ಈ ತಾರೀಖಿನಲ್ಲಿ ಜನಿಸಿದವರು ಹೆಚ್ಚು ಭಾಗ್ಯವಂತರು..!

By Suvarna News  |  First Published Jul 15, 2021, 3:01 PM IST

ಸಂಖ್ಯಾಶಾಸ್ತ್ರದ ಪಾದಾಂಕಗಳಲ್ಲಿ ಸಂಖ್ಯೆ ಏಳಕ್ಕೆ ವಿಶೇಷ ಮಹತ್ವವಿದೆ. ಏಳಕ್ಕೆ ಇರುವ ಮಹತ್ವದ ಹಾಗೆಯೇ ಪಾದಾಂಕ ಏಳರ ವ್ಯಕ್ತಿಗಳ ವ್ಯಕ್ತಿತ್ವವು ಸಹ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಹಾಗಾಗಿ 7, 16 ಮತ್ತು 25ನೇ ತಾರೀಖಿನಂದು ಜನಿಸಿದ ವ್ಯಕ್ತಿಗಳ ಪಾದಾಂಕ 7 ಆಗುತ್ತದೆ. ಹಾಗಾದರೆ ಆ ವ್ಯಕ್ತಿಗಳ ಬಗ್ಗೆ ತಿಳಿಯೋಣ..


ಸಂಖ್ಯಾಶಾಸ್ತ್ರವು ಭವಿಷ್ಯದ ವಿಚಾರಗಳನ್ನು ತಿಳಿಯುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಜೀವನದಲ್ಲಿ ಸಂಖ್ಯೆಗಳು ಅತಿ ಅಗತ್ಯ. ಕೆಲವರಿಗೆ ಬೆಸ ಸಂಖ್ಯೆಗಳೆಂದರೆ ಪ್ರೀತಿ, ಮತ್ತೆ ಕೆಲವರಿಗೆ ಸಮ ಸಂಖ್ಯೆಗಳು ಇಷ್ಟ. ಅಷ್ಟೇ ಅಲ್ಲದೆ ಹಲವರಿಗೆ ಹುಟ್ಟಿದ ದಿನಾಂಕವನ್ನು ಲಕ್ಕಿ ನಂಬರ್ ಎಂದು ಆ ಸಂಖ್ಯೆಯನ್ನು ಇಷ್ಟಪಡುತ್ತಾರೆ. ಕೆಲವರಿಗೆ ಏಳು ಲಕ್ಕಿ ನಂಬರ್ ಆಗಿರುತ್ತದೆ. ಅದು ಅವರ ಹುಟ್ಟಿನ ದಿನಾಂಕದಿಂದಲೂ ಆಗಿರಬಹುದು, ಇಲ್ಲವೇ ಪಾದಾಂಕದಿಂದಲೂ ಬರಬಹುದು.

ಹೌದು. ಹಲವರಿಗೆ ಸಂಖ್ಯೆ ಏಳು ಬಹಳ ಇಷ್ಟವಂತೆ. ಅದನ್ನು ಲಕ್ಕಿ ನಂಬರ್ ಎಂದು ಹಲವು ಕಡೆ ಅದೇ ಸಂಖ್ಯೆಯನ್ನು ಬಳಕೆ ಮಾಡುತ್ತಾರೆಂದು ಸಹ ಹೇಳಲಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಸಂಖ್ಯೆ ಇಷ್ಟ ಮತ್ತು ಅದೃಷ್ಟವೂ ಆಗಿರುತ್ತದೆ. ಆದರೆ, ಸಂಖ್ಯೆ 7ಕ್ಕೆ ಹೆಚ್ಚಿನ ವಿಶೇಷತೆ ಇರುವುದು ಅಷ್ಟೇ ಸತ್ಯ.

ಇದನ್ನು ಓದಿ:  ಈ ರಾಶಿ ಹುಡುಗಿಯರಿಂದ ಪರಿಶುದ್ಧ ಸ್ನೇಹ ನಿರೀಕ್ಷಿಸಬಹುದು!

ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆ 7 ಅನ್ನು ಶುಭವೆಂದು ಪರಿಗಣಿಸಲಾಗುತ್ತದೆ. ತಿಂಗಳಿನ 7, 16 ಮತ್ತು 25ನೇ ತಾರೀಖಿನಂದು ಜನಿಸಿದವರ ಪಾದಾಂಕ ಸಂಖ್ಯೆ 7 ಆಗುತ್ತದೆ. ಈ ಪಾದಾಂಕದಲ್ಲಿ ಜನಿಸಿದವರ ಅದೃಷ್ಟ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಪಾದಾಂಕ 7ರ ವ್ಯಕ್ತಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣವೇ ಸಿಗುತ್ತದೆ. ಪಾದಾಂಕ 7ರ ವ್ಯಕ್ತಿಗಳ ಬಗ್ಗೆ ಮತ್ತಷ್ಟು ತಿಳಿಯೋಣ.....

ಭಾಗ್ಯವಂತರಿವರು
ಪಾದಾಂಕ 7ರ ವ್ಯಕ್ತಿಗಳು ಭಾಗ್ಯಶಾಲಿಗಳು, ಸುಖಿಗಳು, ಯಶಸ್ಸನ್ನು ಗಳಿಸುವವರು ಮತ್ತು ಇತರರಿಗೆ ಪ್ರಸನ್ನತೆಯನ್ನು ನೀಡುವವರಾಗಿರುತ್ತಾರೆ. ಜಗತ್ತಿನಲ್ಲಿ ಹೆಚ್ಚು ವಿಶೇಷ ಮಹತ್ವಗಳನ್ನು ಹೊಂದಿದ ಸಂಖ್ಯೆ ಏಳು. ಸಪ್ತ ಸಾಗರಗಳು, ಏಳು ಅದ್ಭುತಗಳು ಏಳರ ಮಹತ್ವವನ್ನು ಸಾರುತ್ತವೆ. ಅಷ್ಟೇ ಅಲ್ಲದೆ ಮನುಷ್ಯದ ಜೀವಿತಾವಧಿಯನ್ನು ಸಹ ಏಳು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಕಾಮನಬಿಲ್ಲಿನ ಬಣ್ಣ ಏಳು.

ಇದನ್ನು ಓದಿ : ಈ 4 ರಾಶಿಯವರು ಸೋಲೊಪ್ಪೋದು ವಿರಳ: ನಿಮ್ಮದು ಇದೇ ರಾಶಿನಾ?

ಸಂಖ್ಯೆ ಏಳು – ಅದೃಷ್ಟಕ್ಕೆ ಬಾಗಿಲು
ಆಕಾಶ ಮಂಡದಲ್ಲಿ ಮಹತ್ವವನ್ನು ಪಡೆದಿರುವ ನಕ್ಷತ್ರಗಳ ಕುಟುಂಬದಲ್ಲಿರುವುದು ಸಪ್ತ ತಾರೆಗಳು. ಇದನ್ನು ಸಪ್ತರ್ಷಿ ಮಂಡಲವೆಂದು ಸಹ ಕರೆಯುತ್ತಾರೆ. ವಿವಾಹದ ಸಮಯದಲ್ಲಿ ಅಗ್ನಿಸಾಕ್ಷಿಯಾಗಿ ವರ-ವಧು ಸಪ್ತಪದಿ ತುಳಿಯುತ್ತಾರೆ. ಇಲ್ಲೂ ಏಳಕ್ಕೆ ಪ್ರಾಮುಖ್ಯತೆ. ವಾರಕ್ಕೆ ಏಳು ದಿನ, ಶರೀರದಲ್ಲಿರುವ ಚಕ್ರಗಳು ಏಳು. ಹೀಗೆ ಸಂಖ್ಯೆ ಏಳಕ್ಕೆ ಇರುವ ಮಹತ್ವದಂತೆಯೇ ಪಾದಾಂಕ ಏಳರ ವ್ಯಕ್ತಿಗಳ ಗುಣ ಸ್ವಭಾವವು ವಿಶೇಷವೇ ಆಗಿರುತ್ತದೆ. ಅಷ್ಟೇ ಅಲ್ಲದೆ ಹುಟ್ಟಿನಿಂದಲೇ ಅದೃಷ್ಟವಂತರು ಇವರಾಗಿರುತ್ತಾರೆ.

Tap to resize

Latest Videos


ಕ್ರಿಯಾಶೀಲ ಮತ್ತು ದೂರದರ್ಶಿತ್ವ
ಪಾದಾಂಕ ಏಳರ ವ್ಯಕ್ತಿಗಳು ಹೆಚ್ಚು ಕ್ರಿಯಾಶೀಲರು ಮತ್ತು ದೂರದೃಷ್ಟಿ ಇವರಲ್ಲಿ ಹೆಚ್ಚಾಗಿರುತ್ತದೆ. ಅಲೌಕಿಕ ಜ್ಞಾನವನ್ನು ಈ ವ್ಯಕ್ತಿಗಳು ಹೊಂದಿರುತ್ತಾರೆ. ಕಾರ್ಯಕ್ಷೇತ್ರದಲ್ಲಿ ಅತ್ಯಂತ ಉತ್ತಮರು ಮತ್ತು ಕೆಲಸಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಶ್ರಮದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಗುಣ ಇವರದ್ದಾಗಿರುತ್ತದೆ.

ಏಕಾಂತ ಇವರಿಗಿಷ್ಟ
ಈ ವ್ಯಕ್ತಿಗಳು ಏಕಾಂತವನ್ನು ಇಷ್ಟಪಡುತ್ತಾರೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇತರರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಸತತವಾಗಿ ಪ್ರಯತ್ನದಲ್ಲಿ ತೊಡಗಿರುತ್ತಾರೆ. ಪರಿಶ್ರಮ ಮತ್ತು ಅದೃಷ್ಟದಿಂದ ಜೀವನದಲ್ಲಿ ಬಹುಬೇಗ ಉನ್ನತ ಪದವಿಯನ್ನು ಗಳಿಸುತ್ತಾರೆ.

ಇದನ್ನು ಓದಿ: ರಾಶಿಯನುಸಾರ ಈ ರತ್ನ ಧರಿಸಿದರೆ ಅದೃಷ್ಟ ನಿಮ್ಮದು

ಆಕರ್ಷಕ ವ್ಯಕ್ತಿತ್ವ
ಪಾದಾಂಕ 7ರ ವ್ಯಕ್ತಿಗಳ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ಹಾಗಾಗಿ ಎಂಥವರನ್ನು ಇವರತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ಪ್ರತಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ಇವರ ಉತ್ತಮ ಸ್ವಭಾವಗುಣಗಳಲ್ಲಿ ಒಂದು. ನಿಗದಿತ ಸಮಯಕ್ಕೆ ಮೊದಲೇ ಕೈಗೊಂಡ ಕಾರ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ದಾನ-ಧರ್ಮಗಳಂಥ ಪುಣ್ಯ ಸಂಪಾದನೆಯ ಕಾರ್ಯಗಳಲ್ಲಿ ಹಣ ವ್ಯಯ ಮಾಡುವುದನ್ನು ಈ ವ್ಯಕ್ತಿಗಳು ಇಷ್ಟಪಡುತ್ತಾರೆ. ಪಾದಾಂಕ 7 ವ್ಯಕ್ತಿಗಳ ಆರ್ಥಿಕ ಸ್ಥಿತಿ ಸದಾಕಾಲ ಚೆನ್ನಾಗಿರುತ್ತದೆ.

click me!