ಮನೆಯಲ್ಲಿ ಗಂಡ ಹೆಂಡತಿ ಜಗಳ ವಿಪರೀತವಾಗಿದ್ದರೆ ನೆಮ್ಮದಿ ಮರೀಚಿಕೆಯೇ ಸರಿ. ಇಬ್ಬರ ನಡುವೆ ಹೊಂದಾಣಿಕೆ, ಪ್ರೀತಿ ಹೆಚ್ಚಿಸಲು ಜ್ಯೋತಿಷ್ಯದ ಈ ಮಾರ್ಗಗಳನ್ನು ಅನುಸರಿಸಿ.
ಪತಿ ಪತ್ನಿಯ ಸಂಬಂಧ(relationship) ಬಹಳ ವಿಶೇಷವಾದ ಹಾಗೂ ದೈವಿಕ ಸಂಬಂಧವಾಗಿದೆ. ಅದರಲ್ಲಿ ಪ್ರೀತಿ, ಹೊಂದಾಣಿಕೆ ಇದ್ದರೆ ಏನೇ ಕಷ್ಟಗಳೆದುರಾದರೂ ಆರಾಮಾಗಿ ಎದುರಿಸಿ ಬಿಡಬಹುದು. ಆದರೆ ವಿಪರ್ಯಾಸವೆಂದರೆ ಇಂದಿನ ಬಹುತೇಕ ಜೋಡಿಗಳಿಗೆ ಈ ಸಂಪೂರ್ಣ ಪ್ರೀತಿಯಲ್ಲೇ ಮುಳುಗುವ ಜೀವನದ ಅನುಭವವೇ ಇರುವುದಿಲ್ಲ. ಮದುವೆಯಾದಾಗಿಂದಲೂ ಬರೀ ಜಗಳ, ವಾದಗಳಲ್ಲೇ ದಿನ ಕಳೆಯುತ್ತಿರುತ್ತಾರೆ. ಇಬ್ಬರಲ್ಲೊಬ್ಬರೂ ಸೋಲಲು ಸಿದ್ಧರಿರುವುದಿಲ್ಲ, ಹೊಂದಾಣಿಕೆ ಸ್ವಭಾವದವರಲ್ಲ, ಸ್ವಾರ್ಥ ಪ್ರೀತಿಗಿಂತ ಹೆಚ್ಚಾಗುತ್ತದೆ. ಇದರಿಂದ ಮದುವೆ ಎಂದರೆ ತಲೆನೋವು ಎನಿಸಿಬಿಡುತ್ತದೆ.
ಮದುವೆ(marriage)ಗೂ ಮೊದಲು ಮುಂದಿನ ಜೀವನದ ಕುರಿತು ಕಂಡ ಕನಸುಗಳೆಲ್ಲ ನಂತರದಲ್ಲಿ ಕೇವಲ ಕಲ್ಪನೆಗಷ್ಟೇ ಮೀಸಲು ಎಂಬಂತಾಗುತ್ತದೆ. ಒಟ್ನಲ್ಲಿ ಒಬ್ಬೊಬ್ಬ ದಂಪತಿಗೆ ಒಂದಿಲ್ಲೊಂದು ಕಾರಣದಿಂದಾಗಿ ವೈವಾಹಿಕ ಜೀವನ ಕಷ್ಟವೆನಿಸರಾರಂಭಿಸುತ್ತದೆ.
ಸಂಬಂಧದಲ್ಲಿ ಬಂಧವನ್ನು ಕಾಪಾಡಿಕೊಳ್ಳಲು, ಎರಡೂ ಕಡೆಯಿಂದ ಪ್ರಯತ್ನಗಳು ಬೇಕಾಗುತ್ತವೆ. ಜೀವನ ಸುಖಮಯವಾಗಿರಬೇಕೆಂದರೆ ವಿವಿಧ ಅಂಶಗಳ ಕಡೆಗೆ ಜೋಡಿಯು ಕಾಳಜಿ ವಹಿಸಬೇಕು. ಎಲ್ಲಕ್ಕಿಂತ ಮೊದಲು ಸರಿಯಾಗುವ ಮನಸ್ಸಿರಬೇಕು. ತಪ್ಪು ಇಬ್ಬರ ಕಡೆಯಿಂದಲೂ ಇರುತ್ತದೆ ಎಂಬುದನ್ನು ಅರಿಯುವ ಪ್ರಬುದ್ಧತೆ ಇರಬೇಕು. ನಿಮ್ಮಿಬ್ಬರ ನಡುವೆ ಪ್ರೀತಿ ಕಡಿಮೆಯಾಗುತ್ತಿದೆ ಎನಿಸಿದರೆ ಮೊದಲು ನಿಮ್ಮ ಜಾತಕ(horoscope)ವನ್ನು ತೋರಿಸಿ ಕಾರಣಗಳನ್ನು ತಿಳಿದುಕೊಳ್ಳಿ. ನಂತರ ಪರಿಹಾರ ಮಾರ್ಗ ಹಿಡಿಯಿರಿ. ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಪತಿ ಪತ್ನಿಯ ನಡುವಿನ ಬಂಧ ಹೆಚ್ಚಿಸಲು ನೀಡುವ ಸಲಹೆಗಳಿವು. ನೀವೂ ಒಮ್ಮೆ ಇವನ್ನು ಅನುಸರಿಸಿ ನೋಡಿ.
ಕೆಲವೊಮ್ಮೆ ವಜ್ರ(Diamond)ವು ಪ್ರೀತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗುತ್ತದೆ. ಆದರೆ ಅದನ್ನು ಧರಿಸುವ ಮೊದಲು ಅದು ನಿಮಗೆ ಆಗುತ್ತದೆಯೇ ಎಂದು ತಿಳಿಯಲು ಜ್ಯೋತಿಷಿಯನ್ನು ಸಂಪರ್ಕಿಸಬೇಕು.
ಇಬ್ಬರ ಆಸಕ್ತಿಗೆ ಹೊಂದುವಂಥ ಹೂವಿನ ವಿನ್ಯಾಸದ ಬೆಡ್ ಶೀಟ್‌ಗಳನ್ನು ಬಳಸಿ.
ಮಲಗುವ ಮೊದಲು ಕೋಣೆಯಲ್ಲಿ ಕರ್ಪೂರ(Camphor)ವನ್ನು ಹಚ್ಚಿ.
ನಿಮ್ಮ ಕೋಣೆಯಲ್ಲಿ ಕನ್ನಡಿ(Mirror) ಇದ್ದರೆ ಮಲಗುವ ಮುನ್ನ ಅದರ ಮೇಲೆ ಬಟ್ಟೆಯನ್ನು ಹಾಕಿ.
ಮಲಗುವ ಕೋಣೆಯಲ್ಲಿ ದೇವರು ಅಥವಾ ದೇವತೆಯ ಯಾವುದೇ ಫೋಟೋವನ್ನು ಇಡಬೇಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.