
ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದು ಫೇಕ್ ವಿಡಿಯೋ ಎಂದು ಕೆಲವರು ಅಂದುಕೊಳ್ಳುತ್ತಿದ್ದರೂ, ಇದಕ್ಕೆ ಬಂದಿರುವ ಕಮೆಂಟ್ಸ್ಗಳಲ್ಲಿ ಮಾತ್ರ ಹಲವರು ತಮ್ಮ ಅನುಭವ ಹಂಚಿಕೊಂಡಿರುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ.
ಮಗುವೊಂದು ಮಲಗಿಸಿ ಹೋದ ಸಂದರ್ಭದಲ್ಲಿ ಪದೇ ಪದೇ ವಿಚಿತ್ರವಾಗಿ ಅಳುತ್ತಿತ್ತು, ಹಾಕಿದ ಹೊದಿಕೆ ಮಗುವಿನ ಮೇಲೆ ಇರುತ್ತಿರಲಿಲ್ಲ. ಅದಕ್ಕಾಗಿಯೇ ಮಗುವಿನ ಅಪ್ಪ-ಅಮ್ಮ ಆ ಮಗುವಿನ ಬಳಿ ಸಿಸಿಟಿವಿ ಅಳವಡಿಸಿದ್ದಾರೆ. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ, ಮಗುವಿನ ತೊಟ್ಟಿಲ ಬಳಿ ವಿಚಿತ್ರ ಆಕೃತಿ ಕಾಣಿಸಿದೆ. ಕಣ್ಣು ಮಾತ್ರ ಕಾಣಿಸಿದ್ದು ಭಯಾನಕವಾಗಿದೆ. ದೆವ್ವದ ಆಕೃತಿಯಂತೆ ಇದು ಕಾಣಿಸುತ್ತಿದೆ. ಮಹಿಳೆಯ ಮುಖವನ್ನು ಹೋಲುವ ನೆರಳು ಇದಾಗಲಿದ್ದು, ಕೆಲವೇ ಕ್ಷಣಗಳಲ್ಲಿ, ಅದು ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗುತ್ತದೆ. ಇದನ್ನು ನೋಡಿ ಕಮೆಂಟ್ಗಳಲ್ಲಿ ಕೆಲವರು ತಮ್ಮ ಮಗುವಿಗೂ ಇದೇ ರೀತಿ ಆದ ಅನುಭವವನ್ನು ತೆರೆದಿಟ್ಟರೆ, ಮತ್ತೆ ಕೆಲವರು ತಮ್ಮ ಸಂಬಂಧಿಕರು, ತಮ್ಮ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾರೆ.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?
ಅಷ್ಟಕ್ಕೂ ಇದು ಎಡಿಟೆಡ್ ಯುಗ. ಎಐ ಬಂದ ಮೇಲಂತೂ ಯಾವುದೂ ಅಸಾಧ್ಯವಲ್ಲ ಎನ್ನುವ ಸ್ಥಿತಿ ತಲುಪಿದೆ. ಆದ್ದರಿಂದ ಇದು ಕಾಲ್ಪನಿಕವೋ, ಭಯ ಹುಟ್ಟಿಸಲು ಸುಖಾಸುಮ್ಮನೆ ಮಾಡಿರುವ ವಿಡಿಯೋನೋ ಅಥವಾ ಯಾರ ಊಹೆಗೂ ನಿಲುಕದ್ದ ವಿಚಿತ್ರವೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ!
ಈ ಹಿಂದೆ ಭೂತ, ಪ್ರೇತಗಳ ಬಗ್ಗೆ ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಮಾತನಾಡಿದ್ದರು. ಭೂತ,ಪ್ರೇತಗಳು ಯಾರಿಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿದ್ದರು. ಎಲ್ಲರಿಗೂ ತಿಳಿದಿರುವಂತೆ ಮೂರು ಗಣಗಳಿವೆ. ಪ್ರತಿಯೊಬ್ಬ ಮನುಷ್ಯರೂ ಒಂದೊಂದು ಗಣಗಳಿಗೆ ಸೇರಿರುತ್ತಾರೆ. ರಾಕ್ಷಸ ಗಣ, ದೇವ ಗಣ ಮತ್ತು ಮನುಷ್ಯ ಗಣ. ಈ ಪೈಕಿ ರಾಕ್ಷಸ ಗಣದವರಿಗೆ ಇವು ಕಾಣಿಸಿಕೊಳ್ಳುತ್ತದೆ. ದೇವ ಗಣದವರಿಗೆ ಕಾಣಿಸಿಕೊಳ್ಳುತ್ತದೆ, ಆದರೆ ಅದಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಆದ್ದರಿಂದ, ಇವುಗಳು ಗೋಚರಿಸುವುದು ಹುಟ್ಟು ನಕ್ಷತ್ರ, ದಿನಾಂಕ ಗೋತ್ರದ ಮೇಲೂ ಹೋಗುತ್ತದೆ ಎಂದಿದ್ದರು ಇಮ್ರಾನ್. ಹಾಗಿದ್ದ ಮೇಲೆ ಸಿಸಿಟಿವಿಯಲ್ಲಿ ಈ ದೃಶ್ಯ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎನ್ನುವುದು ಕೂಡ ಪ್ರಶ್ನಾರ್ಥವಾಗಿದೆ. ಒಟ್ಟಿನಲ್ಲಿ, ಜನರು ಮಾತ್ರ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅದೃಶ್ಯ ವ್ಯಕ್ತಿ ಜೊತೆ ಸೇಲ್ಸ್ ಗರ್ಲ್ ಮಾತುಕತೆ? ಅಂಗಡಿಯ ಸಿಸಿಟಿಯಲ್ಲಿ ಶಾಕಿಂಗ್ ಘಟನೆ ಸೆರೆ!