ಲವಂಗ ಲಕ್ ತರುತ್ತೆ ಅಂತ ಗೊತ್ತು, ಇದರ ಎಲೆಯೂ ಒಳ್ಳೇದು ಇಲ್ನೋಡಿ!

By Suvarna News  |  First Published Nov 4, 2022, 4:11 PM IST

ಜೀವನದಲ್ಲಿ ಎಲ್ಲ ಸುಖಬೇಕೆಂದು ಮನುಷ್ಯ ಬಯಸ್ತಾನೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆಗಳಿರುತ್ತವೆ. ಈ ಕಷ್ಟದಿಂದ ದೂರ ಬರಲು ನಾನಾ ಮಾರ್ಗ ಅನುಸರಿಸುತ್ತಾರೆ. ಆಧ್ಯಾತ್ಮ ನಂಬುವವರು ಲವಂಗದ ಎಲೆಯ ಟಿಪ್ಸ್ ಫಾಲೋ ಮಾಡ್ಬಹುದು.
 


ಅಡುಗೆ ಮಾಡುವಾಗ ಅನೇಕ ರೀತಿಯ ಮಸಾಲೆ ಪದಾರ್ಥಗಳನ್ನು ನಾವು ಬಳಸ್ತೇವೆ. ಅದ್ರಲ್ಲಿ ಅರಿಶಿನ, ಕಾಳು ಮೆಣಸು, ಕರಿಬೇವು ಸೇರಿದಂತೆ ಅನೇಕ ಮಸಾಲೆಗಳಿರುತ್ತವೆ. ಅಡುಗೆ ಮನೆಯಲ್ಲಿ ಇವೆಲ್ಲವುಗಳ ಜೊತೆ ಲವಂಗದ ಎಲೆಗಳನ್ನು ಕೂಡ ನಾವು ಬಳಸ್ತೇವೆ. ಲವಂಗದ ಎಲೆಗಳು  ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಇವು ಸಹಕಾರಿ. 

ಈ ಲವಂಗದ ಎಲೆಗಳು (Bay Leaves) ಕೇವಲ ಆಹಾರ (Food) ದ ರುಚಿ ಹೆಚ್ಚಿಸುವುದಿಲ್ಲ. ಆಹಾರಕ್ಕೆ ವಿಶೇಷ ಪರಿಮಳ ನೀಡುವ ಜೊತೆಗೆ ಆಧ್ಯಾತ್ಮಿಕ (Spiritual) ಆಚರಣೆಗಳಿಗೂ ಬಳಕೆಯಾಗುತ್ತವೆ. ಶಾಸ್ತ್ರಗಳಲ್ಲಿ ಕೂಡ ಈ ಲವಂಗದ ಎಲೆಯನ್ನು ಬಳಕೆ ಮಾಡಲಾಗುತ್ತದೆ. ಈ ಲವಂಗದ ಎಲೆಗಳಲ್ಲಿ  ಧನಾತ್ಮಕ ಶಕ್ತಿಯಿದೆ ಎಂದು ಶತಮಾನಗಳಿಂದಲೂ ನಂಬಲಾಗ್ತಿದೆ. ಮನೆಯ ಪರಿಸ್ಥಿತಿ ಸುಧಾರಿಸಲು, ಸಂಪತ್ತನ್ನು ಆಕರ್ಷಿಸಲು ಇದು ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸಲಾಗಿದೆ. ಲವಂಗದ ಎಲೆಯ ಸುಲಭ ಉಪಾಯದ ಮೂಲಕ ಜೀವನದಲ್ಲಿ ಶಾಂತಿ ಕಾಣಬಹುದು. ಇಂದು ನಾವು ಸುಗಮ, ಸುಖಕರ ಜೀವನಕ್ಕೆ ಲವಂಗದ ಎಲೆಯನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳ್ತೇವೆ.

Tap to resize

Latest Videos

ಲವಂಗದ ಎಲೆಯ ಪ್ರಯೋಜನ :
ಸಮಸ್ಯೆ ಬಗೆಹರಿಸಿ ನೆಮ್ಮದಿ ನೀಡುತ್ತೆ ಲವಂಗದ ಎಲೆ :
ಮನೆಯಲ್ಲಿ  ಕಾರಣವಿಲ್ಲದೆ ಅನೇಕ ಬಾರಿ ಸಮಸ್ಯೆಗಳು ನಡೆಯುತ್ತಿರುತ್ತವೆ. ಆಗಾಗಾ ಗಲಾಟೆಯಾಗ್ತಿರುತ್ತದೆ. ನಕಾರಾತ್ಮಕ (Negative) ಶಕ್ತಿ ಮನೆಯನ್ನು ತುಂಬಿರುತ್ತದೆ. ಮನೆಯ ಸಮಸ್ಯೆ ಬಗೆಹರಿಯಬೇಕು, ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಬೇಕೆಂದ್ರೆ ನೀವು ಈ ಉಪಾಯ ಮಾಡಿ. ಪ್ರತಿ ಶನಿವಾರ 5 ಲವಂಗದ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು 5 ಕರಿಮೆಣಸುಗಳೊಂದಿಗೆ ಸುಡಬೇಕು. ಅದರ ಹೊಗೆ ಮನೆ ಪೂರ್ತಿ ಹರಡುವಂತೆ ಮಾಡಬೇಕು. ಲವಂಗದ ಎಲೆಯ ಹೊಗೆ ಮನೆಯ ಮೂಲೆ ಮೂಲೆಗೆ ತಲುಪುತ್ತಿದ್ದಂತೆ ಮನೆಯಲ್ಲಿ ಶಾಂತಿ ನೆಲೆನಿಲ್ಲುತ್ತದೆ. ಜಗಳಗಳು ದೂರವಾಗುತ್ತವೆ.

ಫೆಂಗ್ ಶೂಯಿ ಒಂಟೆ ನಿಮ್ಮೊಟ್ಟಿಗಿದ್ದರೆ ಅದೃಷ್ಟ ಖುಲಾಯಿಸೋದ್ರಲ್ಲಿ ಇಲ್ಲ ಅನುಮಾನ

ದುಃಸ್ವಪ್ನ ಬೀಳ್ತಿದ್ದರೆ ಹೀಗೆ ಮಾಡಿ : ಸುಖ ನಿದ್ರೆಯನ್ನು ಆಗಾಗ್ಗೆ ದುಃಸ್ವಪ್ನಗಳು ಹಾಳು ಮಾಡುತ್ತವೆ. ಈ ಕನಸಿನಿಂದ ಮನಸ್ಸಿಗೂ ನೆಮ್ಮದಿ ಇಲ್ಲದಂತಾಗುತ್ತದೆ. ಲವಂಗದ ಎಲೆ ಬಳಸಿ ನೀವು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮಲಗುವ ಸ್ಥಳದಲ್ಲಿ ಅಥವಾ ದಿಂಬಿನ ಕೆಳಗೆ ಲವಂಗದ ಎಲೆಯನ್ನು ಇಟ್ಟು ಮಲಗಬೇಕು. ಹೀಗೆ ಆಡಿದ್ರೆ ಕೆಟ್ಟ ಕನಸುಗಳಿಂದ ತ್ವರಿತ ಪರಿಹಾರ ಪಡೆಯಬಹುದು. ಸುಖ ನಿದ್ರೆ ನಿಮ್ಮನ್ನು ಆವರಿಸುತ್ತದೆ.   

ಆರ್ಥಿಕ ವೃದ್ಧಿಗೆ ಲವಂಗದ ಎಲೆಯನ್ನು ಹೀಗೆ ಬಳಸಿ : ಕೈಯಲ್ಲಿ ಹಣವಿಲ್ಲದಿದ್ದರೆ ಮತ್ತು ಅನಗತ್ಯವಾಗಿ ಹಣ ಖರ್ಚಾಗುತ್ತಿದೆ ಎನ್ನುವವರು ಕೂಡ ಲವಂಗದ ಎಲೆಯ ಉಪಾಯ ಮಾಡಬಹುದು. ಇದ್ರಿಂದ ಆರ್ಥಿಕ ವೃದ್ಧಿಯನ್ನು ನೀವು ಕಾಣಬಹುದು. ನೀವು ಶುಕ್ರವಾರದಂದು ಲಕ್ಷ್ಮಿ ದೇವಿಯ ಪಾದದ ಮೇಲೆ ಲವಂಗ ಎಲೆಯನ್ನು ಇಟ್ಟು ಪೂಜಿಸಬೇಕು. ನಂತ್ರ ಆ ಎಲೆಗಳನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಈ ಎಲೆಯು ನಿಮಗೆ ಹಣವನ್ನು ನೀಡುತ್ತದೆ. ಹಾಗೆ ತುಂಬಿರುವ ಪರ್ಸ್ ಎಂದೂ ಖಾಲಿಯಾಗುವುದಿಲ್ಲ ಎನ್ನುವ ನಂಬಿಕೆಯಿದೆ.

ZODIAC SIGN: ಕನ್ಯಾ ರಾಶಿಯ ಮಹಿಳೆಯರು ಈ ತಪ್ಪು ಮಾಡೋದು ಕಾಮನ್

ಆಸೆಗಳನ್ನು ಈಡೇರಿಸುತ್ತದೆ ಲವಂಗದ ಎಲೆ : ಬಹಳ ದಿನಗಳಿಂದ ನೆರವೇರದೇ ಇರುವಂತಹ ಯಾವುದೇ ಆಸೆ ನಿಮ್ಮಲ್ಲಿದ್ದರೆ, ಆ ಬಯಕೆಯ ನೀವು ಲವಂಗದ ಎಲೆ ಸಹಾಯದಿಂದ ಪೂರೈಸಿಕೊಳ್ಳಬಹುದು. ನಿಮ್ಮ ಆಸೆ ಏನಿದೆ ಅದನ್ನು ಎರಡು ಪದಗಳಲ್ಲಿ ಲವಂಗದ ಎಲೆ ಮೇಲೆ ಬರೆಯಬೇಕು. ಇದನ್ನು ನೀವು  ಸಿಂಧೂರ ಬಳಸಿ ಬರೆಯಬೇಕು. ನಂತ್ರ ಈ ಎಲೆಯನ್ನು ನಿಮ್ಮ ದೇವರ ಮನೆಯಲ್ಲಿ ಇಡಬೇಕು. ಹೀಗೆ ಮಾಡಿದ್ರೆ ನಿಮ್ಮ ಆಸೆ ಶೀಘ್ರದಲ್ಲೇ ಈಡೇರುತ್ತದೆ ಎಂದು ಶಾಸ್ತ್ರಗಳಲ್ಲಿ ನಂಬಲಾಗಿದೆ.
 

click me!