ಕಾಲಿಗೆ ಚಿನ್ನ ಧರಿಸಿದರೆ ಎದುರಾಗುತ್ತೆ ಕಂಟಕ; ಬಡತನ ನಿಮ್ಮ ಬಾಗಿಲು ತಟ್ಟಲಿದೆ ಹುಷಾರ್..!

By Sushma Hegde  |  First Published Jun 24, 2023, 3:38 PM IST

ಚಿನ್ನದ ಆಭರಣ ಧರಿಸುವುದಕ್ಕೂ ಕೆಲ ನಿಯಮಗಳಿವೆ. ಪಾದಗಳಿಗೆ ಚಿನ್ನದ ಆಭರಣಗಳನ್ನು ಎಂದಿಗೂ ಧರಿಸಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಬಡತನ ಉಂಟಾಗಬಹುದು


ಮಹಿಳೆ (woman) ಯರ ಮೊದಲ ಆಯ್ಕೆ ಚಿನ್ನದ ಆಭರಣಗಳು ಎಂದರೆ ತಪ್ಪಾಗಲ್ಲ. ಚಿನ್ನ ಅಂದರೆ ಯಾವ ಮಹಿಳೆಗೆ ತಾನೆ ಇಷ್ಟ ಇಲ್ಲ ಹೇಳಿ? ಮಹಿಳೆಯರಿಗೆ ಚಿನ್ನದ ವ್ಯಾಮೋಹ ಎಂದಿಗೂ ಕಡಿಮೆಯಾಗಿಲ್ಲ. ಆದರೆ ಚಿನ್ನದ ಆಭರಣ  (jewelry) ಧರಿಸುವುದಕ್ಕೂ ಕೆಲ ನಿಯಮಗಳಿವೆ. ಪಾದ (foot) ಗಳಿಗೆ ಚಿನ್ನದ ಆಭರಣಗಳನ್ನು ಎಂದಿಗೂ ಧರಿಸಬಾರದು. ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಬಡತನ  (Poverty) ಉಂಟಾಗಬಹುದು. ಈ ಕುರಿತು ಇಲ್ಲಿದೆ ಮಾಹಿತಿ.

ಹಿಂದೂ ಧರ್ಮ, ಸಂಪ್ರದಾಯ, ಜ್ಯೋತಿಷ್ಯ ಮತ್ತು ವಾಸ್ತುಶಿಲ್ಪ (Architecture) ದಲ್ಲಿ ಚಿನ್ನವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿನ್ನಾಭರಣ ಮನುಷ್ಯನ ಬಾಹ್ಯ ಸೌಂದರ್ಯ (External beauty) ವನ್ನು ಹೆಚ್ಚಿಸುತ್ತದೆ. ಹಾಗೂ ಚಿನ್ನ ನಮ್ಮಲ್ಲಿ ಇದ್ದರೆ ಹಣದ ಸಮಸ್ಯೆ (Money problem) , ಆರೋಗ್ಯದ ಸಮಸ್ಯೆ ಸಹ ನಿವಾರಿಸಬಹುದು. ಇಂದಿನ ಫ್ಯಾಷನ್ ಮತ್ತು ಆಧುನಿಕ  (Modern) ಯುಗದಲ್ಲಿ ಮಹಿಳೆಯರು ಚಿನ್ನದ ಆಭರಣ (jewelry) ಗಳನ್ನು ಧರಿಸುವುದರಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಸಾಕಷ್ಟು ಸಮಸ್ಯೆ (problem) ಗಳನ್ನು ಎದುರಾಗುತ್ತವೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.

Tap to resize

Latest Videos

undefined

ತಲೆಯಿಂದ ಪಾದದವರೆಗೆ, ನಾವು ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಆಭರಣ  (jewelry) ಧರಿಸುವುದನ್ನು ನೋಡುತ್ತೇವೆ. ಪುರಾತನ ಗ್ರಂಥಗಳಲ್ಲಿ ಈ ಕೆಲವು ಆಭರಣಗಳಿಗೆ ವೈಜ್ಞಾನಿಕ, ಧಾರ್ಮಿಕ ಮತ್ತು ಜ್ಯೋತಿಷ್ಯ (Astrology)  ಕಾರಣಗಳನ್ನು ಸಹ ನಾವು ಕಂಡುಕೊಳ್ಳುತ್ತೇವೆ. ಆದರೆ ಜನರು ತಮ್ಮ ಕಾಲಿಗೆ ಚಿನ್ನದ ಬದಲು ಬೆಳ್ಳಿ (Silver) ಯ ವಸ್ತುಗಳನ್ನು ಧರಿಸುತ್ತಾರೆ.

 

ಇವು 'ಒಲವಿನ ಉಡುಗೊರೆ' ಅಲ್ಲ: ಮನೆಗೆ ತಂದರೆ ಅಮಂಗಳಕರ..!

 

ಪಾದದ ಮೇಲೆ ಚಿನ್ನವನ್ನು ಧರಿಸುವುದರಿಂದ ಧಾರ್ಮಿಕ ಅನಾನುಕೂಲಗಳು

1) ಚಿನ್ನಕ್ಕೆ ಇಷ್ಟೊಂದು ಪ್ರಾಮುಖ್ಯತೆ (Importance)  ಸಿಗಲು ಕಾರಣ ವಿಷ್ಣುವಿನ ಪತ್ನಿ ಲಕ್ಷ್ಮಿ ದೇವಿ.

2) ಮೂಲತಃ ಲಕ್ಷ್ಮಿ ದೇವಿಯು ಚಿನ್ನ (Gold) ವನ್ನು ಪ್ರೀತಿಸುತ್ತಾಳೆ.

3) ಧಾರ್ಮಿಕ  (Religious) ದೃಷ್ಟಿಕೋನದಿಂದ, ಲಕ್ಷ್ಮಿ ದೇವಿಗೆ ತನಗೆ ಇಷ್ಟವಾದ ಚಿನ್ನವನ್ನು ಹೊಟ್ಟೆ (stomach) ಯ ಗುಂಡಿಯ ಕೆಳಗೆ ಎಲ್ಲಿಯಾದರೂ ಧರಿಸುವುದು ಅವಮಾನ.

4) ಇದು ಲಕ್ಷ್ಮಿ ದೇವಿಗೆ ಮಾತ್ರವಲ್ಲದೆ ವಿಷ್ಣು  (Vishnu) ದೇವರಿಗೂ ಕೋಪ ತರುತ್ತದೆ. ಅವರ ಅಸಮಾಧಾನ (displeasure) ವು ಜೀವನದಲ್ಲಿ ಬರಬಹುದು ಮತ್ತು ಅದು ನಿಮ್ಮನ್ನು ಬಡವರನ್ನಾಗಿ ಮಾಡಬಹುದು. ಹಾಗಾಗಿ ಕಾಲಿಗೆ ಚಿನ್ನವನ್ನು ಧರಿಸಬೇಡಿ. 

 

ಮದುವೆಯಲ್ಲಿ ಮೆಹೆಂದಿ, ಅರಿಶಿಣ ಹಚ್ಚುವುದೇಕೆ?; ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

 

ಪಾದದ ಮೇಲೆ ಚಿನ್ನವನ್ನು ಧರಿಸುವುದರ ವೈಜ್ಞಾನಿಕ ಅನಾನುಕೂಲಗಳು

1) ಹಿಂದೂ ಧರ್ಮವು ಎಲ್ಲದಕ್ಕೂ ವೈಜ್ಞಾನಿಕ  (Scientific) ವಿಧಾನವನ್ನು ಹೊಂದಿದೆ. ಮತ್ತು ವೈಜ್ಞಾನಿಕ ದೃಷ್ಟಿಕೋನ (perspective) ದಿಂದ ಕೂಡ, ಪಾದದ ಮೇಲೆ ಚಿನ್ನವನ್ನು ಧರಿಸುವುದು ಆರೋಗ್ಯ (health) ಕ್ಕೆ ಹಾನಿಕಾರಕವಾಗಿದೆ. 

2) ವಾಸ್ತವವಾಗಿ, ಮಾನವ ದೇಹ (body) ದ ಮೇಲಿನ ಭಾಗಕ್ಕೆ ಉಷ್ಣತೆ ಬೇಕು ಮತ್ತು ಕೆಳಗಿನ ಭಾಗಕ್ಕೆ ತಂಪು ಬೇಕು. 

3) ಚಿನ್ನವು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ, ಆದರೆ ಬೆಳ್ಳಿಯು ತಂಪನ್ನು ತರುತ್ತದೆ, ಆದ್ದರಿಂದ ಚಿನ್ನದ ಬದಲು ಬೆಳ್ಳಿಯನ್ನು ಪಾದ (foot) ಗಳಿಗೆ ಧರಿಸಬೇಕು, ಇದರಿಂದ ದೇಹದಲ್ಲಿ ಸರಿಯಾದ ತಾಪಮಾನ ಸಮತೋಲನವನ್ನು ಕಾಯ್ದುಕೊಳ್ಳಲಾಗುತ್ತದೆ. 

4) ಇಲ್ಲದಿದ್ದರೆ, ದೇಹದ ಉಷ್ಣತೆ (body temperature) ಯಲ್ಲಿ ಅಸಮತೋಲನವು ಅನೇಕ ರೀತಿಯಲ್ಲಿ ಹಾನಿಯನ್ನುಂಟು ಮಾಡುತ್ತದೆ.

click me!