ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ನಂತರ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದ 8ಕ್ಕೂ ಅಧಿಕ ಪ್ರಮುಖ ರಾಜಕಾರಣಿಗಳು ಜೈಲು ಸೇರುತ್ತಾರೆ.
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಅ.09): ಮಹಾಲಯ ಅಮವಾಸ್ಯೆಯ ಸೂರ್ಯ ಗ್ರಹಣದ ಪರಿಣಾಮವಾಗಿ ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯದ 8ಕ್ಕೂ ಅಧಿಕ ಪ್ರಮುಖ ರಾಜಕಾರಣಿಗಳು ಜೈಲು ಸೇರುತ್ತಾರೆ ಎಂದು ಕಾಲಜ್ಞಾನಿ ಡಾ.ಯಶ್ವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೋಣವಿನಕೆರೆ ರಂಗಾಪುರ ಮೂಲದ ಕಾಲಜ್ಞಾನಿ ಯಶ್ವಂತ ಗುರೂಜಿ ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತ ಬರುತ್ತದೆ ಎಂದು ಭವಿಷ್ಯ ನುಡಿದ್ದರು. ಅದರಂತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅವರು ನುಡಿದ ಭವಿಷ್ಯವಾಣಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಭವಿಷ್ಯ ವಾಣಿ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದೇ ಅಕ್ಟೋಬರ್ 14ರ ಮಹಾಲಯ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣದಿಂದ ಕೆಲ ರಾಶಿಗೆ ತೊಂದರೆಯಿದೆ ಎಂದು ಹೇಳಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋದ ಪ್ರದೀಪ್ ಈಶ್ವರ್‌ಗೆ ಎದುರಾಯ್ತು ಸಂಕಷ್ಟ: ಶಾಸಕ ಸ್ಥಾನ ಅಮಾನತ್ತಿಗೆ ಆಗ್ರಹ
ಸರ್ಕಾರದಲ್ಲಿ ಕೆಲಸ ಮಾಡ್ತಿರುವ ಅಂದರೆ ರಾಜಕಾರಣಿಗಳಿಗೆ ದೊಡ್ಡ ಕಂಟಕ ಇದೆ ಎಂದಿದ್ದಾರೆ. ಎಲ್ಲಾ ಸ್ಥರದ ರಾಜಕಾರಣಿಗಳಿಗೂ, ಅಧಿಕಾರಿಗಳೂ ಕೂಡ ಗ್ರಹಣದ ಎಫೆಕ್ಟ್ ಆಗಲಿದೆ. ಗ್ರಹಣದ ಮುನ್ನ ಮೂರು ತಿಂಗಳು ಹಾಗೂ ಗ್ರಹಣ ನಂತರದ ಮೂರು ತಿಂಗಳು ಪ್ರಭಾವ ಇರಲಿದೆ ಎಂದಿದ್ದಾರೆ. ಗ್ರಹಣದ ಎಫೆಕ್ಟ್ ಕೆಟ್ಟದ್ದೇ ಮಾತ್ರವಲ್ಲದೆ, ಇನ್ನು ಕೆಲ ರಾಜಕಾರಣಿಗಳಿಗೆ ಯೋಗ ಕೂಡ ಪ್ರಾಪ್ತಿಯಾಗಲಿದೆ. ಈ ಗ್ರಹಣ ಮೇಷ, ಕರ್ಕಾಟಕ(ಕಟಕ), ವೃಶ್ಚಿಕ, ಮಕರ ರಾಶಿಯ ಮಂದಿಗೆ ಶುಭ ಫಲ ನೀಡಲಿದೆ.
ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್ ಅಥವಾ ಪ್ಯಾಲೆಸ್ತೇನ್?
ಮುಖ್ಯವಾಗಿ ರಾಜ್ಯದಲ್ಲಿ ವೃಷಭ ರಾಶಿಯ ಕೃತಿಕ ನಕ್ಷತ್ರದ ರಾಜಕಾರಣಿಗಳು ಜೈಲು ಸೇರುವುದು ಖಚಿತವಾಗಿದೆ. ಹೀಗಾಗಿ, ವೃಷಭ ರಾಶಿಯ ಕೃತಿಕ ನಕ್ಷತ್ರದ ಮಂದಿ ಶಾಂತಿ ಕರ್ಮಗಳನ್ನ ಮಾಡಿಕೊಳ್ಳಬೇಕಿದೆ. ಇಲ್ಲವಾದ್ರೆ ಗ್ರಹಣದ ಕಂಟಕಕ್ಕೆ ಗುರಿ ಆಗ್ತಾರೆ ಅಂತಾ ಸಲಹೆ ಎಂದು ಸಲಹೆ ನೀಡಿದ್ದಾರೆ. ಆಂಧ್ರ ಪ್ರದೇಶ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೈಲು ಸೇರ್ತಾರೆ ಅಂತಾ ಎಚ್ಚರಿಸಿದ್ದೆನು. ಚಂದ್ರಬಾಬು ನಾಯ್ಡು ಅವರ ಜಾತಕ ವೃಷಭ ರಾಶಿ, ಕೃತಿಕ ನಕ್ಷತ್ರ ಆಗಿದೆ. ಇದೀಗ ನಮ್ಮ ರಾಜ್ಯದಲ್ಲೂ ಸಹ ವೃಷಭ ರಾಶಿಯ ರಾಜಕಾರಣಿಗಳು ಜೈಲು ಸೇರುವ ಸಾಧ್ಯತೆಯಿದೆ. ವೃಷಭ ರಾಶಿಯ ಮಂದಿ ದೈವದ ಮೊರೆ ಅಥವಾ ಶಾಂತಿ ಕರ್ಮಗಳನ್ನ ಮಾಡೋದು ಒಳಿತು ಎಂದಿದ್ದಾರೆ.