
ಈ ವರ್ಷದ ಏಪ್ರಿಲ್ ತಿಂಗಳು ಜ್ಯೋತಿಷ್ಯದಲ್ಲಿ ಬಹಳ ವಿಶೇಷವಾಗಿದೆ. ಏಕೆಂದರೆ ಈ ತಿಂಗಳಲ್ಲಿ ಎಲ್ಲ 9 ಗ್ರಹಗಳೂ ರಾಶಿ ಪರಿವರ್ತನೆ ಮಾಡುತ್ತಿದ್ದು, ಇದೊಂದು ಅಪರೂಪದ ವಿದ್ಯಾಮಾನವಾಗಿದೆ. ಏಪ್ರಿಲ್ 8ರಂದು ಬುಧ ಗ್ರಹ ಗೋಚಾರ ಸಂಭವಿಸಿದೆ. 13ರಂದು ಗುರು ಗ್ರಹ ಗೋಚಾರ 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ನಡೆಯುತ್ತಿದೆ. 14ಕ್ಕೆ ಸೂರ್ಯ ಸಂಕ್ರಮಣ ನಡೆಯಲಿದೆ. ಈ ನಡುವೆ ಏಪ್ರಿಲ್ 12ರಂದು ಪಾಪ ಗ್ರಹಗಳಾದ ರಾಹು ಮತ್ತು ಕೇತುವಿನ ಗೋಚಾರ ಸಂಭವಿಸುತ್ತಿದೆ.
ಹೌದು, ಈ ದಿನದಲ್ಲಿ ರಾಹುವು ಮೇಷ ರಾಶಿಗೆ ಪ್ರವೇಶಿಸುತ್ತಿದ್ದರೆ ಕೇತುವು ತುಲಾ ರಾಶಿಗೆ ಪ್ರವೇಶಿಸುತ್ತಿದೆ. ಈ ಎರಡು ಕ್ರೂರ ಗ್ರಹಗಳ ರಾಶಿ ಪರಿವರ್ತನೆ ಅಗಾಧ ಪರಿಣಾಮವನ್ನು ಎಲ್ಲರ ಬದುಕಿನಲ್ಲಿ ಬೀರುವುದಾದರೂ ಕಂಟಕವಾಗಿ ಕಾಡುವುದೇ ಹೆಚ್ಚು. ಈ ರಾಹು- ಕೇತುವಿನ ಸಂಚಾರದಿಂದ 5 ರಾಶಿಗಳು ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಅವು ಯಾವ ರಾಶಿಗಳು, ಏನೆಲ್ಲ ಕಷ್ಟನಷ್ಟಗಳು ಎದುರಾಗಲಿವೆ ಎಂಬುದನ್ನು ಇಲ್ಲಿ ಕೊಡಲಾಗಿದೆ. ಹಾಗಂಥ ಹೆದರುವ ಪ್ರಮೇಯವಿಲ್ಲ. ಬೇರೆ ಗ್ರಹಗಳೂ ಈ ತಿಂಗಳಲ್ಲಿ ಪರಿವರ್ತನೆ ಹೊಂದುತ್ತಿರುವುದರಿಂದ ಒಟ್ಟಾರೆ ಪರಿಣಾಮದಲ್ಲಿ ಯಾವುದೇ ಬದಲಾವಣೆಗಳಾಗಬಹುದು.
ಮೇಷ(Aries): ಈ ಸಮಯದಲ್ಲಿ ನಿಮ್ಮ ನಿಕಟ ಸಂಬಂಧಗಳು(relationships) ಹಳಸಬಹುದು. ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ. ಆರೋಗ್ಯ ಹದಗೆಡುವ ಸಾಧ್ಯತೆಯೂ ಇದೆ. ಜೀವನದ ಹಲವು ಕ್ಷೇತ್ರಗಳಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಯಾವುದೇ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ. ತಪ್ಪು ಆಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ತುಂಬಾ ಪರಿಶ್ರಮ ಹಾಕಬೇಕು. ಕೆಟ್ಟ ಚಟಗಳು ಸರಿಯಾದ ಪಾಠ ಕಲಿಸಲಿವೆ.
ತುಲಾ(Libra): ರಾಹು ಕೇತುವಿನ ಈ ಸಂಚಾರವು ನಿಮ್ಮ ಆರೋಗ್ಯ(health), ಆರ್ಥಿಕ ಸ್ಥಿತಿ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹಾಗಾಗಿ ತುಂಬಾ ಎಚ್ಚರದಿಂದಿರಬೇಕು. ನಿಮ್ಮ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳಾಗುತ್ತವೆ. ಧೈರ್ಯದಿಂದ ಎದುರಿಸುವ ಮನಸ್ಥಿತಿ ತಂದುಕೊಳ್ಳಿ. ವೆಚ್ಚವನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ನಿಮ್ಮ ಲಕ್ಷುರಿ ಜೀವನ ತ್ಯಜಿಸಬೇಕಾದ ಸಂದರ್ಭ ಎದುರಾಗಬಹುದು.
Zodiac Sign: ನಿಮ್ಮ ಬಾಸ್ ಕಿರಿಕಿರಿ ಇಲ್ವೇ? ಹಾಗಾದ್ರೆ ಅವರ ರಾಶಿ ಇದಾಗಿರ್ಬೋದು
ಧನು(Sagittarius): ರಾಹು-ಕೇತುಗಳ ಸಂಚಾರವು ಈ ರಾಶಿಯವರಿಗೂ ಅಷ್ಟೇನು ಒಳ್ಳೆಯದಾಗಿಲ್ಲ. ಈ ಅವಧಿಯಲ್ಲಿ ನೀವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತೀರಿ. ಹಣದ ನಷ್ಟ ಉಂಟಾಗಬಹುದು. ಈ ಗೋಚಾರದಿಂದ ಧನಹಾನಿ(loss of money)ಯಾಗುವ ಸಂಭವವಿರುತ್ತದೆ. ಉದಾಸೀನತೆ ಮತ್ತು ಸುಳ್ಳು ಹೇಳುವುದರಿಂದ ಸಾಕಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಕಾಗುತ್ತದೆ.
ಮಕರ(Capricorn): ಕುಟುಂಬದಲ್ಲಿ ಹಲವು ಸಮಸ್ಯೆಗಳಿರಬಹುದು. ಯಾವುದೇ ವಿವಾದದ ಸಂದರ್ಭದಲ್ಲಿ, ನೀವು ನ್ಯಾಯಾಲಯಕ್ಕೆ ಹೋಗಬೇಕಾಗಬಹುದು. ನೀವು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಯಾರಾದರೂ ಹಾಳು ಮಾಡಲು ಪ್ರಯತ್ನಿಸಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ. ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸೂಚಿಸಲಾಗಿದೆ.
ವ್ಯಾಪಾರದಲ್ಲಿ ಸಕ್ಸಸ್ ಆಗಬೇಕೆಂದರೆ ಪಾಲಿಸಿ ಈ Vastu ಸೂತ್ರ!
ಮೀನ(Pisces): ಈ ರಾಶಿಯವರು ಆರ್ಥಿಕ, ಕುಟುಂಬ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನೀವು ಹೆಚ್ಚು ಜಾಗರೂಕರಾಗಿರಬೇಕು. ಯಾರನ್ನೂ ಕುರುಡಾಗಿ ನಂಬಬೇಡಿ. ಹಣದ ಖರ್ಚಿನ ವಿಷಯದಲ್ಲಿ ವಿಶೇಷ ಅಸ್ಥೆ ವಹಿಸಿ. ವಿದೇಶದ ಸಂಪರ್ಕಗಳು ಲಾಭಕಾರಿಯಾಗಲಿವೆ. ಗಂಭೀರ ಕಾಯಿಲೆಗಳಿದ್ದಲ್ಲಿ, ಅವುಗಳ ಚಿಕಿತ್ಸೆ ಕಡೆ ಹೆಚ್ಚಿನ ಗಮನ ವಹಿಸಲೇಬೇಕು. ತಪ್ಪು ಜನರ ಸ್ನೇಹದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಸಂಗಾತಿಯೊಂದಿಗೆ ವಾದ, ಜಗಳಗಳು ಬೇಡ.