ಬಚ್ಚಲಮನೆಯ ವಾಸ್ತು ಕಡೆಗಣಿಸೀರಿ ಜೋಕೆ; ಅಲ್ಲಿ ಈ ವಸ್ತುಗಳಿದ್ದರೆ ಆರ್ಥಿಕ ಸಂಕಷ್ಟ ಗ್ಯಾರೆಂಟಿ..!

By Sushma Hegde  |  First Published Jul 30, 2023, 4:26 PM IST

ದೈನಂದಿನ ಜೀವನದಲ್ಲಿ ಕೆಲವು ಸಾಮಾನ್ಯ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವ ಸಂಗತಿಗಳೇ ಮುಂದೆ ಜನರ ಜೀವನವನ್ನು ಹಾನಿಗೊಳಿಸುತ್ತದೆ. ವಿಶೇಷವಾಗಿ ಮನೆಯ ವಾಸ್ತುವಿನ ವಿಚಾರದಲ್ಲಿ ಇಂತಹ ಕೆಲವು ಅಂಶಗಳನ್ನು ಪರಿಗಣಿಸಬೇಕು. ಅದರಲ್ಲಿಯೂ ಮನೆಯ ಸ್ನಾನಗೃಹದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ…


ದೈನಂದಿನ ಜೀವನದಲ್ಲಿ ಕೆಲವು ಸಾಮಾನ್ಯ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವ ಸಂಗತಿಗಳೇ ಮುಂದೆ ಜನರ ಜೀವನವನ್ನು ಹಾನಿಗೊಳಿಸುತ್ತದೆ. ವಿಶೇಷವಾಗಿ ಮನೆಯ ವಾಸ್ತುವಿನ ವಿಚಾರದಲ್ಲಿ ಇಂತಹ ಕೆಲವು ಅಂಶಗಳನ್ನು ಪರಿಗಣಿಸಬೇಕು. ಅದರಲ್ಲಿಯೂ ಮನೆಯ ಸ್ನಾನಗೃಹದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ…

ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತು ನಿಯಮಗಳು ನಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಆದರೆ ವಾಸ್ತು ನಿರ್ಲಕ್ಷ್ಯದಿಂದ ಮನೆಯ ನೆಮ್ಮದಿ ಕೆಲವೇ ಕ್ಷಣಗಳಲ್ಲಿ ಮಾಯವಾಗುತ್ತದೆ. ಯಾವುದೇ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ. ಆಗ ಜ್ಯೋತಿಷ್ಯವು ವಾಸ್ತು ನಿಯಮಗಳನ್ನು ಅನುಸರಿಸಲು ಸಲಹೆ ನೀಡುತ್ತದೆ.

Tap to resize

Latest Videos

undefined

ವಾಸ್ತು ಪ್ರಕಾರ ವ್ಯಕ್ತಿಯ ಜೀವನದಲ್ಲಿ ಸ್ನಾನ ಗೃಹವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಾಶ್ ರೂಂನಲ್ಲಿ ಇಡುವ ವಸ್ತುಗಳು ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಮನೆಯಲ್ಲಿ ಮುಖ್ಯವೆನಿಸುವ ಬಾತ್ ರೂಂ ಬಗ್ಗೆ ಯಾರೂ ಹೆಚ್ಚು ಕಾಳಜಿ ವಹಿಸುವುದಿಲ್ಲ. ಇದು ಅನೇಕರು ಮಾಡುವ ದೊಡ್ಡ ತಪ್ಪು. ಈ ವಸ್ತುಗಳನ್ನು ಸ್ನಾನಗೃಹದಲ್ಲಿ ಇಡುವುದರಿಂದ, ಕುಟುಂಬ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ.

ಈ ವಸ್ತುಗಳನ್ನು ಸಂಗ್ರಹಿಸಬೇಡಿ

ವಾಸ್ತು ತಜ್ಞರ ಪ್ರಕಾರ ಒದ್ದೆ ಬಟ್ಟೆಯನ್ನು ಬಾತ್ ರೂಂನಲ್ಲಿ ಇಡಬಾರದು. ಏಕೆಂದರೆ ಹಾಗೆ ಮಾಡುವುದರಿಂದ ವಾಸ್ತು ದೋಷ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಅದಕ್ಕಾಗಿಯೇ ಒದ್ದೆಯಾದ ಬಟ್ಟೆಗಳನ್ನು ಸ್ನಾನಗೃಹದಲ್ಲಿ ಇಡಬಾರದು.

ಬಂದೇ ಬಿಡ್ತು ಗಣೇಶನ ಹಬ್ಬ; ಈ ವರ್ಷ ಚತುರ್ಥಿ ಯಾವಾಗ?, ಪೂಜಾ ವಿಧಾನ ತಿಳಿಯಿರಿ..!

 

ಹರಿದ ಚಪ್ಪಲಿಗಳನ್ನು ಇಡಬೇಡಿ

ಬಾತ್ ರೂಂನಲ್ಲಿ ಹರಿದ ಚಪ್ಪಲಿಯನ್ನು ಇಡುವುದರಿಂದ ಜಾತಕದಲ್ಲಿ ಶನಿಯ ಸ್ಥಾನವನ್ನು ಕೆಡಿಸುತ್ತದೆ. ಇದು ವ್ಯಕ್ತಿಗೆ ಕೆಟ್ಟ ಅವಧಿಯನ್ನು ಪ್ರಾರಂಭಿಸುತ್ತದೆ ಮತ್ತು ತಾಯಿ ಲಕ್ಷ್ಮಿಯನ್ನು ಕೋಪಗೊಳಿಸುತ್ತದೆ.

ದುರ್ಬಲವಾದ ವಸ್ತುಗಳು

ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಪ್ಲಾಸ್ಟಿಕ್ ವಸ್ತುಗಳನ್ನು ಬಾತ್ ರೂಂನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಒಬ್ಬ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಬಾತ್ ರೂಂನಲ್ಲಿ ಬಕೆಟ್ ಅಥವಾ ಮಗ್ ಮುರಿದಿದ್ದರೆ, ತಕ್ಷಣವೇ ಅದನ್ನು ಎಸೆಯಿರಿ.
 
ಕೂದಲನ್ನು ಬಿಡಬೇಡಿ

ಅನೇಕ ಬಾರಿ ಮಹಿಳೆಯರು ತಮ್ಮ ಕೂದಲನ್ನು ತೊಳೆದ ನಂತರ ಸ್ನಾನಗೃಹದಲ್ಲಿ ಬಿಡುತ್ತಾರೆ. ಹಾಗೆ ಮಾಡುವುದನ್ನು ತಪ್ಪಿಸಿ. ಏಕೆಂದರೆ ಬಾತ್ ರೂಮ್‌ನಲ್ಲಿ ಕೂದಲು ಇರುವುದು ವಾಸ್ತುದೋಷದಂತೆ ಕಾಣುತ್ತದೆ. ಇದರೊಂದಿಗೆ ಜೀವನದಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ.

chanakya niti: ಜೀವನದಲ್ಲಿ ಯಾವ ಕೆಲಸಗಳು ಆಗುತ್ತಿಲ್ಲವೇ?.. ಈ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ..!


 
ಒಡೆದ ಕನ್ನಡಿ

ಒಡೆದ ಕನ್ನಡಿಯನ್ನು ಬಾತ್ ರೂಂನಲ್ಲಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಈ ಸಂದರ್ಭದಲ್ಲಿ, ನಿಮ್ಮ ಬಾತ್ ರೂಂ ಕನ್ನಡಿ ಒಡೆದರೆ, ತಕ್ಷಣವೇ ಅದನ್ನು ಬದಲಾಯಿಸಿ. ಏಕೆಂದರೆ ಒಡೆದ ಕನ್ನಡಿಯನ್ನು ಬಾತ್ ರೂಂನಲ್ಲಿ ಇಡುವುದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!