ನಾಗರ ಪಂಚಮಿ: ಈ ದಿನ ಹೋಗಲೇಬೇಕಾದ ದೇವಸ್ಥಾನಗಳು ಇವು..!

By Suvarna NewsFirst Published Aug 19, 2023, 3:20 PM IST
Highlights

ನಾಗ ದೋಷದಿಂದ ಮುಕ್ತಿ ಪಡೆಯೋದು ಸುಲಭವಲ್ಲ. ತಲತಲಾಂತರದವರೆಗೆ ಇದು ಕುಟುಂಬವನ್ನು ಕಾಡುತ್ತದೆ. ಸದಾ ನಾಗರ ಕೃಪೆಗೆ ಪಾತ್ರರಾಗಬೇಕೆಂದ್ರೆ ನಾಗರಪಂಚಮಿಯಲ್ಲಿ ನಾಗಪ್ಪನನ್ನು ಸ್ಮರಿಸಬೇಕು. ನೀವು ದಕ್ಷಿಣ ಭಾರತದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ಪಾಪ ಪರಿಹರಿಸಿಕೊಳ್ಳಬಹುದು. 
 

ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಮಹತ್ವದ ಸ್ಥಾನವಿದೆ. ಈ ಮಾಸದಲ್ಲಿ ಎಲ್ಲೆಡೆ ದೇವರ ಆರಾಧನೆಗಳು ನಡೆಯುತ್ತವೆ. ಒಂದಾದ್ಮೇಲೆ ಒಂದು ಹಬ್ಬವನ್ನು ಆಚರಿಸಲಾಗುತ್ತದೆ.  ಶ್ರಾವಣ ಮಾಸದ ಆರಂಭದಲ್ಲಿ ಬರುವ ನಾಗರಪಂಚಮಿಯನ್ನು ನಾಡಿಗೆ ದೊಡ್ಡಹಬ್ಬ ಎನ್ನಲಾಗುತ್ತದೆ.  ಈ ಬಾರಿ ನಾಗರಪಂಚಮಿಯನ್ನು ಆಗಸ್ಟ್ 21 ರಂದು ಆಚರಿಸಲಾಗುತ್ತಿದೆ. 

ನಾಗರ ಪಂಚಮಿ (Nagar Panchami) ಯಂದು ಎಲ್ಲೆಡೆ ನಾಗನನ್ನು ಪೂಜಿಸಲಾಗುತ್ತದೆ. ನಾಗರ ಮೂರ್ತಿಗೆ ಹಾಲನ್ನೆರೆದು ಧೂಪ ದೀಪಾರತಿಗಳನ್ನು ಮಾಡಲಾಗುತ್ತದೆ. ನಾಗರಪಂಚಮಿಯಂದು ಭಕ್ತಿಯಿಂದ ನಾಗನನ್ನು ಪೂಜಿಸಿದರೆ ಅನೇಕ ರೀತಿಯ ಸರ್ಪದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಅನೇಕ ಕಡೆಗಳಲ್ಲಿ ಹಾವಿನ ಹುತ್ತಗಳನ್ನು ಪೂಜಿಸಲಾಗುತ್ತದೆ. 

Latest Videos

ಈ ಐದು ದೇವಾಲಯಗಳಿಗೆ ಭೇಟಿ ಕೊಟ್ಟರೆ ನಿಮ್ಮ ಶನಿದೋಷ ನಿವಾರಣೆ ದೂರವಾಗಲಿದೆ

ಈಶ್ವರ (Ishwar) ತನ್ನ ಕೊರಳಲ್ಲಿ ಹಾವನ್ನು ಹಾಕಿಕೊಂಡರೆ, ವಿಷ್ಣು ಸರ್ಪ ಶಯನನಾಗಿದ್ದಾನೆ. ಹಾಗಾಗಿ ಸರ್ಪರಾಜನೆಂದರೆ ಈಶ್ವರ ಹಾಗೂ ವಿಷ್ಣು ಇಬ್ಬರಿಗೂ ಸಂಬಂಧಿಸಿರುವುದರಿಂದ ಅನೇಕ ದೇವಸ್ಥಾನಗಳಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆಗಳು ನಡೆಯುತ್ತವೆ. ದಕ್ಷಿಣ ಭಾರತದ ಕೆಲವು ಪ್ರಸಿದ್ಧ ಮಂದಿರಗಳಲ್ಲಿಯೂ ನಾಗರಾಜನ ಪೂಜೆ ವಿಜ್ರಂಬಣೆಯಿಂದ ನಡೆಯುತ್ತದೆ. ಅಂತಹ ಮಂದಿರಗಳ ಬಗೆಗಿನ ಮಾಹಿತಿ ಇಲ್ಲಿದೆ.

ನಾಗರಪಂಚಮಿಯಂದು ಈ ದೇವಸ್ಥಾನಕ್ಕೆ ಭೇಟಿ ನೀಡಿ : 

ಮಲ್ಲಿಕಾರ್ಜುನಸ್ವಾಮಿ ಮಂದಿರ :  12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನಸ್ವಾಮಿ ಮಂದಿರ ಆಂಧ್ರ ಪ್ರದೇಶದ ಶ್ರೀಶೈಲದಲ್ಲಿದೆ. ಕೃಷ್ಣಾ ನದಿಯ ದಡದಲ್ಲಿರುವ ಈ ಕ್ಷೇತ್ರವನ್ನು ಭೂಕೈಲಾಸ ಎಂದೇ ಕರೆಯಲಾಗುತ್ತದೆ. ಮಲ್ಲಿಕಾದೇವಿಯಾಗಿರುವ ಪಾರ್ವತಿಯು ಇಲ್ಲಿ ಶಿವನನ್ನು ವಿವಾಹವಾದಳು ಎನ್ನುವ ಕಾರಣಕ್ಕೆ ಈ ದೇವಸ್ಥಾನಕ್ಕೆ ಮಲ್ಲಿಕಾರ್ಜುನಸ್ವಾಮಿ ಎಂಬ ಹೆಸರು ಬಂದಿದೆ.
ನಾಗರಪಂಚಮಿಯಂದು ಸಾವಿರಾರು  ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನಾಗರ ಪಂಚಮಿಯಂದು ಇಲ್ಲಿ ನಾಗರ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಈ ದೇವಾಲಯದ ಬಳಿಯಲ್ಲಿಯೇ ಸತಿದೇವಿಯ ಒಂದು ಶಕ್ತಿಪೀಠವೂ ಇದೆ. ಈಶ್ವರ ಹಾಗೂ ನಾಗದೇವರ ಆರಾಧಕರು ನಾಗರಪಂಚಮಿಯಂದು ಇಲ್ಲಿ ಬಂದು ದೇವರ ದರ್ಶನ ಪಡೆಯಬಹುದು.

ಬರ್ಸಿಲೋನಾದ ಮೆಟ್ರೋ ಸ್ಟೇಷನ್‌ನಲ್ಲಿ ಮೊಳಗಿದ ಗಾಯತ್ರಿ ಮಂತ್ರ ವೀಡಿಯೋ ವೈರಲ್

ರಾಮನಾಥಸ್ವಾಮಿ ಮಂದಿರ : ತಮಿಳ್ನಾಡಿನ ರಾಮೇಶ್ವರಂ ದ್ವೀಪದಲ್ಲಿ ದಕ್ಷಿಣಭಾರತದ ಅತ್ಯಂತ ಸುಂದರವಾದ ಮತ್ತು ಪ್ರಾಚೀನವಾದ ರಾಮನಾಥಸ್ವಾಮಿ ಮಂದಿರವಿದೆ. ಭಾರತದ ಚಾರ್ಧಾಮ್ ತೀರ್ಥ ಸ್ಥಾನಗಳಲ್ಲಿ ಒಂದಾಗಿರುವ ಇದನ್ನು 7-8ನೇ ಶತಮಾನದಲ್ಲಿಯೇ ನಿರ್ಮಿಸಲಾಗಿದೆ. ಬೀಜ್ ಕಲ್ಲುಗಳಿಂದಲೇ ರಚಿಸಲಾಗಿರುವ ಈ ದೇವಾಲಯ ಉದ್ದನೆಯ ಕಾರಿಡಾರ್ ಗಳಿಂದಲೇ ಪ್ರಖ್ಯಾತಿ ಪಡೆದಿದೆ. ಈ ಸ್ಥಳದಲ್ಲಿ ರಾಮನು ಪರಶಿವನನ್ನು ಪೂಜಿಸಿದ್ದ ಎಂದು ಹೇಳಲಾಗುತ್ತದೆ. ನಾಗರಪಂಚಮಿಯಂದು 12 ಜ್ಯೋತಿರ್ಲಿಂಗಗಳ ಪೈಕಿ ಒಂದೆನಿಸಿರುವ ಈ ಮಂದಿರಕ್ಕೆ ನೀವು ಭೇಟಿ ನೀಡಬಹುದು.

ಮನ್ನಾರಶಾಲಾ ಸರ್ಪಮಂದಿರ : ದಕ್ಷಿಣ ಭಾರತದಲ್ಲಿ ಶಿವನ ದೇವಸ್ಥಾನದ ಜೊತೆಗೆ ನಾಗರಾಜನ ಪ್ರಸಿದ್ಧ ಮಂದಿರಗಳೂ ಇವೆ. ಕೇರಳದಲ್ಲಿರುವ ಮನ್ನಾರಶಾಲಾ ಇವುಗಳಲ್ಲಿ ಒಂದು. ಈ ನಾಗದೇವಾಲಯದಲ್ಲಿ ನೀವು ಸಾವಿರಾರು ನಾಗರ ಮೂರ್ತಿಗಳನ್ನು ಕಾಣಬಹುದು. ಸುಮಾರು 16 ಎಕರೆ ವಿಸ್ತೀರ್ಣಕ್ಕೆ ವ್ಯಾಪಿಸಿರುವ ಈ ದೇವಸ್ತಾನದಲ್ಲಿ ಸುಮಾರು 30000 ನಾಗರ ಮೂರ್ತಿಗಳನ್ನು ನೋಡಬಹುದು. ಈ ದೇವಸ್ಥಾನ ಮಹಾಭಾರತದ ಕಾಲಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

ಮಹಾಭಾರತದ ಕಾಲದಲ್ಲಿ ಖಾಂಡವ ಎಂಬ ಅರಣ್ಯವಿತ್ತು. ಒಮ್ಮೆ ಈ ಕಾಡಿನ ಒಂದು ಭಾಗದ ಹೊರತಾಗಿ ಉಳಿದೆಲ್ಲವೂ ಪೂರ್ತಿಯಾಗಿ ಸುಟ್ಟುಹೋಯ್ತು. ಆಗ ಕಾಡಿನ ಎಲ್ಲಾ ಹಾವುಗಳೂ ಅದೇ ಸ್ಥಳದಲ್ಲಿ ವಾಸಿಸಿದವು. ಆ ಸ್ಥಳವೇ ಮನ್ನಾರಶಾಲಾ ಆಗಿದೆ ಎಂದು ಹೇಳಲಾಗುತ್ತೆ. ಈ ನಾಗರಾಜನ ಮಂದಿರದಲ್ಲಿ ಕಾಳಸರ್ಪ ದೋಷಕ್ಕಾಗಿ ವಿಶೇಷ ಪೂಜೆಗಳು ನಡೆಯುತ್ತವೆ ಮತ್ತು ಇಲ್ಲಿನ ನಾಗರ ದರ್ಶನ ಪಡೆದರೆ ಸಂತಾನ ಭಾಗ್ಯವೂ ಸಿಗುತ್ತದೆ. ನಾಗರಪಂಚಮಿಯಂದು ಭೇಟಿ ನೀಡಬಹುದಾದ ಪುಣ್ಯ ಕ್ಷೇತ್ರಗಳಲ್ಲಿ ಇದು ಒಂದಾಗಿದೆ.
 

click me!