Baba Vanga: 2043ರಲ್ಲಿ ಮುಸ್ಲಿಂ ಆಳ್ವಿಕೆ! ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯನುಡಿ?

By Bhavani BhatFirst Published Oct 22, 2024, 8:20 PM IST
Highlights

ಬಲ್ಗೇರಿಯಾದ ಅತೀಂದ್ರಿಯ ಭವಿಷ್ಯಜ್ಞಾನಿ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೆ ಚರ್ಚೆಯಲ್ಲಿವೆ. 2025ರಲ್ಲಿ ಯುರೋಪ್‌ನಲ್ಲಿ ಭೀಕರ ಯುದ್ಧ ಮತ್ತು ಜಗತ್ತಿನ ಅಂತ್ಯದ ಆರಂಭವಾಗಲಿದೆ ಎಂದು ಭವಿಷ್ಯ ನುಡಿದ್ದಾರೆ. ಜೊತೆಗೆ ಮುಸ್ಲಿಂ ಆಧಿಪತ್ಯ ಕೂಡ!

ಆಕೆ ಕುರುಡಿ, ಬಲ್ಗೇರಿಯನ್‌ ಮಹಿಳೆ. ಆದರೆ ಇದುವರೆಗೆ ಹೇಳಿದ್ದೆಲ್ಲಾ ಆತಂಕ ಹುಟ್ಟಿಸುವ ಭವಿಷ್ಯಗಳೇ. ಆಕೆ ನಿಖರವಾಗಿ ಭವಿಷ್ಯವನ್ನು ನೋಡುತ್ತಿದ್ದಳು ಎನಲಾಗಿದೆ. 2025ರಲ್ಲಿ ಜಗತ್ತಿನ ಪ್ರಳಯ ಆರಂಭವಾಗಲಿದೆ ಎನ್ನುವ ಆಕೆಯ ಮಾತು ನಂಬಿಕೆಯುಳ್ಳವರಲ್ಲಿ ಆತಂಕ ಹುಟ್ಟಿಸಿದೆ. ಬೆಂಗಳೂರಿನ ಈ ವಾರದ ವಾತಾವರಣ ನೋಡಿದರೆ ನಿಜ ಅನಿಸುವಂತಿದೆ. 

ಆಕೆ ಹೇಳಿದ ಪ್ರಕಾರ, 2025ರಲ್ಲಿ ಯುರೋಪ್‌ನಲ್ಲಿ ಭೀಕರ ಯುದ್ಧ ಸಂಭವಿಸಲಿದೆ. ಇದು ಯುರೋಪ್‌ ಖಂಡದ ಅರ್ಧಾಂಶ ಜನತೆಯನ್ನೇ ನಿರ್ಮೂಲನ ಮಾಡಲಿದೆ. ಈಗ ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ನಿಜ ಅನ್ನಿಸದೇ ಇರದು. ಜೊತೆಗೆ ಆಕೆ ಇನ್ನೊಂದು ಭಯಾನಕಯವಾದ ಭವಿಷ್ಯವನ್ನೂ ಹೇಳಿದ್ದಾಳೆ. ಅದೇನೆಂದರೆ 2043ರ ಹೊತ್ತಿಗೆ ಇಡೀ ಯುರೋಪ್‌ ಖಂಡ ಮುಸ್ಲಿಂ ಆಳ್ವಿಕೆಯಡಿ ಸಿಲುಕಿಕೊಳ್ಳುತ್ತದೆ. ಇಂದು ಇಸ್ರೇಲ್‌ ಪರ ಅಷ್ಟೂ ಮುಸ್ಲಿಂ ದೇಶಗಳು ತೊಡೆ ತಟ್ಟಿ ನಿಂತಿರುವ ರೀತಿ ನೋಡಿದರೆ, ಇದರ ಆರಂಭ ಇಲ್ಲಿಂದಲೇ ಆಗುತ್ತಿದೆ ಅನಿಸುತ್ತಿಲ್ಲವೇ? 

Latest Videos

ಬಲ್ಗೇರಿಯಾದ ಅತೀಂದ್ರಿಯ ಭವಿಷ್ಯಜ್ಞಾನಿ ಬಾಬಾ ವಂಗಾ (Baba Vanga) ಅವರ ಭವಿಷ್ಯ ನುಡಿಗಳು ಪ್ರತಿವರ್ಷದ ಆರಂಭದ ಹಿಂದಿನ ದಿನಗಳಲ್ಲಿ ಮತ್ತೆ ನೆನೆಯಲ್ಪಡುತ್ತವೆ. ಈ ವರ್ಷದ ಬಗ್ಗೆ ಆಕೆ ಏನು ಹೇಳಿದ್ದಾಳೆ ಎಂದು ನೋಡಲಾಗುತ್ತದೆ. ಆಕೆ 1996ರಲ್ಲೇ ನಿಧನಳಾಗಿದ್ದರೂ ಸಹ, ಅವರ ಭವಿಷ್ಯವಾಣಿಗಳು ಅವಳ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ಹೇಳಲಾಗುತ್ತದೆ. 

ಅನೇಕ ದೊಡ್ಡ ಜಾಗತಿಕ ಘಟನೆಗಳು ಸಂಭವಿಸುವ ಬಗ್ಗೆ ಅವರು ಮೊದಲೇ ಮುನ್ಸೂಚನೆ ನೀಡಿದ್ದರು ಎಂದು ನಂಬಲಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದು ನಿಜವಾದ ಘಟನೆಗಳು ಇದೆಯೇ? ನೋಡೋಣ.

1. ಬಾಬಾ ವಂಗಾ ಅವರ ಅತ್ಯಂತ ವ್ಯಾಪಕವಾಗಿ ಉಲ್ಲೇಖಿಸಲಾದ ಭವಿಷ್ಯವಾಣಿಯು ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದೆ. "ಹಾರರ್‌, ಹಾರರ್‌, ಉಕ್ಕಿನ ಪಕ್ಷಿಗಳ ದಾಳಿಯ ನಂತರ ಅಮೇರಿಕನ್ ಸಹೋದರರು ಬೀಳುತ್ತಾರೆ. ತೋಳಗಳು ಪೊದೆಯಲ್ಲಿ ಊಳಿಡುತ್ತವೆ. ಮುಗ್ಧರ ರಕ್ತವು ಚಿಮ್ಮುತ್ತದೆʼʼ ಎಂದು ಆಕೆ 1989ರಲ್ಲಿ ಹೇಳಿದ್ದಳು. 

2. ಬಾಬಾ ವಂಗಾ 2022ರ ಬಗ್ಗೆ ನೀಡಿದ ಎರಡು ಮುನ್ನೋಟ ನಿಜವಾಗಿವೆ. ಪ್ರಪಂಚದಾದ್ಯಂತದ ದೊಡ್ಡ ನಗರಗಳು ಗಮನಾರ್ಹ ಬರ ಮತ್ತು ನೀರಿನ ಕೊರತೆಯಿಂದ ಹಾನಿಗೊಳಗಾಗುತ್ತವೆ ಎಂದು ಅವರು ಹೇಳಿದ್ದರು. ಬ್ರಿಟನ್‌ ಆಗಸ್ಟ್‌ 2022ರಂದು ಅಧಿಕೃತವಾಗಿ ಬರಗಾಲವನ್ನು ಘೋಷಿಸಿತು. ಫ್ರಾನ್ಸ್, ಇಟಲಿ, ಪೋರ್ಚುಗಲ್ ಮತ್ತು ಯುರೋಪ್‌ನ ಹೆಚ್ಚಿನ ಭಾಗಗಳು ಬರ ಮತ್ತು ವಿನಾಶಕಾರಿ ಕಾಳ್ಗಿಚ್ಚುಗಳನ್ನು ಎದುರಿಸಿದವು. ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ಲಿ ತೀವ್ರ ಪ್ರವಾಹದಿಂದ ತತ್ತರಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಯಿತು.

3. ಕುರ್ಸ್ಕ್ ದುರಂತ: ಆಗಸ್ಟ್ 2000ರಲ್ಲಿ, ರಷ್ಯಾದ ಪರಮಾಣು ಜಲಾಂತರ್ಗಾಮಿ ಕರ್ಸ್ಕ್ ಬ್ಯಾರೆಂಟ್ಸ್ ಸಮುದ್ರದಲ್ಲಿ ಮುಳುಗಿತು. ಇದು ವಿನಾಶಕಾರಿ ಅಪಘಾತವಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 118 ಸಿಬ್ಬಂದಿ ಸತ್ತರು. ಕುರ್ಸ್ಕ್ ನೀರಿನಿಂದ ಆವೃತವಾಗುತ್ತದೆ ಮತ್ತು ಇಡೀ ಪ್ರಪಂಚವು ಅದರ ಬಗ್ಗೆ ಅಳುತ್ತದೆ ಎಂದು ಆಕೆ 1980ರಲ್ಲಿ ಭವಿಷ್ಯ ನುಡಿದಿದ್ದಳು. 

4. ಕರಿಯ ವ್ಯಕ್ತಿ ಅಮೆರಿಕದ 44ನೇ ಅಧ್ಯಕ್ಷ ಆಗುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ ಎಂದು ವರದಿಯಾಗಿದೆ. ಬರಾಕ್ ಒಬಾಮಾ ಅವರು ಜಾರ್ಜ್ W ಬುಷ್‌ ನಂತರ 44ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 

5. ಇಂದಿರಾ ಗಾಂಧಿ ಹತ್ಯೆ: 1969ರಲ್ಲಿ, ಬಾಬಾ ವಂಗಾ ಇಂದಿರಾ ಗಾಂಧಿಯ ಬಗ್ಗೆ ದರ್ಶನ ಹೊಂದಿದ್ದರು. ʼʼಹೊಗೆ ಮತ್ತು ಬೆಂಕಿಯಲ್ಲಿ ನಾನು ಕಿತ್ತಳೆ-ಹಳದಿ ಉಡುಪನ್ನು ನೋಡುತ್ತೇನೆ. ಆ ಉಡುಪು ಅವಳನ್ನು ನಾಶಪಡಿಸುತ್ತದೆʼʼ ಎಂದಿದಳು ವಂಗಾ. ಅಂಗರಕ್ಷಕರು ಗುಂಡು ಹಾರಿಸಿದ ದಿನ ಇಂದಿರಾ ಗಾಂಧಿ ಅವರು ನಿಜವಾಗಿಯೂ ಕೇಸರಿ ಬಣ್ಣದ ಸೀರೆಯನ್ನು ಧರಿಸಿದ್ದರು.

6. ಸೋವಿಯತ್ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್ ಅವರ ಮರಣದ ದಿನಾಂಕವನ್ನು ವಂಗಾ ನಿಖರವಾಗಿ ಊಹಿಸಿದ್ದಾಳೆ ಎಂಬುದು ಬಾಬಾ ವಂಗಾ ಬಗ್ಗೆ ಪ್ರಸಾರವಾದ ಕಥೆ. ಆದರೆ ಅವಳು ತನ್ನ ಸಾವಿನ ದಿನಾಂಕವನ್ನು ತಾನೇ ಊಹಿಸಿದ್ದಳು. 1990ರ ಒಂದು ಹೇಳಿಕೆಯಲ್ಲಿ ಆಕೆ ಆಗಸ್ಟ್ 11, 1996ರಂದು ʼಈ ಮಾರಣಾಂತಿಕ ಸುರುಳಿಯನ್ನು ಮಗುಚಿಹಾಕುವ ದಿನʼ ಎಂದು ಆಕೆ ಸೂಚಿಸಿದ್ದಳು. ಅದೇ ದಿನ ಬಾಬಾ ವಂಗಾ ತೀರಿಕೊಂಡಳು. 

7. ಸೋವಿಯತ್ ಒಕ್ಕೂಟ, ಜೆಕೊಸ್ಲೊವಾಕಿಯಾ ಮತ್ತು ಯುಗೊಸ್ಲಾವಿಯ ವಿಸರ್ಜನೆ

8. ಚೆರ್ನೋಬಿಲ್ ದುರಂತ

9. ರಾಜಕುಮಾರಿ ಡಯಾನಾ ಸಾವಿನ ದಿನಾಂಕ

10. ಉತ್ತರ ಬಲ್ಗೇರಿಯಾದಲ್ಲಿ 1985 ರ ಭೂಕಂಪ

11. 2004 ರ ಸುನಾಮಿ

ಮಗುವಿಗೆ ಮೊದಲ ಮುಡಿ ಶಾಸ್ತ್ರಕ್ಕೆ ಸರಿಯಾದ ವಯಸ್ಸು ಯಾವುದು?

ಅವಳು ಹೇಳಿದ ಇನ್ನಷ್ಟು ಭವಿಷ್ಯವಾಣಿಗಳು ಹೀಗಿವೆ: 

1. ಯುರೋಪ್‌ನಲ್ಲಿ ಭಯೋತ್ಪಾದಕ ದಾಳಿ ಹೆಚ್ಚಲಿದೆ. ದೊಡ್ಡ ದೇಶವೊಂದು ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುತ್ತದೆ.
2. ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ.
3. ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ.
4. ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಅವರು ಗುರಿಯಾಗಿಸುತ್ತಾರೆ.
5. ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಬರಲಿವೆ.
6. 2025 ರಲ್ಲಿ ಪ್ರಪಂಚದ ಅಂತ್ಯವು ಪ್ರಾರಂಭವಾಗುತ್ತದೆ. 2025ರಲ್ಲಿ, ಯುರೋಪ್‌ನಲ್ಲಿ ಪ್ರಮುಖ ಸಂಘರ್ಷವು ಸ್ಫೋಟಗೊಳ್ಳುತ್ತದೆ, ಇದು ಜನಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ.
7. 2076 ರ ಹೊತ್ತಿಗೆ ಕಮ್ಯುನಿಸ್ಟ್ ಆಳ್ವಿಕೆಯು ಜಾಗತಿಕವಾಗಿ ಮರಳುತ್ತದೆ.
8, ಅಂತಿಮವಾಗಿ, ನೈಸರ್ಗಿಕ ವಿಕೋಪದಿಂದ ಪ್ರಪಂಚವು 5079ರಲ್ಲಿ ಕೊನೆಗೊಳ್ಳುತ್ತದೆ.

ಸತ್ತ ಮೇಲೆ ಆತ್ಮ ಎಲ್ಲಿ ಹೋಗುತ್ತೆ? ಪುನರ್ಜನ್ಮಕ್ಕೆ ಎಷ್ಟು ಸಮಯ ಬೇಕು? ಗರುಡ ಪುರಾಣದಲ್ಲಿದೆ ರಹಸ್ಯ
 

click me!