ಸೂಕ್ಷ್ಮ ಶರೀರ ಪ್ರಯಾಣ ನಿಜವೇ? ಯೋಗಿ ಸಕಲಮಾ ಹಂಚಿಕೊಂಡಿದ್ದಾರೆ ರೋಚಕ ಅನುಭವ!

By Bhavani Bhat  |  First Published Sep 12, 2024, 1:38 PM IST

ನಮ್ಮ ದೇಹ ಭೂಮಿಯ ಮೇಲೆ ಮಾತ್ರ ನಡೆಯಬಲ್ಲದು. ಆದರೆ ಆಧ್ಯಾತ್ಮಿಕ ಸಾಧನೆ ಮಾಡಿದವರು ಬಾಹ್ಯಾಕಾಶದಲ್ಲೂ ತೇಲಿಹೋಗಿ ಚಿತ್ರವಿಚಿತ್ರ ಸಂಗತಿಗಳನ್ನು ಮಾಡಲು ಶಕ್ತರು. ಈ ಬಗ್ಗೆ ಯೋಗಿ ಗುರು ಸಕಲಮಾ ಹಂಚಿಕೊಂಡ ಅನುಭವ ಇಲ್ಲಿದೆ. 
 


ಗುರು ಸಕಲಮಾ, ವಿಶ್ವವಿಖ್ಯಾತ ಯೋಗಿ ಗುರು ಸ್ವಾಮಿ ರಾಮ ಅವರ ಶಿಷ್ಯೆ. ಸ್ವಾಮಿ ರಾಮ ಅವರು ತಮ್ಮ ಯೋಗದ ಸಾಧನೆಗಳನ್ನು ವೈಜ್ಞಾನಿಕವಾಗಿ ಪ್ರಯೋಗಾಲಯದಲ್ಲಿ ವಿಜ್ಞಾನಿಗಳ ಮುಂದೆ ಪ್ರೂವ್‌ ಮಾಡಿ ತೋರಿಸಿದವರು. ಸ್ವಾಮಿ ರಾಮರಲ್ಲಿ ಶ್ರೀವಿದ್ಯೆ ಆಧ್ಯಾತ್ಮಿಕ ಸಾಧನೆಯ ದೀಕ್ಷೆ ಪಡೆದು ಸಾಧನೆ ಮಾಡಿದ ಗುರು ಸಕಲಮಾ ಇಂದು ಸಾವಿರಾರು ಶಿಷ್ಯರಿಗೆ ದೀಕ್ಷೆ ಕೊಡುತ್ತಿದ್ದು, ಸೂಕ್ಷ್ಮ ಶರೀರ ಪ್ರಯಾಣದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ: 

"ಒಮ್ಮೆ ನಾನು ಆಳವಾದ ಧ್ಯಾನ ಮಾಡುತ್ತಿದ್ದಾಗ, ನನ್ನ ಸೂಕ್ಷ್ಮ ಶರೀರ, ದೇಹವನ್ನು ಬಿಟ್ಟು ಮೇಲೆ ಹೊರಟ ಅನುಭವ ನನಗೆ ಆಯಿತು. ಇದನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ದೇಹ ಕುಳಿತು ಧ್ಯಾನ ಮಾಡುತ್ತಿದ್ದ ಹಾಗೆಯೇ ಇತ್ತು.  ಆದರೆ ಪ್ರಜ್ಞೆ ಮಾತ್ರ ಅಲ್ಲಿರಲಿಲ್ಲ. ನಾನು ಯಾವುದೋ ಒಂದು ಯಂತ್ರದಲ್ಲಿ ಕುಳಿತು ತೇಲುತ್ತಿದ್ದಂಥಾ ಅನುಭವ. ಅದು ವಿಮಾನದ ಹಾಗಿರಲಿಲ್ಲ. ಅದು ಇನ್ನೊಂದು ಗ್ರಹಕ್ಕೆ ಪ್ರಯಾಣಿಸುತ್ತಿದ್ದಂತೆ ಇತ್ತು. ನಾನು ಎಲ್ಲಿಗೆ ಹೊರಟಿದ್ದೇನೆ ಎಂಬುದು ನನಗೆ ಗೊತ್ತಿರಲಿಲ್ಲ"

Tap to resize

Latest Videos

undefined

"ಎಲ್ಲವೂ ನನ್ನ ಒಳಗಣ್ಣಿಗೆ ಗೋಚರವಾಗುತ್ತಿದ್ದವು. ನಾನು ಮೇಲುಮೇಲಕ್ಕೆ ಸಂಚರಿಸುತ್ತಾ ಇದ್ದೆ. ನನ್ನ ಸುತ್ತಲಿನ ಪ್ರಚಂಡ ಗಾಳಿಯ ಹೊಡೆತವನ್ನು ನಾನು ಅನುಭವಿಸುತ್ತಾ ಇದ್ದೆ.  ಮೋಡಗಳು, ಉಷ್ಣತೆ, ಎಲ್ಲವೂ ಬ್ರಹ್ಮಾಂಡದ ಅನುಭವ. ಈ ಪ್ರಯಾಣಕ್ಕೆ ಕೊನೆಯೇ ಇಲ್ಲ, ಬಹುಶಃ ನಾನು ಬಾಹ್ಯಾಕಾಶವನ್ನೂ ದಾಟಿ ಎಲ್ಲೋ ಹೋಗುತ್ತಿದ್ದೇನೆ ಅನಿಸಲು ಶುರುವಾಯಿತು. ಆದರೆ ಅದು ಸ್ಪೇಶ್‌ ಶಟಲ್‌ ಕೂಡ ಆಗಿರಲಿಲ್ಲ. ಥಟ್ಟನೆ ನನಗೆ, ನಾನು ಸ್ವಾಮಿ ರಾಮ ಅವರನ್ನು ಭೇಟಿ ಮಾಡಬೇಕು ಎಂದು ಹೊಳೆಯಿತು. ಅಷ್ಟರಲ್ಲಾಗಲೇ ಸ್ವಾಮಿ ರಾಮ ತಮ್ಮ ದೇಹವನ್ನು ತೊರೆದಿದ್ದರು."

"ಹೀಗೆ ಯೋಚಿಸುತ್ತಾ ಹೋಗುತ್ತಿದ್ದೆ. ಎಷ್ಟು ಸಾವಿರ ಕಿಲೋಮೀಟರ್‌ ಕ್ರಮಿಸಿದೆನೋ ತಿಳಿಯದು. ಇದ್ದಕ್ಕಿದ್ದಂತೆ ನಾನು ಪ್ರಯಾಣಿಸುತ್ತಿದ್ದ ಯಂತ್ರ ನಿಂತಿತು. ನಾನು ಅದರಿಂದ ಇಳಿದೆ. ಒಂದು ಆವರಣದಂತಿದ್ದ ಪ್ರದೇಶವನ್ನು ಪ್ರವೇಶಿಸಿದೆ.  ಅಲ್ಲಿ ನಿಂತಿದ್ದರು ಸ್ವಾಮಿ ರಾಮ! ಅವರು ಬದುಕಿದ್ದಾಗ ಅವರನ್ನು ಹೇಗೆ ಕಂಡಿದ್ದೆನೋ ಅದೇ ಸ್ವರೂಪದಲ್ಲಿದ್ದರು. ಅವರು ನನ್ನನ್ನು ನೋಡಿ ಅಸಂತೋಷಗೊಂಡಂತಿದ್ದರು. ʼಇಲ್ಲಿ ಯಾಕೆ ಬಂದೆ? ನನ್ನ ನೋಡಬೇಕಿದ್ದರೆ ನಾನೇ ಬರುತ್ತಿದ್ದೆನಲ್ಲಾ? ನೀನು ಇಲ್ಲಿಗೆ ಬರುವ ಅಗತ್ಯವಿಲ್ಲ. ನೀನು ಹೀಗೆಲ್ಲಾ ಬರುವ ಕಷ್ಟ ತೆಗೆದುಕೊಳ್ಳಬೇಕಿಲ್ಲʼ ಎಂದರು. ನಂತರ ನನ್ನ ಕೈ ಹಿಡಿದುಕೊಂಡು ವಾಪಸ್‌ ಮರಳಿ ಭೂಮಿಗೆ ಬರತೊಡಗಿದರು. ದಿಡೀರ್‌ ಒಂದು ಘಾತದೊಂದಿಗೆ ನನ್ನ ಧ್ಯಾನ ಕೊನೆಗೊಂಡಿತು."

ಮಧ್ಯರಾತ್ರಿ ಕಂಡ ಹೆಂಗಸಿನ ಆತ್ಮ; ಸಕಲಮಾ ಹೇಳಿದ ಬೇರೆ ಲೋಕದ ಕಥೆ
 

ಇಂಥ ಅನುಭವಗಳು ಹಿಮಾಲಯ ಆಧ್ಯಾತ್ಮಿಕ ವಿದ್ಯಾ ಪರಂಪರೆಯಲ್ಲಿ ನಿಜವಾದವು, ಸ್ವಾಮಿ ರಾಮ ಅವರ ಶಿಷ್ಯರು ಇಂಥದ್ದನ್ನು ಬಹಳ ಅನುಭವಿಸಿದ್ದಾರೆ ಎಂಬುದು ಗುರು ಸಕಲಮಾ ಅವರ ಮಾತು. ಗುರು ಸಕಲಮಾ ಕೂಡ ತಮ್ಮ ಪಾಡ್‌ಕಾಸ್ಟ್‌ಗಳಲ್ಲಿ ತಮ್ಮ ಇಂಥ ಹತ್ತಾರು ಅನುಭವಗಳನ್ನು ನಿರೂಪಿಸಿದ್ದಾರೆ. ಇದೇ ತಿಂಗಳು ಅವರ ನೂತನ ಪುಸ್ತಕ "ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼದಲ್ಲಿ ಇಂಥ ಹಲವಾರು ಅನುಭವಗಳನ್ನು ರೋಮಾಂಚನವಾಗುವಂತೆ ಮಂಡಿಸಿದ್ದಾರೆ. 

ನೀವು ಯಾವ ದೇವತೆಯ ವಾಹನ? ನಿಮ್ಮ ಜನ್ಮರಾಶಿಯಲ್ಲಿದೆ ಇದರ ರಹಸ್ಯ!
 

ಪುಸ್ತಕ ಸೆಪ್ಟೆಂಬರ್‌ 22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಗುರು ಸಕಲಮಾ ಹಾಗೂ ಇತರ ಅತಿಥಿಗಳು ಇರಲಿದ್ದಾರೆ. ಗುರುಮಾ ಅವರ ಶಿಷ್ಯರ ಚಂದ್ರಕಲಾ ನಮಸ್ಕಾರ ಯೋಗವೂ ಇರುವುದು ಅಂದಿನ ವಿಶೇಷ.  


 

click me!