Vastu Tips: ಮನೆಯ ಈ ದಿಕ್ಕಿನಲ್ಲಿ ಔಷಧಗಳನ್ನಿಟ್ಟರೆ ಹೆಚ್ಚಲಿದೆ ಅನಾರೋಗ್ಯ!

By Suvarna News  |  First Published Mar 7, 2022, 4:20 PM IST

ಆರೋಗ್ಯವೇ ಭಾಗ್ಯ. ಎಲ್ಲಕ್ಕಿಂತ ಮೊದಲು ಆರೋಗ್ಯ. ಬಳಿಕ ಎಲ್ಲವೂ ಎಂಬ ಮಾತಿದೆ. ಆದರೆ, ಕೆಲವರಿಗೆ ಒಂದು ಬಾರಿ ಅನಾರೋಗ್ಯ ಉಂಟಾದರೆ ದೀರ್ಘ ಕಾಲದವರೆಗೆ ಆ ಬಾಧೆ ಕಾಡುತ್ತದೆ. ಇದಕ್ಕೆ ಹಲವಾರು ಕಾರಣಗಳಿರುತ್ತದೆ. ವಾಸ್ತು ದೋಷ ಸಹ ಒಂದು ಕಾರಣವಾಗಿದೆ. ಅಂದರೆ, ನೀವು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಔಷಧವನ್ನು ಇಡುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಈ ಬಗ್ಗೆ ನೋಡೋಣ.


ವಾಸ್ತು ಶಾಸ್ತ್ರವು (Vastu Shastra) ಜ್ಯೋತಿಷ್ಯ ಶಾಸ್ತ್ರದ (Astrology) ಮುಖ್ಯವಾದ ಭಾಗವಾಗಿದೆ. ವಾಸ್ತು ಶಾಸ್ತ್ರದ ನಿಯಮದಂತೆ ಎಲ್ಲವನ್ನೂ ಪಾಲಿಸಿದಲ್ಲಿ ಜೀವನದಲ್ಲಿ (Life) ನೆಮ್ಮದಿ (Comfort) ನೆಲೆಸುತ್ತದೆ. ವಾಸ್ತು ಪ್ರಕಾರ ಎಲ್ಲವೂ ಇದ್ದಲ್ಲಿ ಸಕಾರಾತ್ಮಕ (Positive) ಶಕ್ತಿಯ (Power) ಹರಿವು ಹೆಚ್ಚಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವನ್ನು ಇಡಲು ಅದರದ್ದೇ ಆದ ದಿಕ್ಕು (Direction) ಇರುತ್ತದೆ. ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ (Good Health) ತೆಗೆದುಕೊಳ್ಳುವ ಔಷಧಿಗಳನ್ನು ಇಟ್ಟುಕೊಳ್ಳಲು ಸಹ ಸರಿಯಾದ ದಿಕ್ಕನ್ನು ವಾಸ್ತು ಶಾಸ್ತ್ರ ತಿಳಿಸುತ್ತದೆ. 

ಜೀವನದಲ್ಲಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಆರೋಗ್ಯವೊಂದಿದ್ದರೆ ಎಲ್ಲವನ್ನೂ ಪಡೆದುಕೊಳ್ಳಬಹುದು. ಆದರೆ, ಕೆಲವೊಮ್ಮೆ ಅನಾರೋಗ್ಯ (Illness) ಉಂಟಾಗುತ್ತದೆ. ಅನಾರೋಗ್ಯ ಬಂದಾಗ ವೈದ್ಯರ (Doctor) ಬಳಿ ಹೋಗುತ್ತೇವೆ. ಅವರೂ ಸಹ ಚಿಕಿತ್ಸೆ ನೀಡುತ್ತಾರೆ. ಔಷಧಗಳನ್ನು (Medicine) ತೆಗೆದುಕೊಳ್ಳುತ್ತೇವೆ. ಆದರೆ, ಗುಣಮುಖರಾಗುವುದಿಲ್ಲ. ಇದಕ್ಕೆ ಮನೆಯ ವಾಸ್ತುದೋಷಗಳೂ ಕಾರಣವಾಗಿರುತ್ತದೆ. ಔಷಧಕ್ಕೂ ವಾಸ್ತುದೋಷವೇ ಎಂದು ಹುಬ್ಬೇರಿಸಬೇಡಿ. ಹೌದು. ಔಷಧಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಬೇಗ ಗುಣಮುಖರಾಗಬಹುದು. ಹಾಗಾಗಿ ಮಾತ್ರೆ, ಔಷಧಗಳನ್ನು ಯಾವ ದಿಕ್ಕಿನಲ್ಲಿಡಬೇಕು ಎಂಬುದರ ಬಗ್ಗೆ ನೋಡೋಣ...

ಈ ದಿಕ್ಕುಗಳಲ್ಲಿ ಮಾತ್ರೆ - ಔಷಧಿಗಳ ಇಡಬಾರದು
ಆಗ್ನೇಯ ಮತ್ತು ದಕ್ಷಿಣ ದಿಕ್ಕಿನಲ್ಲಿ (South East and South Direction) ಮಾತ್ರೆ ಅಥವಾ ಔಷಧಿಗಳನ್ನು ಅಪ್ಪಿತಪ್ಪಿಯೂ ಇಡಬಾರದು ಎಂದು ಹೇಳುತ್ತವೆ ವಾಸ್ತು ಶಾಸ್ತ್ರ. ಈ ದಿಕ್ಕುಗಳಲ್ಲಿ ಔಷಧವನ್ನು ಇಟ್ಟಿದ್ದರೆ, ಅವುಗಳನ್ನು ಸೇವಿಸಿದರೂ ಪ್ರಯೋಜನವಾಗದು. ಅಂದರೆ, ನೀವು ಪದೇ ಪದೆ ಔಷಧಿಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಬಂದ ಕಾಯಿಲೆಯು ದೀರ್ಘ ಕಾಲದವರೆಗೆ (Long time) ಕಾಡುತ್ತದೆ. ಇದರಿಂದ ಧನಹಾನಿ (Money Loss)   ಆಗುವುದಲ್ಲದೆ, ದೈಹಿಕ ಕ್ಷೀಣತೆಗೂ ಕಾರಣವಾಗುತ್ತದೆ. 

ಇದನ್ನು ಓದಿ: Saturn Transit 2022: ಶನಿ ಗೋಚಾರದಿಂದ ಈ ರಾಶಿಗಳಿಗೆ ರಾಜಯೋಗ!

ಕೆಲವರು ತಮಗೆ ಔಷಧಿಗಳನ್ನು ಇಡಲೆಂದೇ ಸ್ಥಳವೊಂದನ್ನು ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಫಸ್ಟ್ ಏಡ್ ಬಾಕ್ಸ್ ಅನ್ನೂ ಇಟ್ಟಿರುತ್ತಾರೆ. ವಾಸ್ತು ಪ್ರಕಾರ ಇದು ಸರಿಯಾದ ಕ್ರಮವಲ್ಲ. ಇದರಿಂದ ಆರೋಗ್ಯದ ಮೇಲೂ ಸಹ ಕೆಟ್ಟ ಪರಿಣಾಮ (Bad Effect) ಬೀರುತ್ತದೆ. ಈ ರೀತಿ ಇಟ್ಟಿದ್ದೇ ಆದಲ್ಲಿ ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. 

ಇನ್ನು ಕೆಲವರಿಗೆ ಒಂದು ಅಭ್ಯಾಸ ಇರುತ್ತದೆ. ತಾವು ಮಲಗುವ ಜಾಗದಲ್ಲಿ ಅಂದರೆ ಹಾಸಿಗೆಯ ಕೆಳಗೆ, ಪಕ್ಕದಲ್ಲಿ ಇಲ್ಲದಿದ್ದರೆ ಮಂಚದ ಮೇಲೆ ಔಷಧಿ ಮಾತ್ರೆಗಳನ್ನು ಇಟ್ಟು ಬಿಟ್ಟಿರುತ್ತಾರೆ. ಆದರೆ, ವಾಸ್ತು ಪ್ರಕಾರ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ.  ರಾಹು-ಕೇತು ರಾಸಾಯನಿಕಗಳಿಗೆ (For chemicals) ಸಂಬಂಧಿದ್ದು ಎನ್ನಲಾಗಿದೆ. ಹೀಗಾಗಿ ನೀವು ಮಲಗುವ ಕಡೆ ಇವುಗಳನ್ನು ಇಟ್ಟುಕೊಂಡು ನೀವೇ ನಿಮ್ಮ ಮೈಮೇಲೆ ರಾಹು-ಕೇತುವನ್ನು ಆಹ್ವಾನ ಮಾಡಿದಂತಾಗುತ್ತದೆ. 

ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ (North and West Direction) ಸಹ ಔಷಧಿಗಳನ್ನು ಇಡಬಾರದು. ಇದರಿಂದ ಔಷಧಿಗಳ ಪರಿಣಾಮ ವಿಳಂಬವಾಗುತ್ತದೆ. ಗುಣಮುಖರಾಗುವುದು ಸಹ ತುಂಬಾ ನಿಧಾನ ಎನ್ನುತ್ತದೆ ವಾಸ್ತುಶಾಸ್ತ್ರ. ಅಲ್ಲದೆ, ಇದರಿಂದ ಅನೇಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.

ಇದನ್ನು ಓದಿ: Personality Traits: ಯಾವ ರಾಶಿಗೆ ಯಾವ ವಿಷಯಕ್ಕೆ ಅಭದ್ರತೆ ಹೆಚ್ಚು ಗೊತ್ತಾ?

ಈಶಾನ್ಯ ದಿಕ್ಕಿನಲ್ಲಿ (North East Direction) ಔಷಧಿಗಳ ಇಡಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕು ಔಷಧಗಳನ್ನು ಇಡಲು ಪ್ರಶಸ್ತವಾದ ಜಾಗವಾಗಿದೆ. ಮನೆಯ ಸದಸ್ಯರು ತ್ವರಿತವಾಗಿ ಚೇತರಿಸಿಕೊಳ್ಳಬೇಕು ಎಂದರೆ, ಆಗಾಗ ಅನಾರೋಗ್ಯಕ್ಕೆ ತುತ್ತಾಗಬಾರದು ಎಂದಾದರೆ ಈ ದಿಕ್ಕಿನಲ್ಲಿ ಮಾತ್ರ ಔಷಧಗಳನ್ನು ಇಡಬೇಕು. ಇನ್ನು ಫಸ್ಟ್ ಏಡ್ ಬಾಕ್ಸ್ ಇಟ್ಟುಕೊಳ್ಳುವುದಿದ್ದರೂ ಸಹ ಇದೆ ದಿಕ್ಕಿನಲ್ಲಿಡಬೇಕು. ಹೀಗೆ ಮಾಡುವುದರಿಂದ ಮುಂದೆ ಸಂಭವಿಸುವ ಅವಘಡಗಳಿಂದಲೂ ಪಾರಾಗಬಹುದಾಗಿದೆ. 

click me!