ಇಲ್ಲಿನ ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇಗುಲದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಅಪರೂಪದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.05): ಇಲ್ಲಿನ ಪಣಿಯಾಡಿ (Paniyadi) ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇಗುಲದಲ್ಲಿ (Anantha Padmanabha Temple) ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಅಪರೂಪದ ಶ್ರೀನಿವಾಸ ಕಲ್ಯಾಣೋತ್ಸವ (Srinivasa Kalyanotsava) ನಡೆಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಕಲ್ಯಾಣೋತ್ಸವ ಜರುಗಿತು. ಉಡುಪಿಯ ಕಡಗೋಲು ಕೃಷ್ಣನನ್ನು ಅನ್ನಬ್ರಹ್ಮ ಅಂತಲೂ ಕರೀತಾರೆ. ತಿರುಪತಿ ತಿಮ್ಮಪ್ಪ ಕಾಂಚನ ಬ್ರಹ್ಮನಾಗಿ ವಿಶ್ವಮಾನ್ಯನಾಗಿದ್ದಾನೆ. ಎರಡು ವೈಷ್ಣವ ಕ್ಷೇತ್ರಗಳ ಸಮ್ಮಿಲನ ಹೊಸ ಧಾರ್ಮಿಕ ಸಮೀಕರಣವನ್ನೇ ಉಂಟುಮಾಡಿತು. ದೇವರು ಜನಸಾಮಾನ್ಯರಂತೆ ಭಕ್ತರ (Devotees) ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುವ ಕಲ್ಪನೆಯೇ ಒಂದು ಅದ್ಬುತ!
undefined
ಆನೆಗುಡ್ಡೆ ಕ್ಷೇತ್ರ ಸಿದ್ದಿವಿನಾಯಕ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು. ರಾಯಚೂರು ಶೇಷಗಿರಿದಾಸ್ ಬೆಂಗಳೂರು ಮತ್ತು ಹರಿಚಂದನ್, ವೆಂಕಟೇಶ ತಿರುಪತಿ ಅವರ ಹಿನ್ನೆಲೆ ಗಾಯನದಲ್ಲಿ ಕಲ್ಯಾಣ ಉತ್ಸವ ವೈಭವದಿಂದ ಜರುಗಿತು. ವೈವಿಧ್ಯಮಯ ಪುಷ್ಪಗಳಿಂದ ಅಲಂಕರಿಸಿದ ಆಕರ್ಷಕ ವೇದಿಕೆಯಲ್ಲಿ ಕಲ್ಯಾಣೋತ್ಸವ ನಡೆಯಿತು. ಪುರೋಹಿತ ವರ್ಗ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟಿತು. ಈ ವೇಳೆ ಭಕ್ತಿಸುಧೆಯ ನಿನಾದ ಹಿತವಾದ ವಾತಾವರಣ ಸೃಷ್ಟಿಸಿತು. ವೇದವಿದ್ವಾಂಸರ ವೇಧಘೋಷ, ಭಜನಾತಂಡಗಳ ಭಕ್ತಿಪೂರ್ಣ ಭಜನೆ, ಚಂಡೆ ವಾದ್ಯಗಳ ನಿನಾದದಿಂದ ಅಕ್ಷರಷಃ ಭಾವಪೂರ್ಣ ಸನ್ನಿವೆಶ ನಿರ್ಮಾಣವಾಯ್ತು.
Udupi: ವಯಸ್ಸಿಗೆ ಡೋಂಟ್ ಕೇರ್ ಹೇಳಿ ಡಾಕ್ಟರೇಟ್ ಪಡೆದ ಮಹಿಳೆ
ಶ್ರೀನಿವಾಸ ಕಲ್ಯಾಣದ ವೈಭವವೇ ಹಾಗೆ, ಒಂದಕ್ಕಿಂತ ಒಂದು ವಿಶಿಷ್ಟ. ರಕ್ಷಾಬಂಧನ, ಪುಣ್ಯಾಹವಾಚನ, ಅಗ್ನಿಪ್ರತಿಷ್ಟೆ, ಗೋತ್ರೋಚ್ಚಾರ, ವನಮಾಲಾದಾರಣ, ವರೋಪಚಾರ, ಮಾಂಗಲ್ಯ ವಸ್ತ್ರ ಧಾರಣೆ, ಕನಕಾಭಿಷೇಕ ಹೀಗೆ ಪ್ರತಿಯೊಂದು ಆಚರಣೆಯಲ್ಲೂ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ದಾಸ ಸಂಗೀತಕ್ಕೆ ಕೈ ಚಪ್ಪಾಳೆಯ ಮೂಲಕ ಧ್ವನಿಗೂಡಿಸಿದರು. ಕಲ್ಯಾಣದ ಮಹತ್ವದ ಘಟ್ಟವಾದ ತಾಳಿ ಕುಟ್ಟುವ ಶುಭ ವೇಳೆಯಲ್ಲಂತೂ ಭಕ್ತರು ಹರೇ ಶ್ರೀನಿವಾಸ ಎಂಬ ಘೋಷಣೆಯೊಂದಿಗೆ ಪರಿಸರದಲ್ಲಿ ಹೊಸಮಿಂಚು ಹರಿಸಿದರು. ತುಳುನಾಡ ಜನರಿಗೆ ತಿರುಪತಿ ತಿಮ್ಮಪ್ಪ ಮೂಲ ಆರಾಧ್ಯ ಅಂತಾರೆ. ಎಲ್ಲರಿಗೂ ತಿರುಪತಿಗೆ ಹೋಗೋಕಾಗಲ್ಲ. ಹಾಗಾಗಿ ದೇವರೇ ಇಳಿದು ಬಂದಾಗ ಕಣ್ಣುತುಂಬಿಕೊಳ್ಳಲು ಜನ ಮುಗಿಬಿದ್ದರು.
Udupi: ಖ್ಯಾತ ನಟಿ ಪೂಜಾ ಹೆಗ್ಡೆಗೆ ಸಿಕ್ತು ಕಾಪು ಮಾರಿಯಮ್ಮನ ಅಭಯ
ಭಗವಂತನ ಸೇವೆ ಮಾಡಲು ನಮ್ಮ ಪೂರ್ವಿಕರು ಅನೇಕ ಮಾಧ್ಯಮಗಳನ್ನು ಕಲ್ಪಿಸಿದ್ದಾರೆ. ಸ್ಮರಣೆ, ಕೀರ್ತನೆ, ಅರ್ಚನೆ, ಪಾದಸೇವೆಯ ಮೂಲಕ ದೇವರ ಸೇವೆ ಮಾಡುವ ಅವಕಾಶವಿದೆ. ಇಷ್ಟ ದೇವರ ಅನುಗ್ರಹ ಪ್ರಾಪ್ತಿಯೊಂದೇ ಎಲ್ಲಾ ಆಚರಣೆಗಳ ಮೂಲ ಆಶಯ. ಶ್ರೀನಿವಾಸ ಕಲ್ಯಾಣ ಅಂತಾದ್ದೇ ಒಂದು ಆಚರಣೆ. ಸ್ವಯಂ ವೆಂಕಟರಮಣನ ಕಲ್ಯಾಣೋತ್ಸವ ನಡೆಸಿ ಜಗತ್ತಿಗೆ ಕಲ್ಯಾಣವಾಗಲಿ ಅಂತ ಹಾರೈಸೋದು ಸಂಪ್ರದಾಯ. ಇದೇ ಉದ್ದೇಶದಿಂದ ಕಡಗೋಲು ಕೃಷ್ಣನ ಉಡುಪಿಯಲ್ಲಿಶ್ರೀನಿವಾಸ ಕಲ್ಯಾಣ ನಡೆಯಿತು. ಇಲ್ಲಿ ಕಲ್ಯಾಣ ಅನ್ನೋದು ಕೇವಲ ಸಂಕೇತ, ವೇದಿಕೆಯಲ್ಲಿ ನಡೆಯುವ ದೇವರ ಮದುವೆಯ ಆಶಯ ಲೋಕಕಲ್ಯಾಣ. ದೇವರ ಮದುವೆ ಮಾನವ ಸಹಜ ಆಚರಣೆ. ಈ ಮೂಲಕ ದೇವರು ಮತ್ತು ಭಕ್ತರ ಸಂಬಂಧವನ್ನು ಆತ್ಮೀಯವಾಗಿಸೋದು ಕಲ್ಯಾಣೋತ್ಸವದ ಚಮತ್ಕಾರ.