ಪ್ರತಿ ದಿನ ಮನೆಯಿಂದ ಹೊರಗೆ ಹೊರಟಾಗ ಹೋದ ಕೆಲಸ ಯಶಸ್ವಿಯಾಗಲಿ ಎಂದೇ ಹೊರಡುತ್ತೇವೆ. ಹೀಗೆ ಯಶಸ್ಸು, ಅದೃಷ್ಟ ಜೊತೆಗಿರಲು ಹೊರಡುವ ಮುನ್ನ ನೀವು ಮಾಡಬೇಕಾದ ಕೆಲ ಸರಳ ಕೆಲಸಗಳಿವೆ..
ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಎಂದುಕೊಂಡು ಹೊರಡುತ್ತೇವೆ. ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ನಷ್ಟ ಹೆಚ್ಚುತ್ತದೆ. ಸಮಯ ಪೋಲಾಗುತ್ತದೆ..
ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ ಜೊತೆ ಇರಬೇಕು. ಹಾಗೆ ಅದೃಷ್ಟ ಜೊತೆಗಿರಲು ಮನೆಯಿಂದ ಹೊರಡುವ ಮುನ್ನ ಕೆಲ ಕೆಲಸಗಳನ್ನು ಮಾಡಬೇಕು. ನಿಮ್ಮ ಉದ್ದೇಶ ಚೆನ್ನಾಗಿದ್ದಾಗ, ಒಳ್ಳೆಯ ಕೆಲಸಕ್ಕೆ ಹೊರಟಾಗ ಮಾತ್ರ ಈ ಪರಿಹಾರಗಳು ಅದೃಷ್ಟ ತರುತ್ತವೆ. ಅಂಥ ಅದೃಷ್ಟ ತರುವ ಕೆಲಸಗಳು ಯಾವೆಲ್ಲ ನೋಡೋಣ.
ಕೈ ತೊಳೆಯಿರಿ(Wash your hands)
ಮನೆಯಿಂದ ಹೊರಡುವ ಮೊದಲು, ಸ್ವಲ್ಪ ತಣ್ಣನೆಯ, ಕಾಯಿಸದ ಹಾಲಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ಇದು ನಿಮ್ಮ ಕೆಲಸ ಪೂರ್ಣಗೊಳ್ಳುವುದನ್ನು ಖಚಿತಪಡಿಸುತ್ತದೆ.
undefined
ಬೆಲ್ಲ(Jaggery)
ಮನೆಯಿಂದ ಹೊರಡುವ ಮೊದಲು, ಸ್ವಲ್ಪ ನೀರು ಮತ್ತು ಬೆಲ್ಲ ಸೇವಿಸಿ. ಮೊಸರು ಬೆಲ್ಲ ಸೇವಿಸಿದರೂ ಅಡ್ಡಿಯಿಲ್ಲ. ಇದು ನಿಮಗೆ ಅದೃಷ್ಟವನ್ನು ನೀಡುವುದಲ್ಲದೆ, ತ್ವರಿತ ಶಕ್ತಿಯನ್ನೂ ನೀಡುತ್ತದೆ.
Mysuru Dasara ಈ ಬಾರಿ ಮೈಸೂರು ದಸರಾ ವೈಭವ ಜೋರು, ಸಭೆಯಲ್ಲಿ ನಿರ್ಧಾರ
ಲವಂಗ(Clove sticks)
ನಿಮ್ಮ ವ್ಯಾಲೆಟ್‌ನಲ್ಲಿ 5 ಲವಂಗಗಳನ್ನು ಇಟ್ಟುಕೊಳ್ಳಿ. ಇದು ನಿಮ್ಮ ಸುತ್ತಲೂ ಪರಿಮಳವನ್ನು ಹರಡುತ್ತದೆ ಮತ್ತು ಎಲ್ಲ ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.
ಕರಿ ಮೆಣಸು(Black pepper)
ಮನೆಯಿಂದ ಹೊರಡುವ ಮೊದಲು, ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಕೆಲವು ಕರಿಮೆಣಸು ಬೀಜಗಳನ್ನು ಹರಡಿ. ನಂತರ ಹಿಂತಿರುಗದೆ ನಡೆಯುವುದನ್ನು ಮುಂದುವರಿಸಿ. ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.
ಓಂ ಗಂ ಗಣಪತಯೇ ನಮಃ
ಮನೆಯಿಂದ ಹೊರಡುವಾಗ 'ಓಂ ಗಂ ಗಣಪತಯೇ ನಮಃ' ಎಂಬ ಮಂತ್ರವನ್ನು ಜಪಿಸಬೇಕು. ನಂತರ ನೀವು ಹೋಗಬೇಕಾದ ಸ್ಥಳಕ್ಕೆ ವಿರುದ್ಧ ದಿಕ್ಕಿನಲ್ಲಿ 4 ಹೆಜ್ಜೆಗಳನ್ನು ಹಾಕಬೇಕು ಮತ್ತು ನಂತರ ಹಿಂತಿರುಗಿ ಎಂದಿನಂತೆ ಹೋಗಬೇಕು.
ಪ್ರಾಣಿಪಕ್ಷಿಗಳಿಗೆ ಆಹಾರ, ನೀರು ನೀಡಿ
ಮನೆಯಿಂದ ಹೊರಡುವ ಮುನ್ನ ಟೆರೇಸ್ ಮೇಲೆ ಹಕ್ಕಿಗಳಿಗೆ ಕಾಳು ಚೆಲ್ಲಿ ನೀರಿಡಲು ಮರೆಯಬೇಡಿ. ಬೀದಿನಾಯಿಗಳಿಗೆ ಆಹಾರ ಹಾಕಿದರೂ ಗ್ರಹಬಲ ಹೆಚ್ಚುವುದು.
ಸ್ವಚ್ಛತೆ(Cleanliness)
ಮನೆಯಿಂದ ಹೊರಡುವ ಮುನ್ನ ಮನೆ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಮನೆಯ ಎಲ್ಲ ಭಾಗವನ್ನೂ ಸ್ವಚ್ಛಗೊಳಿಸಿದ ಬಳಿಕವೇ ಹೊರಡಿ.
ಕರ್ಪೂರ(Camphor)
ದೇವರಲ್ಲಿ ಪ್ರಾರ್ಥಿಸುವಾಗ ಕರ್ಪೂರ ಬೆಳಗಿ. ಅದರ ಪರಿಮಳ ಎಲ್ಲೆಡೆ ತುಂಬಲಿ. ಅದರಿಂದ ಹೊರಟ ಸಕಾರಾತ್ಮಕ ಶಕ್ತಿಯನ್ನು ಸೆಳೆದುಕೊಂಡಂತೆ ಭಾವಿಸಿ ಮನೆಯಿಂದ ಹೊರಡಿ.
Numerology: ಈ ದಿನಾಂಕದಂದು ಹುಟ್ಟಿದ ಮಕ್ಕಳು ತಂದೆಗೆ ಅದೃಷ್ಟ ತರುತ್ತಾರೆ!
ಸಕಾರಾತ್ಮಕ ಯೋಚನೆ(Positive thinking)
ಸಕಾರಾತ್ಮಕ ಯೋಚನೆಗಳು ಅದೃಷ್ಟವನ್ನು ಆಕರ್ಷಿಸುತ್ತವೆ. ಹಾಗಾಗಿ, ಮನೆಯಿಂದ ಹೊರಡುವಾಗ ಅಂದುಕೊಂಡ ಕೆಲಸಗಳೆಲ್ಲ ಕೈಗೂಡಿಯೇ ತೀರುವುವು. ನೀವದನ್ನು ಸಾಧಿಸುವಿರಿ ಎಂದುಕೊಂಡು ಹೊರಡಿ. ಅಷ್ಟೇ ಅಲ್ಲ, ಗೆಲುವು ಸಾಧಿಸಿರುವುದನ್ನು ವಿಶ್ಯುಲೈಸ್ ಮಾಡಿಕೊಳ್ಳಿ.
ಇಷ್ಟೆಲ್ಲ ಆದ ಮೇಲೆ, ಹೇಗೂ ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಸುಮ್ಮನಾಗಬೇಡಿ. ನಿಮ್ಮ ಯಶಸ್ಸಿಗಾಗಿ ಸಾಧ್ಯವಾದಷ್ಟು ಸಂಪೂರ್ಣ ಪರಿಶ್ರಮ ಹಾಕಿ. ಪರಿಶ್ರಮ, ಅದೃಷ್ಟ ಎರಡನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಕಲೆ ಗೊತ್ತಿದ್ದವರ ಹಿಂದೆ ಸಕ್ಸಸ್ ತಾನಾಗಿಯೇ ಬರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.