ಜಾತಕದಲ್ಲಿ ಗೃಹ ಮೈತ್ರಿತ್ವ ಚೆನ್ನಾಗಿದ್ದರೆ ಮಾತ್ರ ಮದುವೆ ಮಾತು ಮುಂದುವರೆಯಲಿ!

By Suvarna News  |  First Published Jun 8, 2022, 10:02 AM IST

ಜ್ಯೋತಿಷ್ಯದ ಪ್ರಕಾರ ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಜಾತಕ ಹೊಂದಾಣಿಕೆ ಯಾಗುವುದು ಅತ್ಯಂತ ಮುಖ್ಯವಾಗುತ್ತದೆ. ಜಾತಕವು ಸರಿ ಹೊಂದಿದರೆ ಮಾತ್ರ ಮದುವೆಯ ಮುಂದಿನ ಮಾತುಕತೆ ಆಗುತ್ತದೆ. ದಾಂಪತ್ಯ ಜೀವನದಲ್ಲಿ ಸುಖವಾಗಿರ ಬೇಕೆಂದರೆ ವಿವಾಹ ಪೂರ್ವದಲ್ಲಿ ಜಾತಕವನ್ನು ಪರಿಶೀಲಿಸಿ, ಹೊಂದಾಣಿಕೆ ಬಗ್ಗೆ ತಿಳಿಯುವುದು ಮೊದಲ ಹಂತವಾಗಿರುತ್ತದೆ.


ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಮಹತ್ವವಿದೆ. ವಿವಾಹದ (Marriage) ನಂತರ ದಂಪತಿ (Couple) ಸುಖವಾಗಿರಬೇಕೆಂದರೆ, ವಿವಾಹಕ್ಕೂ ಮುನ್ನ ಕೆಲವು ವಿಚಾರಗಳ ಬಗ್ಗೆ ಗಮನಹರಿಸಲೇ ಬೇಕಾಗುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ವಿವಾಹಕ್ಕೂ ಮುನ್ನ ಗಂಡು ಮತ್ತು ಹೆಣ್ಣು ಮದುವೆಯಾದರೆ ಹೊಂದಾಣಿಕೆ (Matching) ಆಗುವುದೇ ಇಲ್ಲವೇ ಎಂಬುದನ್ನು ಮೊದಲು ಪರಿಶೀಲಿಸಿಕೊಂಡು ನಂತರ ಮುಂದುವರಿಯಬೇಕೆಂದು ಹೇಳುತ್ತದೆ. ಹಾಗಾಗಿ ಮದುವೆಗೂ ಮುನ್ನ ವರ-ವಧುವಿನ (Bride - Groom) ಜಾತಕವನ್ನು ಗಮನಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾದ ಕೆಲವು ಮುಖ್ಯ ಸಲಹೆಗಳನ್ನು ಮದುವೆಗೂ ಪೂರ್ವದಲ್ಲಿ ಪಾಲಿಸಿದರೆ, ಮದುವೆಯ ನಂತರದ ಜೀವನ ಸುಖಮಯವಾಗಿರುತ್ತದೆ. 

ಜಾತಕ ಪರಿಶೀಲನೆ ಮಾಡುವ ಮೊದಲು 
ಮದುವೆಗೆ ಮೊದಲು ಗಂಡು ಮತ್ತು ಹೆಣ್ಣಿನ ವಯಸ್ಸಿನ ಅಂತರ ಎಷ್ಟಿದೆ ಎಂಬುದನ್ನು ತಿಳಿಯಬೇಕು. ಹುಡುಗಿಯ ವಯಸ್ಸು ಗಂಡಿನ ವಯಸ್ಸಿಗಿಂತ ಕಡಿಮೆ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಗಂಡು ಅಥವಾ ಹೆಣ್ಣಿನ ಆರ್ಥಿಕ ಸ್ಥಿತಿಯ (Economic status) ಬಗ್ಗೆ ಇಬ್ಬರಿಗೂ ತಿಳಿದಿರಬೇಕು. ಅದಾದ ನಂತರವೂ ಮದುವೆಗೆ ಸಮ್ಮತಿಸಿದ್ದರೆ ಮಾತ್ರ ಮುಂದುವರೆಯಬೇಕು. ಇಲ್ಲದಿದ್ದಲ್ಲಿ ಮುಂದೆ ಇದರಿಂದಲೇ ಕಲಹಗಳು ಬರುವ ಸಾಧ್ಯತೆ ಇರುತ್ತದೆ. ಮದುವೆಯಾಗುವ ಹುಡುಗ ಮತ್ತು ಹುಡುಗಿಯ ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ (Health) ಬಗ್ಗೆ ತಿಳಿದಿರುವುದು ಮುಖ್ಯ. ಮದುವೆಯ ನಂತರದಲ್ಲಿ ಸಮಸ್ಯೆಗಳು ಬಂದರೆ ಅದನ್ನು ಸುಲಭವಾಗಿ ಪರಿಹರಿಸಲು ಅನುಕೂಲವಾಗುತ್ತದೆ.

ರಾಹು ಗ್ರಹ ಪರಿವರ್ತನೆ - ಈ 3 ರಾಶಿಯವರಿಗೆ ಈ ವರ್ಷವಿಡೀ ಭಾರಿ ಧನಲಾಭ!

ಗುಣ ಹೊಂದಾಣಿಕೆ ಮುಖ್ಯ
ಆರ್ಥಿಕ ಸ್ಥಿತಿ, ಮನೆತನ ಮತ್ತು ಆರೋಗ್ಯ ವಿಷಯಗಳ ಬಗ್ಗೆ ತಿಳಿದ ನಂತರ ಜಾತಕ ಹೊಂದಾಣಿಕೆಯನ್ನು ಪರಿಶೀಲಿಸಲಾಗುತ್ತದೆ. ವಧು–ವರರ ಜಾತಕ ಹೊಂದಿಸುವಾಗ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಹೊಂದಿದರೆ ಶುಭವೆಂದೇ ಪರಿಗಣಿಸಲಾಗುತ್ತದೆ. ಗಂಡು-ಹೆಣ್ಣಿನ ರಾಶಿಯನ್ನು ಹೊಂದಿಸುವುದು ಮುಖ್ಯವಾಗುತ್ತದೆ. ರಾಶಿ ಹೊಂದಾಣಿಕೆಯಲ್ಲಿ ವರ ಮತ್ತು ವಧು ಕ್ರಮವಾಗಿ ಅಗ್ನಿ ಹಾಗೂ ವಾಯು ತತ್ತ್ವ, ಭೂಮಿ ಮತ್ತು ಜಲ ತತ್ತ್ವದವರಾಗಿದ್ದರೆ ವಿವಾಹ ಜೀವನದಲ್ಲಿ ಸಾಮರಸ್ಯತೆ ಇರುತ್ತದೆ. ಜಾತಕ ಹೊಂದಾಣಿಕೆಯಲ್ಲಿ ಗಣ ಮೈತ್ರಿ ಮತ್ತು ನಾಡಿಕೂಟದ ದೋಷವಿರಬಾರದು (Dosha).

ರಾಶಿ ಹೊಂದಾಣಿಕೆಯ ಕ್ರಮ
ಗಂಡು-ಹೆಣ್ಣಿನ ರಾಶಿಯ (Zodiac) ಹೊಂದಾಣಿಕೆಯು ವಿವಾಹ ಬಳಿಕ ದಾಂಪತ್ಯ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ವರ ಮತ್ತು ವಧುವಿನ ರಾಶಿಯು ಒಂದೇ ಆಗಿದ್ದಲ್ಲಿ, ಪರಸ್ಪರ ಸಂಬಂಧ ಮಧುರವಾಗಿರುತ್ತದೆ. ಇಬ್ಬರ ರಾಶಿಯು ಒಬ್ಬರಿಂದ ಇನ್ನೊಬ್ಬರಿಗೆ ನಾಲ್ಕನೇ ಮತ್ತು ಹತ್ತನೆಯದಾಗಿದ್ದರೆ ಇಂಥವರ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಮೂರನೇ ಮತ್ತು ಹನ್ನೊಂದನೇ ರಾಶಿಯಾಗಿದ್ದರೆ ವೈವಾಹಿಕ ಜೀವನದಲ್ಲಿ ಹಣದ ಕೊರತೆ ಕಾಡುವುದಿಲ್ಲ. 

ಹುಡುಗ ಮತ್ತು ಹುಡುಗಿಯ ಜಾತಕದಲ್ಲಿ ಆರು, ಎಂಟು ಮತ್ತು ಹನ್ನೆರಡನೆ ಮನೆಯಲ್ಲಿ ಒಂದೇ ರಾಶಿ ಆಗಿರಬಾರದು ಎಂಬುದನ್ನು ಸರಿಯಾಗಿ ಗಮನಿಸಿಕೊಳ್ಳಬೇಕು. ಇಬ್ಬರ ರಾಶಿ ಮತ್ತು ಲಗ್ನ ಒಂದೇ ಆಗಿದ್ದರೆ ದಾಪಂತ್ಯ ಜೀವನ (Married life) ಸುಖವಾಗಿರುತ್ತದೆ ಎನ್ನುವ ಮಾತು ನಿಜವೇ ಆಗಿದ್ದರೂ ಇದರಲ್ಲೂ ಬೇರೆ ಕೆಲವು ಅಂಶಗಳನ್ನು ತೆಗೆದುಹಾಕಲು ಆಗುವುದಿಲ್ಲ. ರಾಶಿ ಒಂದೇ ಆಗಿದ್ದರೆ ನಕ್ಷತ್ರ ಬೇರೆ ಬೇರೆ ಆಗಿರಬೇಕು. ನಕ್ಷತ್ರವೂ ಒಂದೇ ಆಗಿದ್ದಲ್ಲಿ ಕೊನೆ ಪಕ್ಷ ಪಾದ ಭೇದ ಇರಲೇಬೇಕು. ಇಲ್ಲವಾದಲ್ಲಿ ವಿವಾಹ ನಂತರದ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು.

ಭಾನುವಾರ, ಏಕಾದಶಿ ದಿನ ತುಳಸಿಗೆ ನೀರು ಹಾಕಬಾರದು, ಏಕೆ ಗೊತ್ತಾ?

ದೋಷ ವಿಚಾರಗಳು (Dosha)
ಜಾತಕ ಹೊಂದಾಣಿಕೆ ಮಾಡುವಾಗ ಅದರಲ್ಲಿರುವ ದೋಷಗಳ ಬಗ್ಗೆ ತಿಳಿದು ಕೊಳ್ಳಬೇಕಾಗುತ್ತದೆ. ಹುಡುಗಿಯ ಜಾತಕದಲ್ಲಿ ವೈಧವ್ಯ ಯೋಗ, ವ್ಯಭಿಚಾರ ಯೋಗ, ನಿಸ್ಸಂತಾನ ಯೋಗ, ಮೃತ್ಯು ಯೋಗ ಮತ್ತು ದರಿದ್ರ ಯೋಗವಿದ್ದಲ್ಲಿ ಜ್ಯೋತಿಷ್ಯದ ಪ್ರಕಾರ ವೈವಾಹಿಕ ಜೀವನಕ್ಕೆ ಇದು ಶುಭವಲ್ಲವೆಂದೇ ನಿಶ್ಚಯಿಸಲಾಗುತ್ತದೆ. ಹುಡುಗನ ಜಾತಕದಲ್ಲಿ ಅಲ್ಪಾಯು ಯೋಗ, ನಪುಂಸಕ ಯೋಗ, ವ್ಯಭಿಚಾರ ಯೋಗ, ಬುದ್ಧಿಭ್ರಮಣೆ ಯೋಗ ಮತ್ತು ಪತ್ನಿ ನಾಶದಂತ ಯೋಗಗಳಿದ್ದರೆ ಗೃಹಸ್ಥ ಜೀವನಕ್ಕೆ ಇದು ಸರಿಬರುವುದಿಲ್ಲ ಅಶುಭವೆಂದೇ ಹೇಳಲಾಗುತ್ತದೆ.

ವಧುವಿನ ಜಾತಕದಲ್ಲಿ ವಿಷ ಕನ್ಯೆಯ ಯೋಗವಿದ್ದಲ್ಲಿ ದಾಂಪತ್ಯ ಜೀವನವು ಸುಖವಾಗಿರುವಿದಿಲ್ಲವೆಂಬ ನಂಬಿಕೆ ಜ್ಯೋತಿಷ್ಯದಲ್ಲಿ ಇದೆ. ಆದರೆ ಕೆಲವು ಬಾರಿ ಜಾತಕದಲ್ಲಿ ದೋಷಗಳಿದ್ದರೂ ಅದರ ಪ್ರಭಾವ (Effect) ತೀರಾ ಕಡಿಮೆ ಇದ್ದಲ್ಲಿ ಅಥವಾ ಜನ್ಮ ಕುಂಡಲಿಯನ್ನು ಬಿಟ್ಟು ನವಮಾಂಶ ಕುಂಡಲಿ ಮತ್ತು ಚಂದ್ರ ಕುಂಡಲಿಯನ್ನು ನೋಡಿ ಅದರಲ್ಲಿ ಸರಿಹೊಂದಿದರೆ ಮದುವೆ ಮಾಡಬಹುದಾಗಿದೆ.

Tap to resize

Latest Videos

 

click me!