ಜ್ಯೋತಿಷ ಶಾಸ್ತ್ರ ದ ಪ್ರಕಾರ ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡತೆ, ಇಷ್ಟ-ಅನಿಷ್ಟಗಳು, ಭವಿಷ್ಯ, ಪ್ರೀತಿ, ಉದ್ಯೋಗ ಹಾಗೂ ಸಂಬಂಧಗಳನ್ನು ಲೆಕ್ಕ ಹಾಕಲಾಗುತ್ತದೆ.ಅದರಂತೆಯೇ ಕಟಕ ರಾಶಿಯ ಮಹಿಳೆಗೆ ಯಾವ ರಾಶಿಯ ಪುರುಷ ಹೊಂದಾಣಿಕೆಯಾಗುತ್ತಾನೆ ಎಂಬ ಮಾಹಿತಿಯನ್ನು ತಿಳಿಯೋಣ.
ಜ್ಯೋತಿಷ ಶಾಸ್ತ್ರ (Astrology)ದ ಪ್ರಕಾರ ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ, ನಡತೆ, ಇಷ್ಟ-ಅನಿಷ್ಟಗಳು, ಭವಿಷ್ಯ, ಪ್ರೀತಿ, ಉದ್ಯೋಗ ಹಾಗೂ ಸಂಬಂಧಗಳನ್ನು ಲೆಕ್ಕ ಹಾಕಲಾಗುತ್ತದೆ. ನಮ್ಮ ಸಂಪ್ರದಾಯದಲ್ಲಿ ಮದುವೆ (marriage)ಗೂ ಮುನ್ನ ಗಂಡು-ಹೆಣ್ಣಿನ ಗ್ರಹ, ಲಗ್ನ, ನಕ್ಷತ್ರ, ನಾಡಿ ಸಾಮ್ಯತೆ ಇದೆಯೇ ಎಂದು ನೋಡಲಾಗುತ್ತದೆ. ಅದರಂತೆಯೇ ಕಟಕ ರಾಶಿ (Cancer sign)ಯ ಮಹಿಳೆಗೆ ಯಾವ ರಾಶಿಯ ಪುರುಷ ಹೊಂದಾಣಿಕೆಯಾಗುತ್ತಾನೆ ಎಂಬ ಮಾಹಿತಿಯನ್ನು ತಿಳಿಯೋಣ.
ಕಟಕವು ನಾಲ್ಕನೇ ರಾಶಿಚಕ್ರ ಚಿಹ್ನೆಯಾಗಿದ್ದು, ಈ ರಾಶಿ ಚಕ್ರದ ಮಹಿಳೆಯರಿಗೆ ಇತರರ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಇವರ ವ್ಯಕ್ತಿತ್ವವು ನಿಸ್ವಾರ್ಥ (Selfless)ದಿಂದ ಕೂಡಿದೆ. ಮೊದಲ ಬಾರಿಗೆ ಯಾರನ್ನಾದರೂ ಭೇಟಿಯಾದಾಗ ಭಾವನೆ (feeling)ಗಳನ್ನು ನಿಯಂತ್ರಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಂಡರೆ ನಿಜವಾದ ಜೀವನ ಸಂಗಾತಿ (life partner)ಆಗುತ್ತಾರೆ. ಈ ರಾಶಿಯ ಮಹಿಳೆಯರು ಪ್ರೀತಿಪಾತ್ರರನ್ನು ನೋಡಿಕೊಳ್ಳುವುದರಲ್ಲಿ ಆನಂದವನ್ನು ಕಾಣುತ್ತಾರೆ. ಇಬ್ಬರ ನಡುವಿನ ಸಂಬಂಧ (relationship)ಗಳು ಸಹಾನುಭೂತಿ ಮತ್ತು ಪ್ರೀತಿಯಿಂದ ತುಂಬಿರುತ್ತವೆ.
ಕಟಕ ರಾಶಿಯ ಮಹಿಳೆ ಮತ್ತು ವೃಶ್ಚಿಕ ರಾಶಿಯ ಪುರುಷ
ಕಟಕ (Cancer)ಮಹಿಳೆ ಮತ್ತು ವೃಶ್ಚಿಕ ಪುರುಷನ ಮದುವೆಗೆ ಪರಿಪೂರ್ಣ ರಾಶಿಚಕ್ರದ ಹೊಂದಾಣಿಕೆ ಆಗಲಿದೆ. ಇಬ್ಬರ ನಡುವಿನ ಬಾಂಧವ್ಯ (attachment)ವು ಕಾಲಕಳೆದಂತೆ ಗಟ್ಟಿಯಾಗುತ್ತ ಹೋಗುತ್ತದೆ ಮತ್ತು ಉತ್ತಮವಾಗಿರುತ್ತದೆ. ಇಬ್ಬರ ಬಾಂಧವ್ಯ ಉತ್ತಮವಾಗಿರುವುದರಿಂದ ಸಂವಹನ ಶೈಲಿಯು ಸುಧಾರಿಸುತ್ತದೆ. ಇಬ್ಬರ ನಡುವೆ ಪರಸ್ಪರ ನಿಷ್ಠೆ ಮತ್ತು ಪ್ರಾಮಾಣಿಕತೆ ಇರುತ್ತದೆ. ನೀವು ಮಹತ್ವಾಕಾಂಕ್ಷೆ ಮತ್ತು ಅತ್ಯಂತ ಸಂವೇದನಾಶೀಲರಾಗಿದ್ದು, ಮೊಂಡುತನ (Stubbornness)ವು ಇಬ್ಬರ ನಡುವೆ ಅಡ್ಡಿಯಾಗಬಹುದು. ಆದರೆ ಇಬ್ಬರ ಜೋಡಿಯು ಉತ್ತಮ ವಾಗಿರುತ್ತದೆ.
ಕಟಕ ರಾಶಿಯ ಮಹಿಳೆ ಮತ್ತು ಸಿಂಹ ರಾಶಿಯ ಪುರುಷ
ಕಟಕ ಮಹಿಳೆ ಮತ್ತು ಸಿಂಹ (Leo)ಪುರುಷ ಜೋಡಿಯು ಆದರ್ಶ ದಂಪತಿ ಆಗಲಿದೆ. ವಾಸ್ತವವಾಗಿ ನಿಮ್ಮ ಚಂದ್ರನ ಚಿಹ್ನೆಗಳು ಸಂಪೂರ್ಣ ವಿರುದ್ಧವಾಗಿದ್ದು, ವಿರುದ್ದ ಅಭ್ಯಾಸಗಳು ಇಬ್ಬರ ನಡುವೆ ಆಕರ್ಷಣೆ ಉಂಟುಮಾಡುತ್ತದೆ. ನೀವಿಬ್ಬರೂ ಸಾಕಷ್ಟು ಪಾಸಿಟಿವ್ (Positive)ಗುಣ ಹೊಂದಿದವರಾಗಿದ್ದು, ನಿಮ್ಮ ಸಂಬಂಧದಲ್ಲಿ ಇಬ್ಬರೂ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಹೊಂದುವಿರಿ. ನೀವಿಬ್ಬರೂ ಉತ್ತಮ ಪ್ರೇಮಿಗಳಾಗಿದ್ದು, ಪರಸ್ಪರರ ಸ್ಟ್ರೆಂಥ್ ಮತ್ತು ವೀಕ್ನೆಸ್ನ್ನು ಗೌರವಿಸುವಿರಿ. ಇನ್ನು ಮುಖ್ಯವಾಗಿ ಕಾಳಜಿಯ ವಿಚಾರ ಬಂದಾಗ ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತೀರಿ.
ಕಟಕ ರಾಶಿಯ ಮಹಿಳೆ ಮತ್ತು ಮೀನ ರಾಶಿಯ ಪುರುಷ
ಕಟಕ ಮಹಿಳೆ ಮತ್ತು ಮೀನ ರಾಶಿ (Pisces)ಯ ಪುರುಷರು ಹೆಚ್ಚು ಕಾಲ್ಪನಿಕ, ಭಾವನಾತ್ಮಕ, ಕರುಣೆಯಿರುವ ಸೂಕ್ಷ್ಮ ಗುಣವನ್ನು ಹೊಂದಿರುವವರು. ನೀವು ಒಬ್ಬರಿಗೊಬ್ಬರು ಪಿಲ್ಲರ್ ನಂತೆ ಒಬ್ಬರಿಗೊಬ್ಬರು ಸಪೋರ್ಟಿವ್ ಆಗಿರುತ್ತಿರಿ. ನಿಮ್ಮಿಬ್ಬರ ಸ್ವಭಾವವು ಒಂದೇ ಆಗಿಯಾಗಿದ್ದು ಬೇರೆಯವರ ಒಳ್ಳೆಯದಕ್ಕಾಗಿ ಚಿಂತೆ ಮಾಡುತ್ತಿರಿ. ಇಬ್ಬರಲ್ಲು ಉದಾರ ಸ್ವಭಾವ ಇದೆ. ನಿಮ್ಮ ಇಬ್ಬರ ನಡುವಿನ ಸಂಬಂಧವು ಉತ್ತಮವಾಗಿರಲಿದ್ದು, ಪರಸ್ಪರ ಗೌರವ (respect)ದಿಂದ ಒಬ್ಬರನ್ನೊಬ್ಬರು ಕಾಣುತ್ತೀರಿ.
ಕಟಕ ರಾಶಿಯ ಮಹಿಳೆ ಮತ್ತು ಮೇಷ ರಾಶಿಯ ಪುರುಷ
ಕಟಕ ರಾಶಿ ಮತ್ತು ಮೇಷ ರಾಶಿ (Aries)ಯು ಸ್ವರ್ಗದಲ್ಲಿ ಮಾಡಿದ ನಕ್ಷತ್ರ ಚಿಹ್ನೆಗಳ ಸಂಯೋಜನೆಯಾಗಿದೆ. ಈ ಎರಡು ರಾಶಿಯ ಮಹಿಳೆ ಹಾಗೂ ಪುರುಷರು ಮುಕ್ತವಾಗಿ ಮಾತನಾಡುವವರಾಗಿದ್ದು, ನಿಷ್ಠಾವಂತರು, ಪ್ರತಿಭಾನ್ವಿತರು ಮತ್ತು ಸೃಜನಶೀಲ ಸ್ವಭಾವದವರಾಗಿರುತ್ತಾರೆ. ಕಟಕ ರಾಶಿ ( (Cancer)ಯ ಮಹಿಳೆ ಪೋಷಕಳಾಗಿ ಮತ್ತು ಮೇಷ ರಾಶಿಯ ಪುರುಷ ರಕ್ಷಕರಾಗಿ ಇಬ್ಬರು ಸುಗಮ ಜೀವನವನ್ನು ನಡೆಸುತ್ತಾರೆ. ನೀವು ಯಾವುದೇ ನ್ಯೂನತೆಗಳು ಅಥವಾ ಹಿನ್ನಡೆಗಳಂತ ಸಂದರ್ಭದಲ್ಲಿ ಪರಸ್ಪರ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ಇಬ್ಬರು ಅತ್ಯಂತ ಹೊಂದಾಣಿಕೆಯ ದಂಪತಿಗಳು.