ಶಿವರಾತ್ರಿ ಆಚರಣೆಯ ಸಂಭ್ರಮದಲ್ಲಿರುವ ಮೈಸೂರಿನ ಜನರಿಗೆ ದರ್ಶನ ನೀಡಲು ಕೈಲಾಸದ ಶಿವನೇ ಇಳಿದು ಬಂದಿದ್ದಾನೆ. ಲಕ್ಷ ಲಕ್ಷ ರುದ್ರಾಕ್ಷಿಗಳಿಂದ ನಿರ್ಮಾಣಗೊಂಡಿರುವ ಬೃಹತ್ ಶಿವಲಿಂಗ ಭಕ್ತರ ಕಣ್ಮನ ಸೆಳೆಯುತ್ತಿದೆ.
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಮೈಸೂರು(ಫೆ.17): ಶಿವರಾತ್ರಿ ಆಚರಣೆಯ ಸಂಭ್ರಮದಲ್ಲಿರುವ ಸಾಂಸ್ಕೃತಿಕ ನಗರಿ ಜನರಿಗೆ ದರ್ಶನ ನೀಡಲು ಕೈಲಾಸದ ಶಿವನೇ ಇಳಿದು ಬಂದಿದ್ದಾನೆ. ಲಕ್ಷ ಲಕ್ಷ ರುದ್ರಾಕ್ಷಿಗಳಿಂದ ನಿರ್ಮಾಣಗೊಂಡಿರುವ ಬೃಹತ್ ಶಿವಲಿಂಗ ಭಕ್ತರ ಕಣ್ಮನ ಸೆಳೆಯುತ್ತಿದೆ. 21 ಅಡಿ ಎತ್ತರದ ಶಿವಲಿಂಗವೂ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಸಾಕ್ಷಾತ್ ಕೈಲಾಸದಲ್ಲೇ ನಿಂತು ಶಿವನನ್ನು ನೋಡಿದಂತಾಗುತ್ತಿದೆ.
ಹೃಷಿಕೇಶದ ರುದ್ರಾಕ್ಷಿಗಳಿಂದ ಬೃಹತ್ ಶಿವಲಿಂಗ ನಿರ್ಮಾಣ:
ಶಿವರಾತ್ರಿ ಅಂಗವಾಗಿ ಮೈಸೂರಿನ ಲಲಿತ ಮಹಲ್ ಮೈದಾನದಲ್ಲಿ ನಿರ್ಮಿಸಿರುವ 21 ಅಡಿಗಳ ವಿಶೇಷ ಶಿವಲಿಂಗ ಭಕ್ತರ ಕಣ್ಮನ ಸೆಳೆಯುತ್ತಿದೆ. ಹಿಮಾಲಯದ ತಪ್ಪಲಿನ ಮಾದರಿ ಗುರಿ ಶಿಕರ ನಿರ್ಮಿಸಿ, ಅದ ಮಧ್ಯದಲ್ಲಿ ಮೂಡಿದ ಶಿವಲಿಂಗದ ಮಾದರಿಯು ಬರೋಬ್ಬರಿ 21 ಅಡಿ ಎತ್ತರ ಇದೆ. ಈ ಶಿವಲಿಂಗವನ್ನು ಮೈಸೂರಿನ ಅಲನಹಳ್ಳಿಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸೇವಾ ಕೇಂದ್ರದಿಂದ ಸ್ಥಾಪನೆ ಮಾಡಲಾಗಿದೆ. ಈ ವಿಶಿಷ್ಟ ಶಿವಲಿಂಗ ದರ್ಶನಕ್ಕೆ ಸಾಂಸ್ಕೃತಿಕ ನಗರಿ ಜನ ಕಾತರರಾಗಿ ದಾವಿರುತ್ತಿದ್ದಾರೆ.
undefined
5 ಲಕ್ಷ ರುದ್ರಾಕ್ಷಿಗಳಿಂದ ನಿರ್ಮಾಣವಾದ ಶಿವಲಿಂಗ:
ಲಲಿತ್‌ಮಹಲ್ ಮೈದಾನದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಸ್ಥಾಪಿಸಿರೋ ಶಿವಲಿಂಗ ಬಹಳ ವಿಶಿಷ್ಟವಾಗಿದೆ. ಈ ಶಿವಲಿಂಗಕ್ಕೆ ಶಿವನಿಗೆ ಇಷ್ಟವಾದ ರುದ್ರಾಕ್ಷಿಗಳನ್ನು ಬಳಸಿ ನಿರ್ಮಿಸಲಾಗಿದೆ. ಹೃಷಿಕೇಶದಿಂದ ತರಿಸಲಾದ ಬರೋಬ್ಬರಿ 5 ಲಕ್ಷದ 20 ಸಾವಿರ ರುದ್ರಾಕ್ಷಿಯಿಂದ ಈ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಸೇವಾಶ್ರಮದ ಭಕ್ತರೆಲ್ಲ ಸೇರಿ ದಾರಗಳ ಮೂಲಕ ರುದ್ರಾಕ್ಷಿಗಳನ್ನು ಪೋಣಿಸಿ ಈ ಕೈಲಾಸ ಶಿವಲಿಂದ ನಿರ್ಮಿಸಿದ್ದಾರೆ. ಬೃಹತ್ ಲಿಂಗದ ಜೊತೆಗೆ ಹಿಮಾಲಯದ ಗುಹೆಗಳ ಮಾದರಿ ನಿರ್ಮಾಣ ಮಾಡಿದ್ದು, ಆಧ್ಯಾತ್ಮ, ಧ್ಯಾನ, ಜೀವನ ಆದರ್ಶ, ಶಿವರಾತ್ರಿ ಆಚರಣೆ ಮಹತ್ವ ತಿಳಿಸುವ ಹಲವು ನಾಮ ಫಲಕಗಳ ಅಳವಡಿಕೆ ಮಾಡಲಾಗಿದೆ.
MahaShivratri 2023; ಶಿವರಾತ್ರಿಯ ಮಹತ್ವವೇನು? ಈ ದಿನದ ಆಚರಣೆ ಹೇಗಿರಬೇಕು?
ಒಂದೇ ಜಾಗದಲ್ಲಿ ಜೋತಿರ್ಲಿಂಗ ದರ್ಶನ:
ಇನ್ನು 21 ಅಡಿ ಬೃಹತ್ ಲಿಂಗದ ಸುತ್ತಲೂ ಹಿಮಾಲಯದ ಪರ್ವತಗಳ ಮಾದರಿ ನಿರ್ಮಾಣ ಮಾಡಲಾಗಿದ್ದು, ಅದರ ಒಳ ಭಾಗದಲ್ಲಿ ಗುಹೆಗಳ ನಿರ್ಮಾಣ ಮಾಡಲಾಗಿದೆ. ಅಲ್ಲಿ ಬರುವ ಭಕ್ತರಿಗೆ ಜೋತಿರ್ಲಿಂಗಗಳ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಳೇಶ್ವರ, ವಿಶ್ವನಾಥ, ವೈದ್ಯನಾಥ, ನಾಗೇಶ್ವರ, ಕೇದಾರನಾಥ, ರಾಮೇಶ್ವರ, ಗ್ರಿಶನೇಶ್ವರ, ಭೀಮಶಂಕರ, ತ್ರಯಂಬಕೇಶ್ವರ ಹಾಗೂ ಓಂಕಾರೇಶ್ವರ ದೇವರ ಮಾದರಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಪ್ರತೀ ಸ್ಥಳದ ಪರಿಚಯದೊಂದಿದೆ ಅವುಗಳ ಪುರಾಣ ಪ್ರತೀತಿಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ.
Mahashivratri 2023: ಶಿವ ಮುಕ್ಕಣ್ಣನಾದುದು ಹೇಗೆ? ಮೂರನೇ ಕಣ್ಣಲ್ಲಿದೆ ಜ್ಞಾನದ ಶಕ್ತಿ
ಫೆಬ್ರವರಿ 22ರ ವರೆಗೂ ದರ್ಶನಕ್ಕೆ ವ್ಯವಸ್ಥೆ:
ಆಲನಹಳ್ಳಿ ಬ್ರಹ್ಮಕುಮಾರಿ ಆಶ್ರಮ ಪ್ರತಿವರ್ಷ ಶಿವರಾತ್ರಿಗೆ ವಿಶೇಷ ಶಿವಲಿಂಗ ಸ್ಥಾಪನೆ ಮಾಡಿಕೊಂಡು ಬರುತ್ತಿದೆ. ಕಳೆದ ಬಾರಿ21 ಸಾವಿರ ತೆಂಗಿನಕಾಯಿ ಬಳಸಿ 21 ಅಡಿ ಎತ್ತರದ ಶಿವಲಿಂಗ ಸ್ಥಾಪನೆ ಮಾಡಲಾಗಿತ್ತು. ಈ ರುದ್ರಾಕ್ಷಿಯಿಂದ ಶಿವಲಿಂಗ ರಚನೆ ಯಾಗಿದ್ದು, ಫೆಬ್ರವರಿ 22ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.