Sunday Color: ನೀವು ಭಾನುವಾರ ಹುಟ್ಟಿದ್ದಾ? ಹಾಗಿದ್ರೆ ಈ ಬಣ್ಣ ನಿಮಗೆ ಶುಭ

By Suvarna NewsFirst Published Nov 12, 2022, 11:51 AM IST
Highlights

ನಾವು ಜನಿಸಿದ ದಿನ, ಗಳಿಗೆ ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ. ವಾರದ ಎಲ್ಲ ದಿನವೂ ಒಂದೊಂದು ದೇವರಿಗೆ ಮೀಸಲಾಗಿದೆ. ಹಾಗೆಯೇ ಒಂದೊಂದು ಬಣ್ಣಗಳಿವೆ. ನಮ್ಮ ಜನನದ ದಿನ ಹಾಗೂ ಅದಕ್ಕೆ ಹೊಂದುವ ಬಣ್ಣವನ್ನು ಬಳಕೆ ಮಾಡಿದ್ರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. 
 

ವಾರದ ಕೊನೆಯ ದಿನ ಭಾನುವಾರ. ವಾರವಿಡಿ ಕೆಲಸ ಮಾಡಿದ ಜನರು ಈ ದಿನ ವಿಶ್ರಾಂತಿ ಬಯಸ್ತಾರೆ. ಇದೇ ಕಾರಣಕ್ಕೆ ಭಾನುವಾರ ಬಂತೆಂದ್ರೆ ಎಲ್ಲರ ಮುಖದಲ್ಲಿ ನಗು ಮೂಡಿರುತ್ತದೆ. ಮುಂದಿನ ವಾರಕ್ಕೆ ಪ್ಲಾನ್ ಮಾಡೋದು ಕೂಡ ಇದೇ ಭಾನುವಾರವೆ. ಕೆಲವರಿಗೆ ಭಾನುವಾರ ಇನ್ನೊಂದು ಕಾರಣಕ್ಕೆ ವಿಶೇಷವಾಗಿರುತ್ತದೆ. ಅವರು ಜನಿಸಿದ ದಿನ ಭಾನುವಾರವಾಗಿರುತ್ತದೆ. 

ಕೆಲವರು ಹುಟ್ಟಿದ ದಿನಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಶುಭ ಕೆಲಸಗಳನ್ನು ಹುಟ್ಟಿದ ದಿನ ಶುರು ಮಾಡ್ತಾರೆ. ಭಾನುವಾರ (Sunday) ಜನಿಸಿದವರು ಸ್ನೇಹಿತ (Friend)ರಿಗೆ ಹೆಚ್ಚು ಮಹತ್ವ ನೀಡ್ತಾರೆ. ಸ್ವಭಾವತಃ ಭಾವನಾತ್ಮಕವಾಗಿರುತ್ತಾರೆ. ಸೂರ್ಯ (Sun) ನ ಧನಾತ್ಮಕ ಪ್ರಭಾವಕ್ಕೆ ಒಳಗಾಗ್ತಾರೆ. ಭಾನುವಾರ ಹುಟ್ಟಿದವರು ಕೆಲ ಬಣ್ಣಗಳನ್ನು ಬಳಸಿದ್ರೆ ಅವ್ರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ನೋಡಬಹುದು. ಭಾನುವಾರ ಜನಿಸಿದವರಿಗೆ ಯಾವುದು ಶುಭ ಬಣ್ಣ (Colour) ಎಂಬುದನ್ನು ನಾವಿಂದು ಹೇಳ್ತೇವೆ.  

ಭಾನುವಾರ ಜನಿಸಿದವರು ಈ ಬಣ್ಣ ಬಳಸಬೇಕು :   

ಕಿತ್ತಳೆ ಬಣ್ಣ ಬಳಸಿ ಅದೃಷ್ಟ ಬದಲಿಸಿ :  ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ. ಕಿತ್ತಳೆ ಬಣ್ಣ ಧೈರ್ಯ ಮತ್ತು ತೇಜಸ್ಸಿಗೆ ಸಂಬಂಧಿಸಿದೆ. ಭಾನುವಾರ ಜನಿಸಿದವರಿಗೆ ಕಿತ್ತಳೆ  ಅತ್ಯಂತ ಮಂಗಳಕರ ಬಣ್ಣವಾಗಿದೆ. ಕಿತ್ತಳೆ ಬಣ್ಣ ಬಳಕೆ ಮಾಡಿದ್ರೆ ಕೆಲಸ ಮಾಡಲು ಸ್ಪೂರ್ತಿ ಮತ್ತು ಶಕ್ತಿ ದೊರಕುತ್ತದೆ. ಆತ್ಮವಿಶ್ವಾಸ ಮನೆ ಮಾಡಿರುತ್ತದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿ ಶುಭ ಕಾರ್ಯ ಆರಂಬಿಸಿದ್ರೆ ಯಶಸ್ಸು ನಿಮ್ಮದಾಗುತ್ತದೆ.

ಕೆಂಪು ಬಣ್ಣ ಮಂಗಳಕರ : ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಭಾನುವಾರ ಜನಿಸಿದವರು ಕೆಂಪು ಬಟ್ಟೆ ಅಥವಾ ವಸ್ತುಗಳನ್ನು ಬಳಸಿದ್ರೆ ಸದಾ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ. ಕೆಂಪು ಪ್ರೀತಿಯ ಸಂಕೇತವಾಗಿದೆ. ಹಾಗಾಗಿ ಈ ಬಣ್ಣ ಬಳಕೆ ಮಾಡುವುದ್ರಿಂದ ಪ್ರೀತಿ ಸದಾ ನೆಲೆಸಿರುತ್ತದೆ.

NUMEROLOGY: ಸಂಖ್ಯೆ 4ಕ್ಕೆ ಆತುರದ ನಿರ್ಧಾರದಿಂದ ಹಾನಿ 

ಭಾನುವಾರ ಜನಿಸಿದವರಿಗೆ ಬಿಳಿ ಅತ್ಯುತ್ತಮ : ಯಾವುದೇ ಸಮಸ್ಯೆ ಕಾಡ್ತಿದ್ದರೆ ನೀವು ಈ ಸಮಯದಲ್ಲಿ ಬಿಳಿ ಬಣ್ಣವನ್ನು ಧರಿಸಿ. ಇದು ತೊಂದರೆಯಿಂದ ಹೊರ ಬರಲು ನಿಮಗೆ ನೆರವಾಗುತ್ತದೆ. ಮನಸ್ಸಿನ ಶಾಂತಿಯನ್ನು ನೀಡುತ್ತದೆ.  ಬಿಳಿ ಬಣ್ಣವು ನಕಾರಾತ್ಮಕ ವಿಷಯಗಳಿಂದ ನಿಮ್ಮನ್ನು ದೂರವಿಡುತ್ತದೆ. ಮಾನಸಿಕವಾಗಿ ದುರ್ಬಲರಾಗ್ತಿದ್ದರೆ ಬಿಳಿ ಬಣ್ಣವನ್ನು ನೀವು ಬಳಸಬೇಕು.

ಹಳದಿ ಬಣ್ಣದಲ್ಲಿದೆ ಶಕ್ತಿ : ಹಳದಿ ಬಣ್ಣವನ್ನು ಸೂರ್ಯನ ಶಕ್ತಿ  ಎಂದು ಪರಿಗಣಿಸಲಾಗಿದೆ. ಈ ದಿನ ಜನಿಸಿದವರು ಹಳದಿ ಬಣ್ಣದ ಬಳಕೆಯನ್ನು ಹೆಚ್ಚಾಗಿ ಮಾಡಿದ್ರೆ ಶಕ್ತಿ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಮತ್ತು ಶುಭ ಸಂದರ್ಭದಲ್ಲಿ ಹಳದಿ ಬಣ್ಣದ ಬಟ್ಟೆ ಧರಿಸಿದ್ರೆ ಉತ್ತಮ ಫಲಿತಾಂಶ ಪ್ರಾಪ್ತಿಯಾಗುತ್ತದೆ.

ಭಾನುವಾರ ಹುಟ್ಟಿದವರು ಬಳಸಿ ನೀಲಿ ಬಣ್ಣ :  ನೀಲಿ ಬಣ್ಣ ಶಾಂತಿಯ ಸಂಕೇತವಾಗಿದೆ. ಭಾನುವಾರದಂದು ಜನಿಸಿದವರು ನೀಲಿ ಬಣ್ಣ ಬಳಕೆ ಮಾಡಿದ್ರೆ ಜೀವನದಲ್ಲಿ ಸಂತೋಷವನ್ನು ಕಾಣಬಹುದು. ಪ್ರೀತಿ ಹಾಗೂ ಆಧ್ಯಾತ್ಮಿಕ ಮನೋಭಾವವನ್ನು ಇದು ಹೆಚ್ಚಿಸುತ್ತದೆ.  

ಹಿಟ್ಟು ಕಲಸಲೂ ಉಂಟು ಶಾಸ್ತ್ರ, ಹೇಗೇಗೋ ಮಾಡಿದರೆ ಒಳ್ಳೇದಾಗೋಲ್ಲ

ಭಾನುವಾರ ಜನಿಸಿದವರು ಈ ಬಣ್ಣದಿಂದ ದೂರವಿರಿ :  ಭಾನುವಾರದಂದು ಜನಿಸಿದ ಜನರಿಗೆ  ಸೂರ್ಯನ ಎಲ್ಲಾ ಬಣ್ಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ರೆ ಕಪ್ಪು ಬಣ್ಣವು ಶನಿಯ ಸಂಕೇತವಾಗಿದೆ.  ಈ ಕಾರಣದಿಂದಾಗಿ ಭಾನುವಾರ ಜನಿಸಿದವರು  ಕಪ್ಪು ಬಣ್ಣವನ್ನು ಬಳಸದಿರುವುದು ಒಳ್ಳೆಯದು. ಮದುವೆ, ಪರೀಕ್ಷೆ ಅಥವಾ ಸಂದರ್ಶನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಕಪ್ಪ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಈ ಬಣ್ಣವು ನಿಮ್ಮ ಜೀವನದಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ. ನಿಮ್ಮ ಯಶಸ್ಸಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. 
 

click me!