮ್ಮ ಪರ್ಸ್‌ (Purse ) ನಲ್ಲಿ ಲವಂಗವನ್ನು ಇಟ್ಟುಕೊಳ್ಳುವುದರಿಂದ  ನೀವು ಅನಗತ್ಯ ವೆಚ್ಚಗಳನ್ನು ತಪ್ಪಿಸುತ್ತೀರಿ ಮತ್ತು ಹಣವನ್ನು ಸಂಗ್ರಹಿಸುವುದು ಸುಲಭವಾಗುತ್ತದೆ. ವಾಸ್ತು ಪ್ರಕಾರ, ಇದು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ನೀವು ಮನೆಯಿಂದ ಹೊರಗೆ ಹೋಗುವ ಮೊದಲು 9 ಲವಂಗವನ್ನು ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿಟ್ಟುಕೊಳ್ಳಿ. ಈ ಲವಂಗ, ನಕಾರಾತ್ಮಕ ಶಕ್ತಿ ಹಾಗೂ ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ.  ಇದಲ್ಲದೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಸಿಗಲು ನೆರವಾಗುತ್ತದೆ. 

ದೇವಸ್ಥಾನಕ್ಕೆ ಹೋದ್ರೆ ಅಳು ಬರುತ್ತಾ? ದೇವರಿದ್ದಾನೋ ಇಲ್ಲವೋ ಕಂಡು ಹಿಡಿಯೋದು ಹೀಗೆ!

ಏಲಕ್ಕಿ (Cardamom) : ನಿಮ್ಮ ಪರ್ಸ್ ನಲ್ಲಿ ಒಂದು ಏಲಕ್ಕಿಯನ್ನು ಇಟ್ಟುಕೊಳ್ಳುವುದು ಮಂಗಳಕರ ಎಂದು ಭಾವಿಸಲಾಗಿದೆ. ಏಲಕ್ಕಿಯನ್ನು ಶುಭ ಕೆಲಸಗಳಲ್ಲಿ ಬಳಕೆ ಮಾಡಲಾಗುತ್ತದೆ.  ಏಲಕ್ಕಿ ಹಣವನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ವ್ಯಾಪಾರದಲ್ಲಿ ವೃದ್ಧಿ ಬಯಸುವವರು ಪರ್ಸ್ ನಲ್ಲಿ ಒಂದು ಏಲಕ್ಕಿಯನ್ನು ಇಷ್ಟುಕೊಳ್ಳಬೇಕು.  ಪ್ರತಿ ದಿನ ನೀವು ಈ ಕೆಲಸ ಮಾಡುವುದರಿಂದ ನೀವು ಆರ್ಥಿಕವಾಗಿ ಸದೃಢವಾಗುತ್ತೀರಿ. ಸಾಲದ ಸಮಸ್ಯೆಯಲ್ಲಿರುವ ಜನರು ಪರ್ಸ್ ನಲ್ಲಿ 11 ಏಲಕ್ಕಿಯನ್ನು ಇಟ್ಟುಕೊಳ್ಳಬೇಕು. ಇದು ಬೇಗ ಸಾಲ ಮುಕ್ತಿಗೆ ಸಹಕಾರಿಯಾಗುತ್ತದೆ. 

ಪರ್ಸ್ ನಲ್ಲಿರುವ ಒಂದು ಏಲಕ್ಕಿ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಪದೇ ಪದೇ ಕೆಟ್ಟ ದೃಷ್ಟಿಯಿಂದ ತೊಂದರೆಗೆ ಒಳಗಾಗ್ತಿದ್ದೀರಿ ಎಂದಾದ್ರೆ ಪರ್ಸ್ ನಲ್ಲಿ ಏಲಕ್ಕಿ ಇಟ್ಟುಕೊಳ್ಳಲು ಮರೆಯಬೇಡಿ. 

ಕಾಳು ಮೆಣಸು (Black Pepper) : ವಾಸ್ತು ಶಾಸ್ತ್ರದ ಪ್ರಕಾರ ನೀವು ನಿಮ್ಮ ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಂಡರೆ ಅನೇಕ ಚಮತ್ಕಾರಿ ಬದಲಾವಣೆಯನ್ನು ಕಾಣಬಹುದು. ಪರ್ಸ್ ನಲ್ಲಿರುವ ಕಾಳು ಮೆಣಸು  ಅಸೂಯೆಪಡುವ ಜನರಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ನೀವು ಪರ್ಸ್ ನಲ್ಲಿ ಎರಡು ಕಾಳು ಮೆಣಸನ್ನು ಇಟ್ಟುಕೊಂಡರೆ ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ನೀವು ಆರ್ಥಿಕವಾಗಿ ಬಲ ಪಡೆಯುತ್ತೀರಿ. 

ಶನಿದೋಷ ಇರುವವರು ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಳ್ಳಬೇಕು. ಶನಿ ದೋಷ ನಿವಾರಣೆಗೆ ಇದು ಸಹಕಾರಿ. ನೌಕರಿಯಲ್ಲಿ ಸಮಸ್ಯೆಯಾಗ್ತಿದೆ ಎನ್ನುವ ಜನರು ತಮ್ಮ ಪರ್ಸ್ ನಲ್ಲಿ ಎರಡು ಕಾಳು ಮೆಣಸನ್ನು ಇಟ್ಟುಕೊಂಡ್ರೆ ಉದ್ಯೋಗ ಬೇಗ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ನಕಾರಾತ್ಮಕತೆಯೇ ತುಂಬಿದೆ ಎನ್ನುವ ಜನರು ಪರ್ಸ್ ನಲ್ಲಿ ಕಾಳು ಮೆಣಸನ್ನು ಇಟ್ಟುಕೊಳ್ಳಬೇಕು. ಇದು ನಕಾರಾತ್ಮಕತೆ ಹಿಮ್ಮೆಟ್ಟಿ, ಜೀವನದಲ್ಲಿ ಸಕಾರಾತ್ಮಕ ಚಿಂತನೆ ಬೆಳೆಯುವಂತೆ ಮಾಡುತ್ತದೆ.

121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?

ಪರ್ಸಲ್ಲಿಡಬೇಡಿ ಈ ವಸ್ತು: ಪರ್ಸಲ್ಲಿ ಕೆಲ ವಸ್ತು ಇಷ್ಟರೆ ಶುಭ ಫಲ. ಅದೇ ರೀತಿ ಕೆಲವು ಅಶುಭ ಫಲ ನೀಡುತ್ತವೆ. ನಿಮ್ಮ ಪರ್ಸ್ ಹೆಚ್ಚು ಪೇಪರ್ ನಿಂದ ತುಂಬಿರಬಾರದು. ಅದ್ರಲ್ಲೂ ಖರ್ಚು, ಲೆಕ್ಕದ ಪೇಪರ್ ಇರ್ಲೇಬಾರದು.  

click me!