ಕುಂಕುಮ ಯಾವ ಬೆರಳಿನಿಂದ ಹಚ್ಚಬೇಕು; ಆಯಸ್ಸು ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

By Vaishnavi Chandrashekar  |  First Published Jul 5, 2024, 12:02 PM IST

ಯಾವ ಬೆರಳ ಬಳಸಿ ನಾವು ಕುಂಕುಮ ಇಟ್ಟುಕೊಳ್ಳಬೇಕು, ಯಾವ ಬೆರಳಿನಲ್ಲಿ ಬೇರೆ ಅವರಿಗೆ ಇಡಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..... 


ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಬ್ಬರು ಹಣೆಗೆ ಕುಂಕುಮ, ವಿಭೂತಿ, ಗಂಧ ಮತ್ತು ಕೇಸರಿ ಬಂಡಾರ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿದ್ದಾಗ ಅಥವಾ ದೇವಸ್ಥಾನಕ್ಕೆ ಹೋದಾಗ ಕೆಲವರು ಮಧ್ಯದ ಬೆರಳು ಬಳಸುತ್ತಾರೆ. ಅದೇ ಬೇರೆಯವರು ಮನೆಗೆ ಹೋದಾಗ ಉಂಗುರದ ಬೆರಳು ಬಳಸುತ್ತಾರೆ. ಇನ್ನು ಆರತಿ ಅಥವಾ ದೃಷ್ಟಿ ತೆಗೆದು ಬರ ಮಾಡಿಕೊಳ್ಳುವಾಗ ಹೆಬ್ಬೆರಳು ಬಳಸುತ್ತಾರೆ. ಕೆಲವೊಮ್ಮೆ ಯಾವಾಗ ಯಾವುದು ಬಳಸಬೇಕು ಎಂದು ತಿಳಿಯದೇ  ತೋರು ಬೆರಳು ಬಳಸುತ್ತಾರೆ. ಕಿರು ಬೆರಳ ಬಿಟ್ಟು ಯಾವ ಬೆರಳ ಬೇಕಿದ್ದರೂ ಬಳಸಹುದು ಅಂತಾರೆ ಹಿರಿಯರು.

ಇನ್ನು ಕಿರು ಬೆರಳು ಹೊರತು ಪಡಿಸಿದರೆ ಉಳಿದ ನಾಲ್ಕು ಬೆರಳು ಒಂದೊಂದು ವಿಶೇಷ ಮಹತ್ವ ಹೊಂದಿದೆ. ಐದು ಬೆರಳುಗಳು ಒಂದೊಂದು ಗ್ರಹವನ್ನು ಸೂಚಿಸುತ್ತದೆ ಮತ್ತು ಅದಕ್ಕೊಂದು ಅರ್ಥ ಇದೆ. 

Tap to resize

Latest Videos

ಹೆಬ್ಬೆರಳಿಲ್ಲಿ ಮಂಗಳ ಗ್ರಹ Strengeth ಅಥವಾ ಶಕ್ತಿ ಸೂಚಿಸುತ್ತದೆ ಹೀಗಾಗಿ ವಿಶೇಷವಾಗಿ ಈ ಬೆರಳಿನಲ್ಲಿ ಕುಂಕುಮ ಹಚ್ಚುವುದನ್ನು ನೋಡಿದ್ದೀವಿ. ಗ್ರಹವು ಆರೋಗ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಹೀಗಾಗಿ ಹೆಬ್ಬೆರಳು ಪುರುಷರಿಗೆ ಆರೋಗ್ಯ, ಶಕ್ತಿ, ಇತ್ಯಾದಿಗಳನ್ನು ಸೂಚಿಸುವಂತೆ ಬಳಸಿಕೊಳ್ಳುತ್ತಾರೆ. 

ನಿಮ್ಮ ಹೆಸರು ಅಪರ್ಣಾ ನಾ? ಪಾರ್ವತಿಗೆ ಈ ಹೆಸರು ಬಂದಿದ್ದೇ ಆ ಏಲೆಗಳನ್ನು ತ್ಯಜಿಸಿದ್ದಕೆ!

ಪಾಯಿಂಟ್ ಫಿಂಗರ್ ಅಂದ್ರೆ ತೋರು ಬೆರಳು. ಇದು ಗುರು ಗ್ರಹ ಸೂಚಿಸುತ್ತಿದ್ದು ಈ ಬೆರಳನ್ನು ಬಳಸಿದರೆ ಜ್ಞಾನ ಮತ್ತು ಮೋಕ್ಷವನ್ನು ನೀಡುತ್ತದೆ. ತೋರು ಬೆರಳಿನಿಂದ ತಿಲಕ ಹಚ್ಚಿದರೆ ಮೋಕ್ಷ ಒದಗಿಸುತ್ತದೆ ಎನ್ನುತ್ತಾರೆ. ಸೂಚಕ ಬೆರಳಿನ ಮೂಲವು ಗುರುಗ್ರಹದ ಗ್ರಹವನ್ನು ಉಲ್ಲೇಖಿಸುತ್ತದೆ.

ಮಧ್ಯದಲ್ಲಿ ಇರುವ ಬೆರಳು ಶನಿಯನ್ನು ಸೂಚಿಸುತ್ತದೆ.  ದೀರ್ಘಾಯಸ್ಸಿಗೆ ಈ ಬೆರಳನ್ನು ಬಳಸುತ್ತಾರೆ. ದೀರ್ಘಾವಧಿಯ ಜೀವನವನ್ನು ನೀಡುತ್ತದೆ ಇದನ್ನು ಬಳಸಿ ಎಂದು ಪದೇ ಪದೇ ಹಿರಿಯರು ಹೇಳುತ್ತಿರುತ್ತಾರೆ. 

ಪರ್ಸಲ್ಲಿ ದುಡ್ಡು ಜಾಸ್ತಿ ಆಗ್ಬೇಕಾ? ಕೆಟ್ಟ ದೃ‍ಷ್ಠಿ ದೂರ ಅಗ್ಬೇಕಾ?; ಮಿಸ್‌ ಮಾಡದೆ ಈ ಒಂದು ವಸ್ತುನ ಮೊದಲು ಖರೀದಿಸಿ

ರಿಂಗ್ ಫಿಂಗರ್ ಅಥವಾ ಉಂಗುರದ ಬೆರಳು. ಇದು ಸೂರ್ಯ ಗ್ರಹವನ್ನು ಸೂಚಿಸುತ್ತಿದ್ದು ಶಾಂತಿಯನ್ನು ನೀಡುತ್ತದೆ. ಸೂರ್ಯನು ಉಂಗುರದ ಬೆರಳಿನ ಪ್ರತೀಕ. ಆದ್ದರಿಂದ, ರಿಂಗ್ (ಉಂಗುರದ) ಬೆರಳಿನೊಂದಿಗೆ ತಿಲಕವನ್ನು ಅನ್ವಯಿಸುವುದರಿಂದ ಶಾಂತಿಯನ್ನು ಒದಗಿಸುತ್ತದೆ.ವ್ಯಕ್ತಿಯು ಸೂರ್ಯನ ಶಕ್ತಿಗೆ ಸಾಂಕೇತಿಕವಾದ ಮುಖಕ್ಕೆ ಒಂದು ಹೊಳಪನ್ನು ತರುತ್ತದೆ. ರಿಂಗ್ ಬೆರಳನ್ನು ಬಳಸುವ ಮೂಲಕ ವ್ಯಕ್ತಿಯು ಹಣೆಯ ಮೇಲೆ ಆಜ್ಞಾ ಚಕ್ರವನ್ನು ಜಾಗೃತಗೊಳಿಸುತ್ತಾನೆ ಮತ್ತು ಇದು ಒಬ್ಬರ ಬುದ್ಧಿಶಕ್ತಿಯನ್ನು ಎಚ್ಚರಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. 

ಕೊನೆಯ ಬೆರಳು ಅಂದ್ರೆ ಕಿರು ಬೆರಳು ಬುಧ ಗ್ರಹವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಈ ಬೆರಳನ್ನು ಹೆಚ್ಚಾಗಿ ಬಳಸುವುದಿಲ್ಲ.  

click me!