
ಜ್ಯೋತಿಷ್ಯ ಜಗತ್ತಿನಲ್ಲಿ ಪ್ರತಿಯೊಂದು ರಾಶಿಚಕ್ರದ ಅಡಿಯಲ್ಲಿ ಜನಿಸಿದ ಜನರು ವಿಶಿಷ್ಟ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಕೆಲವು ರಾಶಿಚಕ್ರ ಚಿಹ್ನೆಗಳು ಬುದ್ಧಿವಂತರು ಮತ್ತು ತಮ್ಮ ವಯಸ್ಸಿಗೂ ಮೀರಿ ಪ್ರಬುದ್ಧರಾಗಿರುತ್ತವೆ. ಮತ್ತೆ ಕೆಲವು ಸಂಪೂರ್ಣವಾಗಿ ವಿರುದ್ಧವಾಗಿರುತ್ತವೆ ಮತ್ತು ಎಷ್ಟೇ ವಯಸ್ಸಾದರೂ ಬಾಲಿಶವಾಗಿ ಮಕ್ಕಳಂತೆ ಆಡುತ್ತಾರೆ.
ಈ ಬಾಲಿಶತನ ಕೆಲವೊಮ್ಮೆ ಅವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆಯಾದರೂ, ಹಲವು ಬಾರಿ ಅದು ಅವರಿಗೆ ನೆಗೆಟಿವ್ ಲುಕ್ ಕೊಡುತ್ತೆ. ಈ ಗುಣದಿಂದಾಗಿ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಅಪಕ್ವತೆಯು (Immaturity) ಯಾವಾಗಲೂ ಅವರನ್ನು ನೋಡಿದರೆ ಸಾಕು ನಗುವಂತೆ ಮಾಡುತ್ತದೆ. ಈ ಲೇಖನದಲ್ಲಿ ಯಾವ ರಾಶಿಚಕ್ರ ಚಿಹ್ನೆಗಳು ವಯಸ್ಸಾದಾಗಲೂ ಮಕ್ಕಳಂತೆ ಇರುತ್ತವೆ ಎಂಬುದನ್ನು ನೀವು ಕಂಡುಹಿಡಿಯಬಹುದು.
ಮೇಷ ರಾಶಿಯವರು ಅಪರಿಮಿತ ಶಕ್ತಿ ಮತ್ತು ಜೀವನದ ಬಗ್ಗೆ ಅಪರಿಮಿತ ಉತ್ಸಾಹ ಹೊಂದಿರುವ ಜನರು. ಮೇಷ ರಾಶಿಯವರು ಸಹಜ ಕುತೂಹಲವನ್ನು ಹೊಂದಿರುತ್ತಾರೆ. ಅದು ಅವರನ್ನು ಅನಿಯಂತ್ರಿತ ಉತ್ಸಾಹದಿಂದ ಜಗತ್ತನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ಜೀವನದ ಬಗೆಗಿನ ಈ ಉತ್ಸಾಹವು ಅವರನ್ನು ಮಗುವಿನಂತಹ ಭಾವನೆಗಳೊಂದಿಗೆ ಜೀವನವನ್ನು ನೋಡಲು ಕಾರಣವಾಗುತ್ತದೆ. ಇದು ಅವರನ್ನು ಹೆಚ್ಚು ಹೊಂದಿಕೊಳ್ಳುವ ಮತ್ತು ಸ್ಥಿತಿಸ್ಥಾಪಕರನ್ನಾಗಿ ಮಾಡುತ್ತದೆ. ಅವರ ಉತ್ಸಾಹವು ಪ್ರೀತಿಪಾತ್ರ ಮಾತ್ರವಲ್ಲದೆ, ಸ್ಪೂರ್ತಿದಾಯಕವೂ ಆಗಿದೆ. ಅವರಂತೆ ಬದುಕುವುದು ಮಾತ್ರವಲ್ಲ, ಅವರೊಂದಿಗೆ ಬದುಕುವುದು ಸಹ ತುಂಬಾ ಕಷ್ಟ.
ಮಿಥುನ ರಾಶಿ
ಗ್ರಹಗಳ ರಾಜಕುಮಾರ ಬುಧನಿಂದ ಆಳಲ್ಪಡುವ ಮಿಥುನ ರಾಶಿಯವರು ತಮ್ಮ ತೀವ್ರ ಕುತೂಹಲಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಅಂತ್ಯವಿಲ್ಲದ ಪ್ರಶ್ನೆಗಳನ್ನು ಹೊಂದಿರುವ ಜಿಜ್ಞಾಸೆಯ ಮಗುವಿನಂತೆ. ಯಾವಾಗಲೂ ಹೊಸ ವಿಷಯಗಳನ್ನು ಹುಡುಕುತ್ತಾ ಓಡುತ್ತಾರೆ. ಜೀವನವನ್ನು ಮುಕ್ತ ಮನಸ್ಸಿನಿಂದ ನೋಡುತ್ತಾರೆ. ಯಾವಾಗಲೂ ಹೊಸ ಹೊಸ ಅನುಭವಗಳು ಮತ್ತು ಆಲೋಚನೆಗಳನ್ನು ಹುಡುಕುತ್ತಾರೆ. ಮಿಥುನ ರಾಶಿಯವರ ಮಗುವಿನಂತಹ ಸ್ವಭಾವವೆಂದರೆ, ಮಗುವೊಂದು ಮೊದಲ ಬಾರಿಗೆ ಜಗತ್ತನ್ನು ನೋಡುವಂತೆ. ಸಣ್ಣಪುಟ್ಟ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳುವ ಅವರ ಸಾಮರ್ಥ್ಯ, ಅವರ ತಮಾಷೆಯ ಹಾಸ್ಯಪ್ರಜ್ಞೆ ಮತ್ತು ಚುರುಕಾದ ಬುದ್ಧಿ ಅವರನ್ನು ಉತ್ತಮ ಸಹಚರರನ್ನಾಗಿ ಮಾಡುತ್ತದೆ. ಮಕ್ಕಳಿಂದ ವಯಸ್ಕರವರೆಗೆ ಎಲ್ಲರೊಂದಿಗೂ ಹೊಂದಿಕೊಳ್ಳುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರು ಸೃಜನಶೀಲರು ಮತ್ತು ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮಗುವಿನಂತೆ ಅವರು ಎಲ್ಲರ ಗಮನ ಸೆಳೆಯಲು ಬಯಸುತ್ತಾರೆ ಮತ್ತು ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಎಂದಿಗೂ ಹಿಂಜರಿಯುವುದಿಲ್ಲ. ಸಿಂಹ ರಾಶಿಯವರು ಮಕ್ಕಳಂತೆ ಗಮನ ಸೆಳೆಯಲು, ಕಥೆಗಳನ್ನು ಕಟ್ಟಲು ಮತ್ತು ಸುಳ್ಳು ಹೇಳಲು ತಮ್ಮ ಸೃಜನಶೀಲತೆಯನ್ನು ಬಳಸುತ್ತಾರೆ. ಅವರ ಬಾಲಿಶತನವು ಜಗತ್ತನ್ನು ಆಟಿಕೆಯಂತೆ ನೋಡುವುದರಿಂದ ಹುಟ್ಟುತ್ತದೆ. ಅವರ ಬಾಲಿಶತನವನ್ನು ಸರಿಯಾಗಿ ಬಳಸಿಕೊಂಡರೆ ಅವರು ಎಲ್ಲರ ನೆಚ್ಚಿನ ಮಕ್ಕಳಾಗಬಹುದು.
ಧನು ರಾಶಿಯವರು ತಮ್ಮ ಸುತ್ತಲಿನ ಪ್ರಪಂಚವನ್ನು ಅನ್ವೇಷಿಸುವ ಉತ್ಸಾಹಭರಿತ ಮಕ್ಕಳಂತೆಯೇ ನಿರ್ಭೀತರು. ಇವರ ತಣಿಸಲಾಗದ ಕುತೂಹಲ ಮತ್ತು ಹೊಸ ಅನುಭವಗಳಿಗಾಗಿ ಎಂದಿಗೂ ಮುಗಿಯದ ಬಾಯಾರಿಕೆಯನ್ನು ಹೊಂದಿರುತ್ತಾರೆ. ಧನು ರಾಶಿಯವರು ಪ್ರತಿದಿನ ಜೀವನವನ್ನು ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯದ ಭಾವನೆಯಿಂದ ನೋಡುತ್ತಾರೆ. ಇದು ಅವರನ್ನು ನೈಸರ್ಗಿಕ ಅನ್ವೇಷಕರು ಮತ್ತು ಅಪಾಯ ತೆಗೆದುಕೊಳ್ಳುವವರನ್ನಾಗಿ ಮಾಡುತ್ತದೆ. ಮಕ್ಕಳಂತೆ ಇವರು ಯಾವುದೇ ಮುನ್ಸೂಚನೆಯಿಲ್ಲದೆ ಯಾವುದೇ ಚಟುವಟಿಕೆಗೆ ಧುಮುಕುತ್ತಾರೆ. ಇದು ಅವರಿಗೆ ಮಾತ್ರವಲ್ಲದೆ ಅವರ ಸುತ್ತಮುತ್ತಲಿನವರಿಗೂ ಅಪಾಯಕಾರಿ.