ಗಣಪತಿ ಹಬ್ಬದಂದು ಅಷ್ಟವಿನಾಯಕನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಸಿಕೊಳ್ಳಿ

By Suvarna News  |  First Published Sep 14, 2023, 1:04 PM IST

ಲೋಕದಲ್ಲಿ ಮೊದಲು ಪೂಜಿಸಲ್ಪಡುವ ಗಣೇಶನ ಹಬ್ಬದಂದು ಸಾಧ್ಯವಾದಷ್ಟು ಗಣಪತಿ ದರ್ಶನ ಪಡೆಯಬೇಕು ಎಂಬ ನಂಬಿಕೆ ಇದೆ. ಹೆಚ್ಚು ಹೆಚ್ಚು ಗಣಪತಿ ದರ್ಶನ ಪಡೆದಷ್ಟು ನಿಮ್ಮ ಇಷ್ಟಗಳು ಈಡೇರುತ್ತವೆ. ಮನೆ ಮನೆಗೆ ಹೋಗಿ ಗಣಪತಿ ನೋಡಲು ಸಾಧ್ಯವಿಲ್ಲವೆಂದಾದ್ರೆ ನೀವು ಅಷ್ಟವಿನಾಯಕನ ದರ್ಶನ ಪಡೆದು ಧನ್ಯರಾಗಬಹುದು. 
 


ಗಣೇಶ ಚೌತಿ ಹತ್ತಿರ ಬರ್ತಿದೆ. ಭಕ್ತರು ಗಣಪತಿ ಪೂಜೆ, ಆರಾಧನೆಗೆ ತಯಾರಿ ನಡೆಸ್ತಿದ್ದಾರೆ. ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡದ ಜನರು ದೇವಸ್ಥಾನಗಳಿಗೆ ಹೋಗಿ, ಗಣಪತಿ ದರ್ಶನ ಪಡೆದು, ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ನೀವು  ಅಷ್ಟ ವಿನಾಯಕನ  ದರ್ಶನ ಪಡೆಯಬಹುದು. ನಾವಿಂದು ಅಷ್ಟವಿನಾಯಕ ದೇವಸ್ಥಾನ ಎಲ್ಲಿದೆ, ಅದ್ರ ವಿಶೇಷತೆ ಏನು ಎಂಬುದನ್ನು ಹೇಳ್ತೇವೆ.

ಅಷ್ಟವಿನಾಯಕ (Ashtavinayak) ದೇವಾಲಯಗಳು ಮಹಾರಾಷ್ಟ್ರ (Maharashtra) ರಾಜ್ಯದಲ್ಲಿರುವ ಎಂಟು ಪವಿತ್ರ ದೇವಾಲಯಗಳ ಸಮೂಹವಾಗಿದೆ. ಈ ಪ್ರತಿಯೊಂದು ದೇವಾಲಯಗಳು ಗಣೇಶನ ದಂತಕಥೆಗಳೊಂದಿಗೆ ಸಂಬಂಧ ಹೊಂದಿವೆ. ಗಣಪತಿ (Ganapati) ಗೆ ಸಮರ್ಪಿತವಾದ ತೀರ್ಥಯಾತ್ರೆಯ ಭಾಗವೆಂದು ಇದನ್ನು ಪರಿಗಣಿಸಲಾಗಿದೆ. 

Tap to resize

Latest Videos

ಆನೆ ಮುಖದ ಗಣಪನ ಜನನವೇ ಗಣೇಶ ಚತುರ್ಥಿ: ಮಹತ್ವ ತಿಳಿದು ಹಬ್ಬ ಮಾಡಿ

ಅಷ್ಟವಿನಾಯಕ ದೇವಾಲಯಗಳನ್ನು ಪೂರ್ವನಿರ್ಧರಿತ ಅನುಕ್ರಮದಲ್ಲಿ ಭೇಟಿ ಮಾಡಬೇಕು. ಅದು ಕ್ರಮವಾಗಿ ಮಯೂರೇಶ್ವರ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ, ಬಲ್ಲಾಳೇಶ್ವರ ದೇವಸ್ಥಾನ, ವರದ್ವಿನಾಯಕ ದೇವಸ್ಥಾನ, ಚಿಂತಾಮಣಿ ದೇವಸ್ಥಾನ, ಗಿರಿಜಾತ್ಮಜ್ ದೇವಸ್ಥಾನ ಮತ್ತು ವಿಘ್ನಹರ್ ದೇವಸ್ಥಾನ, ಪುಣೆಯ ರಂಜನ್‌ಗಾಂವ್‌ನಲ್ಲಿರುವ ಮಹಾಗಣಪತಿ ದೇವಾಲಯ ಪಟ್ಟಿಯಲ್ಲಿ ಬರುತ್ತದೆ.  ಭಕ್ತನು ಇತರ ಎಲ್ಲಾ ಎಂಟು ದೇವಾಲಯಗಳಿಗೆ ಭೇಟಿ ನೀಡಿದ ನಂತರ ಮತ್ತೆ ಮೊದಲ ಬಾರಿಗೆ ಭೇಟಿ ನೀಡಿದ ದೇವಸ್ಥಾನವನ್ನು ಭೇಟಿ ನೀಡಿದ್ರೆ ಮಾತ್ರ ತೀರ್ಥಯಾತ್ರೆ ಪೂರ್ಣಗೊಳ್ಳುತ್ತದೆ ಎಂದು ನಂಬಲಾಗಿದೆ.

1. ಮಯೂರೇಶ್ವರ ಅಷ್ಟವಿನಾಯಕ ದೇವಾಲಯ : ಪುಣೆ ಬಳಿಯ ಮೋರ್ಗಾಂವ್‌ನಲ್ಲಿ ಈ ದೇವಸ್ಥಾನವಿದೆ. ಅಷ್ಟವಿನಾಯಕ ತೀರ್ಥಯಾತ್ರೆಯ ಸಮಯದಲ್ಲಿ ನೀವು ಮೊದಲು ಭೇಟಿಮಾಡಬೇಕಾದ ಹಾಗೂ ಕೊನೆಯಲ್ಲಿ ಭೇಟಿ ಮಾಡಬೇಕಾದ ದೇವಸ್ಥಾನ ಇದು. ಈ ದೇವಾಲಯವನ್ನು ಬಹಮನಿ ಸುಲ್ತಾನರ  ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. 

ಗೌರಿ ಗಣೇಶ ಹಬ್ಬ: ಸೋಮವಾರವೇ, ಮಂಗಳವಾರವೋ? ಡೌಟಿಗಿಲ್ಲಿದೆ ಉತ್ತರ!

2. ಸಿದ್ಧಿವಿನಾಯಕ ದೇವಸ್ಥಾನ : ಸಿದ್ಧಿವಿನಾಯಕ ದೇವಸ್ಥಾನ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಸಿದ್ಧತೆಕ್‌ನಲ್ಲಿದೆ. ಭೀಮಾ ನದಿಯ ಪಕ್ಕದಲ್ಲಿರುವ ಬೆಟ್ಟದಲ್ಲಿ ಈ ದೇವಸ್ಥಾನವಿದೆ. ಎಂಟು ಅಷ್ಟವಿನಾಯಕ ದೇವಾಲಯಗಳಲ್ಲಿ ಗಣೇಶನ ಮೂರ್ತಿಯ ಸೊಂಡಿಲು ಬಲಕ್ಕೆ ತಿರುಗಿರುವ ಏಕೈಕ ದೇವಾಲಯ ಇದಾಗಿದೆ.

3. ಬಲ್ಲಾಳೇಶ್ವರ ದೇವಸ್ಥಾನ : ಬಲ್ಲಾಳೇಶ್ವರ ದೇವಸ್ಥಾನವು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪಾಲಿ ಗ್ರಾಮದಲ್ಲಿದೆ. ಅಷ್ಟವಿನಾಯಕ ದೇವಾಲಯಗಳಿಗೆ ಭೇಟಿ ನೀಡುವಾಗ ಮೂರನೇ ಸ್ಥಾನದಲ್ಲಿ ಇದು ಬರುತ್ತದೆ.  ಶ್ರೀ ಆಕಾರದಲ್ಲಿ ದೇವಾಲಯ ಇದೆ.  ದೇವಾಲಯದ ಎರಡು ಬದಿಗಳಲ್ಲಿ ಎರಡು ಸರೋವರಗಳಿವೆ.

4. ವರದ್ವಿನಾಯಕ ದೇವಸ್ಥಾನ : ವರದ್ವಿನಾಯಕನ ದೇವಾಲಯವು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾದ್ ಗ್ರಾಮದಲ್ಲಿದೆ. ಈ ವರದ್ವಿನಾಯಕ ಯಶಸ್ಸು ಮತ್ತು ಸಂಪತ್ತು ನೀಡುತ್ತಾನೆಂಬ ನಂಬಿಕೆಯಿದೆ. 

5. ಚಿಂತಾಮಣಿ ದೇವಸ್ಥಾನ : ಚಿಂತಾಮಣಿ ದೇವಾಲಯವು ಮಹಾರಾಷ್ಟ್ರದ ಕದಂಬಪುರ ಎಂದೂ ಕರೆಯಲ್ಪಡುವ ತೇರ್ ಗ್ರಾಮದಲ್ಲಿ ನೆಲೆಗೊಂಡಿದೆ. ತೇರ್, ಭೀಮಾ, ಮುಲಾ ಮತ್ತು ಮುತಾ ಎಂಬ ಮೂರು ಸಣ್ಣ ನದಿಗಳ ಸಂಗಮದಲ್ಲಿದೆ.

6. ಗಿರಿಜಾತ್ಮಜ್ ದೇವಸ್ಥಾನ : ಗಿರಿಜಾತ್ಮಜ್ ಎಂದು ಕರೆಯಲ್ಪಡುವ ಗಣೇಶನ ದೇವಾಲಯವು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೆನ್ಯಾದ್ರಿ ಬೆಟ್ಟದಲ್ಲಿದೆ.  ಗುಹೆಯ ಪ್ರವೇಶದ್ವಾರವನ್ನು ತಲುಪಲು  283 ಮೆಟ್ಟಿಲುಗಳನ್ನು ಏರಬೇಕು.  

7. ವಿಘ್ನಹರ್ ದೇವಸ್ಥಾನ : ವಿಘ್ನೇಶ್ವರ ದೇವಾಲಯವು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಓಜರ್ ಗ್ರಾಮದಲ್ಲಿದೆ. ಈ ಗಣೇಶ ಎಲ್ಲ ಅಡೆತಡೆಗಳನ್ನು ಹೋಗಲಾಡಿಸಿ ಭಕ್ತರಿಗೆ ನೆಮ್ಮದಿ ನೀಡುತ್ತಾನೆಂದು ನಂಬಲಾಗಿದೆ.  ದೇವಾಲಯವು ಪೂರ್ವಾಭಿಮುಖವಾಗಿದ್ದು ವಿಶಾಲವಾದ ಪ್ರಾಂಗಣವನ್ನು ಹೊಂದಿದೆ.

8. ರಂಜನ್‌ಗಾಂವ್‌ ಗಣಪತಿ ದೇವಸ್ಥಾನ : ಈ ದೇವಸ್ಥಾನವು ಪುಣೆಯಿಂದ 50 ಕಿಮೀ ದೂರದಲ್ಲಿರುವ ರಂಜನ್‌ಗಾಂವ್‌ನಲ್ಲಿದೆ. ಅಷ್ಟ ಗಣಪತಿ ದೇವಸ್ಥಾನಗಳಲ್ಲಿ ಭೇಟಿಯ ಕೊನೆಯ ದೇವಸ್ಥಾನ ಇದಾಗಿದೆ. ಇಲ್ಲಿನ ದೇವರು ಅತ್ಯಂತ ಶಕ್ತಿಶಾಲಿ ಮತ್ತು ಉಗ್ರ ರೂಪವೆಂದು ನಂಬಲಾಗಿದೆ. 

click me!