ಯಾರಿಗೆ ಮಂತ್ರ ಸಿದ್ಧಿಯಾಗಿರುತ್ತದೆಯೋ, ಅವರ ನಾಲಿಗೆಯಲ್ಲಿ ಸರಸ್ವತಿ ಸದಾ ನಾಟ್ಯವಾಡುತ್ತಿರುತ್ತಾಳೆ. ಮಾತನಾಡುವುದಕ್ಕೆ ನಾಲಿಗೆ ಬೇರೆ, ಆದರೆ ಮಂತ್ರಸಿದ್ಧಿಯ ನಾಲಿಗೆಯೇ ಬೇರೆ ಎಂದು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಮುಂಡರಗಿ(ಜು.9): ಯಾರಿಗೆ ಮಂತ್ರ ಸಿದ್ಧಿಯಾಗಿರುತ್ತದೆಯೋ, ಅವರ ನಾಲಿಗೆಯಲ್ಲಿ ಸರಸ್ವತಿ ಸದಾ ನಾಟ್ಯವಾಡುತ್ತಿರುತ್ತಾಳೆ. ಮಾತನಾಡುವುದಕ್ಕೆ ನಾಲಿಗೆ ಬೇರೆ, ಆದರೆ ಮಂತ್ರಸಿದ್ಧಿಯ ನಾಲಿಗೆಯೇ ಬೇರೆ ಎಂದು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಸಂಜೆ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿದರು. ನಾಲಿಗೆ ಒಳಗಡೆ ಸರಸ್ವತಿ ನಾಟ್ಯವಾಡಬೇಕೆಂದರೆ ಜ್ಞಾನವನ್ನು ಮೀರಿ ಸುಜ್ಞಾನದ ವ್ಯವಸ್ಥೆ ಒಳಗಡೆ ಮಂತ್ರಸಿದ್ಧಿಯಾಗಿದ್ದರೆ ಮಾತ್ರ ನಾಲಿಗೆಯಲ್ಲಿ ಶಬ್ದಗಳು ನಾಟ್ಯವಾಡುತ್ತವೆ. ಇಲ್ಲದಿದ್ದರೆ ನಾಟ್ಯವಾಡುವುದಿಲ್ಲ. ಹಾಗೆಯೇ ಬಸವಣ್ಣನವರು ಇಷ್ಟಲಿಂಗವನ್ನು ಕಲ್ಪಿಸಿ ಕೊಟ್ಟನಂತರ ನಮಗೆ ಅದೊಂದು ವಸ್ತುವಾಗಿ ಕಂಡರೆ ಅದು ವಸ್ತು ಅಷ್ಟೇ. ಆ ವಸ್ತುವನ್ನು ವಿಸ್ತರಿಸಬೇಕಾಯಿತು ಎಂದರೆ ಆ ವಸ್ತುವನ್ನು ವಿಭಜಿಸಿ ನೋಡಬೇಕೆಂದರೆ, ಆ ವಸ್ತುವಿನ ಒಳಗಡೆ ನಮ್ಮ ತನು, ಮನ, ಭಾವ ಒಳಗಡೆ ಹೋಗಬೇಕಾದರೆ ನಮ್ಮ ಕೈಯಲ್ಲಿ ಒಂದು ಸೂತ್ರವಿರಬೇಕು. ಆ ಸೂತ್ರವೇ ಮಂತ್ರ ಎಂದರು.
undefined
ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್ ಭದ್ರತೆ
ರಾಗ, ತಾಳ, ಲಯಕ್ಕೆ ಸಂಪೂರ್ಣವಾದಂತಹ ವಸ್ತು ಯಾವುದೆಂದರೆ ಶೃತಿ ಇರಬೇಕು. ಸಂಗೀತಕ್ಕೆ ಮೂಲ ಬುನಾದಿಯಾವುದೆಂದರೆ ಅದು ಶೃತಿ ಮಾತ್ರ. ಶೃತಿ ಹೋದರೆ ಸಂಗೀತ ಬರಲು ಸಾಧ್ಯವಿಲ್ಲ. ಶೃತಿ ಎನ್ನುವುದು ನಾದಕ್ಕೆ, ತಾಳಕ್ಕೆ, ಲಯಕ್ಕೆ, ಭಾವಕ್ಕೆ ಮೂಲ ಬುನಾದಿಯಾಗಿದೆ. ಹಾಗೆ ದೇಹಕ್ಕೆ, ಮನಕ್ಕೆ, ಪ್ರಾಣಕ್ಕೆ, ಇಷ್ಟಲಿಂಗಕ್ಕೆ ಶೃತಿ ಯಾವುದೆಂದರೆ ಮಂತ್ರ. ಶೃತಿ ತಪ್ಪಿದರೆ ರಾಗ, ಲಯ, ತಾಳ, ಭಾವ ಎಲ್ಲವೂ ಹೋಗುತ್ತದೆ. ಹಾಗೆ ಶರೀರದಲ್ಲಿ ಸಾಧನೆ ಮಾಡುವಂತಹ ಮನಸ್ಸಿಗೆ ತನು, ಮನ, ಭಾವಗಳು, ಇಷ್ಟಲಿಂಗಗಳು, ವಿಭೂತಿ, ರುದ್ರಾಕ್ಷಿ, ಮಂತ್ರ ಇವೆಲ್ಲವುಗಳು ನಮ್ಮ ಕಣ್ಣೆದುರಿಗೆ ಇದ್ದರೆ ಮಂತ್ರ ಎನ್ನುವಂತಹ ಶೃತಿ ಸರಿಯಾಗಿ ಇರದಿದ್ದರೆ ಪೂಜೆ ಹೊರಟು ಹೋಗಿಬಿಡುತ್ತದೆ. ಮಂತ್ರವೇ ಶೃತಿ. ಇಷ್ಟಲಿಂಗವನ್ನು ಹಿಡಿದುಕೊಂಡು ಸಾಧನೆ ಮಾಡುವಂತಹ ಮನುಷ್ಯನಿಗೆ ಮಂತ್ರ ಬಹಳ ನಿಧಾನವಾಗಿ ಬರಬೇಕು. ಮಂತ್ರ ಎಂಬುದು ದೇವರನ್ನು ಒಲಿಸುವ ಸಾಧನ ಅಲ್ಲ, ಮಂತ್ರ ಎನ್ನುವುದು ಸಾಧನೆಗೆ ಬೇಕಾಗಿರುವಂತದ್ದು ಎಂದರು.