ಈ 5 ರಾಶಿಯವರು ಸಂಗಾತಿಯಾಗಿ ಸಿಕ್ಕರೆ ನಿಮ್ಮ ಅದೃಷ್ಟ ಎಂದುಕೊಳ್ಳಿ..

By Suvarna News  |  First Published Mar 17, 2022, 11:03 AM IST

ಎಲ್ಲರಿಗೂ soulmate ದಕ್ಕುವುದಿಲ್ಲ. ಅದಕ್ಕೂ ಅದೃಷ್ಟ ಬೇಕು. ಆದರೆ, ಕೆಲ ರಾಶಿಯವರು ವೈವಾಹಿಕ ಸಂಬಂಧದಲ್ಲಿ ಅತ್ಯುತ್ತಮ ಸಂಗಾತಿ ಎನಿಸಿಕೊಳ್ಳುತ್ತಾರೆ. ಅವರ ಹೊಂದಾಣಿಕೆ ಸ್ವಭಾವ, ಚೈತನ್ಯಶೀತೆ, ಸಂಗಾತಿಯನ್ನು ಪ್ರೇರೇಪಿಸುವ ಗುಣ ಬೆಸ್ಟ್ ಪಾರ್ಟ್ನರ್ ಆಗಿಸುತ್ತದೆ. ಆತ್ಮಸಂಗಾತಿಯಾಗುವ ಗುಣದವರು ಯಾವ ರಾಶಿಗೆ ಸೇರಿರುತ್ತಾರ ಗೊತ್ತಾ?


ಎಲ್ಲರೂ ವಿವಾಹವಾಗುವಾಗ ಆತ್ಮ ಸಂಗಾತಿ(soulmate)ಯ ಕನಸು ಕಾಣುತ್ತಾರೆ. ನಮ್ಮ ಜೀವನದ ಪ್ರತಿ ನಿಮಿಷ ಕೂಡಾ ಅವಿಸ್ಮರಣೀಯ ಎನಿಸುವಂಥ ಸಂಗಾತಿ(partner) ಸಿಕ್ಕರೆ ಎಷ್ಟು ಚೆಂದ ಎಂದು ಬಯಸುತ್ತಾರೆ. ಆದರೆ, ಇದೇನು ಅಷ್ಟು ಸುಲಭವಲ್ಲ. ಬಹುತೇಕರಿಗೆ ಅವರ ಸಂಗಾತಿಯಲ್ಲಿ ಸೋಲ್ ಮೇಟ್ ಸಿಕ್ಕುವುದಿಲ್ಲ. ಕೆಲವರು ಮಾತ್ರ ಅಂಥ ಅದೃಷ್ಟ(luck) ಹೊಂದಿರುತ್ತಾರೆ. ಇಂಥ ಸಂಗಾತಿ ಸಿಕ್ಕರೆ ಅದು ಅನಿರೀಕ್ಷಿತವಾಗಿಯೇ ಇರುತ್ತದೆ. ಏಕೆಂದರೆ, ನಮ್ಮ ಕನಸುಗಳಲ್ಲಿರುವ ಪರ್ಫೆಕ್ಟ್ ಪಾರ್ಟ್ನರ್‌ಗೂ ಆತ್ಮಸಂಗಾತಿಯಾಗುವವರಿಗೂ ವ್ಯತ್ಯಾಸ ಇರುತ್ತದೆ. ವಿವಾಹ(marriage)ವಾದ ನಂತರದಲ್ಲೇ ತಿಳಿಯುವುದು ಇವರು ಸಿಕ್ಕಿದ್ದು ಎಂಥಾ ಪುಣ್ಯ ಎಂಬುದು. ಯಾವ ರಾಶಿಯವರು ಹೀಗೆ ವೈವಾಹಿಕ ಜೀವನವನ್ನು ಹಸನಾಗಿಸುವ ಗುಣ ಹೊಂದಿದ್ದಾರೆ ಎಂದು ನಾವು ತಿಳಿದಿದ್ದರೆ ಕನಿಷ್ಠ ಪಕ್ಷ ರಾಶಿ(Zodiac) ನೋಡಿಯಾದರೂ ವಿವಾಹವಾಗಬಹುದು. ಈ ಕೆಳಗಿನ ರಾಶಿಯವರು ಪಕ್ಕಾ ಮ್ಯಾರೇಜ್ ಮೆಟೀರಿಯಲ್. 

ಮೀನ(Pisces)
ಅವರು ತುಂಬಾ ಪೋಷಿಸುವ ವ್ಯಕ್ತಿತ್ವ(nurturing personality)ವನ್ನು ಹೊಂದಿರುತ್ತಾರೆ. ಅವರು ತಮ್ಮ ಸಂಗಾತಿಯ ಬೆಳವಣಿಗೆಗೆ ಗಮನ ಹರಿಸುತ್ತಾರೆ. ಅವರ ಕಾಳಜಿ ಮಾಡುತ್ತಲೇ ಸಂಗಾತಿಗೆ ವ್ಯಕ್ತಿತ್ವ ವಿಕಸನಕ್ಕೆ ಪ್ರೋತ್ಸಾಹಿಸುತ್ತಾರೆ. ಮಕ್ಕಳನ್ನು ಕೂಡಾ ಬಹಳ ಚೆನ್ನಾಗಿ ಬೆಳೆಸುತ್ತಾರೆ. ಹೀಗಾಗಿ ಮೀನ ರಾಶಿಯವರು ಆದರ್ಶ ಸಂಗಾತಿ ಎನಿಸಿಕೊಳ್ಳುತ್ತಾರೆ. ಅವರು ಬಹು ಸೂಕ್ಷ್ಮಮತಿಯವರು. ಆದರೆ ಅಗತ್ಯವಿದ್ದಾಗ ಅಷ್ಟೇ ನಿಷ್ಠುರರಾಗಿರುತ್ತಾರೆ. ಅವರು ತುಂಬಾ ರೋಮ್ಯಾಂಟಿಕ್ ಕೂಡಾ ಆಗಿದ್ದು, ಮತ್ತಿನ್ನೇನು ತಾನೇ ಸಂಗಾತಿ ಬಯಸುವುದು?

Tap to resize

Latest Videos

ಮೇಷ(Aries)
ಜೀವನವನ್ನು ಹೇಗೆ ಅನುಭವಿಸಬೇಕು ಎಂಬುದನ್ನು ಮೇಷ ರಾಶಿಯವರನ್ನು ನೋಡಿ ಕಲಿಯಬೇಕು. ಹಾಗಾಗೇ ಇವರೊಂದಿಗಿದ್ದರೆ ಜೀವನ ಎಂದಿಗೂ ಬೋರಿಂಗ್ ಎನಿಸುವುದಿಲ್ಲ. ನೀರಸವಾಗಿರುವುದಿಲ್ಲ. ಅದೂ ಅಲ್ಲದೆ, ಸಂಗಾತಿಯ ವಿಷಯದಲ್ಲಿ ಬಹಳ ಪ್ರಾಮಾಣಿಕರು ಹಾಗೂ ಭಾವೋದ್ರಿಕ್ತ ಪ್ರೇಮಿಗಳು. ಒಮ್ಮೆ ಒಂದು ಸಂಬಂಧಕ್ಕೆ ಕಮಿಟ್ ಆದರೆ ಆ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರೆ. ಕೋಪ ಜಾಸ್ತಿಯಾದರೂ ಸಂಗಾತಿಯ ವಿಷಯದಲ್ಲಿ ಅದು ನುಸುಳುವುದಿಲ್ಲ.

Holi ಹಬ್ಬದ ದಿನ ಚಂದ್ರನ ಆರಾಧನೆಯಿಂದ ಸಮೃದ್ಧಿ

ವೃಷಭ(Taurus)
ಬಹಳ ಪ್ರಾಮಾಣಿಕ(honest), ನಿಷ್ಠಾವಂತರಾದ ಇವರು, ಸಂಬಂಧಗಳು ಮತ್ತು ವಿವಾಹವನ್ನು ಬಹುವಾಗಿ ಗೌರವಿಸುತ್ತಾರೆ. ಅವರು ತುಂಬಾ ಆರಾಮದಾಯಕವಾದ ವೈಬ್ ಹೊಂದಿರುತ್ತಾರೆ. ಇದರಿಂದ ಇವರೊಂದಿಗೆ ಇರುವುದೆಂದರೆ ಸಂತೋಷ ಎನಿಸುತ್ತದೆ. ಬಹಳ ಕಷ್ಟ ಪಟ್ಟು ಕೆಲಸ ಮಾಡುವ ಇವರು ವೃತ್ತಿ ಮತ್ತು ಸಂಬಂಧಗಳಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ನಿರ್ಮಿಸುವತ್ತ ಗಮನ ಹರಿಸುತ್ತಾರೆ. ಆದ್ದರಿಂದ, ಇವರು ಅತ್ಯುತ್ತಮ ಸಂಗಾತಿಯಾಗಬಲ್ಲರು.

ಕಟಕ(Cancer)
ಪ್ರೀತಿ ಮತ್ತು ಸಂಬಂಧಗಳು(Love and relationships) ಕರ್ಕಾಟಕ ರಾಶಿಯವರ ಜೀವನದ ಮುಖ್ಯ ಆದ್ಯತೆಯಾಗಿದೆ. ಅವರು ಎಲ್ಲ ರೀತಿಯ ಸಂಬಂಧಗಳಲ್ಲಿ ಪ್ರೀತಿಯನ್ನು ಹೆಚ್ಚು ಗೌರವಿಸುತ್ತಾರೆ ಮತ್ತು ಸಂಬಂಧ ಅಥವಾ ಮದುವೆಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳಲು ಅವರು ತಮ್ಮ ಕೈಲಾಗುವ ಎಲ್ಲವನ್ನೂ ಮಾಡುತ್ತಾರೆ. ಅವರು ತಮ್ಮ ಭಾವನೆಗಳ(feelings) ಬಗ್ಗೆ ತುಂಬಾ ಸೂಕ್ಷ್ಮವಾಗಿರುತ್ತಾರೆ.

ಹೀಗಿರಲಿದೆ ಕಿಯಾರಾ ಅದ್ವಾನಿ- ಸಿದ್ಧಾರ್ಥ್ ಮಲ್ಹೋತ್ರಾ ವೈವಾಹಿಕ ಜೀವನ

 ಸಿಂಹ(Leo)
ಸಿಂಹ ರಾಶಿಯೊಂದಿಗೆ ಬೇಸರದ ಕ್ಷಣಗಳಿರಲು ಸಾಧ್ಯವಿಲ್ಲ. ಅವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುವವರು ಹಾಗೂ ಅವರ ವಿಷಯದಲ್ಲಿ ಭಾವುಕರಾಗುವವರು. ಸಿಂಹ ರಾಶಿಯ ವ್ಯಕ್ತಿಯನ್ನು ತಮ್ಮ ಜೀವನ ಸಂಗಾತಿಯಾಗಿ ಹೊಂದಿದವರು ತಮ್ಮನ್ನು ತಾವು ತುಂಬಾ ಅದೃಷ್ಟವಂತರೆಂದು ಭಾವಿಸುತ್ತಾರೆ. ಅವರು ತುಂಬಾ ಕರುಣಾಮಯಿ, ಉದಾರ ಸ್ವಭಾವದವರು ಮತ್ತು ಸಂಗಾತಿಗೆ ಪ್ರೇರಣೆ ತುಂಬುವವರಾಗಿರುತ್ತಾರೆ. ಇದು ಅವರನ್ನು ಉತ್ತಮ ಸಂಗಾತಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!