
ಕಷ್ಟಪಟ್ಟು ಓದಿ ಕೆಲಸ (Job) ಹಿಡಿಯುವುದು ಎಂದರೆ ಸುಲಭದ ಮಾತಲ್ಲ. ನೂರಾರು ಅರ್ಜಿಗಳು (Application), ಹತ್ತಾರು ಇಂಟರ್ವ್ಯೂಗಳು (Interviews) .. ಹೀಗೆ ಹಲವಾರು ರೀತಿಯಲ್ಲಿ ಶ್ರಮವಹಿಸಿ ಉದ್ಯೋಗವನ್ನು ಹಿಡಿಯಲಾಗುತ್ತದೆ. ಕೊನೆಗೆ ಉದ್ಯೋಗದಲ್ಲೂ ಪೈಪೋಟಿ (competition) ಎದುರಿಸಬೇಕು. ಸಹೋದ್ಯೋಗಿಗಳ ಜೊತೆಗೆ ಹೊಂದಿಕೊಳ್ಳುವುದಲ್ಲದೆ ಬಾಸ್ (Boss) ಪ್ರಶಂಸೆಗೆ (Appreciation) ಪಾತ್ರರಾಗಬೇಕು. ಒಳ್ಳೇ ಹೈಕ್ (Hike) ಪಡೆಯಬೇಕು, ಪ್ರಮೋಶನ್ (Promotion) ಪಡೆಯಬೇಕು. ಹೀಗೇ ಹತ್ತು ಹಲವಾರು ರೀತಿಯಲ್ಲಿ ಪರಿಶ್ರಮ ಹಾಕಬೇಕು. ಹೀಗೆ ಮಾಡಿದರೂ ಸಹ ಒಳ್ಳೇ ಹೈಕುಗಳು ಸಿಗುವುದಿಲ್ಲ, ಪ್ರಮೋಷನ್ ಬಗ್ಗೆ ಕೇಳೋದೆ ಬೇಡ ಎನ್ನುವಂತಹ ಸ್ಥಿತಿ ಇರಲಿದೆ. ಎಲ್ಲ ತರಹದ ಯೋಗ್ಯತೆಯನ್ನು ಹೊಂದಿದ್ದರೂ ಅದೃಷ್ಟವು ಕೈ ಹಿಡಿದಿರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಯಾವುದೇ ವ್ಯಕ್ತಿ ಶ್ರದ್ಧೆಯಿಂದ ದೇವರ ಮೊರೆ ಹೋದರೆ ಸಮಸ್ಯೆಗಳಿಗೆ (Problem) ದೇವರೇ (God) ಪರಿಹಾರ ಸೂಚಿಸುತ್ತಾನೆ. ಹಾಗಾಗಿ ಶಾಸ್ತ್ರದ ಅನುಸಾರ ಕೆಲವು ಮಾರ್ಗವನ್ನು ಅನುಸರಿಸಿದರೆ ಉದ್ಯೋಗದಲ್ಲಿ ಯಶಸ್ಸಿನ (Success) ಜೊತೆಗೆ ಪ್ರಮೋಶನ್ ಕೂಡಾ ಸಿಗಲಿದೆ.
40 ಶುಕ್ರವಾರ (Friday) ಏನು ಮಾಡಬೇಕು?
ಎಷ್ಟೇ ಕಷ್ಟಪಟ್ಟರೂ ಉದ್ಯೋಗ ಸಿಗುತ್ತಿಲ್ಲವೆಂದಾದರೆ ಯಾವುದಾದರೊಂದು ಶುಕ್ರವಾರವನ್ನು ಮೊದಲು ಆಯ್ದುಕೊಳ್ಳಿ. ಆ ದಿನ ಬೆಳಗ್ಗೆ ಯಾರೊಂದಿಗೂ ಮಾತನಾಡಬೇಡಿ. ಐದೂಕಾಲು ಪಾವು ಉದ್ದಿನ ಹಿಟ್ಟನ್ನು ತೆಗೆದುಕೊಂಡು ರೊಟ್ಟಿ (Rpti) ತಯಾರಿಸಿ. ಆ ರೊಟ್ಟಿಯನ್ನು ನಾಲ್ಕು ಭಾಗ ಮಾಡಿ, ಒಂದು ತುಂಡನ್ನು ನದಿಗೆ (River) ಹಾಕಿದರೆ, ಮತ್ತೊಂದು ಭಾಗವನ್ನು ಶ್ವಾನಕ್ಕೆ (Dog), ಮೂರನೇ ಭಾಗವನ್ನು ಕಾಗೆಗೆ (crow) ನೀಡಬೇಕು. ಕೊನೇ ಭಾಗವನ್ನು ರಸ್ತೆಯಲ್ಲಿ (Road) ಎಸೆದುಬಿಡಿ. ಈ ನಿಯಮವನ್ನು ಸತತ ನಲವತ್ತು ಶುಕ್ರವಾರ ಪಾಲಿಸಿದರೆ ಉದ್ಯೋಗ ಮತ್ತು ಪ್ರಮೋಶನ್ ದೊರಕುತ್ತದೆ.
ಇದನ್ನು ಓದಿ: Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು!
ಉದ್ದು, ಗೋದಿ ಹಿಟ್ಟಿನ ಉಪಾಯ (Vigna mungo, Wheat)
ಎಷ್ಟೇ ಕಷ್ಟಪಟ್ಟರೂ ಕೆಲಸ ಸಿಗುತ್ತಿಲ್ಲ ಇಲ್ಲವೇ ಪ್ರಮೋಶನ್ ಸಿಗುತ್ತಿಲ್ಲವೆಂದಾದರೆ, 300 ಗ್ರಾಂ ಕಪ್ಪು ಉದ್ದಿನ ಕಾಳನ್ನು ತೆಗೆದುಕೊಂಡು ಗೋದಿ ಹಿಟ್ಟಿಗೆ ಸೇರಿಸಿ ಮಿಕ್ಸ್ ಮಾಡಬೇಕು. ಅದನ್ನು ಮಧ್ಯಮ ಉರಿಯಲ್ಲಿ ಉಂಡೆ ಮಾಡಲು ಬರುವಷ್ಟು ಹದಕ್ಕೆ ಬೇಯಿಸಿ, ಕಾಲು ಭಾಗವನ್ನು ಮುರಿದು ಕಪ್ಪು ಬಣ್ಣದ ಬಟ್ಟೆಯಲ್ಲಿ (Black cloth) ಸುತ್ತಿಡಬೇಕು.
ಉಳಿದ ಮುಕ್ಕಾಲು ಭಾಗದಲ್ಲಿ 101 ಉಂಡೆಯನ್ನು ಮಾಡಿ, ಒಂದೊಂದಾಗಿ ನದಿಯಲ್ಲ ಮೀನುಗಳಿಗೆ ತಿನ್ನಲು ಹಾಕಬೇಕು. ಬಟ್ಟೆಯಲ್ಲಿ ಸುತ್ತಿದ ಉಂಡೆಯನ್ನು ಮೀನಿಗೆ (Fish) ತೋರಿಸಿ ನದಿಯಲ್ಲಿ ಬಿಟ್ಟುಬಿಡಬೇಕು. ಈ ಉಪಾಯವನ್ನು ನಿಯಮಿತವಾಗಿ 40 ದಿನ ಮಾಡಬೇಕು.
ಸ್ಪಟಿಕ ಮಾಲೆಯಿಂದ ಸರಸ್ವತಿ ಜಪ (Chanting Goddess Saraswati Mantra)
ಸರಸ್ವತಿ ವಿದ್ಯೆಗೆ ಅಧಿದೇವತೆ. ಸರಸ್ವತಿಯನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಿ, ಧ್ಯಾನಿಸಿದರೆ ಕಾರ್ಯಸಿದ್ಧಿ ಖಚಿತ. ಸರಸ್ವತಿ ಮಂತ್ರವನ್ನು ಜಪಿಸಬೇಕಿದ್ದಾಗ ಸ್ಪಟಿಕಮಾಲೆಯನ್ನು ಉಪಯೋಗಿಸಬೇಕು. ಪೂಜಿಸಲ್ಪಟ್ಟ 108 ಮಣಿಯ ಸ್ಫಟಿಕಮಾಲೆಯಿಂದ 11 ಅಥವಾ 21 ಬಾರಿ ಸರಸ್ವತಿ ಮಂತ್ರವನ್ನು ಜಪಿಸಬೇಕು. ಈ ಕ್ರಮವನ್ನು ಹನ್ನೊಂದು ದಿನಗಳ ಕಾಲ ಅನುಸರಿಸಬೇಕು. ಸರಸ್ವತಿಯಲ್ಲಿ ಉತ್ತಮ ಉದ್ಯೋಗಕ್ಕಾಗಿ ಪ್ರಾರ್ಥನೆ (Prayer) ಮಾಡಿಕೊಳ್ಳಬೇಕು.
ಇದನ್ನು ಓದಿ: Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!
ಗುರುವಾರ (Thursday ) ಏನು ಮಾಡಬೇಕು?
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಗುರುವಾರದಂದು ಕಾಗೆಗಳಿಗೆ ಅನ್ನ, ನೀರು ಆಹಾರವನ್ನು ನೀಡಬೇಕು. ಅಂದು ಬೆಳಗ್ಗೆ ಮೊಸರಿಗೆ ಸಕ್ಕರೆ ಹಾಕಿ ಕಾಗೆಗೆ ತಿನ್ನಲು ಇಡಬೇಕು. ಮಧ್ಯಾಹ್ನ ಅನ್ನಕ್ಕೆ ಹಾಲು ಹಾಗೂ ಮೊಸರನ್ನು ಕಲಸಿ ತಿನ್ನಲು ಇಡಬೇಕು. ಕಚೇರಿಗೆ ಹೋಗುವಾಗ ಮನೆಯ ಮುಖ್ಯದ್ವಾರದಲ್ಲಿ (Main Door) ಎಡಗಾಲನ್ನು ಮೊದಲು ಹೊರಗಡೆ ಇಡಬೇಕು. ಇಷ್ಟೆಲ್ಲ ಕ್ರಮಗಳನ್ನು ಅನುಸರಿಸಿದರೆ ಉದ್ಯೋಗದಲ್ಲಿ ಪ್ರಮೋಷನ್ ಪಡೆಯುವುದು ಸುಲಭವಾಗಲಿದೆ.