Mangal Gochar 2022: ಈ ರಾಶಿಗಳಿಗೆ ಇನ್ನು 4 ತಿಂಗಳು ಕುಜಕಾಟ, ಹೆಚ್ಚಲಿದೆ ಸಮಸ್ಯೆ

By Suvarna NewsFirst Published Nov 12, 2022, 10:27 AM IST
Highlights

ಮಂಗಳ ಗ್ರಹವು 13 ನವೆಂಬರ್ 2022ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಮಾರ್ಚ್ 23ರವರೆಗೆ ಈ ರಾಶಿಯಲ್ಲಿ ಇರುತ್ತದೆ. ವೃಷಭ ರಾಶಿಯಲ್ಲಿ ಮಂಗಳನ ಸಂಚಾರದಿಂದ ಅನೇಕ ರಾಶಿಚಕ್ರದ ಚಿಹ್ನೆಗಳು ಕಷ್ಟ ಎದುರಿಸಬೇಕಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ನಿರ್ದಿಷ್ಟ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಈ ಅನುಕ್ರಮದಲ್ಲಿ, ಮಂಗಳನ ರಾಶಿಚಕ್ರ ಚಿಹ್ನೆಯು ಸಹ ಬದಲಾಗಲಿದೆ. ಮಂಗಳ ಗ್ರಹವು 13 ನವೆಂಬರ್ 2022ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತದೆ ಮತ್ತು ಮಾರ್ಚ್ 23ರವರೆಗೆ ಈ ರಾಶಿಯಲ್ಲಿ ಇರುತ್ತದೆ. ವೃಷಭ ರಾಶಿಯಲ್ಲಿ ಮಂಗಳನ ಸಂಚಾರವು ಅನೇಕ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಕೆಲವು ರಾಶಿಚಕ್ರಗಳು ತುಂಬಾ ಅದೃಷ್ಟವನ್ನು ಪಡೆಯುತ್ತವೆ. ಆದರೆ ಮತ್ತೆ ಕೆಲವು ರಾಶಿಚಕ್ರಗಳು ಈ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಜ್ಯೋತಿಷ್ಯದಲ್ಲಿ ಮಂಗಳವು ಆಕ್ರಮಣಶೀಲತೆ, ಮುಖಾಮುಖಿ, ಶಕ್ತಿ(Power), ಮಹತ್ವಾಕಾಂಕ್ಷೆ ಮತ್ತು ಹಠಾತ್ ಪ್ರವೃತ್ತಿಗೆ ಸಂಬಂಧಿಸಿದೆ. ಮಂಗಳವು ಸಾಮಾನ್ಯವಾಗಿ ಕ್ರೀಡೆಗಳು(Sports), ಸ್ಪರ್ಧೆಗಳು ಮತ್ತು ದೈಹಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಆತ ಯುದ್ಧಕಾರಕ. ಜಗಳ ತಂದಿಡುವವನು. ಆತ ಬಹಳ ಅಮಂಗಳ ಗ್ರಹವಾಗಿದ್ದು, ಮಂಗಳ ಎಂಬ ಹೆಸರಿನಿಂದಲಾದರೂ ಆತನ ಕ್ರೂರತೆ ಕೊಂಚ ಕಡಿಮೆಯಾಗಲಿ ಎಂದು ಕುಜನಗೆ ಮಂಗಳ ಎಂಬ ಹೆಸರನ್ನೂ ಇರಿಸಲಾಗಿದೆ.

ಯಾವ ರಾಶಿಯವರಿಗೆ ಮಂಗಳ ಗ್ರಹ ಸಂಕ್ರಮಣ ಶುಭವಲ್ಲ ಎಂಬುದನ್ನು ತಿಳಿಯೋಣ.

ಮೇಷ ರಾಶಿ(Aries)
ಮೇಷ ರಾಶಿಯ ಜನರು ಈ ಅವಧಿಯಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಮಂಗಳ ಗೋಚಾರವು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಎಲ್ಲೋ ಹೂಡಿಕೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಈ ಸಮಯದಲ್ಲಿ ನೀವು ನಿಮ್ಮ ಮಾತಿನ ಮೇಲೆ ಸ್ವಲ್ಪ ನಿಯಂತ್ರಣವನ್ನು ಇಟ್ಟುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಇದು ಕುಟುಂಬದೊಂದಿಗೆ ಬಿರುಕು ಉಂಟು ಮಾಡಬಹುದು.

ಹೇಳಿ ಕೇಳಿ ಮಿಥುನ ರಾಶಿಯವರು, ಪ್ರೀತಿಯಲ್ಲಿ ಬಿದ್ದರೆ ಹೇಗಿರುತ್ತೆ ಲೈಫ್?

ಮಿಥುನ ರಾಶಿ(Gemini)
ಮಂಗಳನ ರಾಶಿಯ ಬದಲಾವಣೆಯಿಂದಾಗಿ ಮಿಥುನ ರಾಶಿಯ ಜನರು ತೊಂದರೆಗಳನ್ನು ಎದುರಿಸಬೇಕಾಗಬಹುದು. ಸಂಬಂಧಗಳು ಹಳಸಬಹುದು. ಎಲ್ಲ ಸಂಬಂಧಗಳಲ್ಲೂ ಸೋಲಲು ಸಿದ್ಧರಿರಿ. ಮಾತಿನಲ್ಲಿ ಸೋತರೆ, ಸಂಬಂಧಗಳನ್ನು ಗೆಲ್ಲಬಹುದು. ನೀವು ಯಾವುದೇ ಪ್ರಯಾಣಕ್ಕೆ ಹೋಗುವ ಯೋಜನೆ ಹೊಂದಿದ್ದರೆ, ಸ್ವಲ್ಪ ಜಾಗರೂಕರಾಗಿರಿ. ಮಂಗಳ ಗ್ರಹದ ಸಂಚಾರದಿಂದಾಗಿ, ಈ ರಾಶಿ ಚಕ್ರದ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತದೆ. ಏನಾದರೂ ಮಾತನಾಡುವ ಮೊದಲು ನಿಮ್ಮ ಮಾತಿನ ಮೇಲೆ ಸ್ವಲ್ಪ ಸಂಯಮ ಇರಲಿ. 

ತುಲಾ ರಾಶಿ(Libra)
ಮಂಗಳ ಗ್ರಹದ ಸಂಚಾರವು ತುಲಾ ರಾಶಿಯವರ ಜೀವನದಲ್ಲಿ ಏರುಪೇರುಗಳನ್ನು ಉಂಟು ಮಾಡಬಹುದು. ನೀವು ಮಾನಸಿಕ ಒತ್ತಡದ ಸಮಸ್ಯೆಯನ್ನು ಹೊಂದಬಹುದು. ಏನೇ ಮಾಡ ಹೋದರೂ ಅದರಲ್ಲಿ ಕೆಲ ಸಮಸ್ಯೆಗಳು ತಲೆದೋರಿ ಒತ್ತಡ ಉಂಟಾಗಬಹುದು. ಇದರೊಂದಿಗೆ ಮಂಗಳನು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಕಚೇರಿಯಲ್ಲಿ ಇತರರ ಬಗ್ಗೆ ಮಾತನಾಡುವುದನ್ನು ತಪ್ಪಿಸಿ. ಇದರಿಂದ ಅವರ ಸ್ನೇಹ ಕಳೆದುಕೊಳ್ಳುವುದರ ಜೊತೆಗೆ ನಿಮ್ಮ ಹೆಸರೂ ಹಾಳಾಗಬಹುದು. 

Vastu Tips: ವಿವಾಹಿತ ಮಹಿಳೆ ಈ ದಿಕ್ಕಲ್ಲಿ ಕಾಲಿಟ್ಟು ಮಲಗಿದ್ರೆ ಹಣ ನಷ್ಟವಾಗುತ್ತೆ!

ಮಕರ ರಾಶಿ(Capricorn)
ಮಂಗಳನ ಸಂಚಾರವು ಮಕರ ರಾಶಿಯವರಿಗೆ ತೊಂದರೆ ಉಂಟುಮಾಡಬಹುದು. ಹೂಡಿಕೆ ಮಾಡಿದ ಹಣ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಸ್ವಲ್ಪ ಯೋಚಿಸಿ ಎಲ್ಲಿಯಾದರೂ ಹೂಡಿಕೆ ಮಾಡಿ. ದಾಂಪತ್ಯ ಜೀವನದಲ್ಲೂ ಏರಿಳಿತಗಳಿರುತ್ತವೆ. ಆದಷ್ಟು ಮಾತುಗಳನ್ನು ನಿಯಂತ್ರಿಸಿಕೊಳ್ಳಬೇಕು. ಸಂಗಾತಿಯ ಮಾತಿಗೆ ತಕ್ಷಣ ತಿರುಗಿ ಹೇಳದೆ ಯೋಚಿಸಿ ಉತ್ತರಿಸುವುದರಿಂದ ಕೊಂಚ ಸಮಾಧಾನ ಮನೆಯಲ್ಲಿ ಕಾಯ್ದುಕೊಳ್ಳಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!