
ಬೆಳ್ಳಿ – ಬಂಗಾರ (Gold – Silver) ದ ಬೆಲೆ ಗಗನಕ್ಕೇರಿದೆ. ಈ ಹಿಂದೆ ಜನ್ರು ಚಿನ್ನ ಖರೀದಿ ಸಾಧ್ಯವಿಲ್ಲ ಅಂತ ಬೆಳ್ಳಿ ಆಭರಣ, ವಸ್ತುಗಳನ್ನು ಖರೀದಿ ಮಾಡ್ತಾ ಇದ್ರು. ಆದ್ರೆ ಈಗ ಬೆಳ್ಳಿ ಬೆಲೆ ಕೂಡ ಆಕಾಶದೆತ್ತರಕ್ಕೆ ಏರಿದೆ. ಬೆಳ್ಳಿ ಹಾಗೂ ಬಂಗಾರ ಎರಡನ್ನೂ ಖರೀದಿ ಮಾಡೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬಂಗಾರದಂತೆ ಬೆಳ್ಳಿಗೆ ಕೂಡ ಭಾರತದಲ್ಲಿ ವಿಶೇಷ ಮಹತ್ವವಿದೆ. ಪೂಜೆಗಳಲ್ಲಿ ಬೆಳ್ಳಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತೆ. ದೇವರ ಪೂಜೆ, ದೇವರ ಆಭರಣಗಳನ್ನು ಕೂಡ ಬೆಳ್ಳಿಯಲ್ಲಿ ಆಯ್ಕೆ ಮಾಡೋದು ಹೆಚ್ಚು. ಬರೀ ದೇವರಿಗೆ ಮಾತ್ರವಲ್ಲ ಮನುಷ್ಯರಿಗೂ ಈ ಲೋಹ ಸಾಕಷ್ಟು ಪ್ರಯೋಜನಕಾರಿ. ಆರ್ಥಿಕ ಸಂಕಷ್ಟ ಎದುರಿಸ್ತಿರೋರು ಬೆಳ್ಳಿ ಉಂಗುರ (silver ring) ಧರಿಸ್ಬೇಕು ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಬೆಳ್ಳಿ ಉಂಗುರ ಧರಿಸೋದ್ರಿಂದ ಮನಸ್ಸು ಶಾಂತವಾಗುವುದಲ್ದೆ ಸಂತೋಷಗೊಳ್ಳುತ್ತದೆ. ಸ್ಥಿರತೆ ಪಡೆಯುತ್ತದೆ. ಇದ್ರ ಜೊತೆ ನಿಮ್ಮ ಖಜಾನೆ ತುಂಬುತ್ತದೆ. ಆದ್ರೆ ಎಲ್ಲರೂ ಈ ಬೆಳ್ಳಿಯ ಉಂಗುರ ಧರಿಸೋದು ಸೂಕ್ತವಲ್ಲ.
ಪ್ರತಿಯೊಬ್ಬರ ರಾಶಿ, ನಕ್ಷತ್ರಗಳು ಬೇರೆಯಾಗಿರುತ್ತವೆ. ಎಲ್ಲರಿಗೂ ಬೆಳ್ಳಿ ಒಂದೇ ರೀತಿಯ ಪ್ರಭಾವ ಬೀರುವುದಿಲ್ಲ. ಹಾಗಾಗಿ ಬೆಳ್ಳಿಯನ್ನು ಎಲ್ಲರೂ ಧರಿಸಬಾರದು. ಜ್ಯೋತಿಷ್ಯದ ಪ್ರಕಾರ, 12 ರಾಶಿಗಳಲ್ಲಿ ಮೂರು ರಾಶಿಯವಿಗೆ ಮಾತ್ರ ಬೆಳ್ಳಿ ಉಂಗುರ ಅತ್ಯಂತ ಪ್ರಯೋಜನಕಾರಿಯಾಗಿದೆ. ಬೆಳ್ಳಿ ಜಲ ತತ್ವವನ್ನು ಹೊಂದಿದೆ. ಜಲ ತತ್ವ ಹೊಂದಿರುವ ರಾಶಿಯವರು ಮಾತ್ರ ಬೆಳ್ಳಿ ಅಭರಣ ಧರಿಸಬೇಕು. ಶಾಸ್ತ್ರದ ಪ್ರಕಾರ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಬೆಳ್ಳಿ ಉಂಗುರವನ್ನು ಧರಿಸಬೇಕು. ಈ ರಾಶಿಯವರಿಗೆ ಬೆಳ್ಳಿ ಉಂಗುರ ಅತ್ಯಂತ ಶುಭಕರವಾಗಿದೆ. ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯಲ್ಲದೆ ವೃಷಭ ಮತ್ತು ತುಲಾ ರಾಶಿಯವರು ಬೆಳ್ಳಿ ಉಂಗುರವನ್ನು ಧರಿಸಬಹುದು. ಇದು ನಿಮ್ಮ ಅದೃಷ್ಟ ಹೆಚ್ಚಿಸುತ್ತದೆ. ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದ್ರೆ ಅವರ ಮನಸ್ಸು ಶಾಂತಗೊಳ್ಳುತ್ತದೆ. ಏಕಾಗ್ರತೆ ಹೆಚ್ಚಾಗುತ್ತದೆ.
100 ವರ್ಷ ಬಳಿಕ ದೀಪಾವಳಿಯಂದು ಬುಧ ಮತ್ತು ಮಂಗಳ ಸಂಯೋಗ, ಈ ರಾಶಿಗೆ ಶುಭ ದಿನ ಪ್ರಾರಂಭ, ಅಪಾರ ಸಂಪತ್ತು
ಕೈ ಬೆರಳಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾತ್ರ ಉಂಗುರ ಧರಿಸೋದಿಲ್ಲ. ಬೆಳ್ಳಿ ಉಂಗುರಗಳು ನಿಮ್ಮ ಸೌಂದರ್ಯ ಹೆಚ್ಚಿಸುವ ಜೊತೆಗೆ ನಿಮ್ಮ ಭವಿಷ್ಯ ಬೆಳಗುತ್ತವೆ. ಬೆಳ್ಳಿ ಉಂಗುರಗಳು ಚಂದ್ರ, ಶನಿ ಮತ್ತು ಬುಧ ಗ್ರಹಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ನಿತ್ಯ ನೀವು ಬೆಳ್ಳಿ ಉಂಗುರ ಧರಿಸುತ್ತ ಬಂದ್ರೆ ನಿಮ್ಮ ಜಾತಕದಲ್ಲಿರುವ ಚಂದ್ರ ಬಲಶಾಲಿಯಾಗುತ್ತಾನೆ.
ಸೂರ್ಯ ತುಲಾ ರಾಶಿಯಲ್ಲಿ, ಈ ರಾಶಿಗೆ ಬರೀ ಕಷ್ಟ- ನಷ್ಟ, ಸ್ವಲ್ಪ ಎಚ್ಚರ..!
ಈ ರಾಶಿಯವರು ಬೆಳ್ಳಿ ಉಂಗುರ ಧರಿಸ್ಬೇಡಿ :
ಮೊದಲೇ ಹೇಳಿದಂಗೆ ಎಲ್ಲ ರಾಶಿಗೆ ಎಲ್ಲ ಲೋಹ ಹೊಂದಾಣಿಕೆಯಾಗೋದಿಲ್ಲ. ಮೇಷ ರಾಶಿಯವರು ಬೆಳ್ಳಿ ಉಂಗುರ ಧರಿಸಬಾರದು. ಇದ್ರಿಂದ ಅವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆರ್ಥಿಕ ಸಮಸ್ಯೆ ಎದುರಾಗುವ ಜೊತೆಗೆ ವೃತ್ತಿ ಜೀವನದಲ್ಲೂ ಸಮಸ್ಯೆ ಕಾಡುತ್ತದೆ. ಇದಲ್ದೆ ಸಿಂಹ ರಾಶಿಯವರು ಕೂಡ ಬೆಳ್ಳಿ ಉಂಗುರದಿಂದ ದೂರ ಇರೋದು ಒಳ್ಳೆಯದು. ಅಭಿವೃದ್ಧಿಗೆ ಅಡ್ಡಿಯಾಗುವುದಲ್ಲದೆ ಅಮೂಲ್ಯ ವಸ್ತುಗಳನ್ನು ಕಳೆದುಕೊಲ್ಳುವ ಸಾಧ್ಯತೆ ಇರುತ್ತದೆ. ಧನು ರಾಶಿಯವರು ಗುರು ಗ್ರಹದ ಜೊತೆ ಸಂಬಂಧ ಹೊಂದಿದ್ದಾರೆ. ಅವರಿಗೆ ಬಂಗಾರ ಉತ್ತಮ ಲೋಹವಾಗಿದೆ. ಇವರು ಬೆಳ್ಳಿ ಉಂಗುರ ಧರಿಸಿದ್ರೆ ದುರ್ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಹಣಕಾಸಿನ ವ್ಯವಹಾರದಲ್ಲಿ ಸಮಸ್ಯೆ ಕಾಡುತ್ತದೆ.