Zodiac Sign: ನಿಮ್ಮ ರಾಶಿಗೆ ಆಗಿಬರದ ರಾಶಿ ಯಾವ್ದು? ಯಾವ ರಾಶಿಯವರೊಂದಿಗೆ ಸ್ನೇಹ ಕಷ್ಟ?

By Suvarna NewsFirst Published Jun 24, 2023, 3:28 PM IST
Highlights

ಕೆಲವು ಜನರೊಂದಿಗೆ ಸ್ನೇಹ, ಸಂಬಂಧ, ಪ್ರೀತಿ-ಪ್ರೇಮ ಯಾವುದೂ ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಸಾಧ್ಯವಾದರೂ ಅದು ಹೆಚ್ಚು ಕಾಲ ಬಾಳುವುದಿಲ್ಲ. ಏಕೆಂದರೆ, ಇಬ್ಬರ ನಡುವಿನ ಮೂಲ ನಂಬಿಕೆ, ನಿಲುವುಗಳು ತೀರ ವಿರುದ್ಧವಾಗಿರುತ್ತವೆ. 
 

ಏನೇ ಮಾಡಿದರೂ ಕೆಲವು ಜನರೊಂದಿಗೆ ಒಡನಾಡುವುದು, ಸ್ನೇಹ ಬೆಳೆಸುವುದು, ಖುಷಿಯಾಗಿ ವ್ಯವಹರಿಸುವುದು ಸಾಧ್ಯವಾಗುವುದಿಲ್ಲ. ಅವರ ಗುಣ-ಸ್ವಭಾವಗಳನ್ನು ಒಪ್ಪಿಕೊಳ್ಳುವುದು, ಸ್ವೀಕರಿಸುವುದು ಕಷ್ಟವಾಗುತ್ತದೆ. ಇದು ನಾವೇನೂ ಬೇಕೆಂದೇ ಬೆಳೆಸಿಕೊಂಡ ಗುಣವಲ್ಲ. ನಮ್ಮ ರಾಶಿಚಕ್ರವನ್ನು ಆಧರಿಸಿ ಹಲವು ಗುಣಗಳು ನಮ್ಮಲ್ಲಿ ಅರಿಯದೇ  ಬೆಳೆದಿರುತ್ತವೆ. ಅವುಗಳನ್ನಾಧರಿಸಿ ವರ್ತನೆಗಳಿರುತ್ತವೆ. ಮನುಷ್ಯನ ಮೂಲ ವರ್ತನೆ ನಿರ್ಧಾರವಾಗುವುದು ಯಾವುದರಿಂದ ಎನ್ನುವ ಪ್ರಶ್ನೆ ಎಂದಿನಿಂದಲೂ ಇರುವಂಥದ್ದು. ಇದಕ್ಕೆ ಜ್ಯೋತಿಷ್ಯ ಶಾಸ್ತ್ರ ನೀಡುವ ಉತ್ತರವೇ ಬೇರೆ. ಅದು ಗ್ರಹಗತಿ, ರಾಶಿಗಳನ್ನು ಆಧರಿಸಿ ರೂಪುಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆದರೆ, ಮನುಷ್ಯ ಬೆಳೆದುಬಂದ ವಾತಾವರಣ, ಕೌಟುಂಬಿಕ, ಸಾಂಸ್ಕೃತಿಕ ಹಿನ್ನೆಲೆಗಳ ಪಾತ್ರವೂ ಇಲ್ಲಿರುತ್ತದೆ. ಆದರೆ, ಪ್ರಮುಖವಾದ ಇಷ್ಟಾನಿಷ್ಟಗಳು ರಾಶಿಚಕ್ರವನ್ನು ಆಧರಿಸಿ ರೂಪುಗೊಂಡಿರುತ್ತವೆ ಎನ್ನಲಾಗುತ್ತದೆ. ಹೀಗಾಗಿ, ಎಷ್ಟೋ ಬಾರಿ ನಾವು ಯಾರನ್ನೂ ದ್ವೇಷಿಸದೇ ಇದ್ದರೂ ಕೆಲವರೊಂದಿಗೆ ಸ್ನೇಹ ಹೊಂದುವುದು ಕಷ್ಟವಾಗುತ್ತದೆ. ಮೊದಲಿಗೆ ಸ್ನೇಹವಾದರೂ ಕ್ರಮೇಣ ಅವರೊಂದಿಗಿನ ಒಡನಾಟವೇ ಕಷ್ಟವಾಗಿ ಬಿಡುತ್ತದೆ. ಅವರ ಪ್ರತಿ ಸ್ವಭಾವವೂ ಇರಿಟೇಟ್‌ ಆಗಿ ಕಾಣುತ್ತದೆ. ಕೆಲವೊಮ್ಮೆ ಲವ್‌ ಮ್ಯಾರೇಜ್‌ ಗಳು ವಿಫಲವಾಗುವುದು ಇದೇ ಕಾರಣಕ್ಕೆ ಇದ್ದರೂ ಇರಬಹುದು. ಒಟ್ಟಿನಲ್ಲಿ ಕೆಲವು ರಾಶಿಗಳ ಜನರಿಗೆ ಕೆಲವು ರಾಶಿಗಳ ಜನರೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ನಿಮ್ಮ ರಾಶಿಗೆ ಯಾವ ರಾಶಿ ಆಗಿಬರುವುದಿಲ್ಲ ಎಂದು ನೋಡಿಕೊಳ್ಳಿ.

ಮೇಷ (Aries) ಮತ್ತು ಕರ್ಕಾಟಕ (Cancer)
ಮೇಷ ರಾಶಿಯ ಜನ ಹೋರಾಟದ ಮನೋಭಾವ ಹೊಂದಿರುತ್ತಾರೆ. ಇವರಲ್ಲಿ ಸ್ವಾರ್ಥ ಕೇಂದ್ರಿತ (Self Centered) ಬುದ್ಧಿ ಜಾಗೃತವಾಗಿರುತ್ತದೆ. ಹೀಗಾಗಿ, ಇವರಿಗೆ ಕರ್ಕಾಟಕ ರಾಶಿಯ ಜನರಲ್ಲಿರುವ ಭಾವನಾತ್ಮಕ ಸೂಕ್ಷ್ಮತೆಗಳು ಹೊಂದಾಣಿಕೆ ಆಗುವುದಿಲ್ಲ. ಇವರಿಬ್ಬರ ನಡುವೆ ಕಲಹವಾಗುವುದೇ (Clash) ಹೆಚ್ಚು. ಈ ರಾಶಿಗಳ ನಡುವೆ ಒಳ್ಳೆಯ ಸ್ನೇಹವಾಗುವುದು (Friendship) ಕಷ್ಟ.

Latest Videos

Zodiac Sign: ಲೈಂಗಿಕವಾಗಿ ಹೆಚ್ಚು ಆ್ಯಕ್ಟಿವ್‌ ಆಗಿರೋ ರಾಶಿಗಳ ಜನರು ಇವರು

ಮಿಥುನ ಮತ್ತು ಕನ್ಯಾ (Gemini Virgo)
ಮಿಥುನ ರಾಶಿಯ ಜನರಲ್ಲಿ ಅಸ್ಥಿರತೆ (Instability) ಎನ್ನುವುದು ಸ್ಥಾಯಿ ಭಾವ. ಇವರಲ್ಲಿ ಸ್ಥಿರತೆ ಎನ್ನುವುದು ಕಡಿಮೆ. ಆದರೆ, ಮೀನವು ಸ್ಥಿರತೆ ಮತ್ತು ಸದೃಢತೆ (Strong) ಬಯಸುವ ರಾಶಿ. ಹೀಗಾಗಿ, ಈ ರಾಶಿಯ ಜನಕ್ಕೂ, ಮಿಥುನದವರಿಗೂ ಆತ್ಮೀಯ ಸಂಬಂಧ (Intimate Relationship) ಏರ್ಪಡುವುದಿಲ್ಲ.

ಸಿಂಹ ಮತ್ತು ವೃಶ್ಚಿಕ (Leo Scorpio)
ಸಿಂಹಕ್ಕೆ ತಾನು ಗುರುತಿಸಿಕೊಳ್ಳಬೇಕು ಎನ್ನುವ ಬಯಕೆ ಹೆಚ್ಚು. ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದರೂ ವೃಶ್ಚಿಕ ರಾಶಿ ಜನರೊಂದಿಗೆ ಇವರ ಸ್ನೇಹ ಉಂಟಾಗುವುದಿಲ್ಲ. ಏಕೆಂದರೆ, ವೃಶ್ಚಿಕ ರಾಶಿಯ ಜನ ಭಾವನಾತ್ಮಕವಾಗಿ ಆಳವಾದ ಸಂಬಂಧ (Deep Relation) ಬಯಸುತ್ತಾರೆ. ಹೀಗಾಗಿ, ಸಂಘರ್ಷ ಉಂಟಾಗುವ ಸಾಧ್ಯತೆ ಅಧಿಕ. 

ವೃಷಭ-ಕುಂಭ (Taurus-Aquarius)
ವೃಷಭ ರಾಶಿಯ ಜನರಿಗೆ ಬದಲಾವಣೆ (Change) ಎಂದರೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವುದು ಕಡಿಮೆ. ತಮ್ಮದೇ ನಂಬಿಕೆ, ಸಿದ್ಧಾಂತ, ದೈನಂದಿನ ಆಗುಹೋಗುಗಳಲ್ಲಿ ಬಂಧಿಯಾಗಿರುತ್ತಾರೆ. ಆದರೆ, ಕುಂಭ ರಾಶಿಯ ಜನ ವಿಶಿಷ್ಟ ಚಿಂತನೆ ಉಳ್ಳವರಾಗಿದ್ದು, ನವೀನತೆಗೆ (Novelty) ಆದ್ಯತೆ ನೀಡುತ್ತಾರೆ. ಹೀಗಾಗಿ, ಇವರಿಬ್ಬರ ಸ್ನೇಹ ಶಾಶ್ವತವಲ್ಲ.

ಈ ರಾಶಿಯವರ ಜಾತಕದಲ್ಲಿದೆ ಪ್ರೇಮ ಯೋಗ, ಪ್ರೀತಿಯಲ್ಲಿ ಬೀಳೋದು ಗ್ಯಾರಂಟಿ!

ಕರ್ಕಾಟಕ-ಧನು (Cancer-Sagittarius)
ಧನು ರಾಶಿಯ ಜನ ಅಪ್ರತಿಮ ಸಾಹಸಿ ಮನೋಭಾವ ಮತ್ತು ಅತ್ಯಧಿಕ ಸ್ವತಂತ್ರ (Freedom) ಧೋರಣೆಯ ಜನ. ಇವರು ಯಾರನ್ನೂ ಅವಲಂಬಿಸುವುದಿಲ್ಲ. ಆದರೆ, ಕರ್ಕಾಟಕ ರಾಶಿಯ ಜನ ಭಾವನಾತ್ಮಕವಾಗಿ ಅಂಟಿಕೊಳ್ಳುವ (Emotional Attachment) ಸ್ವಭಾವ ಹೊಂದಿರುತ್ತಾರೆ. ಈ ಸ್ವಭಾವಗಳಿಗೆ ಹೊಂದಾಣಿಕೆ ಆಗುವುದಿಲ್ಲ.

ತುಲಾ-ಮಕರ (Libra-Capricorn)
ತುಲಾ ರಾಶಿಯ ಜನ ಸಮತೋಲನ, ಸಾಮರಸ್ಯದ (Harmony) ಸ್ವಭಾವ ಹೊಂದಿರುತ್ತಾರೆ. ಇವರಿದ್ದಲ್ಲಿ ನಗು, ಮಾತುಕತೆ, ವಿನೋದ ಹೆಚ್ಚು. ಆದರೆ, ಮಕರ ರಾಶಿಯ ಜನ ಗುರಿ (Goal) ಆಧಾರಿತ ಗಂಭೀರ ನಿಲುವು ಹೊಂದಿರುತ್ತಾರೆ. ಹೀಗಾಗಿ, ಇವರ ಮಧ್ಯೆ ವಾಗ್ವಾದವಾಗುವುದೇ ಹೆಚ್ಚು.

ಮೀನ-ಮಿಥುನ (Pisces-Gemini)
ಮೀನ ರಾಶಿಯ ಜನ ಭಾವನಾತ್ಮಕ ಸೂಕ್ಷ್ಮತೆ ಹೊಂದಿರುತ್ತಾರೆ. ಆದರೆ, ಮಿಥುನ ರಾಶಿಯವರು ಕೆಲವೊಮ್ಮೆ ತೀರ ವಿರಕ್ತ ಭಾವನೆ ತಾಳಿಬಿಡುತ್ತಾರೆ. ಸಮೀಪದವರಿಂದಲೂ ದೂರವಿದ್ದು ಬಿಡುತ್ತಾರೆ. ಹೀಗಾಗಿ, ಇವರ ಸ್ನೇಹದಲ್ಲಿ ಬಿರುಕು ಹೆಚ್ಚು. 

click me!