ಆಹಾರದಲ್ಲಿ ಕೂದಲು ಸಿಕ್ಕಿದರೆ ನಿಮಗೀ ದೋಷವಿದೆ ಎಂದರ್ಥ! ಬೇಗ ಪರಿಹಾರ ಕೈಗೊಳ್ಳಿ..

By Suvarna News  |  First Published Mar 19, 2022, 2:32 PM IST

ಆಹಾರದಲ್ಲಿ ಕೂಡಲು ಸಿಕ್ಕಿದರೆ ಕೆಲವರು ಊಟ ಬಿಟ್ಟೇ ಹೋಗುವುದಿದೆ. ಆದರೆ, ಎಂದಾದರೂ ನಮಗೇ ಏಕೆ ಆಹಾರದಲ್ಲಿ ಕೂದಲು ಸಿಕ್ಕಿತು ಎಂದು ಯೋಚಿಸಿದ್ದೀರಾ? ಆಹಾರದಲ್ಲಿ ಕೂದಲು ಸಿಕ್ಕರೆ ಅದು ನಿಮಗಿರುವ  ಈ ಒಂದು ದೋಷಕ್ಕೆ ಹಿಡಿದ ಕನ್ನಡಿ. ಕೂಡಲೇ ಪರಿಹಾರ ಮಾಡಿಕೊಳ್ಳದೇ ಹೋದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. 


ಕೆಲವರು ಆಹಾರ(food)ದಲ್ಲಿ ಕೂದಲು(hair) ಸಿಕ್ಕಿದಾಗ ಸಿಟ್ಟಿನಿಂದ ಊಟ ಬಿಟ್ಟು ಎದ್ದು ಹೋಗುವುದಿದೆ. ಮತ್ತೆ ಕೆಲವರು ಅದನ್ನು ತೆಗೆದಿಟ್ಟು ತಿನ್ನುತ್ತಾರೆ. ಮತ್ತೆ ಕೆಲವೊಮ್ಮೆ ಹೋಟೆಲ್ ಆಹಾರದಲ್ಲಿ ಕೂದಲು ಸಿಕ್ಕಿದರೆ ಅದನ್ನು ಬದಿಗಿಟ್ಟು ಹೊಸ ಆಹಾರ ತರಿಸಿಕೊಳ್ಳುತ್ತೇವೆ. ನೀವಿದನ್ನು ಗಮನಿಸಿರಬಹುದು, ಕೆಲವರಿಗೆ ಮಾತ್ರ ಅದೇಕೋ ಆಹಾರದಲ್ಲಿ ಪದೇ ಪದೆ ಕೂದಲು ಸಿಕ್ಕುತ್ತದೆ. ಅವರು ಅಡುಗೆ ಮಾಡಿದವರಿಗೆ ಬೈದು ಸುಮ್ಮನಾಗುತ್ತಾರೆ. ಆರೋಗ್ಯ(health)ದ ದೃಷ್ಟಿಯಿಂದಲೂ ಕೂದಲು ಹೊಟ್ಟೆಗೆ ಹೋಗುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇದರ ಹೊರತಾಗಿಯೂ, ಆಹಾರದಲ್ಲಿ ಕೂದಲು ಸಿಕ್ಕರೆ ನೀವದನ್ನು ಕಡೆಗಣಿಸಬಾರದು. ಏಕೆಂದರೆ, ಅದು ನಿಮಗಿರುವ ದೋಷವೊಂದನ್ನು ತಿಳಿಸುತ್ತಿದೆ. 

ಹೌದು, ಆಹಾರ ಎಂದರೆ ಅನ್ನಪೂರ್ಣೇಶ್ವರಿ ಎಂದು ಪೂಜಿಸುವವರು ನಾವು. ಅಂಥ ದೈವ ಸಮಾನ ಆಹಾರದಲ್ಲಿ ಕೆಟ್ಟದ್ದು, ಬೇಡದ್ದು ಎಂದುಕೊಂಡ ಕೂದಲು ಸಿಕ್ಕರೆ ಅದೇನು ಆಕಸ್ಮಿಕವಲ್ಲ. ಇಷ್ಟಕ್ಕೂ ಒಂದೋ ಎರಡೋ ಬಾರಿ ಅಪರೂಪಕ್ಕೆ ಕೂದಲು ಸಿಕ್ಕಿದಾಗ ಗಾಳಿಗೆ ಹಾರಿ ಬಂದಿದೆ ಎಂದು ಕಡೆಗಣಿಸಬಹುದು. ಅದಕ್ಕಿಂತ ಜಾಸ್ತಿ ಬಾರಿ ಆಹಾರದಲ್ಲಿ ಕೂದಲು ಸಿಕ್ಕಿದರೆ ಆಗ ನೀವು ಎಚ್ಚೆತ್ತುಕೊಳ್ಳಲೇಬೇಕು. ಏಕೆಂದರೆ ಇದು ನಿಮಗಿರುವ ಪಿತೃದೋಷ(Pitru Dosha)ವನ್ನು ಸಾರಿ ಹೇಳುತ್ತಿದೆ. ಅದರಲ್ಲೂ ಪಿತೃ ಪಕ್ಷದ ಸಮಯದಲ್ಲಿ ಆಹಾರದಲ್ಲಿ ಕೂದಲು ಸಿಕ್ಕಿದರೆ ನಿಮ್ಮ ಪೂರ್ವಜರು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದರ್ಥ.
ಅಂಥ ಪರಿಸ್ಥಿತಿಯಲ್ಲಿ, ಆಹಾರದಲ್ಲಿ ಕೂದಲು ಸಿಕ್ಕಿದ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Tap to resize

Latest Videos

Manikarnika Ghat: ಇಲ್ಲಿ ಬಣ್ಣಗಳಿಂದಲ್ಲ, ಚಿತಾಭಸ್ಮದಿಂದ ಆಡುತ್ತಾರೆ ಹೋಳಿ!

ಪಿತೃ ದೋಷವಿದ್ದರೆ

  • ಪಿತೃ ದೋಷದಿಂದಾಗಿ ವ್ಯಕ್ತಿಗೆ ಮಕ್ಕಳ ಸುಖ ಸಿಗುವುದಿಲ್ಲ. ಮಗು(child)ವಿದ್ದರೂ ಆಕೆ ಅನಾರೋಗ್ಯದಿಂದ ಬಳಲುತ್ತಾಳೆ. ಕೆಲವೊಮ್ಮೆ ಮಕ್ಕಳು ಅಂಗವಿಕಲರು, ಕಲಿಕೆಯಲ್ಲಿ ಹಿಂದುಳಿದವರು ಅಥವಾ ಗುಣರಹಿತರಾಗಿರುತ್ತಾರೆ. ಇನ್ನು, ಹುಟ್ಟಿದ ಕೂಡಲೇ ಮಗುವಿನ ಸಾವು ಕೂಡ ಪಿತೃ ದೋಷದಿಂದ ಉಂಟಾಗುತ್ತದೆ. 
  • ಪಿತೃ ದೋಷವಿದ್ದಾಗ ಕುಟುಂಬ(family)ದಲ್ಲಿ ಆಗಾಗ ತೊಂದರೆ, ಕುಟುಂಬದ ಸದಸ್ಯರಲ್ಲಿ ಒಗ್ಗಟ್ಟು ಇರುವುದಿಲ್ಲ. ಕುಟುಂಬದಲ್ಲಿ ಯಾರಾದರೂ ಯಾವಾಗಲೂ ಅಸ್ವಸ್ಥರಾಗಿರುತ್ತಾರೆ.
  • ಪಿತೃ ದೋಷದಿಂದಾಗಿ ಕುಟುಂಬ ಸದಸ್ಯರ ವಿವಾಹ(marriage)ದಲ್ಲಿಯೂ ತೊಂದರೆಗಳು ಉಂಟಾಗುತ್ತವೆ. ಬಹಳಷ್ಟು ಹುಡುಕಾಡಿದ ಬಳಿಕ ಮದುವೆಯಾದರೂ ಅಂಥವರ ದಾಂಪತ್ಯ ಜೀವನ ಚೆನ್ನಾಗಿರುವುದಿಲ್ಲ. ಕೆಲವೊಮ್ಮೆ ವಿಚ್ಚೇದನ(divorce)ವೂ ಆಗುವಷ್ಟು ಪರಿಸ್ಥಿತಿ ಹದಗೆಡುತ್ತದೆ.
  • ಪಿತೃ ದೋಷದಿಂದಾಗಿ, ಕುಟುಂಬ ಸದಸ್ಯರ ಮೇಲೆ ಫ್ಯಾಂಟಮ್ ತಡೆಗೋಡೆಯ ಪರಿಣಾಮವು ಹೆಚ್ಚಾಗಿ ಉಳಿಯುತ್ತದೆ.

    Uttara Kannada: ಹೋಳಿಯ ಸಂಭ್ರಮ ಹೆಚ್ಚಿಸಿದ ಹಾಲಕ್ಕಿ ಸುಗ್ಗಿ

ಇಂಥ ಪಿತೃ ದೋಷ ಯಾರಿಗಾದರೂ ಇದ್ದಾಗ ಅದರ ನಿವಾರಣೆ ಹೇಗೆ ತಿಳಿಯೋಣ. 

  • ನಿಮ್ಮ ಪೂರ್ವಜರ(ancestor) ಮರಣದ ದಿನದಂದು, ಬ್ರಾಹ್ಮಣರನ್ನು ಗೌರವಿಸಿ ಆಹಾರವನ್ನು ನೀಡಿ.
  • ಮನೆಯ ಸಮೀಪದಲ್ಲಿ ಅಶ್ವತ್ಥ ಮರ(peepal tree)ವಿದ್ದರೆ, ಅದಕ್ಕೆ ಪ್ರತಿ ದಿನ ನೀರು ಕೊಡಿ.
  • ಸಂಜೆ ಮನೆಯ ದಕ್ಷಿಣ(South) ದಿಕ್ಕಿಗೆ ದೀಪವನ್ನು ಹಚ್ಚಿ. ಪ್ರತಿ ದಿನ ಸಾಧ್ಯವಾಗದಿದ್ದರೆ ಪಿತೃ ಪಕ್ಷದ ಸಮಯದಲ್ಲಂತೂ ಈ ಕೆಲಸವನ್ನು ಮಾಡಬೇಕು.
  • ಪಿತೃ ದೋಷವನ್ನು ತೊಡೆದುಹಾಕಲು, ಪೂರ್ವಜರ ಫೋಟೋ(Photo)ವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಿಸಿ ಮತ್ತು ಪ್ರತಿ ದಿನ ಅವರ ಚಿತ್ರಕ್ಕೆ ಮಾಲೆಯನ್ನು ಅರ್ಪಿಸಿ ಮತ್ತು ಭಕ್ತಿಯಿಂದ ಕೈ ಮುಗಿದು ಪೂರ್ವಜರ ಆಶೀರ್ವಾದ ಪಡೆಯಿರಿ. ಪೂರ್ವಜರ ಆಶೀರ್ವಾದದಿಂದ ಪಿತೃ ದೋಷವು ಕಡಿಮೆಯಾಗುತ್ತಾ ಹೋಗುತ್ತದೆ.
  • 'ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಚ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್' ಎಂಬ ಮಂತ್ರವನ್ನು ಶಿವನ ಮೂರ್ತಿಯ ಮುಂದೆ ಪಠಿಸಬೇಕು ಮತ್ತು ಪಿತೃ ದೋಷವನ್ನು ತೊಡೆದು ಹಾಕಲು ಮತ್ತು ಪೂರ್ವಜರ ಮೋಕ್ಷಕ್ಕಾಗಿ ಪ್ರಾರ್ಥಿಸಬೇಕು.
  • ಈ ಎಲ್ಲ ಪರಿಹಾರಗಳ ಜೊತೆಗೆ, ನೀವು ಅನುಭವಿ ಜ್ಯೋತಿಷಿಗಳ ಸಲಹೆಯನ್ನು ಸಹ ತೆಗೆದುಕೊಳ್ಳುವುದು ಉತ್ತಮ. 
click me!