ಅಯ್ಯೋ, ಹಾಲು ಹೊತ್ತಿ ಹೋಯ್ತು ಎನ್ನುವವರು ಅನೇಕರು. ಕೆಲವರ ಮನೆಯಲ್ಲಿ ಆಗಾಗ ಹಾಲಿನ ಪಾತ್ರೆ ತಳ ಹಿಡಿಯುತ್ತಲೇ ಇರುತ್ತದೆ.. ಇನ್ಮುಂದೆ ಬುಧವಾರ ಮಾತ್ರ ಒಲೆ ಮೇಲೆ ಹಾಲಿಟ್ಟು ಹೊರಗೆ ಹೋಗ್ಬೇಡಿ. ಯಾಕೆ ಅನ್ನೋದಕ್ಕೆ ಕಾರಣ ಇಲ್ಲಿದೆ.
ಹಿಂದೂ ಧರ್ಮ(Hinduism)ದಲ್ಲಿ, ಪ್ರತಿ ದಿನಕ್ಕೂ ವಿಶೇಷ ಮಹತ್ವವಿದೆ. ವಾರದ ಏಳೂ ದಿನಗಳನ್ನು ಒಂದೊಂದು ದೇವರ ಹೆಸರಿನಲ್ಲಿ ಪೂಜೆ (Worship) ಮಾಡಲಾಗುತ್ತದೆ. ಆಯಾ ವಾರದಂದು ಆ ದೇವರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿದರೆ ಒಳ್ಳೆಯದು ಎಂದು ನಂಬಲಾಗಿದೆ. ಹಾಗೆ ಆ ದೇವರಿಗೆ ಇಷ್ಟವಲ್ಲದ ಕೆಲಸ ಮಾಡುವುದ್ರಿಂದ ನಷ್ಟ, ಸಂಕಷ್ಟ ಎದುರಿಸಬೇಕಾಗುತ್ತದೆ. ಸಂತೋಷದ ಮತ್ತು ಯಶಸ್ವಿ ಜೀವನಕ್ಕಾಗಿ, ನಾವು ಈ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಇಂದು ಬುಧವಾರದ ಬಗ್ಗೆ ನೋಡೋಣ. ಬುಧವಾರ ಅಪ್ಪಿತಪ್ಪಿ ನಾವು ಮಾಡುವ ಕೆಲವು ಕೆಲಸಗಳು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಬುಧವಾರ ಅನೇಕ ಕೆಲಸಗಳನ್ನು ಮಾಡದೆ ದೂರವಿರುವುದು ಒಳ್ಳೆಯದು.
ಬುಧವಾರವನ್ನು ಆದಿಯಲ್ಲಿ ಮೊದಲು ಪೂಜಿಸಲ್ಪಡುವ ಗಣೇಶ (Ganesh)ನಿಗೆ ಮೀಸಲಿಡಲಾಗಿದೆ. ಹಾಗೆಯೇ ಬುಧ ಗ್ರಹಕ್ಕೆ ಬುಧವಾರ (Wednesday)ವನ್ನು ಅರ್ಪಿಸಲಾಗಿದೆ. ಬುಧವು ಬುದ್ಧಿವಂತಿಕೆ, ವ್ಯವಹಾರದ ದೇವರಾಗಿರುವುದರಿಂದ ಇದು ಬುದ್ಧಿಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಬುಧವಾರ ಗಣೇಶನ ಪೂಜೆಯನ್ನು ಭಕ್ತಿಯಿಂದ ಮಾಡಬೇಕಾಗುತ್ತದೆ. ಬುಧವಾರ ಮಾಡುವ ದಾನಕ್ಕೂ ವಿಶೇಷ ಮಹತ್ವವಿದೆ. ಆದ್ರೆ ಬುಧವಾರ ಕೆಲವು ಕೆಲಸಗಳನ್ನು ಮರೆತೂ ಮಾಡಬಾರದು. ಅವು ಯಾವುವು ನೋಡೋಣ.
ಹಣದ ವಹಿವಾಟು: ಬುಧವಾರ ಯಾವುದೇ ಕಾರಣಕ್ಕೂ ಹಣದ ವಹಿವಾಟು ಮಾಡಬೇಡಿ. ಇದು ಅನಿವಾರ್ಯವಾದ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಯಿಡಿ. ಸಾಲ ನೀಡುವಾಗ, ಸಾಲ ವಾಪಸ್ ಬರುತ್ತೆ ಎಂಬುದು ಖಾತ್ರಿಯಾದಲ್ಲಿ ಮಾತ್ರ ಸಾಲ ನೀಡಲು ಮುಂದಾಗಿ. ಬುಧವಾರ ವ್ಯಾಪಾರಸ್ಥರು ಹೆಚ್ಚು ಜಾಗೃತರಾಗಿರಬೇಕು.
undefined
Astrology Tips: ರೊಮ್ಯಾಂಟಿಕ್ ಲೈಫ್‌ಗಾಗಿ ಮಹಿಳೆಯರೇನು ಮಾಡಬೇಕು?
ಈ ದಿಕ್ಕಿಗೆ ಪ್ರಯಾಣ ಬೇಡ: ಬುಧವಾರ ಉತ್ತರ, ಪಶ್ಚಿಮ ಮತ್ತು ಈಶಾನ್ಯ ಭಾಗಕ್ಕೆ ಪ್ರಯಾಣಿಸಬೇಡಿ. ಬುಧವಾರ ಈಶಾನ್ಯ ದಿಕ್ಕಿಗೆ ಪ್ರಯಾಣ ಮಾಡಿದರೆ ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಪ್ರಯಾಣದಲ್ಲಿ ನಷ್ಟ ಉಂಟಾಗಬಹುದು. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣ ಮಾಡಬೇಕಾದರೆ ಎಳ್ಳು ಅಥವಾ ಕೊತ್ತಂಬರಿ ಸೊಪ್ಪು ತಿಂದು ಮನೆಯಿಂದ ಹೊರ ಬೀಳುವುದು ಒಳ್ಳೆಯದು.
ಶುಭ ಕೆಲಸ: ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಪುಷ್ಯ ನಕ್ಷತ್ರ ಬಹಳ ಮಂಗಳಕರವಾಗಿದೆ. ಈ ನಕ್ಷತ್ರಪುಂಜದಲ್ಲಿ ಹೊಸ ಕೆಲಸಗಳನ್ನು ಮಾಡುವುದು ಮತ್ತು ಹೊಸ ವಸ್ತುಗಳನ್ನು ಖರೀದಿಸುವುದು ಶುಭಕರವೆಂದು ನಂಬಲಾಗಿದೆ. ಆದರೆ ಬುಧವಾರ ಮತ್ತು ಶುಕ್ರವಾರದಂದು ಬರುವ ಪುಷ್ಯ ನಕ್ಷತ್ರದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬೇಡಿ.
Vastu Tips : ಮನೆ ಕಟ್ಟಲು ಜಾಗ ಖರೀದಿಸೋ ಮುನ್ನ ನಿವೇಶನದ ಬಗ್ಗೆ ಈ ವಿಷ್ಯ ನೆನಪಿರಲಿ
ಹಾಲುಕ್ಕಿಸಬೇಡಿ: ಬುಧವಾರದಂದು ಹಾಲು ತಳ ಹೊತ್ತಿಸುವ ಕೆಲಸ ಮಾಡಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಬುಧವಾರ ಹಾಲು ಬಿಸಿ ಮಾಡುವಾಗ ಎಚ್ಚರದಿಂದಿರಿ. ಸಾಧ್ಯವಾದರೆ ಬುಧವಾರದಂದು ಹಾಲಿನಿಂದ ಮಾಡುವ ಖೀರ್ ಅಥವಾ ಅಂತಹ ಯಾವುದೇ ಸಿಹಿ ಮಾಡಬೇಡಿ.
ಹಸಿರು ತರಕಾರಿ : ಬುಧವಾರ ಹಸಿರು ತರಕಾರಿಗಳನ್ನು ತಿನ್ನಬೇಡಿ. ವಿಶೇಷವಾಗಿ ಎಲೆ-ಅಡಿಕೆ ತಿನ್ನುವುದನ್ನು ತಪ್ಪಿಸಿ. ಬುಧವಾರ ಪಾನ್ ಮತ್ತು ತರಕಾರಿ ತಿನ್ನುವುದು ಒಳ್ಳೆಯದಲ್ಲ. ಇದ್ರಿಂದ ಸಂಕಷ್ಟ ಎದುರಿಸಬೇಕಾಗುತ್ತದೆ.
ತಲೆ ಸ್ನಾನ: ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಂದಿರು ಬುಧವಾರ ತಲೆ ಸ್ನಾನ ಮಾಡುವುದು ಒಳಿತಲ್ಲ. ಇದು ಮಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಹೊಸ ವಸ್ತು ಖರೀದಿ : ಬುಧವಾರದಂದು ಕೆಲ ವಸ್ತುಗಳನ್ನು ಖರೀದಿಸಬಾರದು. ಪಾದರಕ್ಷೆ,ಬಟ್ಟೆ, ಟೂತ್ ಬ್ರಷ್ ಮತ್ತು ಬಾಚಣಿಗೆಯನ್ನು ಬುಧವಾರ ಖರೀದಿಸಬಾರದು. ಇದರ ಹೊರತಾಗಿ ಬುಧವಾರ ಹೊಸ ಬಟ್ಟೆಗಳನ್ನು ಧರಿಸಬಾರದು. ಹೊಸ ಬಟ್ಟೆಗಳನ್ನು ಧರಿಸಲು ಗುರುವಾರ ಉತ್ತಮ ದಿನವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಅವಮಾನ : ಬುಧವಾರದಂದು ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅವಮಾನಿಸಬಾರದು. ಬುಧವಾರದಂದು ಸಹೋದರಿ,ಚಿಕ್ಕಮ್ಮ,ಸೊಸೆ,ಮಗಳು ಹೀಗೆ ಮನೆಯ ಮಹಿಳೆಯರ ಮನಸ್ಸು ನೋಯಿಸುವ ಕೆಲಸ ಮಾಡಬೇಡಿ.