ರಾಮಮಂದಿರ ಉದ್ಘಾಟನೆಗೆ ಮುನ್ನವೇ ಅಯೋಧ್ಯೆಯಲ್ಲಿ ನಡೆದಾಡಿದ ರಾಮ ಸೀತೆ ಲಕ್ಷ್ಮಣ!

By Suvarna News  |  First Published Jan 17, 2024, 6:37 PM IST

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಯಲ್ಲಿ ರಾಮನ ಓಡಾಟ ನೆರೆದವರ ಗಮನ ಸೆಳೆಯಿತು. ಹೌದು, ಟಿವಿ ವಾಹಿನಿಯ ಜನಪ್ರಿಯ 'ರಾಮಾಯಣ'ದ ರಾಮ, ಸೀತೆ, ಲಕ್ಷ್ಮಣರು ಅಯೋಧ್ಯೆಯ ಹಾದಿಯಲ್ಲಿ ನಡೆದಾಡಿದರು. 


ಜನವರಿ 22 ದೇಶವಾಸಿಗಳಿಗೆ ಐತಿಹಾಸಿಕ ದಿನವಾಗಲಿದೆ. ಈ ದಿನದಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದು, ಇದಕ್ಕಾಗಿ ದೇಶವಾಸಿಗಳೆಲ್ಲರೂ ಉತ್ಸುಕರಾಗಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೂ ಮೊದಲೇ ಅಯೋಧ್ಯೆಯಲ್ಲಿ ರಾಮನ ಓಡಾಟ ನೆರೆದವರ ಗಮನ ಸೆಳೆಯಿತು. ಹೌದು, ಟಿವಿ ವಾಹಿನಿಯ ಜನಪ್ರಿಯ 'ರಾಮಾಯಣ'ದ ರಾಮ, ಸೀತೆ, ಲಕ್ಷ್ಮಣರು ಅಯೋಧ್ಯೆಯ ಹಾದಿಯಲ್ಲಿ ನಡೆದಾಡಿದರು. 
 ಟಿವಿ ಧಾರಾವಾಹಿ ರಾಮಾಯಣದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರುಣ್ ಗೋವಿಲ್, ತಾಯಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಚಿಖಾಲಿಯಾ ಮತ್ತು ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನೀಲ್ ಲಾಹಿರಿ ರಾಮನ ನಗರ ಅಯೋಧ್ಯೆಗೆ ತೆರಳಿದ್ದಾರೆ. ಅವರನ್ನು  ಬಹಳಷ್ಟು ನೃತ್ಯಗಾರರು ವೈಭವಯುತವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅರುಣ್ ಗೋವಿಲ್ ಮತ್ತು ಸುನಿಲ್ ಲಾಹಿರಿ ಹಳದಿ ಕುರ್ತಾ ಪೈಜಾಮ ಧರಿಸಿದ್ದರೆ, ಸೀತಾ ಪಾತ್ರಧಾರಿ ದೀಪಿಕಾ, ಕೆಂಪು ಸೀರೆ ಉಟ್ಟು ಹಣೆಗೆ ಬಿಂದಿ ಧರಿಸಿದ್ದರು.

ಈ ಸಂದರ್ಭದಲ್ಲಿ ಮೂವರೂ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಸುತ್ತರೂ ಬಹಳಷ್ಟು ಜನ ನೃತ್ಯ ಮಾಡುತ್ತಿದ್ದಾರೆ ಮತ್ತು ಜನರು ಧ್ವಜಗಳನ್ನು ಹಿಡಿದುಕೊಂಡು ಹಿಂದೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.

Tap to resize

Latest Videos

ಆಹ್ವಾನವಿಲ್ಲವೆಂದು ಕೋಪಗೊಂಡಿದ್ದ ಸುನೀಲ್
ಕೆಲವು ದಿನಗಳ ಹಿಂದೆ ಸುನಿಲ್ ಲಾಹಿರಿ ಅವರು ಪ್ರಾಣ ಪ್ರತಿಷ್ಠಾಕ್ಕೆ ಆಹ್ವಾನಿಸಿಲ್ಲ ಎಂದು ಹೇಳುತ್ತಿರುವ ವೀಡಿಯೊ ಹೊರ ಬಿದ್ದಿತ್ತು. ಮತ್ತು ಅದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅವರು ಅಯೋಧ್ಯೆಯಲ್ಲಿರುವ ವಿಡಿಯೋ ನೋಡಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಹಲವು ವರ್ಷಗಳ ನಂತರ ಮತ್ತೊಮ್ಮೆ ಟಿವಿ ಧಾರಾವಾಹಿ ರಾಮಾಯಣದ ರಾಮ-ಸೀತೆ ಮತ್ತು ಲಕ್ಷ್ಮಣರನ್ನು ಪ್ರೇಕ್ಷಕರು ನೋಡಿದರು.

ಏನಿದು ವಿಸ್ಮಯ! 57 ವರ್ಷ ಹಿಂದೆಯೇ ನೇಪಾಳದ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ!

ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಲ್ಲಿ ಹಲವು ವಿವಿಐಪಿಗಳು ಭಾಗಿ
ಟಿವಿ ಜಗತ್ತು, ಬಾಲಿವುಡ್ ಮತ್ತು ರಾಜಕೀಯ ಪ್ರಪಂಚದ ಅನೇಕ ದೊಡ್ಡ ಹೆಸರುಗಳನ್ನು ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಗಾಗಿ ಆಹ್ವಾನಿಸಲಾಗಿದೆ. ಇದರಲ್ಲಿ ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ವಿಂದು ದಾರಾ ಸಿಂಗ್, ಅಕ್ಷಯ್ ಕುಮಾರ್, ಅಮೀರ್ ಖಾನ್, ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ಬಾಲಿವುಡ್ ತಾರೆಯರ ಹೆಸರುಗಳಿವೆ.

click me!