
Selfish Zodiac Sign: ಜ್ಯೋತಿಷ್ಯದ ಪ್ರಕಾರ, ಹನ್ನೆರಡು ರಾಶಿಚಕ್ರ ಚಿಹ್ನೆ (Twelve zodiac signs)ಗಳಲ್ಲಿ ಪ್ರತಿಯೊಂದೂ ಗ್ರಹಗಳು ಮತ್ತು ನಕ್ಷತ್ರಗಳ ಆಧಾರದ ಮೇಲೆ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಇವುಗಳ ಪ್ರಭಾವದಿಂದಾಗಿ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಆದ್ಯತೆಗಳೂ ವಿಭಿನ್ನವಾಗಿರುತ್ತವೆ. ಕೆಲವರು ಎಲ್ಲರಿಗೂ ಸಹಾಯ ಮಾಡುತ್ತಾರೆ ಮತ್ತು ಒಳ್ಳೆಯ ಹೆಸರು ಗಳಿಸುತ್ತಾರೆ. ಮತ್ತೆ ಕೆಲವರು ಇತರರ ಕೆಲಸಕ್ಕೆ ಅಡ್ಡಿಯಾಗುತ್ತಾರೆ. ಅವರು ಮಾತ್ರ ಬೆಳೆಯಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಯಾವಾಗಲೂ ಸ್ವಾರ್ಥಿಯಾಗಿ ವರ್ತಿಸುತ್ತಾರೆ. ತಮ್ಮ ಸ್ವಂತ ಅವಕಾಶಗಳಿಗಾಗಿ ಇತರರನ್ನು ದಾರಿ ತಪ್ಪಿಸುತ್ತಾರೆ. ಇದಲ್ಲದೆ, ಸ್ನೇಹಿತರನ್ನು ಮೋಸ ಮಾಡುವ ಸಾಧ್ಯತೆಗಳು ಹೆಚ್ಚು. ಆದರೆ ಈ ಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಮಿಥುನ (Gemini)
ಜ್ಯೋತಿಷ್ಯದ ಪ್ರಕಾರ, ಮಿಥುನ ರಾಶಿಯವರು ಬುಧನ ಆಳ್ವಿಕೆಯಲ್ಲಿದ್ದಾರೆ. ಈ ರಾಶಿಚಕ್ರದ ಜನರು ಹಣವನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಇತರರೊಂದಿಗೆ ಸ್ನೇಹ ಬೆಳೆಸುತ್ತಾರೆ. ಇದಲ್ಲದೆ ಉತ್ತಮ ಸಂವಹನ ಕೌಶಲ್ಯವನ್ನು ಸಹ ಹೊಂದಿದ್ದಾರೆ. ಇತರರು ತಮ್ಮ ಕೆಲಸವನ್ನು ಸುಲಭವಾಗಿ ಮಾಡುವಂತೆ ಮಾಡುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಯಾವುದೇ ಪರಿಸ್ಥಿತಿಯಾದರೂ, ತಮ್ಮ ಲಾಭಕ್ಕಾಗಿ ಅವರು ಸ್ವಾರ್ಥಿಯಾಗಿ ಯೋಜನೆ ಹಮ್ಮಿಕೊಳ್ಳುತ್ತಾರೆ. ಯಾರಾದರೂ ತಮಗಿಂತ ಹೆಚ್ಚು ಬೆಳೆಯುತ್ತಿದ್ದಾರೆಂದು ಅವರಿಗೆ ತಿಳಿದಿದ್ದರೆ ಅವರಿಗೆ ಯಾವುದೇ ತೊಂದರೆ ನೀಡಲು ಹಿಂಜರಿಯುವುದಿಲ್ಲ. ತಮ್ಮ ಅಗತ್ಯಗಳಿಗಾಗಿ ಸುಲಭವಾಗಿ ಪದಗಳನ್ನು ಬದಲಾಯಿಸುತ್ತಾರೆ. ಇದಲ್ಲದೆ, ಅವರು ತಮ್ಮ ಸ್ನೇಹಿತರನ್ನು ಸಹ ಮೋಸಗೊಳಿಸಲು ಪ್ರಯತ್ನಿಸುತ್ತಾರೆ.
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ. ಸೂರ್ಯನ ಪ್ರಭಾವದಿಂದ ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಯಾವಾಗಲೂ ಸಮಾಜದಲ್ಲಿ ಗೌರವವನ್ನು ಬಯಸುತ್ತಾರೆ. ತಮ್ಮ ಸ್ವಂತ ಕೆಲಸವನ್ನು ಕಂಪ್ಲೀಟ್ ಮಾಡಲು ಏನು ಬೇಕಾದರೂ ಮಾಡಲು ಹಿಂಜರಿಯುವುದಿಲ್ಲ. ಅದಕ್ಕಾಗಿಯೇ ತಮ್ಮ ವೈಯಕ್ತಿಕ ಜೀವನದಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಾರೆ. ಯಾವಾಗಲೂ ತಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಾರೆ.
ಕನ್ಯಾ (Virgo)
ಕನ್ಯಾ ರಾಶಿಯವರು ಶುಕ್ರನ ಆಳ್ವಿಕೆಗೆ ಒಳಪಟ್ಟಿರುತ್ತಾರೆ. ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಕೆಟ್ಟ ಗುಣಗಳನ್ನು ಹೊರತರುತ್ತಾರೆ. ತಮ್ಮ ಅಗತ್ಯಗಳು ಈಡೇರಿದ ತಕ್ಷಣ ಯಾರನ್ನಾದರೂ ನಿರ್ಲಕ್ಷಿಸುತ್ತಾರೆ. ಹೊಸ ಜನರೊಂದಿಗೆ ಬೇಗನೆ ಸ್ನೇಹ ಬೆಳೆಸುತ್ತಾರೆ. ತಮ್ಮ ಕೆಲಸ ಮುಗಿದ ನಂತರ ಅವರು ಇತರರೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ. ಯಾರಾದರೂ ತೊಂದರೆ ಅಥವಾ ದುಃಖದಲ್ಲಿದ್ದರೆ, ಅವರು ಅವರಿಂದ ಬಹಳ ದೂರವಿರುತ್ತಾರೆ. ಆದರೂ ಬಡವರಿಗೆ ಸಹಾಯ ಮಾಡುವ ಗುಣವನ್ನೂ ಹೊಂದಿದ್ದಾರೆ. ಬುಧನ ಆಶೀರ್ವಾದದಿಂದ ಅಂತಹ ಗುಣಗಳನ್ನು ಹೊಂದಿದ್ದಾರೆ.
ಧನು (Sagittarius)
ಈ ರಾಶಿಚಕ್ರ ಚಿಹ್ನೆಗಳು ಗುರುವಿನ ಪ್ರಭಾವದಡಿಯಲ್ಲಿ ಬಹಳ ಬುದ್ಧಿವಂತಿಕೆಯಿಂದ ವರ್ತಿಸುತ್ತವೆ. ಯಾರನ್ನು ಯಾವಾಗ ಏನು ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ಅವರನ್ನು ಸ್ವಾರ್ಥಿಗಳೆಂದು ಪರಿಗಣಿಸಲಾಗುತ್ತದೆ. ಯಾವಾಗಲೂ ಹೊಗಳಿಕೆಯನ್ನು ಬಯಸುತ್ತಾರೆ. ತಮ್ಮ ಸಂತೋಷಕ್ಕಾಗಿ ಇತರರನ್ನು ನೋಯಿಸಲು ಯೋಜಿಸುತ್ತಾರೆ. ಸಮಾಜದಲ್ಲಿ ಗೌರವವನ್ನು ಪಡೆಯಲು ಇಷ್ಟಪಡುತ್ತಾರೆ. ತಮ್ಮ ಕೆಲಸವನ್ನು ಯಶಸ್ವಿಗೊಳಿಸಲು ಯಾರನ್ನಾದರೂ ಮೋಸಗೊಳಿಸಬಹುದು.
ಇಲ್ಲಿ ಉಲ್ಲೇಖಿಸಲಾದ ನಾಲ್ಕು ರಾಶಿಚಕ್ರ ಚಿಹ್ನೆಗಳು ತುಂಬಾ ಸ್ವಾರ್ಥಿಗಳು. ಆದರೆ ಅವರು ಇತರರಿಗೆ ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಯಾವಾಗಲೂ ತಮ್ಮ ಆದಾಯವನ್ನು ಹೆಚ್ಚಿಸಲು ಮತ್ತು ಸಂತೋಷದ ಜೀವನವನ್ನು ನಡೆಸಲು ಯೋಜನೆಗಳನ್ನು ಮಾಡುತ್ತಾರೆ.