Shani Transit 2023: ಶನಿಕೃಪೆಯಿಂದ 2023ರ ಆರಂಭ ಈ 3 ರಾಶಿಗೆ ಶುಭಲಾಭ

By Suvarna NewsFirst Published Nov 16, 2022, 3:12 PM IST
Highlights

17, ಜನವರಿ 2023ರಲ್ಲಿ, ಶನಿ ದೇವನು ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಶನಿದೇವನ ಈ ಸಂಚಾರವು 3 ರಾಶಿಚಕ್ರದ ಚಿಹ್ನೆಗಳಿಗೆ ಮಂಗಳಕರವೆಂದು ಸಾಬೀತುಪಡಿಸಲಿದೆ.

2023 ವರ್ಷ ಪ್ರಾರಂಭವಾಗಲು ಸುಮಾರು ಒಂದೂವರೆ ತಿಂಗಳುಗಳು ಉಳಿದಿವೆ. ಹೀಗಾಗಿ ಹೊಸ ವರ್ಷ ಹೇಗಿರಲಿದೆ ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಲ್ಲೂ ಮೂಡುತ್ತದೆ. ವರ್ಷದ ಆರಂಭದಲ್ಲಿ ಶನಿ ದೇವನು ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಅಂದರೆ ಜನವರಿ 17ರಂದು ಶನಿಯು ಮಕರದಿಂದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಅವನ ಮೂಲ ತ್ರಿಕೋನ ರಾಶಿ ಎಂದು ಪರಿಗಣಿಸಲಾಗಿದೆ. 2023 ಸಂಪೂರ್ಣ ವರ್ಷ ಶನಿಯು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ರಾಶಿಚಕ್ರದಲ್ಲಿ ಶನಿಯು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ ಎಂದರ್ಥ. ಅದಕ್ಕಾಗಿಯೇ ಶನಿಯ ಈ ಸಂಕ್ರಮಣವು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆದರೆ 3 ರಾಶಿಚಕ್ರ ಚಿಹ್ನೆಗಳಿಗೆ ಈ ಶನಿ ಗೋಚಾರದಿಂದಾಗಿ, 2023ರ ಮೊದಲ 3 ತಿಂಗಳು ಮಂಗಳಕರವೆಂದು ಸಾಬೀತು ಪಡಿಸಬಹುದು. ಈ ಸಮಯದಲ್ಲಿ, ವ್ಯವಹಾರದಲ್ಲಿ ಲಾಭ ಮತ್ತು ಪ್ರಗತಿಯ ಸಾಧ್ಯತೆಗಳಿವೆ. ಈ ರಾಶಿಚಕ್ರ ಚಿಹ್ನೆಗಳು(Zodiac signs) ಯಾವುವು ಎಂದು ತಿಳಿಯೋಣ.

ಮಕರ ರಾಶಿ(Capricorn): ಶನಿಯ ಸಂಚಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಏಕೆಂದರೆ ಶನಿದೇವನು ನಿಮ್ಮ ಜಾತಕದಿಂದ ಎರಡನೇ ಮನೆಯಲ್ಲಿ ಸಾಗುತ್ತಾನೆ. ಇದನ್ನು ಹಣ ಮತ್ತು ಮಾತಿನ ಸ್ಥಳವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀವು ಹಠಾತ್ ಸಂಪತ್ತನ್ನು ಪಡೆಯಬಹುದು. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ. ಅದೇ ಸಮಯದಲ್ಲಿ, ನಿಮ್ಮ ಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ ಮತ್ತು ವ್ಯಾಪಾರಸ್ಥರು ಸಹ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಶನಿದೇವನ ಶುಭ ಪ್ರಭಾವದಿಂದ, ಇತರ ಆದಾಯದ ಮೂಲಗಳನ್ನು ಹೆಚ್ಚಿಸುವ ಕೆಲಸ ಮಾಡುವಿರಿ ಮತ್ತು ಯಶಸ್ವಿಯಾಗುವಿರಿ. ಮತ್ತೊಂದೆಡೆ, ಶನಿದೇವನು(Lord Shani) ನಿಮ್ಮ ರಾಶಿಚಕ್ರದ ಅಧಿಪತಿ. ಅದಕ್ಕಾಗಿಯೇ ಶನಿಯ ಸಂಚಾರವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

7 ವರ್ಷ ನಡೆಯಲಿದೆ ಕೇತು ಮಹಾದಶಾ; ಪರಿಣಾಮ, ಪರಿಹಾರವೇನು?

ಮಿಥುನ(Gemini): ಶನಿ ದೇವನ ಸಂಚಾರವು ನಿಮಗೆ ಅನುಕೂಲಕರವಾಗಿದೆ ಎಂದು ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ರಾಶಿಯಿಂದ ಈ ಸಂಚಾರವು ಒಂಬತ್ತನೇ ಮನೆಯಲ್ಲಿ ಸಂಭವಿಸಲಿದೆ. ಇದನ್ನು ಅದೃಷ್ಟದ ಸ್ಥಳ  ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ನೀವು ಈ ಸಮಯದಲ್ಲಿ ಅದೃಷ್ಟವನ್ನು ಪಡೆಯಬಹುದು. ಸ್ಥಗಿತಗೊಂಡ ಕೆಲಸಗಳು ಯಶಸ್ವಿಯಾಗುತ್ತವೆ. ಇದರೊಂದಿಗೆ ಹಣದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಈ ಸಮಯದಲ್ಲಿ, ಭೂಮಿ-ಆಸ್ತಿ ಮತ್ತು ಶಾಶ್ವತ ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಲಾಭದ ಮೊತ್ತ ಇರುತ್ತದೆ. ಮತ್ತೊಂದೆಡೆ, ವಾಹನ ಖರೀದಿಸಲು ಯೋಜಿಸುತ್ತಿರುವವರ ಯೋಜನೆಗಳು ಯಶಸ್ವಿಯಾಗುತ್ತವೆ. ಈ ಸಮಯದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀವು ಸಣ್ಣ ಅಥವಾ ದೊಡ್ಡ ಪ್ರವಾಸ(trip)ವನ್ನು ಸಹ ಕೈಗೊಳ್ಳಬಹುದು. ಅದು ಕೂಡಾ ನಿಮಗೆ ಸುಭಫಲ ನೀಡಲಿದೆ.

ಚಾಣಕ್ಯ ನೀತಿ: ಈ ವಿಷ್ಯಗಳು ಸಾವಿಗಿಂತಲೂ ಹೆಚ್ಚಿನ ನೋವು ನೀಡುತ್ತೆ

ವೃಶ್ಚಿಕ ರಾಶಿ(Scorpio): ಕುಂಭ ರಾಶಿಯಲ್ಲಿ ಶನಿಯ ಸಂಚಾರವು ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ವೃಶ್ಚಿಕ ರಾಶಿಯಲ್ಲಿ ಮಂಗಳಕರ ಮತ್ತು ಫಲಪ್ರದವಾಗಿದೆ. ಏಕೆಂದರೆ ಶನಿದೇವನು ನಿಮ್ಮ ಜಾತಕದ 10 ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದನ್ನು ಕೆಲಸದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಉದ್ಯೋಗ(Job offer)ದ ಪ್ರಸ್ತಾಪವನ್ನು ಪಡೆಯಬಹುದು. ಅಲ್ಲದೆ, ವ್ಯಾಪಾರದಲ್ಲಿ ಉತ್ತಮ ಲಾಭ(profit)ವನ್ನು ಪಡೆಯಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!