Mahashivratri: ಬಯಸಿದ ವರ ಸಿಗ್ಬೇಕೆಂದ್ರೆ ಶಿವರಾತ್ರಿ ಪೂಜೆ ಹೀಗಿರಲಿ

By Suvarna NewsFirst Published Feb 17, 2023, 5:32 PM IST
Highlights

ಶಿವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡ್ತಿದೆ. ದೇವಸ್ಥಾನಗಳು ಸಿಂಗಾರಗೊಳ್ತಿವೆ. ಜಾಗರಣೆಗೆ ಭಕ್ತರ ತಯಾರಿ ನಡೆದಿದೆ. ಭಕ್ತಿಯಿಂದ ಪ್ರಾರ್ಥನೆ ಮಾಡಿದ್ರೆ ಬೇಡಿದ ವರ ನೀಡುವ ಈಶ್ವರನನ್ನು ಹುಡುಗಿಯರು ಒಲಿಸಿಕೊಳ್ಳೋದು ಹೇಗೆ ಗೊತ್ತಾ?
 

ದೇವರ ದೇವ ಮಹಾದೇವನ ಆರಾಧನೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಮಹಾಶಿವರಾತ್ರಿಯನ್ನು ಫೆಬ್ರವರಿ 18ರಂದು ಆಚರಣೆ ಮಾಡಲಾಗ್ತಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಶಿವರಾತ್ರಿ ಕೂಡ ಒಂದು. ಈಶ್ವರನಿಗೆ ಪೂಜೆ ಮಾಡಿ, ಉಪವಾಸ ಮಾಡಿ, ಜಾಗರಣೆ ಮಾಡಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ಭೋಲೆನಾಥನಲ್ಲಿ ಕೇಳುವ ದಿನವದು.

ಮಹಾಶಿವರಾತ್ರಿ (Mahashivratri) ಯಂದು ಶಿವ (Shiv) ಹಾಗೂ ಪಾರ್ವತಿ (Parvati) ಯ ವಿವಾಹ ನಡೆಯಿತು ಎನ್ನಲಾಗುತ್ತದೆ. ಹಾಗಾಗಿಯೇ ಅನೇಕ ಕಡೆ ಈ ದಿನ ಮದುವೆ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ಶಿವ ಕೇಳಿದ್ದನ್ನು ನೀಡುವ ದೇವರು. ರಾಕ್ಷಸರಿಗೆ ಕೂಡ ಈಶ್ವರ ವರ ನೀಡಿದ್ದಿದೆ. ಹಾಗಾಗಿ ಶಿವನನ್ನು ಭಕ್ತಿಯಿಂದ ಪ್ರಾರ್ಥನೆ (Prayer) ಮಾಡಿದ್ರೆ ನೀವು ಕೇಳಿದ್ದು ಲಭಿಸುತ್ತದೆ. ಈ ಬೇಡಿಗೆ ಮುಂದಿಡಲು ಶಿವರಾತ್ರಿ ಬಹಳ ಪ್ರಶಸ್ತವಾದ ದಿನವಾಗಿದೆ. ಧನ, ಸಂಪತ್ತು, ಸುಖ – ಸಮೃದ್ಧಿಗೆ ಈಶ್ವರನ ಆರಾಧನೆ ಮಾಡಿದಂತೆ ಒಳ್ಳೆಯ ವರನಿಗಾಗಿ ಹುಡುಗಿಯರು ಶಿವನಿಗೆ ವಿಶೇಷ ಪೂಜೆ ಮಾಡ್ಬೇಕು. ಶಿವರಾತ್ರಿ ದಿನ ಕೆಲ ಕೆಲಸ ಮಾಡಿದ್ರೆ ಕನ್ಯೆಯರಿಗೆ ಬೇಗ ವಿವಾಹ (Marriage) ವಾಗುತ್ತದೆ. ಜೊತೆಗೆ ಅವರು ಇಚ್ಛಿಸಿದ ವರ ಸಿಗ್ತಾನೆ ಎಂದು ನಂಬಲಾಗಿದೆ. ನಾವಿಂದು ಶಿವರಾತ್ರಿ ದಿನ ಹುಡುಗಿಯರು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.

Latest Videos

Mahashivratri 2023: ಶಿವ ಮುಕ್ಕಣ್ಣನಾದುದು ಹೇಗೆ? ಮೂರನೇ ಕಣ್ಣಲ್ಲಿದೆ ಜ್ಞಾನದ ಶಕ್ತಿ

ಶಿವ – ಪಾರ್ವತಿ ಪೂಜೆ : ಒಳ್ಳೆಯ ವರ (Groom) ಬೇಕೆನ್ನುವ ಹುಡುಗಿಯರು 16 ಸೋಮವಾರಗಳ ಕಾಲ ಶಿವ – ಪಾರ್ವತಿ ಪೂಜೆ ಮಾಡಬೇಕು ಎನ್ನಲಾಗುತ್ತದೆ. ಆದ್ರೆ 16 ಸೋಮವಾರ ಶಿವನ ಆರಾಧನೆ ಮಾಡುವ ಬದಲು ಶಿವರಾತ್ರಿಯಂದು ಶಿವ – ಪಾರ್ವತಿ ಪೂಜೆ ಮಾಡಿದ್ರೆ ಸಾಕು, ವರ ಸಿಗುತ್ತದೆ ಎನ್ನುತ್ತಾರೆ ಪಂಡೀತರು.

ಶಿವಲಿಂಗಕ್ಕೆ ಈ ವಸ್ತು ಇಟ್ಟುನೋಡಿ : ಒಳ್ಳೆಯ ಹುಡುಗ ಪತಿಯಾಗಿ ಬರ್ಬೇಕು ಎಂದು ಬಯಸುವ ಹುಡುಗಿಯರು ಶಿವರಾತ್ರಿ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡ್ಬೇಕು. ಹಾಲು ಮತ್ತು ತಪ್ಪುದ ಅಭಿಷೇಕ ಮಾಡಬೇಕು.

ಪಾರ್ವತಿಗೆ ಈ ಬಣ್ಣದ ಬಟ್ಟೆ ಅರ್ಪಿಸಿ : ಮೊದಲೇ ಹೇಳಿದಂತೆ ಶಿವರಾತ್ರಿ ದಿನ ಬರೀ ಶಿವನ ಪೂಜೆ ಮಾಡಿದ್ರೆ ಸಾಲದು. ಜೊತೆಗೆ ಪಾರ್ವತಿಯ ಪ್ರಾರ್ಥನೆ ಮಾಡ್ಬೇಕಾಗುತ್ತದೆ. ನಿಮಗೆ ಗುಣವಂತ ವರ ಸಿಗಬೇಕು ಎಂದಾದ್ರೆ ಶಿವರಾತ್ರಿ ದಿನ ಪಾರ್ವತಿ ದೇವಿಗೆ ಕೆಂಪು ಬಣ್ಣದ ಬಟ್ಟೆಗಳನ್ನು ಅರ್ಪಿಸಬೇಕು. ಕಿತ್ತಳೆ ಬಣ್ಣದ ಸಿಂಧೂರವನ್ನು ಅರ್ಪಿಸಬೇಕು.  

ಗೋರಂಟಿಯಲ್ಲಿದೆ ಗುಟ್ಟು : ಮಹಾಶಿವರಾತ್ರಿಯ ದಿನದಂದು ದೇವಿ ಪಾರ್ವತಿಗೆ ಮೆಹಂದಿಯನ್ನು ಅರ್ಪಿಸಬೇಕು. ನಂತ್ರ ಅದೇ ಗೋರಂಟಿಯನ್ನು ನಿಮ್ಮ ಕೈಗಳಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಬಹುಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ. ದಾಂಪತ್ಯದಲ್ಲಿ ಸಮಸ್ಯೆ ಇದ್ದವರು ಕೂಡ ಹೀಗೆ ಮಾಡ್ಬೇಕು. ಪಾರ್ವತಿ ದೇವಿಗೆ ಅರ್ಪಿಸಿದ ಮೆಹಂದಿ ನಿಮಗೆ ಪ್ರಸಾದವಾಗಿ ಸಿಕ್ಕರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

ಬಿಳಿ ಬಟ್ಟೆಯನ್ನು ಶಿವನಿಗೆ ಅರ್ಪಿಸಿ : ಬಿಳಿ ಬಣ್ಣ ಶಿವನಿಗೆ ತುಂಬಾ ಪ್ರಿಯವಾದ ಬಣ್ಣವಾಗಿದೆ. ಶಿವರಾತ್ರಿ ದಿನ ನೀವು ಬಿಳಿ ಬಟ್ಟೆಯನ್ನು ಧರಿಸಿ ಶಿವನನ್ನು ಪೂಜಿಸಿದರೆ  ದಾಂಪತ್ಯದ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಹುಡುಗಿಯರು ಬಯಸಿದ ವರ ಸಿಗುತ್ತಾನೆ. ಆತನ ಜೊತೆ ಶೀಘ್ರವೇ ಮದುವೆ ನೆರವೇರುತ್ತದೆ.

MahaShivratri 2023: ಶಿವ ಎಂದರೆ ಯಾರು? ಶಿವಸ್ವರೂಪವನ್ನು ಎಲ್ಲಿ ನೋಡಬೇಕು?

ಪ್ರೀತಿಸಿದ ವ್ಯಕ್ತಿ ಸಿಗ್ಬೇಕೆಂದ್ರೆ ಹೀಗೆ ಮಾಡಿ : ಪ್ರೀತಿಸಿದ ವ್ಯಕ್ತಿ ಜೊತೆ ಮದುವೆಯಾಗಲು ಬಯಸಿದ್ದು, ಅದಕ್ಕೆ ನಾನಾ ವಿಷ್ಯ ಅಡ್ಡಿಯಾಗ್ತಿದೆ ಎಂದಾದ್ರೆ ನೀವು ಶಿವರಾತ್ರಿ ದಿನ ಶಿವ – ಪಾರ್ವತಿಗೆ ಶ್ರೀಗಂಧವನ್ನು ಅರ್ಪಿಸಿ. ಇಬ್ಬರೂ ಸೇರಿ ಶಿವನಿಗೆ ಗಂಧವನ್ನು ಲೇಪಿಸಬೇಕು. ನಂತ್ರ ಶಿವನಿಗೆ ಇಷ್ಟವಾದ ಹೂವನ್ನು ಅರ್ಪಿಸಬೇಕು.

click me!