ಶರಣಾಗತಿಯಿಂದ ಭಗವಂತನ ಅನುಗ್ರಹ ಸಾಧ್ಯ: ಡಾ. ವೀಣಾ ಬನ್ನಂಜೆ

By Kannadaprabha NewsFirst Published Apr 23, 2023, 1:28 PM IST
Highlights

ನಾವು ದುರ್ಬಲರಾಗಿ, ಸಂಕಷ್ಟದಲ್ಲಿ ಸಿಲುಕಿದಾಗ ಭಗವಂತನಲ್ಲಿ ಅಂತಃಕರಣಪೂರ್ವಕ ಶರಣಾಗತಿಯಾದರೆ ಖಂಡಿತವಾಗಿ ಭಗವಂತ ನಮ್ಮನ್ನು ರಕ್ಷಿಸುತ್ತಾನೆ. ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಯುದ್ಧ ಮಾಡಲು ಭಯ ಆವರಿಸಿದಾಗ ಗೀತಾಮೃತದ ಮೂಲಕ ಜ್ಞಾನೋದಯ ಮೂಡಿಸಿದ ಪರಿಣಾಮ ಅರ್ಜುನನ ಶರಣಾಗತಿಯ ಪರಿಣಾಮವೇ ಭಗವಂತನ ಅನುಗ್ರಹ ದೊರಕಲು ಸಾಧ್ಯವಾಯಿತು ಎಂದು ಸಂತರಾದ ಡಾ. ವೀಣಾ ಬನ್ನಂಜೆ ಹೇಳಿದರು.

ಯಲ್ಲಾಪುರ (ಏ.23) : ನಾವು ದುರ್ಬಲರಾಗಿ, ಸಂಕಷ್ಟದಲ್ಲಿ ಸಿಲುಕಿದಾಗ ಭಗವಂತನಲ್ಲಿ ಅಂತಃಕರಣಪೂರ್ವಕ ಶರಣಾಗತಿಯಾದರೆ ಖಂಡಿತವಾಗಿ ಭಗವಂತ ನಮ್ಮನ್ನು ರಕ್ಷಿಸುತ್ತಾನೆ. ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಯುದ್ಧ ಮಾಡಲು ಭಯ ಆವರಿಸಿದಾಗ ಗೀತಾಮೃತದ ಮೂಲಕ ಜ್ಞಾನೋದಯ ಮೂಡಿಸಿದ ಪರಿಣಾಮ ಅರ್ಜುನನ ಶರಣಾಗತಿಯ ಪರಿಣಾಮವೇ ಭಗವಂತನ ಅನುಗ್ರಹ ದೊರಕಲು ಸಾಧ್ಯವಾಯಿತು ಎಂದು ಸಂತರಾದ ಡಾ. ವೀಣಾ ಬನ್ನಂಜೆ ಹೇಳಿದರು.

ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ನೇರಲೆಮನೆಯ ಮಹಾಬಲೇಶ್ವರ ಭಟ್ಟ(Mahabaleshwar bhat)ರ ನಿವಾಸದಲ್ಲಿ ಶ್ರೀಮದ್‌ ಭಗವದ್ಗೀತಾ ಉಪನ್ಯಾಸ ಮಾಲಿಕೆಯ 2ನೇ ದಿನದಂದು ಹತ್ತನೇ ಅಧ್ಯಾಯದವರೆಗೆ ಗೀತಾ ಸಾರವನ್ನು ನೀಡುತ್ತಿದ್ದರು.

Latest Videos

 ತತ್ವಜ್ಞಾನವನ್ನು ಹೊರಗಿಟ್ಟು ಸಾಹಿತ್ಯ ಬೆಳೆಯುವುದು ಅಸಾಧ್ಯ: ವೀಣಾ ಬನ್ನಂಜೆ

ಇಂದ್ರೀಯ ಸಂಯಮದಿಂದ, ಪಂಚೇಂದ್ರಿಯವನ್ನು ಗೆಲ್ಲಬಹುದು. ಆದರೆ ಮುದಿತನ ಮತ್ತು ಸಾವನ್ನು ಯಾರಿಂದಲೂ ಗೆಲ್ಲಲಾಗದು. ಅದಕ್ಕಾಗಿಯೇ ಭಗವಂತ ತನ್ನ ಬಳಿ ಬರುವ ಮಾರ್ಗವನ್ನು ಗೀತೆಯ ಮೂಲಕ ತೋರಿಸಿಕೊಟ್ಟಿದ್ದಾನೆ. ಅನೇಕ ಸಾಧಕರ ಜೀವನವನ್ನು ನಾವು ಗಮನಿಸಿದರೆ, ಅವರು ತಮ್ಮ ಸಾವಿಗಾಗಿ ಉತ್ತರಾಯಣ ಶುಕ್ಲಪಕ್ಷ ಪೂರ್ಣಿಮೆಯ ಸಮೀಪದ ಕಾಲದಲ್ಲಿ ದೇಹ ತ್ಯಾಗ ಮಾಡುವುದನ್ನು ಕಂಡಿದ್ದೇವೆ ಎಂದ ಅವರು, 84 ಲಕ್ಷ ಯೋನಿಗಳಿಂದ ಹುಟ್ಟಿದ ನಾವು, ಇಂದು ಮನುಷ್ಯರಾಗಿ ಶ್ರೇಷ್ಟಜನ್ಮ ಪಡೆದಿದ್ದೇವೆ. ಇಂತಹ ಶ್ರೇಷ್ಟಜನ್ಮ ಪಡೆದಾಗಲೂ ಅಧರ್ಮದಿಂದ ನಡೆದರೆ ಪುನಃ 84 ಲಕ್ಷ ಯೋನಿಗಳಲ್ಲಿ ಹುಟ್ಟಬೇಕಾಗುತ್ತದೆ. ಆದ್ದರಿಂದ ಭಗವಂತನ ಸಾನಿಧ್ಯ ಪಡೆಯಲು ಮನುಷ್ಯ ಧರ್ಮದಿಂದ ಮಾತ್ರ ಸಾಧ್ಯ. ಆದ್ದರಿಂದ ನಾವು ಅದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

‘ನುಡಿದಂತೆ ನಡೆದರೆ ಭಗವಂತನ ಸಾಕ್ಷಾತ್ಕಾರ’

ಕರ್ಮ, ಜ್ಞಾನ, ಭಕ್ತಿಗಳನ್ನು ನಾವು ಹೇಗೆ ಮಾಡಬೇಕೆಂಬುದರ ಕುರಿತಾಗಿ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ. ಆದರೆ ಗೀತೆಯ ಸಂಪೂರ್ಣ ರಹಸ್ಯವನ್ನು ತಿಳಿದವರೇ ಇಲ್ಲ ಎಂದ ಅವರು, ನಾನು ಎಂಬುದು ಮೂರ್ಖತನದ್ದು, ಅದನ್ನು ನಾನು ಮಾಡಿದ್ದೇನೆ, ಇದನ್ನು ನಾನು ಮಾಡಿದ್ದೇನೆ ಎಂದೆಲ್ಲ ನಾವು ಮಾಡಿದ ಕಾರ್ಯದ ಹೆಗ್ಗಳಿಕೆ ಮಾಡಿಕೊಳ್ಳುತ್ತೇವೆ. ಅದನ್ನು ನಾವು ಮಾಡಿದ್ದಲ್ಲ. ಭಗವಂತ ಮಾಡಿಸಿದ್ದು, ಎಂದು ಅರ್ಥಮಾಡಿಕೊಂಡರೆ ಮನುಷ್ಯತ್ವ ಜನ್ಮಕ್ಕೆ ಸಾರ್ಥಕತೆ ಲಭಿಸುತ್ತದೆ ಎಂದರು.

ಸಂಘಟಕ ಮಹಾಬಲೇಶ್ವರ ಭಟ್ಟಸ್ವಾಗತಿಸಿ, ವಂದಿಸಿದರು.

click me!