ಭೀಮನ ಅಮವಾಸ್ಯೆ: ಪಾದಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಕಿಡ್ನಾಪ್‌ ಮಾಡಿದ ಪತಿರಾಯ

Published : Jul 17, 2023, 04:28 PM ISTUpdated : Jul 17, 2023, 06:12 PM IST
ಭೀಮನ ಅಮವಾಸ್ಯೆ: ಪಾದಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಕಿಡ್ನಾಪ್‌ ಮಾಡಿದ ಪತಿರಾಯ

ಸಾರಾಂಶ

ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರೂ ಪತ್ನಿ ತವರು ಮನೆ ಸೇರಿದ್ದಾಳೆ. ಭೀಮನ ಅಮವಾಸ್ಯೆ ದಿನದಂದು ಪಾದ ಪೂಜೆ ಮಾಡದೇ ತವರಿನಲ್ಲಿದ್ದ ಪತ್ನಿಯನ್ನು ಪತಿಯೇ ಕಿಡ್ನಾಪ್‌ ಮಾಡಿದ್ದಾನೆ. 

ಶಿವಮೊಗ್ಗ (ಜು.17): ಇಬ್ಬರೂ ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿ, ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮನೆಯವರ ವಿರೋಧವನ್ನು ಕಟ್ಟಿಕೊಂಡು ಅಂತರ್ಜಾತಿ ವಿವಾಹ ಆಗಿದ್ದರು. ಆದರೆ, ಭೀಮನ ಅಮವಾಸ್ಯೆ ನಿಮಿತ್ತ ಮನೆಯಲ್ಲಿ ಪಾದಪೂಜೆ ಮಾಡದೇ ತವರು ಮನೆಯನ್ನು ಸೇರಿಕೊಂಡಿದ್ದ ಪತ್ನಿಯನ್ನು ಪತಿರಾಯನೇ ಕಾರಿನಲ್ಲಿ ಬಂದು ಕಿಡ್ನಾಪ್‌ ಮಾಡಿಕೊಂಡು ಹೋಗಿದ್ದಾನೆ.

ಭೀಮನ ಅಮಾವಾಸ್ಯೆಯ ಇಂದು ಪತಿಯಿಂದಲೇ ಪತ್ನಿಯ ಕಿಡ್ನಾಪ್ ಆರೋಪ ವ್ಯಕ್ತವಾಗಿದೆ. ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆರದಿದ್ದು, ಯುವತಿಯ ಪೋಷಕರು ಕಿಡ್ನಾಪ್‌ ಮಾಡಿದ ದೂರು ದಾಖಲಿಸಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಅಂತರ್ಜಾತಿಯ ವಿವಾಹವಾಗಿದ್ದ ಪ್ರೇಮಿಗಳಲ್ಲಿ ವಿರಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಗಂಡನೊಂದಿಗೆ ವಾಸವಿರದೇ ತವರು ಮನೆಯನ್ನು ಸೇರಿಕೊಂಡಿದ್ದಳು. ಈ ವೇಳೆ ಪೋಷಕರೂ ಕೂಡ ಯುವತಿಗೆ ಬಂಬಲವನ್ನು ನೀಡಿ ಮನೆಯಲ್ಲಿಟ್ಟುಕೊಂಡಿದ್ದರು.

Bengaluru: ಪಾದಚಾರಿ ಮಹಿಳೆ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ

ನನಗೂ ಪಾದ ಪೂಜೆ ಮಾಡಲು ಹೆಂಡ್ತಿ ಬೇಕು ಎಂದು ಅಪಹರಣ: ಇನ್ನು ಮನೆ ಬಿಟ್ಟು ತವರು ಮನೆ ಸೇರಿದ್ದ ಪತ್ನಿಯನ್ನು ಕರೆತರಲು ಗಂಡ ಹಲವು ಕಸರತ್ತು ಮಾಡಿದರೂ ಪತ್ನಿಯ ಮನೆಯವರಿಂದ ವಿರೋಧ ವ್ಯಕ್ತವಾಗಿದೆ. ಜೊತೆಗೆ, ಪತಿಯ ವಿರುದ್ಧ ಮುನಿಸಿಕೊಂಡು ತವರು ಸೇರಿದ ಪತ್ನಿಯೂ ಕೂಡ ಆತನೊಂದಿಗೆ ಹೋಗಲು ನಿರಾಕರಿಸಿದ್ದಳಂತೆ. ಆದರೆ, ಇಂದು ರಾಜ್ಯಾದ್ಯಂತ ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಪಾದ ಪೂಜೆ ಮಾಡಿಕೊಂಡು ಗಂಡನನ್ನು ಆರಾಧಿಸುವುದನ್ನು ನೋಡಿದ ಪತಿರಾಯ ತನಗೂ ಹೆಂಡ್ತಿ ಬೇಕು ಎಂದು ಯುವತಿಯ ಮನೆ ಬಳಿ ಆಕೆಯನ್ನು ಕರೆದುಕೊಂಡು ಬರಲು ಹೋಗಿದ್ದಾನೆ. ಆದರೆ, ಅಲ್ಲಿ ನಡೆದ ಘಟನೆಯೇ ಬೇರೆ ಆಗಿದೆ.

ಪತ್ನಿಯನ್ನೇ ಕಿಡ್ನಾಪ್‌ ಮಾಡಿದ ಪತಿರಾಯ: ಇನ್ನು ಸೋಮವಾರ ಬೆಳಗ್ಗೆ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಲಾಡ್ಜ್‌ವೊಂದರ ಎದುರು ಮದುವೆಯಾದ ಮಹಿಳೆ ಹಾಗೂ ಆಕೆಯ ತಾಯಿ ನಡೆದುಕೊಂಡು ಹೋಗುವಾಗ ಇನ್ನೋವಾ ಕಾರಿನಲ್ಲಿ ಬಂದ ಪತಿರಾಯ ತನ್ನ ಪತ್ನಿಯನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹೋಗಿದ್ದಾನೆ. ಇದೀಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಗಳನ್ನ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಮಹಿಳೆ ತಂದೆಯಿಂದ ದೂರು ದಾಖಲಿಸಿದ್ದಾರೆ. ಅಂತರ್ಜಾತಿಯ ವಿವಾಹದ ಹಿನ್ನೆಲೆ ಮರ್ಯಾದೆ ಬೀದಿ ಪಾಲಾಗುತ್ತದೆ ಎಂಬ ದೃಷ್ಟಿಯಿಂದ ಈ ಪ್ರಕರಣದ ಕುರಿತಂತೆ ಯುವತಿಯ ಪೋಷಕರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಇದೀಗ ಘಟನೆ ನಡೆದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಜೀರೋ ಟ್ರಾಫಿಕ್‌ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಮಗು ಶಿಫ್ಟ್‌:  ಶಿವಮೊಗ್ಗ (ಜು.17): ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯ ಹಿನ್ನೆಲೆ ಮೂರು ದಿನದ ಮಗುವನ್ನು ಶಿವಮೊಗ್ಗದಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಶಿಫ್ಟ್ ಮಾಡಲಾಗಿದೆ. ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಮತ್ತು ಮೋನಿಕ ದಂಪತಿಗಳ ಮೂರು ದಿನಗಳ ಮಗು ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ತರಲಾಗಿದೆ. ಕಳೆದ ರಾತ್ರಿ 10 ಗಂಟೆಗೆ ಶಿವಮೊಗ್ಗದಿಂದ ಹೊರಟ ಆಂಬುಲೆನ್ಸ್, ಬೆಂಗಳೂರಿಗೆ 1.20ಕ್ಕೆ ತಲುಪಿತು.

ಶೀಲ ಶಂಕಿಸಿ ಪ್ರಿಯತಮೆಯ ಕೊಂ​​ದಿ​ದ್ದ ಪ್ರೇಮಿಯ ಬಂಧನ: ತಿಂಗಳ ಬಳಿಕ ಸಿಕ್ಕಿಬಿ​ದ್ದ ಕೊಲೆಗಾರ

ಶಿವಮೊಗ್ಗದ ವೆಂಕಟೇಶ ನಗರದ ನೀಲೇಶ್ ಮತ್ತು ಮೋನಿಕ ದಂಪತಿಗಳ ಮೂರು ದಿನಗಳ ಮಗು. ಹೆತ್ತ ಮೂರು ದಿನಗಳಲ್ಲೇ ಹೆಣ್ಣು ಮಗುವಿಗೆ ಹೃದಯದಲ್ಲಿ ತೊಂದರೆ ಕಾಣಿಸಿಕೊಂಡಿತ್ತು  ಹೃದಯ ಚಿಕಿತ್ಸೆಗೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೇಬಿ ಮೋನಿಕಾ.  ತುರ್ತು ತೆರೆದ ಹೃದಯದ ಚಿಕಿತ್ಸೆ ನಡೆಸಬೇಕಾದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ.

PREV
Read more Articles on
click me!

Recommended Stories

ಬೇಲೂರು: ಕಾಡು ಮೊಲಕ್ಕೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕಿ ಮತ್ತೆ ಕಾಡಿಗೆ ಬಿಟ್ಟ ಜನ!
ಜನವರಿ 19 ರಿಂದ 25 ರವರೆಗೆ ಲಕ್ಷ್ಮಿ ನಾರಾಯಣ ರಾಜ ಯೋಗ, 5 ರಾಶಿಗೆ ಶ್ರೀಮಂತಿಕೆ, ಅದೃಷ್ಟ