ತಾಮ್ರದ ಆಭರಣ ಧರಿಸುವುದು ಕೆಲ ರಾಶಿಗಳಿಗೆ ಬಹಳ ಒಳ್ಳೆಯದು. ಅವರ ಜಾತಕದಲ್ಲಿ ಸೂರ್ಯ ಹಾಗೂ ಮಂಗಳನನ್ನು ಬಲಪಡಿಸುತ್ತದೆ ತಾಮ್ರ. ಇದನ್ನು ಹೇಗೆ ಎಲ್ಲಿ ಯಾರು ಧರಿಸಬೇಕೆಂಬ ವಿವರ ನೋಡೋಣ
ಹಿಂದೂ ಧರ್ಮದಲ್ಲಿ ಎಲ್ಲ ಲೋಹ(metal)ಗಳಿಗೂ ಅದರದೇ ಆದ ಸ್ಥಾನಮಾನವಿದೆ. ನಾವು ಚಿನ್ನ(gold), ಬೆಳ್ಳಿ, ತಾಮ್ರ ಸೇರಿದಂತೆ ಸಾಕಷ್ಟು ಲೋಹಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸುತ್ತೇವೆ. ಇವುಗಳಲ್ಲಿ ಬಹುತೇಕವನ್ನು ಆಭರಣವಾಗಿಯೂ ಧರಿಸುತ್ತೇವೆ. ಈ ಲೋಹಗಳು ಕೂಡಾ ಗ್ರಹಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಮಗೆ ಗೊತ್ತೇ? ಹೌದು, ಜ್ಯೋತಿಷ್ಯ ಶಾಸ್ತ್ರ(astrologyದ ಪ್ರಕಾರ ಎಲ್ಲ ಲೋಹಗಳೂ ಕೆಲವೊಂದು ಗ್ರಹಕ್ಕೆ ಸಂಬಂಧಿಸಿರುವುದರಿಂದ ಅವುಗಳನ್ನು ಯಾರೆಂದರೆ ಅವರು ಧರಿಸುವಂತಿಲ್ಲ. ರಾಶಿ, ನಕ್ಷತ್ರ, ಜಾತಕದ ಆಧಾರದ ಮೇಲೆ ಜ್ಯೋತಿಷಿಗಳು ಯಾರಿಗೆ ಯಾವ ಲೋಹ ಆಗಿಬರುತ್ತದೆ, ಯಾವುದು ಒಳಿತಾಗುವುದಿಲ್ಲ ಎಂಬುದನ್ನು ಹೇಳುತ್ತಾರೆ.
ಈಗ ತಾಮ್ರ(copper)ದ ವಿಷಯಕ್ಕೆ ಬರೋಣ. ತಾಮ್ರವು ಮಂಗಳಕರವಾದ ಲೋಹವಾಗಿದೆ. ಇದರಲ್ಲಿ ಬೆಂಕಿಯ ಅಂಶ ಜಾಸ್ತಿ ಇದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದು ಸೂರ್ಯ ಮತ್ತು ಮಂಗಳಕ್ಕೆ ಸಂಬಂಧಿಸಿದೆ. ಹಾಗಾಗಿ, ಪೂಜೆಯಲ್ಲೂ ತಾಮ್ರವನ್ನು ಬಳಸಲಾಗುತ್ತದೆ. ತಾಮ್ರದ ಲೋಹವನ್ನು ಬಳಸುವ ಮೊದಲು, ಅದರ ಪ್ರಮುಖ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ನಿಮ್ಮ ಸಣ್ಣದೊಂದು ತಪ್ಪಿಗೆ ದುಬಾರಿ ಬೆಲೆ ತೆರಬೇಕಾಗಬಹುದು. ಏಕೆಂದರೆ ತಾಮ್ರವು ಕೆಲ ರಾಶಿಯವರಿಗೆ ಆಗಿಬರುವುದಿಲ್ಲ, ಮತ್ತೆ ಕೆಲ ರಾಶಿಗಳಿಗೆ ಬಹಳ ಚೆನ್ನಾಗಿ ಆಗುತ್ತದೆ. ತಾಮ್ರವನ್ನು ಹೇಗೆ ಬಳಸಬೇಕು ನೋಡೋಣ.
ಆರೋಗ್ಯಕ್ಕೆ ಹಿತ
ತಾಮ್ರವು ನಮ್ಮ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುತ್ತದೆ. ಜೊತೆಗೆ ಜಾತಕದಲ್ಲಿ ಮಂಗಳನನ್ನು ಬಲಪಡಿಸಿ, ರಕ್ತ ಸಂಚಾರ(blood flow) ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ತಾಮ್ರದ ಉಂಗುರ ಧರಿಸುವುದರಿಂದ ಸೂರ್ಯ ಕೂಡಾ ಬಲವಾಗುತ್ತಾನೆ.
ಯಾವ ಬೆರಳಿಗೆ ಧರಿಸಬೇಕು?
ಶುದ್ಧ ತಾಮ್ರದ ಉಂಗುರವನ್ನು ಪುರುಷರು ಬಲ ಗೈಯ ಉಂಗುರ ಬೆರಳಿ(ring finger)ಗೆ ಧರಿಸಬೇಕು. ಮಹಿಳೆಯರು ಎಡಗೈಯ ಉಂಗುರ ಬೆರಳಿಗೆ ಧರಿಸಬೇಕು. ಭಾನುವಾರ ಬೆಳಗ್ಗೆ ಸ್ನಾನ ಮಾಡಿ 12 ಗಂಟೆಯೊಳಗೆ ಉಂಗುರದ ಮೇಲೆ ಗಂಗಾಜಲ ಪ್ರೋಕ್ಷಿಸಿ ಭಕ್ತಿಯಿಂದ ಕೈಗೆ ಧಾರಣೆ ಮಾಡಿಕೊಳ್ಳಬೇಕು. ಇದರಿಂದ ಜಾತಕದಲ್ಲಿ ಸೂರ್ಯ ಹಾಗೂ ಚಂದ್ರ ಇಬ್ಬರೂ ಬಲಗೊಳ್ಳುತ್ತಾರೆ. ಇದರಿಂದ ವ್ಯಕ್ತಿಯ ಆತ್ಮವಿಶ್ವಾಸ, ಧೈರ್ಯ, ಆರೋಗ್ಯ ಉತ್ತಮವಾಗುತ್ತದೆ. ಇದಲ್ಲದೆ, ತಾಮ್ರದ ಸೊಂಟದ ಚೈನ್ ಕೂಡಾ ಧರಿಸಬಹುದು ಎನ್ನುತ್ತಾರೆ ಜ್ಯೋತಿಷಿಗಳು. ತಾಮ್ರದ ನಾಣ್ಯವನ್ನು ಕತ್ತಿನ ಸುತ್ತ ಧರಿಸುವುದರಿಂದ ಅಪಘಾತಗಳನ್ನು(accidents) ತಡೆಯಬಹುದಾಗಿದೆ. ಕೈಗೆ ತಾಮ್ರದ ಬ್ರೇಸ್‌ಲೆಟ್ ಧರಿಸಿದರೆ ಹಲವು ಆರೋಗ್ಯ ಲಾಭಗಳಿವೆ.
Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!
ಈ ವಿಷಯಗಳ ಬಗ್ಗೆ ಗಮನ ಹರಿಸಿ
ತಾಮ್ರ ಹೆಚ್ಚು ಪ್ಯೂರ್ ಆಗಿದ್ದಷ್ಟೂ ಫಲಿತಾಂಶ ಹೆಚ್ಚಿರುತ್ತದೆ. ಇದಲ್ಲದೆ ತಾಮ್ರವನ್ನು ಚಿನ್ನದೊಂದಿಗೆ ಬೆರೆಸಿ ಧರಿಸುವುದು ಕೂಡಾ ಬಹಳ ಒಳ್ಳೆಯದಾಗಿದೆ. ಬಹಳ ಕೋಪಿಷ್ಠರು ತಾಮ್ರ ಧರಿಸುವುದರಿಂದ ಸಂಯ ಹೆಚ್ಚುತ್ತದೆ. ಇನ್ನು ಮೇಷ(Aries), ಸಿಂಹ(Leo) ಹಾಗೂ ಧನು(Sagittarius) ರಾಶಿಯವರಿಗೆ ತಾಮ್ರ ಬಹಳ ಶುಭವಾಗಿದೆ. ವೃಷಭ, ಕನ್ಯಾ ಮತ್ತು ಮಕರ ರಾಶಿಯವರು ತಾಮ್ರ ಧರಿಸಲೇಬಾರದು. ಉಳಿದೆಲ್ಲ ರಾಶಿಯವರಿಗೆ ತಾಮ್ರ ಸಾಮಾನ್ಯ ಆಭರಣ ಮಾತ್ರವಾಗಿರಲಿದೆ.
Chanakya Niti: ನಿಮ್ಮ ಇಂಥ ನಡತೆಯಿಂದಾಗಿ ಕುಟಂಬಕ್ಕೇ ಶತ್ರುವಾದೀರಿ, ಹುಷಾರ್!
ಆಧ್ಯಾತ್ಮಿಕ ಲಾಭಗಳು(Spiritual benefits)
ತಾಮ್ರವು ನಮ್ಮ ಇಂದ್ರಿಯಗಳನ್ನು ನಿಗ್ರಹಿಸಲು ಸಹಾಯಕವಾಗಿದೆ. ಕೋಪ, ಆತಂಕದತ್ತ ನಕಾರಾತ್ಮಕ ಭಾವನೆಗಳನ್ನು ದೂರವಿಡುತ್ತದೆ.
ಮನಸ್ಸನ್ನು ಆಧ್ಯಾತ್ಮಿಕವಾಗಿ ಎಚ್ಚರಿಸುತ್ತದೆ. ಸದಾ ಸಮಾಧಾನಕರವಾಗಿಯೂ, ಶಾಂತಚಿತ್ತರಾಗಿಯೂ ಇರುವಂತೆ ನೋಡಿಕೊಳ್ಳುತ್ತದೆ.
ಸೂರ್ಯ ಮತ್ತು ಮಂಗಳ ದೋಷವನ್ನು ತಡೆಯುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.