ಮನೆಯ ನೆಮ್ಮದಿ ನಾಶವಾಗಿದೆಯೇ? ಈ Astro remedies ಟ್ರೈ ಮಾಡಿ

By Suvarna NewsFirst Published Nov 16, 2022, 11:54 AM IST
Highlights

ಮನೆಯಲ್ಲಿ ನೆಮ್ಮದಿ ಇಲ್ಲವೆಂದರೆ ಬದುಕಲ್ಲಿ ನೆಮ್ಮದಿ ಇರಲಿ ಸಾಧ್ಯವಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಮನೆಯ ಸಂಕಟಕ್ಕೆ ಅನೇಕ ಪರಿಹಾರಗಳನ್ನು ನೀಡಲಾಗಿದೆ. 

ಮನೆಯಲ್ಲಿ ಎಲ್ಲರೂ ಸುಖ, ಶಾಂತಿಯಿಂದ ಇದ್ದಾಗ ಮನೆ ಮಂತ್ರಾಲಯವಾಗಿರುತ್ತದೆ. ಅದೇ ಮನೆಯಲ್ಲಿ ಪ್ರತಿನಿತ್ಯ ಜಗಳ, ಕದನ, ವಾದಗಳು, ಸಮಸ್ಯೆ ಮೇಲೆ ಸಮಸ್ಯೆಗಲು ಎದುರಾಗುತ್ತಿದ್ದರೆ ಜೀವನವೇ ದುಸ್ತರವಾಗುತ್ತದೆ. ಮನೆಯಲ್ಲಿ ದಿನನಿತ್ಯದ ಜಗಳಗಳು ಮತ್ತು ಕೌಟುಂಬಿಕ ಕಲಹಗಳಿಂದಾಗಿ ನಿಮ್ಮ ಮನೆಯ ಶಾಂತಿಗೆ ಭಂಗ ಬರುತ್ತದೆ. ಇದು ಬದುಕಿನ ಎಲ್ಲ ಮಜಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ವೃತ್ತಿಜೀವನದಲ್ಲಿ ಪ್ರಗತಿ ನಿಲ್ಲುತ್ತದೆ. ವಿದ್ಯಾಭ್ಯಾಸಕ್ಕೆ ಹಾನಿಯಾಗುತ್ತದೆ, ವ್ಯಾಪಾರದಲ್ಲಿ ನಷ್ಟ ಉಂಟಾಗುವುದು ಮತ್ತು ಕೆಲಸದ ಸ್ಥಳದಲ್ಲಿ ಆಸಕ್ತಿಯ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮನೆಯ ನೆಮ್ಮದಿಗಾಗಿ ಸದಸ್ಯರೆಲ್ಲರ ಹೊಂದಾಣಿಕೆ, ಪ್ರೀತಿಯೇ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಬೇಕೇಬೇಕು. ಅದರ ಹೊರತಾಗಿ, ಜ್ಯೋತಿಷ್ಯದಲ್ಲಿ, ಮನೆಯ ಶಾಂತಿಗಾಗಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ಗೃಹಸಂಕಟದಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಉಳಿಯುತ್ತದೆ. ಯಾವ ಜ್ಯೋತಿಷ್ಯ ಕ್ರಮಗಳನ್ನು ಮಾಡುವುದರಿಂದ ಮನೆಯಲ್ಲಿನ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎಂದು ತಿಳಿಯೋಣ.

ಶಾಂತಿಗಾಗಿ ಮನೆಮದ್ದುಗಳು
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಎಲ್ಲಾ ದೇವರು ಮತ್ತು ದೇವತೆಗಳನ್ನು ಇಷ್ಟ ದೇವರ ಜೊತೆಗೆ ನಿಯಮಿತವಾಗಿ ನಿಯಮಗಳ ಪ್ರಕಾರ ಪೂಜಿಸಬೇಕು.

ಹಿಟ್ಟಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳು ಹಿಟ್ಟು ಬೆರೆಸಿ ಕಲಸಿ ಬಳಸಿ.
ನವರಾತ್ರಿಯ ದಿನದಂದು ಮನೆಯಲ್ಲಿ ದುರ್ಗಾ ಸಪ್ತಶತಿಯನ್ನು ಪಠಿಸಿ.
ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಮನೆಗಾಗಿ ವಾಸ್ತು ಸಲಹೆಗಳ ಪ್ರಕಾರ, ಮನೆಯ ಮುಂಬಾಗಿಲಿಗೆ ಕಾಣುವಂತೆ ಗಣೇಶನ  ಚಿತ್ರವನ್ನು ಇಡಬೇಕು. ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಖಾಲಿ ಗೋಡೆ ಕಾಣುತ್ತಿದ್ದರೆ ನಿಮ್ಮ ಮನೆಯಲ್ಲಿ ಬಹಳಷ್ಟು ಒಂಟಿತನವಿದೆ ಎಂದರ್ಥ. 

Vivah Muhurat 2023: ಜನವರಿ, ಫೆಬ್ರವರಿ, ಮಾರ್ಚ್‌ನ ವಿವಾಹ ಮುಹೂರ್ತ

ಸಹೋದರರ ನಡುವಿನ ಶಾಂತಿಗಾಗಿ ಪರಿಹಾರಗಳು
ಜ್ಯೋತಿಷ್ಯ ಶಾಸ್ತ್ರದಲ್ಲಿ, ಮನೆಯ ಸಂಕಟಕ್ಕೆ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಸಹೋದರರ ನಡುವೆ ಮನೆಯಲ್ಲಿ ದ್ವೇಷವಿದ್ದರೆ, ಜಗಳಗಳು ಸಾಮಾನ್ಯವಾಗಿದ್ದರೆ ಅದನ್ನು ಹೋಗಲಾಡಿಸಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ನೋಡೋಣ.

ಗಣೇಶ ಮತ್ತು ಕಾರ್ತಿಕವನ್ನು ನಿಯಮಿತವಾಗಿ ಪೂಜಿಸಿ.
ಶಿವನ ಪೂಜೆಯಲ್ಲಿ ಶಮಿ ಪತ್ರವನ್ನು ಬಳಸಿ.
ತುಳಸಿ ಎಲೆಗಳನ್ನು ವಿಷ್ಣುವಿಗೆ ಅರ್ಪಿಸಿ.
ರಾಮಚರಿತ ಮಾನಸ ಪಠಿಸಿ.

ಗಂಡ ಮತ್ತು ಹೆಂಡತಿಯ ನಡುವಿನ ಮನಸ್ತಾಪಗಳು
ಆಗಾಗ ಸಣ್ಣ-ದೊಡ್ಡ ವಿಷಯಗಳಿಗೆ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿರುತ್ತದೆ. ಈ ಸಂಕಟದಿಂದಾಗಿ ಮನೆಯ ಸುಖ-ಶಾಂತಿಗೆ ಭಂಗವಾಗುತ್ತದೆ. ಜ್ಯೋತಿಷ್ಯದಲ್ಲಿ, ಈ ಕ್ಲೇಶದ ಶಾಂತಿಗಾಗಿ ಅನೇಕ ಪರಿಹಾರಗಳನ್ನು ನೀಡಲಾಗಿದೆ.

Puja Mistakes: ದೇವರ ಮೂರ್ತಿಗೂ, ಫೋಟೋಗೂ ಒಂದೇ ರೀತಿ ಪೂಜಿಸಬೇಡಿ!

ಬುಧವಾರ, ಪತಿ ಮತ್ತು ಪತ್ನಿ 2 ಗಂಟೆಗಳ ಕಾಲ ಮೌನ ಉಪವಾಸವನ್ನು ಆಚರಿಸಬೇಕು.
ಮನೆಯ ತೊಂದರೆಗಳನ್ನು ತಪ್ಪಿಸಲು ಮತ್ತು ಹೆಂಡತಿಯನ್ನು ಮೆಚ್ಚಿಸಲು ಪತಿ ಶುಕ್ರವಾರದಂದು ಸುಗಂಧ ದ್ರವ್ಯವನ್ನು ಬಳಸಬೇಕು. ಹಾಗೂ ಪತ್ನಿಗೆ ನೀಡಬೇಕು. ಈ ದಿನ ಸಂಗಾತಿಗೆ ಬೆಳ್ಳಿ ಬಟ್ಟಲಿನಲ್ಲಿ ಮೊಸರು ಸಕ್ಕರೆ ನೀಡಬೇಕು.
ಪ್ರತಿ ದಿನ ಸ್ನಾನವಾದ ಮೇಲೆ ಪತ್ನಿ ಪತಿಯ ಹಣೆಗೆ ಕುಂಕುಮ ತಿಲಕವಿಡಬೇಕು. ಪತಿಯು ಪತ್ನಿಗೆ ಅರಿಶಿನ, ಕುಂಕುಮವಿಡಿಸಬೇಕು.
ಲಕ್ಷ್ಮಿ ನಾರಾಯಣ ಮತ್ತು ಗೌರಿ ಶಂಕರನನ್ನು ನಿಯಮಿತವಾಗಿ ಪೂಜಿಸಿ. ಆಗಾಗ ಶಿವಪಾರ್ವತಿ ಸನ್ನಿಧಾನಕ್ಕೆ ಭೇಟಿ ನೀಡುವ ಅಭ್ಯಾಸ ಇಟ್ಟುಕೊಳ್ಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!