
ಮನೆಗೆ ತಿಗಣೆ ಬಂದ್ರೆ ಓಡಿಸೋದು ಕಷ್ಟ. ಬೆಡ್ ನಲ್ಲಿ ಒಂದು ಸೇರಿಕೊಂಡ್ರೆ ಸಾಕು ದೊಡ್ಡ ಸಂಸಾರವೇ ಬೆಳೆಯುತ್ತೆ. ಏನೇ ಮಾಡಿದ್ರೂ ಬೆಡ್ ಬಗ್ಸ್ ಓಡಿಸೋದು ಕಷ್ಟ. ಅನೇಕರು ಸಂಪೂರ್ಣವಾಗಿ ಮನೆ ಕ್ಲೀನ್ ಮಾಡಿಸ್ತಾರೆ ಮತ್ತೆ ಕೆಲವರು ಬೆಡ್ ಬದಲಿಸ್ತಾರೆ. ಏನೇ ಮಾಡಿದ್ರೂ ತಿಗಣೆ ಸಂಪೂರ್ಣವಾಗಿ ಹೋಗೋದು ಕಷ್ಟ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ತಿಗಣೆ ಕಾಣಿಸಿಕೊಳ್ಳೋದು ಸಾಮಾನ್ಯ ಘಟನೆ ಅಲ್ಲ. ಭವಿಷ್ಯಕ್ಕೆ ಸಂಬಂಧಿಸಿದ ಸಂಕೇತವನ್ನು ಈ ತಿಗಣೆ ನೀಡುತ್ತದೆ. ನಿಮ್ಮ ಮನೆಗೆ ಪದೇ ಪದೇ ತಿಗಣೆ ಬಂದ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬೇಡಿ. ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ, ಅವುಗಳ ಉಪಸ್ಥಿತಿಯು ಸಮಸ್ಯೆಗಳು ಮತ್ತು ಗ್ರಹ ದೋಷಗಳನ್ನು ಸೂಚಿಸುತ್ತದೆ.
ಸಾಮಾನ್ಯವಾಗಿ ತಿಗಣೆ ಕೊಳಕಿನ ಸೂಚಕ. ಬೆಡ್ ನಲ್ಲಿ ಅಥವಾ ಮನೆಯಲ್ಲಿರುವ ಹೆಚ್ಚು ಕೊಳೆ ತಿಗಣೆ ಕಾಟಕ್ಕೆ ಕಾರಣವಾಗುತ್ತದೆ. ಅನೇಕರು ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡ್ತಿದ್ದರೆ ಬ್ಯಾಗ್ ಮೂಲಕ ತಿಗಣೆ ಮನೆ ಸೇರಿದೆ ಅಂತ ನಂಬ್ತಾರೆ. ಆದ್ರೆ ಜ್ಯೋತಿಷ್ಯ, ವಾಸ್ತು ಶಾಸ್ತ್ರ ಇದ್ರ ಬಗ್ಗೆ ಬೇರೆಯದೇ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯಲ್ಲಿ ತಿಗಣೆ ಕಾಣಿಸಿಕೊಳ್ಳುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಈ ಕೀಟಗಳು ಮನೆಯಲ್ಲಿ ಪದೇ ಪದೇ ಕಾಣಿಸಿಕೊಂಡರೆ, ನಕಾರಾತ್ಮಕ ಶಕ್ತಿ ಮೇಲುಗೈ ಸಾಧಿಸಿದೆ ಎಂದರ್ಥ. ಇದನ್ನು ವಾಸ್ತು ದೋಷಗಳ ಸಂಕೇತ ಅಥವಾ ಗ್ರಹಗಳ ಅಶುಭ ಪ್ರಭಾವ ಎಂದು ಪರಿಗಣಿಸಲಾಗುತ್ತದೆ.
Vastu Tips For Gold: ಮನೆಯಲ್ಲಿ ಚಿನ್ನ ಉಳಿಯದಿರಲು ಈ ದೋಷವೇ ಕಾರಣವಿರಬಹುದೇ?
ಮನೆಯಲ್ಲಿರು ತಿಗಣೆ ಮನೆಯಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಸದಾ ಗಲಾಟೆ, ಕ್ಷುಲ್ಲಕ ವಿಷ್ಯಕ್ಕೆ ಜಗಳ ಹೆಚ್ಚಾಗಲು ಈ ತಿಗಣೆ ಕಾರಣವಾಗುತ್ತದೆ. ತಿಗಣೆ ತುಂಬಿರುವ ಮನೆಯಲ್ಲಿ ವಾಸಿಸುವ ವ್ಯಕ್ತಿಗಳು ಸದಾ ಅನಾರೋಗ್ಯದಿಂದ ಬಳಲುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಕ್ಷಿಣ ದಿಕ್ಕಿನಲ್ಲಿ ದೋಷವಿದ್ದರೆ, ಈ ತಿಗಣೆ ಮನೆಯೊಳಗೆ ಬರುತ್ತದೆ. ಮೆನಯಲ್ಲಿರುವ ತಿಗಣೆಗಳು ಮನೆಯ ಮುಖ್ಯಸ್ಥರ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಕ್ಷೀಣಿಸಲು ಇದು ಕಾರಣವಾಗುತ್ತದೆ. ವ್ಯಾಪಾರಮ ಉದ್ಯೋಗದ ನಷ್ಟಕ್ಕೂ ಈ ತಿಗಣೆಗಳು ಕಾರಣವಾಗುತ್ತವೆ.
ಅವಿವಾಹಿತನ ಬೆಡ್ ರೂಮಿನಲ್ಲಿ ಈ ತಿಗಣೆ ಇದ್ದಲ್ಲಿ, ಆತನ ಮದುವೆಗೆ ಸಾಕಷ್ಟು ವಿಳಂಬವಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಅದೇ ವಿವಾಹಿತರ ಬೆಡ್ ರೂಮಿನಲ್ಲಿ ತಿಗಣೆ ಕಾಟ ಹೆಚ್ಚಿದ್ದರೆ ಇಬ್ಬರ ಮಧ್ಯೆ ಸಂಬಂಧ ಹಾಳಾಗಿದೆ ಎಂಬ ಸೂಚಕ. ಬೆಡ್ ರೂಮಿನಿಂದ ತಿಗಣೆ ಹೋಗುವವರೆಗೂ ಸಂಬಂಧ ಸುಧಾರಿಸುವುದಿಲ್ಲ.
ಡಿಸೆಂಬರ್‌ನಲ್ಲಿ ಶುಕ್ರ 4 ಬಾರಿ ಬದಲು, ಈ 4 ರಾಶಿಗೆ ಕೋಟ್ಯಾಧಿಪತಿ ಯೋಗ, ಯಶಸ್ಸು
ತಿಗಣೆ ನಿವಾರಣೆಗೆ ವಾಸ್ತು ಪರಿಹಾರ :
ತಿಗಣೆಗಳನ್ನು ತೊಡೆದುಹಾಕಲು ವಾಸ್ತು ಶಾಸ್ತ್ರದಲ್ಲೂ ಪರಿಹಾರ ಇದೆ. ಒಣಗಿದ ಬೇವಿನ ಎಲೆಗಳು ಮತ್ತು ಕರ್ಪೂರವನ್ನು ಸುಟ್ಟು, ಅದರ ಹೊಗೆಯನ್ನು ಮನೆಗೆ ತೋರಬೇಕು. ಹೀಗೆ ಮಾಡಿದಲ್ಲಿ ತಿಗಣೆ ಕಾಟ ತಪ್ಪುತ್ತದೆ. ಜೊತೆಗೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ. ಮನೆಯ ಮುಖ್ಯ ದ್ವಾರದಲ್ಲಿ ಒಂದು ಬಟ್ಟಲಿನಲ್ಲಿ ಸಮುದ್ರ ಉಪ್ಪನ್ನು ಇಡಬೇಕು. ಇದು ಕೂಡ ನಕಾರಾತ್ಮಕತೆ ದೂರ ಮಾಡುತ್ತದೆ. ಕೀಟಗಳು ಮನೆಯಿಂದ ದೂರ ಇರುವಂತೆ ಮಾಡುತ್ತದೆ. ನೀವು ಮುಖ್ಯ ದ್ವಾರದ ಬಳಿ ಇಟ್ಟ ಉಪ್ಪನ್ನು ವಾರಕ್ಕೊಮ್ಮೆ ಬದಲಿಸಬೇಕು. ಉಪ್ಪು ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೂ ತಿಗಣೆ ಕಾಟ ತಪ್ಪುತ್ತದೆ. ಮನೆಯಲ್ಲಿ ನಿಯಮಿತ ಪೂಜೆ ಮಾಡುವುದು ಮುಖ್ಯವಾಗುತ್ತದೆ.