ಶ್ರೀರಸ್ತು-ಶುಭಮಸ್ತು ಧಾರಾವಾಹಿಯ ತುಳಸಿ-ಮಾಧವ್ ತರ ಈ ರಾಶಿಯವರ ಸ್ನೇಹ..!

By Sushma Hegde  |  First Published Jul 9, 2023, 1:26 PM IST

ನಮ್ಮ ರಾಶಿಚಕ್ರವನ್ನು ಆಧರಿಸಿ ಹಲವು ಗುಣಗಳು ನಮ್ಮಲ್ಲಿ ಅರಿಯದೇ ಬೆಳೆದಿರುತ್ತವೆ. ಇವು ಗ್ರಹಗತಿ, ರಾಶಿಗಳನ್ನು ಆಧರಿಸಿ ರೂಪುಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆದರೆ, ಮನುಷ್ಯ ಬೆಳೆದುಬಂದ ವಾತಾವರಣ, ಕೌಟುಂಬಿಕ, ಸಾಂಸ್ಕೃತಿಕ ಹಿನ್ನೆಲೆಗಳ ಪಾತ್ರವೂ ಇಲ್ಲಿರುತ್ತದೆ. ಅದೇ ರೀತಿ ಕೆಲ ರಾಶಿಯವರು ಸ್ನೇಹ ಶಾಶ್ವತವಾಗಿರುತ್ತದೆ. 


ನಮ್ಮ ರಾಶಿಚಕ್ರವನ್ನು ಆಧರಿಸಿ ಹಲವು ಗುಣಗಳು ನಮ್ಮಲ್ಲಿ ಅರಿಯದೇ  ಬೆಳೆದಿರುತ್ತವೆ. ಇವು ಗ್ರಹಗತಿ, ರಾಶಿಗಳನ್ನು ಆಧರಿಸಿ ರೂಪುಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆದರೆ, ಮನುಷ್ಯ ಬೆಳೆದುಬಂದ ವಾತಾವರಣ, ಕೌಟುಂಬಿಕ, ಸಾಂಸ್ಕೃತಿಕ ಹಿನ್ನೆಲೆಗಳ ಪಾತ್ರವೂ ಇಲ್ಲಿರುತ್ತದೆ. ಅದೇ ರೀತಿ ಕೆಲ ರಾಶಿಯವರು ಸ್ನೇಹ ಶಾಸ್ವತವಾಗಿ ಇರುತ್ತದೆ.

ಇಬ್ಬರು ಪರಸ್ಪರ ಕಷ್ಟ-ಸುಖಗಳಿಗೆ ಸ್ಪಂಧಿಸಿದಾಗ ಸ್ನೇಹ ಚಿಗುರುತ್ತದೆ. ಇದು ಪರಸ್ಪರ ನೋವು, ನಲಿವು, ಸುಖ, ದುಃಖಕ್ಕೆ ಅಡ್ಡಿಯಾಗದ ನಿರಂತರವಾಗಿ ಹರಿಯುವ ಜಲಧಾರೆ. ತಂದೆ ತಾಯಿ, ಮಡದಿ, ಮಕ್ಕಳ ಬಂಧ ತಾನೇ ಕೂಡಿಬರುವಂತದ್ದು, ಆದರೆ ಸ್ನೇಹ ನಾವು ಗಳಿಸಿಕೊಳ್ಳುವಂತದ್ದು. ಒಂದು ಬಾರಿ ಹುಟ್ಟಿದ ಸ್ನೇಹ (friendship) ವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಪರಸ್ಪರ ತ್ಯಾಗ ಬಲಿದಾನಕ್ಕೂ ಸಿದ್ಧರಾಗಿರಬೇಕು. 

Tap to resize

Latest Videos

ಕೆಲವೊಮ್ಮೆ ಪ್ರೀತಿ ಪ್ರೀತಿಯನ್ನು ಕೊಲ್ಲಬಹುದು, ಆದರೆ ಸ್ನೇಹದಲ್ಲಿ ಸ್ನೇಹಿತರು ದೂರವಾಗಬಹುದು ಆದರೆ ಎಂದಿಗೂ ಸ್ನೇಹ ಅಳಿಯಲ್ಲ. ಸ್ನೇಹ ನಿರಂತರ. ಇದನ್ನು ಕಾಪಾಡಿಕೊಂಡು ಹೋಗಲು ಕೂಡ ಯೋಗ್ಯತೆ ಬೇಕು. ಇದಕ್ಕೆ ರಾಶಿ ಚಕ್ರ (Zodiac) ವೂ ಒಂದು ಕಾರಣವಾಗಿದ್ದು, ಕೆಲ ರಾಶಿಯವರು ಒಮ್ಮೆ ಸ್ನೇಹ ಮಾಡಿದರೆ ಮುಗೀತು, ಅವರ ಜೊತೆಗಿರುವವರಿಗೆ ಎಂತಹದೇ ಸಂದರ್ಭ  ಬಂದರೂ ಸಹ ಅವರ ಜೊತೆಯಲ್ಲಿಯೇ ಇರುತ್ತಾರೆ. ಇನ್ನು ಕೆಲವರು ಶ್ರೀರಸ್ತು-ಶುಭಮಸ್ತು ಧಾರಾವಾಹಿಯ ತುಳಸಿ-ಮಾಧವ್ ತರ ಎಂತಹ ಸಮಸ್ಯೆಗಳು ಎದುರಾದರೂ ಹಾಗೂ ಸಮಾಜದಿಂದ ನೋವು ಅನುಭವಿಸಿದರೂ ತಮ್ಮ ಸ್ನೇಹವನ್ನು ಮರೆಯಲ್ಲ. ಈ ಕುರಿತು ಇಲ್ಲಿದೆ ಮಾಹಿತಿ.

ಮೇಷ ರಾಶಿ (Aries) 

ಮೇಷ ರಾಶಿಯವರು ವಿಶ್ವಾಸಾರ್ಹಕ್ಕೆ ಮತ್ತೊಂದು ಹೆಸರು ಅಂತ ಹೇಳಬಹುದು. ಇವರು ಸ್ನೇಹದಲ್ಲಿ ನಿಷ್ಠೆಯಿಂದ ಇರುತ್ತಾರೆ. ಪ್ರತಿಯೊಂದು ಯಶಸ್ಸಿಗೂ ಸ್ನೇಹಿತರನ್ನು ಇವರು ಹುರಿದುಂಬಿಸುತ್ತಾರೆ. ಮೇಷ ರಾಶಿಯವರೊಂದಿಗೆ ಸ್ನೇಹಿತರಾದರೆ, ನಿಮ್ಮ ಹವ್ಯಾಸ (hobby) ಗಳು ಕೂಡ ಉತ್ತಮ ಆಗಲಿವೆ.

ಸಿಂಹ ರಾಶಿ ( Leo ) 

ಇವರ ಸ್ನೇಹವು ವಿಶ್ವಾಸ (confidence)  ಮತ್ತು ನಂಬಿಕೆಗೆ ಹೆಸರುವಾಸಿ. ಇವರು ಸ್ನೇಹವನ್ನು ನಿಭಾಯಿಸುವಲ್ಲಿ ತುಂಬಾ ನಿಷ್ಠಾವಂತರು. ಅಹಂಕಾರ ತೋರುವ  ವ್ಯಕ್ತಿಗಳ ಜತೆ ಇವರು ಸ್ನೇಹ ಬೆಳೆಸಲ್ಲ. ಇವರು ನಿಮ್ಮನ್ನು ಕೊನೆಯ ತನಕ ಕೈ ಬಿಡುವುದಿಲ್ಲ.

Weekly Love Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಬೀಸಲಿದೆ..!

 

ವೃಷಭ ರಾಶಿ (Taurus) 

ಇವರು ನೋಡಲು ಸ್ವಲ್ಪ ಕಠಿಣವಾಗಿ ಕಂಡರೂ ಸಹ ತುಂಬಾನೇ ಒಳ್ಳೆಯ ವ್ಯಕ್ತಿಗಳು. ಇವರು ಸ್ನೇಹಿತರಿಗೆ ಅಗತ್ಯವಿದ್ದಾಗ ಸಹಾಯ ಮಾಡಲು ಯಾವಾಗಲೂ ಮುಂದೆ ಇರುತ್ತಾರೆ. ಇವರು ನಿಮ್ಮೊಂದಿಗೆ ನಿಜವಾದ ಬಂಧವನ್ನು ರೂಪಿಸಿಕೊಂಡಿದ್ದೆ ನೀವು ತುಂಬಾನೇ ನಿಷ್ಠಾವಂತ  (faithful) ವ್ಯಕ್ತಿ ಜೊತೆ ಸ್ನೇಹ ಮಾಡಿದ್ದೀರಿ ಎಂದರ್ಥ. 

ವೃಶ್ಚಿಕ ರಾಶಿ (Scorpio ) 

ವೃಶ್ಚಿಕ ರಾಶಿಯವರು ಕೂಡ ನಂಬಿಕೆ ದ್ರೋಹ ಮಾಡಲ್ಲ. ಒಮ್ಮೆ ನಿಮ್ಮನ್ನು ಇವರು ವಿಶ್ವಾಸಕ್ಕೆ ತೆಗೆದುಕೊಂಡರೆ ಎಂದಿಗೂ ಕೈ ಬಿಡಲ್ಲ. ಅವರು ಸ್ನೇಹದಷ್ಟೆ, ಸೇಡಿನ ಮನೋಭಾವವುಳ್ಳವರು, ಆದ್ದರಿಂದ ನೀವು ಅವರಿಗೆ ಎಂದಿಗೂ ದ್ರೋಹ ಮಾಡದಂತೆ ಜಾಗರೂಕರಾಗಿರಿ. 

Weekly Tarot Readings: ಈ ರಾಶಿಯವರಿಗೆ ಕೋಪವೇ ಶತ್ರು ಆಗಲಿದೆ..!

 

ಕಟಕ ರಾಶಿ (Cancer )

ಇವರು ಅತ್ಯಂತ ನಿಷ್ಠಾವಂತರು ಮತ್ತು ಪ್ರಾಮಾಣಿಕರು. ಪ್ರತಿಯಾಗಿ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಅವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಇವರು ಯಾವಾಗಲೂ ಸ್ನೇಹಿತ ಬೆನ್ನ ಹಿಂದೆಯೇ ಇರುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!