Astro remedy : ಜೇಬಿನಲ್ಲಿ ಕರ್ಪೂರ ಇಟ್ಕೊಂಡ್ರೆ ಹಣದೊಂದಿಗೆ ನೆಮ್ಮದಿಯೂ ಹೆಚ್ಚುತ್ತೆ!

By Suvarna NewsFirst Published Nov 12, 2022, 10:50 AM IST
Highlights

ಕರ್ಪೂರವನ್ನು ದೇವರ ಆರತಿಗೆ ಮಾತ್ರ ನಾವು ಬಳಕೆ ಮಾಡ್ತೇವೆ. ಆದ್ರೆ ಕರ್ಪೂರದಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಕರ್ಪೂರ ಸದಾ ನಮ್ಮ ಬಳಿಯಿದ್ರೆ ಆರೋಗ್ಯ ಸಮಸ್ಯೆಯಿಂದ ಹಿಡಿದು ಆರ್ಥಿಕ ನಷ್ಟದವರೆಗೆ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
 

ದೇವರ ಪೂಜೆ, ಆರಾಧನೆಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರತಿ ದಿನ ದೇವರ ಪೂಜೆ ಮಾಡಲಾಗುತ್ತದೆ. ಪೂಜೆ ವೇಳೆ ಕೆಲ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ಹೂ, ದೀಪ, ಅರಿಶಿನ – ಕುಂಕುಮದ ಜೊತೆ ಕರ್ಪೂರವನ್ನು ಕೂಡ ಬಳಕೆ ಮಾಡಲಾಗುತ್ತದೆ. ಕರ್ಪೂರದ ಆರತಿ ಎತ್ತಿದ್ರೆ ದೇವರು ಪ್ರಸನ್ನನಾಗ್ತಾನೆಂದು ನಂಬಲಾಗಿದೆ. ಕೆಲವರು ದಿನದಲ್ಲಿ ಎರಡು ಬಾರಿ ಕರ್ಪೂರದ ಆರತಿಯನ್ನು ಬೆಳಗುತ್ತಾರೆ. 

ಕರ್ಪೂರ (Camphor) ದ ಆರತಿ ಹಾಗೂ ಹೊಗೆ ಮನೆಯ ಮೂಲೆ ಮೂಲೆ ತಲುಪುವುದ್ರಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಎಂದು ನಂಬಲಾಗಿದೆ. ಇದ್ರಿಂದ ನಕಾರಾತ್ಮಕ (Negative) ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ವಾಸ್ತು (Vastu ) ಶಾಸ್ತ್ರಗಳಲ್ಲೂ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕರ್ಪೂರವನ್ನು ಪೂಜೆ (Worship) ಗೆ ಮಾತ್ರವಲ್ಲ ಆರೋಗ್ಯ (Health) ವೃದ್ಧಿಗಾಗಿ ಔಷಧಿಗಳಲ್ಲೂ ಬಳಕೆ ಮಾಡಲಾಗುತ್ತದೆ. ಕರ್ಪೂರದ ಅನೇಕ ಪ್ರಯೋಜನಗಳನ್ನು ಜ್ಯೋತಿಷ್ಯದಲ್ಲಿಯೂ ಹೇಳಲಾಗಿದೆ.ಸಾಮಾನ್ಯವಾಗಿ ನಾವು ಕರ್ಪೂರವನ್ನು ದೇವರ ಮನೆಯಲ್ಲಿ ಇಡ್ತೇವೆ. ಆದ್ರೆ ಕರ್ಪೂರವನ್ನು ನಮ್ಮ ಬಳಿ ಇಟ್ಟುಕೊಳ್ಳುವುದ್ರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಕರ್ಪೂರವನ್ನು ನಿಮ್ಮ ಪರ್ಸ್ ಅಥವಾ ಕಿಸೆಯಲ್ಲಿ  ಇಡುವುದ್ರಿಂದ ಏನೆಲ್ಲ ಪ್ರಯೋಜನವಿದೆ ಎಂಬುದು ಇಲ್ಲಿದೆ. 

ಸೌಂದರ್ಯ ವೃದ್ಧಿಗೆ ಕಾರಣವಾಗುತ್ತೆ ಕರ್ಪೂರ : ಚರ್ಮದ ಕಾಯಿಲೆ ಅಥವಾ ಇನ್ನಾವುದೇ ಕಾರಣದಿಂದ ನಿಮ್ಮ ಚರ್ಮದ ಆರೋಗ್ಯ ಹಾಳಾಗಿದ್ದರೆ, ಸೌಂದರ್ಯಕ್ಕೆ ಧಕ್ಕೆಯಾಗ್ತಿದ್ದರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಚರ್ಮದ ಸಮಸ್ಯೆ ನಿಮಗೆ ಕಾಡ್ತಿದೆ ಎಂದಾದ್ರೆ ನಿಮ್ಮ ಜಾತಕದಲ್ಲಿ ಶುಕ್ರನು ದುರ್ಬಲ ಸ್ಥಿತಿಯಲ್ಲಿದ್ದಾನೆ ಎಂದು ಅರ್ಥ. ಈ ಸಂದರ್ಭದಲ್ಲಿ  ನೀವು ಕರ್ಪೂರದ ಉಪಾಯ ಪಾಲಿಸಬೇಕು. ನೀವು ಬಿಳಿ ಬಟ್ಟೆಯಲ್ಲಿ ಕರ್ಪೂರವನ್ನು ಕಟ್ಟಿ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಶುಕ್ರನು ಪರಿಮಳ ವಸ್ತುವಿಗೆ ಆಕರ್ಷಿತನಾಗ್ತಾನೆ. ಇದ್ರಿಂದ ನಿಮ್ಮ ಸೌಂದರ್ಯದ ಸಮಸ್ಯೆ ಕಡಿಮೆಯಾಗುತ್ತದೆ. 

ಆರ್ಥಿಕ ಪರಿಸ್ಥಿತಿ ದುರ್ಬಲವಾಗ್ತಿದ್ದರೆ ಈ ಉಪಾಯ ಮಾಡಿ : ನಿಮ್ಮ ಜಾತಕದಲ್ಲಿ ಸರ್ಪದೋಷ, ಪಿತ್ರದೋಷ ಅಥವಾ ರಾಹು-ಕೇತು ದೋಷವಿದ್ದರೆ ನಿಮ್ಮ ಜೊತೆಯಲ್ಲಿ ಕರ್ಪೂರವನ್ನು ಇಟ್ಟುಕೊಳ್ಳಬೇಕು. ನೀವು ಕರವಸ್ತ್ರದಲ್ಲಿ ಸಣ್ಣ ಕರ್ಪೂರವನ್ನು ಕಟ್ಟಿ ನಿಮ್ಮ ಬಳಿ ಇಟ್ಟುಕೊಳ್ಳಿ. ನಿಮ್ಮ ಪರ್ಸ್ ನಲ್ಲಿ ಕೂಡ ನೀವು ಕರ್ಪೂರವನ್ನು ಇಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಮೇಲಿನ ಎಲ್ಲ  ದೋಷಗಳ ಪ್ರಭಾವ  ಕಡಿಮೆಯಾಗುತ್ತದೆ. ಯಾವುದೇ ಆರ್ಥಿಕ ಬಿಕ್ಕಟ್ಟು ತಲೆದೂರುವುದಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಶುಕ್ರ ಗ್ರಹದ ಅಧಿಪತಿ ರಾಕ್ಷಸರ ದೇವರು ಶುಕ್ರಾಚಾರ್ಯ. ರಾಕ್ಷಸರು ಚಂಚಲ ಸ್ವಭಾವವನ್ನು ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ  ಈ ಗ್ರಹವು ಯಾವಾಗಲೂ ಚಂಚಲವಾಗಿರುತ್ತದೆ.  ಶುಕ್ರನನ್ನು ಶಾಂತವಾಗಿಡಲು ಕೆಲವು ಪರಿಮಳಯುಕ್ತ ವಸ್ತುಗಳನ್ನು ಬಳಸಬೇಕು. ಕರ್ಪೂರವೂ ಪರಿಮಳಯಕ್ತ ವಸ್ತುವಾಗಿದೆ. ಇದು ತುಂಬಾ ಮಂಗಳಕರವಾಗಿದೆ. ಇದನ್ನು ಬಳಸಿ ನೀವು ಶುಕ್ರನನ್ನು ಶಾಂತಗೊಳಿಸಬಹುದು. 

ವೃಷಭ ರಾಶಿಯ ಪುರುಷ ಮತ್ತು ಮಹಿಳೆ ನಡುವಿನ Compatibility ಹೇಗಿದೆ ನೋಡಿ!
 
ಶಾಂತ ಮನಸ್ಸು ಮತ್ತು ಸಂತೋಷ ವೃದ್ಧಿಗೆ ಹೀಗೆ ಮಾಡಿ :  ಕರ್ಪೂರ ತಂಪಿನ ಸ್ವಭಾವ ಹೊಂದಿದೆ. ಕರ್ಪೂರವನ್ನು ಕಿಸೆಯಲ್ಲಿ ಇಟ್ಟುಕೊಂಡರೆ ಮನಸ್ಸು ಸದಾ ಶಾಂತವಾಗಿರುತ್ತದೆ. ಶಾಂತ ಮನಸ್ಸಿನಿಂದ ಮಾಡುವ ಪ್ರತಿಯೊಂದು ಕೆಲಸವೂ ಯಶಸ್ವಿಯಾಗುತ್ತದೆ. ಯಶಸ್ಸಿನಿಂದ ಸಂತೋಷವೂ ಪ್ರಾಪ್ತಿಯಾಗುತ್ತದೆ. ಶಾಂತತೆ ಮತ್ತು ಯಶಸ್ಸು ಬೇಕು ಎನ್ನುವವರು ಕರ್ಪೂರವನ್ನು ಕಿಸೆಯಲ್ಲಿ ಇಟ್ಟುಕೊಳ್ಳಬೇಕು.

Astro remedies: ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು!

ಕರ್ಪೂರವನ್ನು ಈ ದಿಕ್ಕಿನಲ್ಲಿಡಲು ಮರೆಯಬೇಡಿ : ಯಾವಾಗಲೂ ನಿಮ್ಮ ಎಡ ಜೇಬಿನಲ್ಲಿ ಕರ್ಪೂರವನ್ನು ಇಟ್ಟುಕೊಳ್ಳಬೇಕು. ನೀವು ನಿಮ್ಮ ಪರ್ಸ್‌ನಲ್ಲಿ ಕೂಡ ಕರ್ಪೂರವನ್ನು ಇಟ್ಟುಕೊಳ್ಳಬಹುದು. ಆದ್ರೆ ಕರ್ಪೂರವಿರುವ ಪರ್ಸನ್ನು ಯಾವಾಗ್ಲೂ ಎಡಗಡೆ ಇಟ್ಟುಕೊಳ್ಳಿ. ವಾಸ್ತು ಪ್ರಕಾರ, ಕರ್ಪೂರ ನಮ್ಮ ಎಡಗಡೆಯಿದ್ದರೆ ಒಳ್ಳೆಯದು ಎಂದು ನಂಬಲಾಗಿದೆ. 
 

click me!