ಬುಧ ಶುಕ್ರ ಯುತಿಯಿಂದ ಲಕ್ಷ್ಮೀ ನಾರಾಯಣ ಯೋಗ; 3 ರಾಶಿಗಳಿಗೆ ಸಿಗಲಿದೆ ಅದೃಷ್ಟದ ಸಾಥ್

By Suvarna NewsFirst Published Oct 13, 2022, 12:13 PM IST
Highlights

ಜ್ಯೋತಿಷ್ಯದಲ್ಲಿ ಲಕ್ಷ್ಮೀನಾರಾಯಣ ಯೋಗವು ರಾಜಯೋಗಗಳಲ್ಲಿ ಒಂದಾಗಿದೆ. ಈ ತಿಂಗಳಲ್ಲಿ ಬುಧ ಮತ್ತು ಶುಕ್ರ ಯುತಿಯಿಂದ ಈ ಯೋಗ ಉಂಟಾಗುತ್ತಿದ್ದು, 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮೀ ನಾರಾಯಣ ಯೋಗಕ್ಕೆ ವಿಶೇಷ ಮಹತ್ವವಿದೆ. ಈ ಯೋಗವು ಬುಧ ಮತ್ತು ಶುಕ್ರನ ಸಂಯೋಗ(Mercury-Venus Conjunction)ದಿಂದ ಉಂಟಾಗುತ್ತದೆ. ಸಂಪತ್ತು ಮತ್ತು ವೈಭವವನ್ನು ನೀಡುವ ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮತ್ತೊಂದೆಡೆ, ಗ್ರಹಗಳ ರಾಜಕುಮಾರ ಎನಿಸಿಕೊಂಡಿರುವ ಬುಧ ಗ್ರಹವು ಅಕ್ಟೋಬರ್ 26ರಂದು ತುಲಾ ರಾಶಿಯಲ್ಲಿ ಸಾಗಲಿದೆ. ಇವೆರಡೂ ಶುಭ ಗ್ರಹಗಳ ಮಿಲನದಿಂದ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತದೆ ಮತ್ತು ಈ ಯೋಗದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಆದರೆ 3 ರಾಶಿಚಕ್ರ ಚಿಹ್ನೆಗಳು ಈ ಸಮಯದಲ್ಲಿ ಅಪಾರ ಹಣ ಗಳಿಸಬಲ್ಲವರು. ಈ ಅದೃಷ್ಟವಂತ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಕನ್ಯಾ ರಾಶಿ(Virgo): ಲಕ್ಷ್ಮೀ ನಾರಾಯಣ ಯೋಗವು ನಿಮಗೆ ಮಂಗಳಕರವೆಂದು ಸಾಬೀತುಪಡಿಸಲಿದೆ. ನಿಮ್ಮ ಜಾತಕದ ಎರಡನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯದಲ್ಲಿ ಹಣ ಮತ್ತು ಮಾತಿನ ಸ್ಥಾನ ಎಂದು ಪರಿಗಣಿಸಲಾದ ಈ ಎರಡನೇ ಮನೆಯಲ್ಲಿ ಬುಧ ಶುಕ್ರ ಯುತಿ ಸಂಭವಿಸುವುದರಿಂದ ನಿಮ್ಮ ಬಾಕಿ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳುತ್ತವೆ. ಕೈಗೆ ಬಾರದೆ ಸಿಲುಕಿದ್ದ ಹಣವನ್ನು ವಸೂಲಿ ಮಾಡಬಹುದು. ನಿಮ್ಮ ವ್ಯವಹಾರವು ವಿದೇಶಕ್ಕೆ ಸಂಬಂಧಿಸಿದ್ದರೆ, ನೀವು ಉತ್ತಮ ಹಣವನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಇದರೊಂದಿಗೆ ಗೌರವವೂ ಹೆಚ್ಚುತ್ತದೆ.

Latest Videos

Food Astro: ಸಿಹಿ ಪದಾರ್ಥ ಸೇವನೆ ಎಷ್ಟು ಒಳ್ಳೇದು? ಎಷ್ಟು ಕೆಟ್ಟದ್ದು?

ಧನು ರಾಶಿ(Sagittarius): ಈ ಯೋಗದ ರಚನೆಯಿಂದ, ನಿಮ್ಮ ಆದಾಯದಲ್ಲಿ ಉತ್ತಮ ಹೆಚ್ಚಳವನ್ನು ಪಡೆಯಬಹುದು. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ 11ನೇ ಸ್ಥಾನದಲ್ಲಿ ಲಕ್ಷ್ಮೀ ನಾರಾಯಣ ಯೋಗವು ರೂಪುಗೊಳ್ಳುತ್ತದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಜನರು ಸಹ ಒಳ್ಳೆಯ ಸುದ್ದಿ ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ವಿಷಯಗಳು ನಿಮ್ಮ ಪರವಾಗಿ ಉಳಿಯಬಹುದು. ಈ ಸಮಯದಲ್ಲಿ ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್, ಲಾಟರಿಗಳಲ್ಲಿ ಹಣ ಗಳಿಸಬಹುದು. ಈ ಸಮಯದಲ್ಲಿ, ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಸ್ಥಾಪಿಸಲಾಗುತ್ತದೆ. ಕುಟುಂಬದಲ್ಲಿ ಮಂಗಳಕರ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. ಆದರೆ ಈ ಸಮಯದಲ್ಲಿ ವ್ಯವಹಾರ ಮಾಡುವಾಗ ಜಾಗರೂಕತೆ ಅಗತ್ಯ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು.

ಮಕರ ರಾಶಿ(Capricorn): ಲಕ್ಷ್ಮೀ ನಾರಾಯಣ ಯೋಗವು ನಿಮಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಆದ್ದರಿಂದ, ಈ ಸಮಯದಲ್ಲಿ ಎಲ್ಲೋ ಸಿಕ್ಕಿಬಿದ್ದ ಹಣವನ್ನು ಪಡೆಯಬಹುದು. ವ್ಯಾಪಾರ ವಿಸ್ತರಿಸಬಹುದು. ಅದೇ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ಸಾಹಸಮಯ ಸ್ವಭಾವವು ಪ್ರತಿ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರಬಹುದು. ಇದರಿಂದ ನೀವು ಕಛೇರಿಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು. ಇನ್ನೊಂದೆಡೆ, ನಿಮ್ಮ ವ್ಯವಹಾರವು ಕಬ್ಬಿಣ, ಖನಿಜಗಳು, ಪೆಟ್ರೋಲ್ ಮತ್ತು ಎಣ್ಣೆಯಂತಹ ಶನಿ ದೇವರಿಗೆ ಸಂಬಂಧಿಸಿದ್ದರೆ, ಜನರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು.

Shani Margi 2022: ಅಂತೂ ಬದುಕು ಟ್ರ್ಯಾಕ್‌ಗೆ ಬಂತು! ಈ ಐದು ರಾಶಿಗಳಿನ್ನು ನಿರಾಳರಾಗಬಹುದು..

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!