Aries Character Traits: ಮೇಷ ರಾಶಿಯ ಹುಡುಗ ನಿಮ್ಮವನಾದರೆ ಅವನ ಕುರಿತ ಈ 9 ವಿಷಯಗಳು ತಿಳಿದಿರಲಿ..

By Suvarna NewsFirst Published Feb 17, 2022, 5:27 PM IST
Highlights

ಮೇಷ ರಾಶಿಯ ಹುಡುಗರನ್ನು ನೀವು ಪ್ರೀತಿ ಮಾಡುತ್ತಿದ್ದರೆ ಅವರು ಹೇಗೆ? ಅವರ ವ್ಯಕ್ತಿತ್ವ ಎಂಥದ್ದು? ನೀವು ಹೊರಗೆ ಕಂಡಂತೆ ಒಳಭಾವದಲ್ಲಿ ಹೇಗಿರುತ್ತಾರೆ? ಒಮ್ಮೆ ಅವರು ನಿಮ್ಮನ್ನು ನಂಬಿದರೆ ಯಾವ ರೀತಿ ನೋಡಿಕೊಳ್ಳುತ್ತಾರೆ ಎಂಬಿತ್ಯಾದಿಗಳ ಬಗ್ಗೆ ನೋಡೋಣ.

ಲವ್, ಇಷ್ಕ್, ಮೊಹಬ್ಬತ್ (Love) ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಪ್ರೀತಿಯಲ್ಲಿ ಬೀಳದಿರುವವರಿಲ್ಲ. ಬಹುತೇಕ ಎಲ್ಲರೂ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ, ಆ ಪ್ರೀತಿ ದಕ್ಕುವುದು ಎಷ್ಟು ಮಂದಿಗೆ ಎಂಬುದು ತಿಳಿದಿರುವುದಿಲ್ಲ. ಇನ್ನು ಈಗಾಗಲೇ ಲವ್ ಮಾಡುತ್ತಿರುವ ಇಲ್ಲವೇ ಮುಂದೆ ಲವ್ ಮಾಡುವ ಹುಡುಗ ಮೇಷ ರಾಶಿಯವನಾದರೆ (Aries) ಅವನ ಬಗ್ಗೆ, ಅವನ ವ್ಯಕ್ತಿತ್ವದ ಬಗ್ಗೆ ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದ ಮೂಲಕವೂ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಮೇಷ ರಾಶಿಯ ಹುಡುಗರ ಬಗ್ಗೆ ನಿಮಗೆ ಗೊತ್ತಿರದ 9 ವಿಷಯಗಳನ್ನು ತಿಳಿಯಿರಿ...

1. ಆತ್ಮವಿಶ್ವಾಸಿ ವ್ಯಕ್ತಿತ್ವ (Confident personality)
ಮೇಷ ರಾಶಿಯವರ ವ್ಯಕ್ತಿತ್ವವೇ ಹಾಗೆ ಬಹಳ ಆಕರ್ಷಕ. ಅವರು ಮಾತು ಶುರುಮಾಡಿದರೆ ಇಡೀ ಕೋಣೆ ಕಿವಿಯಾಗಿರುತ್ತದೆ. ಎಷ್ಟೇ ಅಸಾಧ್ಯವೆನ್ನುವುದನ್ನೂ ತಮ್ಮ ನಾಯಕತ್ವದ ಕೌಶಲ್ಯಗಳ (Leadership Skill) ಮೂಲಕ ಮಾಡಿಬಿಡುತ್ತಾರೆ. ತನ್ನ ಮೇಲೆ ವಿಶ್ವಾಸವಿಡುವವಳನ್ನು (Trust) ತುಂಬಾ ಇಷ್ಟಪಡುತ್ತಾನೆ.

2. ಸ್ವತಂತ್ರ ಹಕ್ಕಿ! (Free bird)
ಮೇಷ ರಾಶಿಯ ವ್ಯಕ್ತಿಯು ಇನ್ನೊಬ್ಬರ ಹಂಗಿನಲ್ಲಿ ಇರಲು ಬಯಸಲಾರ. ಒಮ್ಮೆ ಕಮಿಟ್ ಆದರೆ ಸಾಕು ಅದಕ್ಕಾಗಿ ಅವನು ಎಷ್ಟು ದೂರಕ್ಕೂ ಹೋಗಬಲ್ಲನು. ಸ್ವತಂತ್ರವಾಗಿರಲು (To be independent) ಬಯಸುವ ಈ ವ್ಯಕ್ತಿ, ಒಂದು ಸಂಗತಿಯನ್ನು ಅಚೀವ್ (Achive) ಮಾಡಿದ ಮೇಲೆ ಮತ್ತೊಂದಕ್ಕೆ ಕೈ ಹಾಕಿಬಿಡುವ ಸಾಮರ್ಥ್ಯವನ್ನು (Capacity) ಹೊಂದಿದ್ದಾನೆ. ಹಾಗಾಗಿ ಅವನೊಂದಿಗೆ ಡೇಟಿಂಗ್ ಮಾಡುವಾಗ ಎಲ್ಲಾ ವಿಷಯಗಳನ್ನು ತಾಜಾ, ರೋಮಾಂಚಕ ಮತ್ತು ಹೊಸತನ್ನು ನೀಡಲು ಪ್ರಯತ್ನಿಸಿ. ಅದಕ್ಕೆ ಪ್ರತಿಯಾಗಿ ಆತ ನಿಮಗೆ ಅಷ್ಟೇ ನಿಷ್ಠೆ ಮತ್ತು ಪ್ರೀತಿಯನ್ನು ತೋರುತ್ತಾನೆ. 

3. ಹೃದಯವಂತರಿವರು..!
ಮೇಷ ರಾಶಿಯ ಪುರುಷರು ಹೃದಯಹೀನರು ಎಂದು ಅನೇಕ ಮಹಿಳೆಯರು (Women) ಭಾವಿಸುತ್ತಾರೆ. ಆದರೆ, ವಾಸ್ತವದಲ್ಲಿ ಹಾಗಲ್ಲ. ಅವರು ಓಪನಪ್ ಆಗಲು ಸಮಯ (Time) ತೆಗೆದುಕೊಳ್ಳುತ್ತಾರೆ. ಒಮ್ಮೆ ಅವರಲ್ಲೊಬ್ಬರು ನೀವೆಂದು ಭಾವಿಸಿದರೆ ನಿಮ್ಮ ಬಳಿ ಮುಕ್ತರಾಗಿಬಿಡುತ್ತಾರೆ. ಒಮ್ಮೆ ನಿಮ್ಮನ್ನು ನಂಬಿದರೆ ನಿಮಗೊಂದು ಒಳ್ಳೆಯ ಸಂಗಾತಿ ಸಿಕ್ಕಿದಂತೆ.

4. ಸೆಕ್ಸಿ ನೈಟ್ಸ್ ಅತ್ಯುತ್ತಮ (Best Sex Night)
ಮೇಷ ರಾಶಿಯವರು ಹಾಸಿಗೆಯಲ್ಲಿ (Bed) ಮಹಾಶೂರರು. ಅವರು ಭಾವೋದ್ರಿಕ್ತರಾಗುವುದು ಹೆಚ್ಚು. ತುಂಟ ನಗುವಿನೊಂದಿಗೆ ಕಲ್ಪನೆಗೂ ಮೀರಿ ಸಂಗಾತಿ ಜೊತೆಗೆ ಸೇರುವವರು. ಪಾರ್ಟನರ್ (Partner) ಜೊತೆಗೆ ಅತ್ಯುತ್ತಮವಾಗಿ ಸೆಕ್ಸ್ ಮಾಡುವ ಇವರು, ಅವರನ್ನು ತೃಪ್ತಿಪಡಿಸುತ್ತಾರೆ. 

ಇದನ್ನು ಓದಿ: Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

5. ಪ್ರಾಮಾಣಿಕ (Honest)
ಹೆಚ್ಚಿನ ಪುರುಷರು (Man) ತಮ್ಮ ಸಂಗಾತಿಗೆ ಸುಳ್ಳನ್ನು ಹೇಳುತ್ತಾರೆ. ಆದರೆ, ಮೇಷ ರಾಶಿಯವರು ಪ್ರಾಮಾಣಿಕರಾಗಿದ್ದು, ಇದ್ದ ಸತ್ಯವನ್ನು (Truth) ಇದ್ದಂತೆ ಹೇಳಿಬಿಡುತ್ತಾರೆ. ಹಾಗೇ ಸಂಗಾತಿಯಿಂದಲೂ ಬಯಸುತ್ತಾರೆ. 

6. ಆಶಾವಾದಿ, ಛಲವಾದಿ (Optimistic, persistent)
ಈ ರಾಶಿಯ ವ್ಯಕ್ತಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವವರು ಮೂರ್ಖರು. ಅವರಿಗೆ ಸವಾಲನ್ನೂ (Challenge)  ಹಾಕಬೇಡಿ. ಕಾರಣ, ಅವರು ಒಮ್ಮೆ ಸವಾಲು ಸ್ವೀಕರಿಸಿದರೆ ಅದನ್ನು ಮಾಡಿ ಗೆಲ್ಲುತ್ತಾರೆ. ಕಾರಣ, ಅವರಿಗೆ ಸೋಲುಪ್ಪುವುದು ಬಹಳವೇ ಕಷ್ಟ. ನೀವು ಎಷ್ಟು ಪ್ರೀತಿ (Love) ಕೊಡುತ್ತೀರೋ ಅದಕ್ಕಿಂತ ದುಪ್ಪಟ್ಟು ಪ್ರೀತಿ ಆತನಿಂದ ನಿಮಗೆ ಸಿಗಲಿದೆ. 

7. ಅಧಿಕಾರಯುತ ಮಾತು (Authoritative)
ಮೇಷ ರಾಶಿಯ ವ್ಯಕ್ತಿಗಳಿಗೆ ಸ್ವಲ್ಪ ಯಜಮಾನಿಕೆ ಜಾಸ್ತಿ. ಆದರೆ, ಅವರ ಉದ್ದೇಶ ಇನ್ನೊಬ್ಬರ ಮೇಲೆ ದಬ್ಬಾಳಿಕೆ ಮಾಡುವುದಲ್ಲ. ಮಾತಿನ ಭರದಲ್ಲಿ ತುಸು ಜೋರೇ ಹೇಳಬಹುದು. ಆದರೆ, ಅದು ಪ್ರೀತಿಯಿಂದ ಎಂಬುದನ್ನು ಮಾತ್ರ ಅರಿಯಿರಿ. ಅದನ್ನು ವೈಯಕ್ತಿಕವಾಗಿ (Personally) ತೆಗೆದುಕೊಳ್ಳಬೇಡಿ. 

8. ಪ್ರೀತಿ, ಅಸೂಯೆ (Love, jealousy)
ಮೇಷ ರಾಶಿಯ ವ್ಯಕ್ತಿಯು ಪ್ರೀತಿಸುತ್ತಿದ್ದಾನಾ ಇಲ್ಲವಾ ಎಂಬುದನ್ನು ತಿಳಿಯುವುದು ಬಹಳ ಸುಲಭ. ಕಾರಣ, ಅವರಿಗೆ ಅಸೂಯೆ ಹೆಚ್ಚು. ನೀವು ಇನ್ನೊಬ್ಬರ ಹತ್ತಿರ ಖುಷಿಯಿಂದಿದ್ದರೆ (Happy) ಸಹಿಸಲಾರರು. ಹಾಗಾಗಿ ಅವರ ಪ್ರೀತಿಯನ್ನು ಕಳೆದುಕೊಳ್ಳದಂತಿರಿ. 

ಇದನ್ನು ಓದಿ: Astro Planet: ಸಾಲ, ಉದ್ಯೋಗ ಹಿನ್ನಡೆ, ಚರ್ಮರೋಗಕ್ಕೆ ಕಾರಣ ಈ ಗ್ರಹ!

9. ತನ್ನ ಹುಡುಗಿ ಪರ ನಿಲ್ಲುವನು
ಮೇಷ ರಾಶಿಯವರಿಗೆ ತನ್ನವರು ಎಂದರೆ ಸಾಕು ಅವರ ಬೆನ್ನಿಗೆ ನಿಲ್ಲುತ್ತಾನೆ. ಸ್ನೇಹಿತರು, ಕುಟುಂಬದವರ ಸಹಿತ ತನ್ನ ಹುಡುಗಿಯ (Girl) ಪರವೂ ಮೊದಲು ನಿಲ್ಲುವವನು ಇದೇ ಹುಡುಗ. 

click me!