2024ರ ಚುನಾವಣೆ ಮಾತ್ರವಲ್ಲ, 2038ರವರೆಗೆ ದೇಶದಲ್ಲಿ ಬಿಜೆಪಿಯೇ ಆಡಳಿತ ನಡೆಸಲಿದೆ ಎಂದು ಮಹಿಳಾ ವೈದಿಕ ಜ್ಯೋತಿಷಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ನವದೆಹಲಿ (ಆಗಸ್ಟ್ 19, 2023): ಮುಂಬರುವ ಲೋಕಸಭೆ ಚುನಾವಣೆ ಅಂದರೆ 2024 ರ ಚುನಾವಣೆ ದೇಶದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಚುನಾವಣೆಯ ದಿನಾಂಕ ಇನ್ನೂ ಘೋಷಣೆಯಾಗದಿದ್ರೂ ಹಾಗೂ ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದ್ರೂ, ಈಗಿನಿಂದಲೇ ಚುನಾವಣೆ ಸಮೀಕ್ಷೆಗಳು ಹಾಗೂ ನಾನಾ ಜನರ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಹಲವರು ಭವಿಷ್ಯವನ್ನೂ ನುಡಿಯುತ್ತಿದ್ದಾರೆ.
ಇದೇ ರೀತಿ, ಮಹಿಳಾ ವೈದಿಕ ಜ್ಯೋತಿಷಿಯೊಬ್ಬರು ಟ್ವೀಟ್ ಮೂಲಕ ಭವಿಷ್ಯ ನುಡಿದಿದ್ದಾರೆ. ಆದರೆ, ಇವರು ಕೇವಲ ಲೋಕಸಭೆ ಚುನಾವಣೆ - 2024 ಮಾತ್ರವಲ್ಲ 2038ರವರೆಗೆ ಭವಿಷ್ಯ ನುಡಿದಿದ್ದಾರೆ. 2024ರ ಚುನಾವಣೆ ಮಾತ್ರವಲ್ಲ, 2038ರವರೆಗೆ ದೇಶದಲ್ಲಿ ಬಿಜೆಪಿಯೇ ಆಡಳಿತ ನಡೆಸಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಎಕ್ಸ್‌ನಲ್ಲಿ ಅವರು ಬಿಜೆಪಿ ಬಗ್ಗೆ ಬರೆದುಕೊಂಡಿರುವುದು ಹೀಗೆ..
ಇದನ್ನು ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್: ಶೀಘ್ರದಲ್ಲೇ ಎಲ್‌ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!
ಶನಿಯು #ಕರ್ಕಾಟಕ ರಾಶಿಗೆ ಕದಲದ ಕಾಲದವರೆಗೆ #ಬಿಜೆಪಿ ಅಧಿಕಾರದಿಂದ ಎಲ್ಲಿಯೂ ಹೋಗುವುದಿಲ್ಲ. ಹೀಗಾಗಿ 2038ರವರೆಗೆ ಭಾರತದಲ್ಲಿ ಬಿಜೆಪಿಯೇ ಆಡಳಿತ ನಡೆಸಲಿದೆ. ಭಾರತ ಸುವರ್ಣ ಯುಗದ ಹಾದಿಯಲ್ಲಿದೆ ಎಂದು ಎಕ್ಸ್‌ನಲ್ಲಿ, ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 18, ಅಂದರೆ ಶುಕ್ರವಾರ ಮಹಿಳಾ ವೈದಿಕ ಜ್ಯೋತಿಷಿ ಆಸ್ಟ್ರೋ ಶರ್ಮಿಷ್ಟಾ ಬರೆದಿದ್ದು, ಅವರ ಈ ಟ್ವೀಟ್ ವೈರಲ್ ಆಗ್ತಿದೆ.
Till the time Saturn is not moving to sign, is not going anywhere from power. So till 2038 BJP will be the ruling Govt. In India. Golden age of India is on the way.
— Astro Sharmistha (@AstroSharmistha)ಈ ಹಿನ್ನೆಲೆ ‘INDIA’ ಮೈತ್ರಿಕೂಟ ಬಂದರೂ ಬಿಜೆಪಿಯೇ ಇನ್ನೂ 15 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆ ಎಂದು ಆಸ್ಟ್ರೋ ಶರ್ಮಿಷ್ಟಾ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ವಾರಾಣಸಿಯಲ್ಲಿ ನಿಂತ್ರೆ ಗೆಲ್ಲೋದು ಇವ್ರೇ ಎಂದ ಶಿವಸೇನಾ ನಾಯಕ!
ಕಾಂಗ್ರೆಸ್ ಹಿಂದಿಕ್ಕಲಿದೆ ಎಎಪಿ!
ಇಷ್ಟೇ ಅಲ್ಲ, ಆಗಸ್ಟ್ 13 ರಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ಅನ್ನು ಉಳಿಸಲು ಯಾವ ಗಾಂಧಿಯಿಂದ್ಲೂ ಸಾಧ್ಯವಿಲ್ಲ. ಎಎಪಿ ಪಕ್ಷ ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್ ಅನ್ನು ಬದಲಿಸಲಿದೆ. ಅರವಿಂದ್ ಕೇಜ್ರಿವಾಲ್ ಮುಂಬರುವ ದಿನಗಳಲ್ಲಿ ದೊಡ್ಡ ನಾಯಕರಾಗಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ.
ಅವರ ಟ್ವೀಟ್ ಹೀಗಿದೆ ನೋಡಿ.. ‘’ಇನ್ನು ಯಾವ ಗಾಂಧಿಯೂ #ಕಾಂಗ್ರೆಸ್ ಅನ್ನು ಉಳಿಸಲು ಸಾಧ್ಯವಿಲ್ಲ. #AAP ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್ ಅನ್ನು ಬದಲಿಸಲಿದೆ. ವೈಶೇಷಿಕ ಅಂಶದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಲವಾದ ಸೂರ್ಯ ಅವರನ್ನು ಆ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದು ನಮ್ಮ ದೇಶಕ್ಕೆ ನಿಜವಾಗಿಯೂ ದುಃಖದ ಕಥೆಯಾಗಿದೆ’’ ಎಂದೂ ಇವರು ಆಗಸ್ಟ್ 13 ರಂದು ಟ್ವೀಟ್ ಮಾಡಿದ್ದರು.
No Gandhi can save anymore. is gng to replace congress in coming years. Arvind Kejriwal’s strong Sun in Vaisheshik Amsha will take him to that level, which is actually a sad story for our country.
— Astro Sharmistha (@AstroSharmistha)ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್ ಹೊಡೆಯಲು ಕಾಂಗ್ರೆಸ್ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!