ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ

By Ravi Janekal  |  First Published Apr 23, 2023, 2:18 PM IST

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ ಮನೆ ಮಾಡಿದೆ. ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮಗಳಿಗೆ ಭಕ್ತ ಸಾಗರವೇ  ಹರಿದುಬರುತ್ತಿದೆ. 7 ದಿನಗಳ ನಡೆಯುವ ವಿವಿಧ ಧಾರ್ಮಿಕ ಕ್ರಮದಲ್ಲಿ ನಾಡಿನ ಪ್ರಮುಖ ಗಣ್ಯ ವ್ಯಕ್ತಿಗಳು ಸಾಕ್ಷಿ ಆಗಲಿದ್ದಾರೆ. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಏ.23) : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕದ ಸಂಭ್ರಮ ಮನೆ ಮಾಡಿದೆ. ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮಗಳಿಗೆ ಭಕ್ತ ಸಾಗರವೇ  ಹರಿದುಬರುತ್ತಿದೆ. 7 ದಿನಗಳ ನಡೆಯುವ ವಿವಿಧ ಧಾರ್ಮಿಕ ಕ್ರಮದಲ್ಲಿ ನಾಡಿನ ಪ್ರಮುಖ ಗಣ್ಯ ವ್ಯಕ್ತಿಗಳು ಸಾಕ್ಷಿ ಆಗಲಿದ್ದಾರೆ. 

Tap to resize

Latest Videos

undefined

7 ದಿನಗಳ ನಡೆಯುವ ವಿವಿಧ ಧಾರ್ಮಿಕ ಕ್ರಮಗಳು

ಧರ್ಮ ಅಂದರೆ ಹೇಳಿ ಕಲಿಯುವುದಲ್ಲ ಅದನ್ನು ನೋಡಿ ಕಲಿಯಬೇಕು.ನೋಡಿ ಕಲಿಯುವಂತ ಅಪರೂಪದ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ(horanadu annapurneshwari temple) ಎಂದು ಹುಕ್ಕೇರಿ ಮಹಾ ಸಂಸ್ಥಾನ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಚುನಾವಣೆ ಹಿನ್ನೆಲೆ ದೇವರ ಮೊರೆ ಹೋದ ವಿಜಯೇಂದ್ರ, ಹೊರನಾಡಿನಲ್ಲಿ ಪತ್ನಿ ಸಮೇತ ವಿಶೇಷ ಪೂಜೆ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮದ ಮೊದಲನೆ ದಿನವಾದ ನಿನ್ನೆ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಕ್ಷರದಾಸೋಹ ಕಾರ್ಯಕ್ರಮವನ್ನು ಮಾಡುವ ಮೊದಲೇ ಹೊರನಾಡು ಕ್ಷೇತ್ರದಿಂದ ೧೯೫೪ರಲ್ಲೇ ಶಾಲೆಗೆ ಬಿಸಿಯೂಟ ಕೋಡುವ ಕಾರ್ಯಕ್ರಮವನ್ನು  ಮಾಡಲಾಗಿದೆ.ಕ್ಷೇತ್ರದ ಪ್ರೇರಣೆಯಿಂದಲೇ ಸರ್ಕಾರ ಈ  ಯೋಜನೆಯನ್ನು ಹೊರ ತಂದಿದೆ.ದೇವಸ್ಥಾನದಿಂದ ಕೇವಲ ಅನ್ನದಾನವನ್ನು ಮಾತ್ರ ಮಡುತ್ತಿಲ್ಲ ಜೊತೆಗೆ ಸಂಸ್ಕಾರವನ್ನು ಕೂಡ ಕೊಡುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ಭಕ್ತನಲ್ಲೂ ಅನ್ನಪೂರ್ಣೇಶ್ವರಿಯ ರೂಪ : 

ಹೊರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ(G Bhimeshwar joshi) ಮಾತನಾಡಿ ನಮಗೆ ಯಾವುದೂ ಆಗಬಾರದು ಎಂದು ಬಯಸುತ್ತೇವೆಯೋ ಅದು ಇನ್ನೊಬ್ಬರಿಗೂ ಆಗಬಾರದು ಎಂದು ಬಯಸುತ್ತೇವೆಯೋ ಅದು ಧರ್ಮ.ಜೀವನದ ಸಂಪಾಧನೆಯಲ್ಲಿ ಕುಟುಂಬಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟರೆ ಅದು ಧರ್ಮವಾಗುತ್ತದೆ.ಜೀವನದಲ್ಲಿ ನಾವು ಸಂತೋಷವಾಗಿರಬೇಕು ಎಂದು ಭಯಸುತ್ತೇವೆ.ಆದರೆ ನಾವು ಸಂತೋಷವಾಗಬೇಕಾದರೆ ನಿತ್ಯ ಸಂತೋಷಿಯಾಗಬೇಕು.ಯಾವ ವ್ಯಕ್ತಿ ಸಿಕ್ಕ ಅವಕಾಶವನ್ನು ಜೀವನವನ್ನು ತ್ಯಾಗಕ್ಕೆ ಮುಡಿಪಾಗಿಡುತ್ತಾನೋ ಆತ ನಿತ್ಯ ಸಂತೋಷಿಯಾಗಿರುತ್ತಾನೆ. ಜೀವನ ಉಜ್ಜೀವನ ಆಗಬೇಕಾದರೆ ನಮ್ಮ ಬದುಕು ನಿದರ್ಶನದ ಬದುಕಾಗಬೇಕು.ನಿದರ್ಶನದ ಬದುಕಾಗಬೇಕಾದರೆ ನಮ್ಮ ಜೀವನ ಸರಳವಾಗಿರಬೇಕು. ಯಾರನ್ನೂ ತೃಪ್ತಿ ಪಡಿಸಲು ಹೋಗುವುದಕ್ಕಿಂತ ನಮ್ಮ ಆತ್ಮವನ್ನು ತೃಪ್ತಿಪಡಿಸಬೇಕು.ಹಿರಿಯರ ಶ್ರಮದ ಫಲದಿಂದ ಕ್ಷೇತ್ರ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.ಪ್ರತಿಯೊಬ್ಬ ಭಕ್ತನಲ್ಲೂ ಅನ್ನಪೂರ್ಣೇಶ್ವರಿಯ ರೂಪವನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.

ಪ್ರವಾಸಿ ತಾಣಗಳು ಮಾತ್ರವಲ್ಲ, ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಿಗೂ ಪ್ರವಾಸಿಗರ ದಂಡು

ಹೊರನಾಡಿನಲ್ಲಿ  ನಡೆದ ವಿವಿಧ ಹೋಮಗಳು : 

ಬೆಳಗ್ಗೆ ಉದ್ಬವಗಣಪತಿ, ಅನ್ನಪೂರ್ಣೆ, ನವಗ್ರಹ ದೇವರು ಮತ್ತು ಆಂಜನೇಯ ಸ್ವಾಮಿಗೆ ಮಹಾಭಿಷಕ ನಡೆಯಿತು. ಆನಂತರ ಚತುರ್ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವಿ ಭಾಗವತ ಪಾರಾಯಣ, ಭಗವದ್ಗೀತೆ ಪಾರಾಯಣ, ಕೋಟಿ ಕುಂಕುಮಾರ್ಚನೆ ನಡೆಯಿತು.ಹೊರನಾಡಿನಲ್ಲಿ ಸೋಮವಾರ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ,ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ,ಗಾಯತ್ರಿಹೋಮ, ನವಗ್ರಹ ಹೋಮ, ರುದ್ರ ಹೋಮಗಳ ಪೂರ್ಣಾಹುತಿ, ನೂತನ ಸೇವಾರಥ ಮತ್ತು ಜಗನ್ಮಾತೆಯ ನೂತನ ಉತ್ಸವಮೂರ್ತಿ ಲೋಕಾರ್ಪಣೆ.ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಂಪಿಯ ವಿರೂಪಾಕ್ಷ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಭಾಗವಹಿಸಲಿದ್ದಾರೆ.ಡಾ.ಸುಬ್ರಯಾ ವಿ.ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಸರ್ವೋಚ್ಚ ನ್ಯಾಯಲಯ ನ್ಯಾಯಮೂರ್ತಿ ಅರವಿಂದ ಕಾಮತ್, ಚಲನಚಿತ್ರ ನಟ ದೊಡ್ಡಣ್ಣ, ಅಜಿತ್ ಹನುಮಕ್ಕನವರ್ ಉಪಸ್ಥಿತಿ ಇರಲಿದ್ದಾರೆ.

click me!