ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧ್ವಜಸ್ತಂಭದ (ಕೊಡಿ ಮರದ) ಪಾದುಕೆ ಶಿಲಾನ್ಯಾಸ ಮತ್ತು ದೇಗುಲದಲ್ಲಿ ಚಂಡಿಕಾ ಯಾಗ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಸಲು ನಿರ್ಮಿಸಲಾದ ವೇದವ್ಯಾಸ ಯಾಗಶಾಲೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಉಡುಪಿ (ಜ.20): ಪ್ರತಿಮೆಯ ಮೂಲಕ ಭಗವಂತನನ್ನು ಆರಾಧಿಸುವುದು ಮತ್ತೊಂದು ಯಾಗ ಮಾಡಿ ಅಗ್ನಿ ಮೂಲಕ ಭಗವಂತನನ್ನು ಕಾಣುವುದು ಅಗ್ನಿಯ ಮೂಲಕ ಭಗವಂತನನ್ನು ಆರಾಧಿಸಿದರೆ ಭಕ್ತ ಇಷ್ಟಾರ್ಥಗಳನ್ನು ಕೂಡಲೇ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಕಡಿಯಾಳಿ ದೇವಸ್ಥಾನ ಈಗ ಅತ್ಯಂತ ವೈಭವೀಕರಣದ ಸಾನಿಧ್ಯ ಹೊಂದಿದೆ ಇಲ್ಲಿ ಕಾಷ್ಯ ಶಿಲ್ಪಕ್ಕೆ ಭಕ್ತರು ಮಾರುಹೋಗುತ್ತಿದ್ದಾರೆ ಮುಂದೆ ಇದೊಂದು ರಾಜ್ಯದಲ್ಲೇ ಅತ್ಯಂತ ಪವಿತ್ರ ಪ್ರವಾಸಿ ತಾಣವಾಗಿ ಮೂಡಿಬರಲಿ ಅಲ್ಲದೆ ಉಡುಪಿ ಶ್ರೀ ಕೃಷ್ಣನಿಗು ಕಡಿಯಾಳಿಯ ದೇವಿಗೂ ಅವಿನಾಭಾವ ಸಂಬಂಧ ಇದೆ ಅಲ್ಲಿಗೆ ಬಂದ ಭಕ್ತರು ಇಲ್ಲಿಗೆ ಬಂದು ದೇವಿಯ ದರ್ಶನ ಮಾಡಿ ಧನ್ಯರಾಗುತ್ತಾರೆ ಎಂದರು.
undefined
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧ್ವಜಸ್ತಂಭದ (ಕೊಡಿ ಮರದ) ಪಾದುಕೆ ಶಿಲಾನ್ಯಾಸ ಮತ್ತು ದೇಗುಲದಲ್ಲಿ ಚಂಡಿಕಾ ಯಾಗ ಇನ್ನಿತರ ಧಾರ್ಮಿಕ ಕಾರ್ಯಕ್ರಮ ನಡೆಸಲು ನಿರ್ಮಿಸಲಾದ ವೇದವ್ಯಾಸ ಯಾಗಶಾಲೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.ಮುಂದಿನ ದಿನಗಳಲ್ಲಿ ವ್ಯಾಘ್ರ ಪಿಲಿಚಾಮುಂಡಿ ಮತ್ತು ಇತರ ಪರಿವಾರ ದೈವಗಳ ಜೀರ್ಣೋದ್ಧಾರ ಕಾಮಗಾರಿ ಶೀಘ್ರದಲ್ಲೇ ನಡೆಸಲಾಗುವುದು. ಇದೀಗ ಧ್ವಜಸ್ತಂಭಕ್ಕೆ ಸಂಪೂರ್ಣ ತಾಮ್ರ ಮತ್ತು ಹಿತ್ತಾಳೆಯನ್ನು ಹೊದಿಸಿ ವಿಜೃಂಭಣೆಯಿಂದ ಧ್ವಜ ಪ್ರತಿಷ್ಠೆ ನಡೆಸಲಾಗುತ್ತಿದೆ.
ಮಾ.24ರಂದು ಬೆಳಿಗ್ಗೆ 7 ಗಂಟೆಗೆ ಧ್ವಜಸ್ತಂಭ ಪ್ರತಿಷ್ಠೆ ಕಲಶಾಭಿಷೇಕ 9:45ಗಂಟೆಗೆ ಒದಗುವ ವೃಷಭ ಲಗ್ನ ಸುಮೂರ್ತದಲ್ಲಿ ಶ್ರೀ ದೇವಿಗೆ ಬ್ರಹ್ಮಕಲಶಭಿಷೇಕ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಗಂಟೆಗೆ ಹಾಲಿಟ್ಟು ಸೇವೆ, ಧೂಳಿಮಂಡಲ ಸೇವೆ, ಸಣ್ಣ ರಂಗ ಪೂಜೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಡಾ. ಕಟ್ಟೆ ರವಿರಾಜ ವಿ ಆಚಾರ್ಯ ತಿಳಿಸಿದರು.
415 ದಿನಗಳ ಪಾದಯಾತ್ರೆಯಲ್ಲೇ ನೂರಾರು ತೀರ್ಥಕ್ಷೇತ್ರ ದರ್ಶಿಸಿದ ನಿವೃತ್ತ ಪೋಸ್ಟ್‌ಮಾಸ್ಟರ್
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ ಶೆಟ್ಟಿ, ದ್ವಜಸ್ತಂಭ ಪೀಠದ ದಾನಿಗಳಾದ ಸುಭಾಷ್ ಚಂದ್ರ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಭಾಸ್ಕರ್ ಶೇರಿಗಾರ್, ರಾಮಚಂದ್ರ ಸನಿಲ್, ಪದ್ಮಾ ರತ್ನಾಕರ, ಶ್ರೀಮತಿ ಭಾರತಿ ಚಂದ್ರಶೇಖರ್, ವಸಂತ್ ರಾವ್, ಸತೀಶ್ ಭಾಗವತ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಕೋಶಾಧಿಕಾರಿ ಸತೀಶ್ ಕುಲಾಲ್, ಇಂಜಿನಿಯರ್ ರಂಜನ್ ಕೆ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ.ಕೆ ಸದಾನಂದ ಶರ್ಮ, ಅರ್ಚಕ ಕೆ ರತ್ನಾಕರ ಉಪಾಧ್ಯ, ನಗರಸಭಾ ಸದಸ್ಯ ಶ್ರೀಮತಿ ಗೀತಾ ಶೇಟ್ ,ಗಿರೀಶ್ ಎಂ ಅಂಜನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜುನಾಥ ಹೆಬ್ಬಾರ್, ನಾಗರಾಜ ಶೆಟ್ಟಿ, ಕಿಶೋರ್ ಸಾಲ್ಯಾನ್, ಗಣೇಶ ನಾಯ್ಕ್, ಸಂಧ್ಯಾ ಪ್ರಭು, ಶಶಿಕಲಾ ಭರತ್, ರಮೇಶ್ ಶೇರಿಗಾರ್, ದೇವಸ್ಥಾನದ ಅಧಿಕಾರಿ ಗಂಗಾಧರ ಹೆಗ್ಡೆ, ಸಮಿತಿಯ ಸದಸ್ಯರಾದ ರಾಕೇಶ್ ಜೋಗಿ, ಸಂತೋಷ್ ಕಿಣಿ, ಅಶ್ವತ ದೇವಾಡಿಗ ,ಸಂದೀಪ್ ಸನಿಲ್ , ಗಣೇಶ್ ಆಚಾರ್ಯ, ಕಿಶೋರ್ ಕರಂಬಳ್ಳಿ ಶ್ರೀಮತಿ ಸುಜಲಾ ಸತೀಶ್, ಶ್ರೀಮತಿ ವಿದ್ಯಾ ಶಾಮ್ ಸುಂದರ್, ಶ್ರೀಮತಿ ಅಶ್ವಿನಿ ಪೈ ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು.
\'ಹಿಂದೂಗಳಿಗೆ ಮಾತ್ರ ವ್ಯಾಪಾರ ಅವಕಾಶ': ಕದ್ರಿಯ ದೇವಸ್ಥಾನದಲ್ಲಿ ಬ್ಯಾನರ್
ಧ್ಚಜಸ್ತಂಬಕ್ಕೆ ಪ್ರದಕ್ಷಿಣೆ ಹಾಕಿದ ಗರುಡ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕ್ಷೇತ್ರದ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಈ ಕೊಡಿ ಮರವನ್ನು ಆಯ್ಕೆ ಮಾಡಿ ತರಲಾಗಿತ್ತು. ಇದಕ್ಕೆ 586 ಲೀಟರ್ ಸಂಪೂರ್ಣ ಸಾವಯವ ಎಳ್ಳೆಣ್ಣೆಯನ್ನು ಹಾಕಿ 4 ತಿಂಗಳು ಇಡಲಾಗಿತ್ತು. ಸುಮಾರು 65 ಅಡಿ ಎತ್ತರದ ಈ ಕೊಡಿ ಮರ ಜಿಲ್ಲೆಯಲ್ಲೆ ಅತ್ಯಂತ ಎತ್ತರದ ಕೊಡಿ ಮರ ಎನ್ನಲಾಗಿದೆ. ಈ ಕೊಡಿ ಮರವನ್ನು ಇಂದು ಪ್ರತಿಷ್ಠೆ ಮಾಡಿದ ತಕ್ಷಣ ಗರುಡ ಬಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದನ್ನು ನೋಡಿ ಇಲ್ಲಿ ಸೇರಿದ ಜನ ಪುಳಕಿತಗೊಂಡರು.