ಈ ರಾಶಿಯವರ ಕೈಯಲ್ಲಿ ಕಾಸು ನಿಲ್ಲೊಲ್ಲ! ಏನು ಮಾಡಬೇಕು?

Suvarna News   | Asianet News
Published : Oct 02, 2020, 05:14 PM IST
ಈ ರಾಶಿಯವರ ಕೈಯಲ್ಲಿ ಕಾಸು ನಿಲ್ಲೊಲ್ಲ! ಏನು ಮಾಡಬೇಕು?

ಸಾರಾಂಶ

ಕೆಲವರ ಕೈಯಲ್ಲಿ ಏನೇ ಮಾಡಿದರೂ ಕಾಸು ನಿಲ್ಲೊಲ್ಲ. ಕೈಯಿಂದ ತೆಂಗಿನೆಣ್ಣೆ ಜಾರಿದ ಹಾಗೆ ಜಾರಿ ಹೋಗ್ತಾ ಇರುತ್ತೆ. ಏನಿವರ ಹಣೆಬರಹ? ಹೇಗೆ ಹಣ ಉಳಿಸಬಹುದು?  

ನಿಮ್ಮ ಕೈಯಲ್ಲಿ ಕಾಸು ನಿಲ್ಲದೆ ಇದ್ದರೆ ಅದಕ್ಕೆ ದುರದೃಷ್ಟದ ಜೊತೆಗೆ ಲಕ್ಷ್ಮಿದೇವಿಯ ಅಸಂತೃಪ್ತಿಯೂ ಕಾರಣ ಇರಬಹುದು. ಅದನ್ನು ಹೋಗಲಾಡಿಸಲು ಈ ಮಂತ್ರಗಳನ್ನು ಪಠಿಸಿ

ವೃಷಭ ರಾಶಿ
ಬಂದ ಹಣ ತೂತು ಬಟ್ಟೆಯಲ್ಲಿ ಸೋರಿ ಹೋಗುವ ನೀರಿನ ಹಾಗೆ ಹೋಗ್ತಾ ಇರುತ್ತೆ. ಕೆಲಸಗಳು ಬರುತ್ತವೆ. ಕೈಯಲ್ಲಿ ಹಣವೂ ಸಂಗ್ರಹವಾಗುತ್ತೆ. ಆದರೆ ಒಂದು ಗಂಟು ಅಂತ ಮಾಡಿ ಇಡೋಕೆ ಆಗೊಲ್ಲ. ಲಕ್ಷ್ಮಿದೇವಿಯನ್ನು ನೀವು ಒಲಿಸಿಕೊಳ್ಳದಿರುವುದೇ ಇದಕ್ಕೆ ಕಾರಣ. ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕಾದರೆ ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ಎಂಬ ಮಂತ್ರವನ್ನು ದಿನಕ್ಕೆ ನೂರೆಂಟು ಬಾರಿ ಪಠಿಸಿ. ಮೂರು ತಿಂಗಳಲ್ಲಿ ಧನಾತ್ಮಕ ಫಲಿತಾಂಶವನ್ನು ಕಾಣಬಹುದು.

ಮಿಥುನ ರಾಶಿ
ನಿಮ್ಮ ಉದ್ಯೋಗದ ತಾಣದಲ್ಲಿ ಸಾಕಷ್ಟು ದುಡಿಮೆ ಮಾಡಲು ನಿಮಗೆ ಸಾಧ್ಯವಾಗದೆ ಹೋಗಬಹುದು. ಆಗ ಹೆಚ್ಚಿನ ಇತರ ಕೆಲಸಕಾರ್ಯಗಳನ್ನು ಹಚ್ಚಿಕೊಳ್ಳಬೇಕಾದೀತು. ಆದರೆ ಇದಕ್ಕೆ ನೀವು ನಿಮ್ಮ ಇನ್ನಿತರ ಸಂಪನ್ಮೂಲಗಳನ್ನೂ ವಿನಿಯೋಗಿಸಬೇಕಾಗುತ್ತದೆ. ಬಂದ ಹಣ ನಿಮ್ಮಲ್ಲೇ ಉಳಿಯುವ ಹಾಗೆ ಉಳಿತಾಯ ಯೋಜನೆಗಳನ್ನು ರೂಪಿಸದೆ ಇದ್ದರೆ ನಿಮ್ಮ ಬಳಿ ಕಾಸು ಉಳಿಯುವುದೇ ಅನುಮಾನ. ಓ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ದಿನಕ್ಕೆ ನೂರೆಂಟು ಬಾರಿ ಜಪಿಸಿದರೆ ಲಕ್ಷ್ಮಿಯು ನಿಮ್ಮಲ್ಲೇ ಉಳಿಯುತ್ತಾಳೆ.

ಸಿಂಹ ರಾಶಿ
ನಿಮಗೆ ಜೀವನದಲ್ಲಿ ಸಂತಸದ ಕ್ಷಣಗಳು ಸಾಕಷ್ಟು ಬರಬಹುದು. ಜೀವನವನ್ನು ಎಂಜಾಯ್ ಮಾಡಬಹುದು. ಅದಕ್ಕೂ ಹಣಕ್ಕೂ ಸಂಬಂಧವಿಲ್ಲ. ಆದರೆ ಒಂದು ದೊಡ್ಡ ಉಳಿತಾಯದ ಗಂಟು ಮಾಡುವುದು, ಮನೆ ಕಟ್ಟುವುದು, ಎಸ್ಟೇಟ್ ತಗೊಳ್ಳುವುದು ಮುಂತಾದ ಕನಸುಗಳು ಈಡೇರಿಸಿಕೊಳ್ಳುವುದು ಕಷ್ಟವೇ. ಓಂ ಶ್ರೀ ಮಹಾಲಕ್ಷ್ಮೈಚಾ ವಿದ್ಮಹೇ ವಿಷ್ಣು ಪತ್ನಯೇ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ"' ಎಂಬ ಬೀಜಮಂತ್ರವನ್ನು ದಿನಕ್ಕೆ ನೂರ ಎಂಟು ಬಾರಿ ಪಠಿಸಿದರೆ ಮಂಗಳವಾಗುತ್ತದೆ. 

ಕಟಕ ರಾಶಿ
ಹಣವನ್ನು ಉಳಿಸಿಬೇಕು ಎನ್ನುವುದು ನಿಮ್ಮ ಆಸೆಗಳಲ್ಲಿ ಒಂದು. ಉಳಿಸುತ್ತೀರಿ ಸಹ. ಆದರೆ ಅದು ಯಾವ್ಯಾವುದೋ ರೀತಿಯಲ್ಲಿ ಖರ್ಚಾಗುತ್ತಾ ಇರುತ್ತೆ. ನಿಮ್ಮ ನಿರೀಕ್ಷೆಯೇ ಇಲ್ಲದ ಕಡೆಯಲ್ಲಿ, ನಿರೀಕ್ಷೆಯೇ ಇಲ್ಲದವರಿಂದ ಖರ್ಚುಗಳು ಬರುತ್ತಾ ಇರುತ್ತವೆ. ಇದಕ್ಕೆಲ್ಲ ರುದ್ರಪ್ರಕೋಪವೇ ಕಾರಣ. ರುದ್ರನನ್ನು ಒಲಿಸಬೇಕಿದ್ದರೆ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಪ್ರತಿನಿತ್ಯ ನೂರೆಂಟು ಬಾರಿ ಜಪಿಸಿ.

ಪುರಾಣಕಾಲದಲ್ಲೂ ಹನಿ ಟ್ರ್ಯಾಪ್ ಇತ್ತಾ? 

ಧನು ರಾಶಿ
ಹಣ ಒಂದು ಮರೀಚಿಕೆಯಂತೆ ನಿಮಗೆ ಕಾಣಬಹುದು. ಅಂದರೆ ನಿಮ್ಮ ಬಳಿಗೆ ಬರುತ್ತೇನೆ ಎನ್ನುತ್ತದೆ. ಆದರೆ ಬರಲು ಸತಾಯಿಸುತ್ತದೆ. ದೂರದಲ್ಲಿರುವ ಕನ್ನಡಿಯಲ್ಲಿ ಕಾಣುವ ಗಂಟಿನಂತೆ ಕಾಸು ನಿಮ್ಮನ್ನು ಸತಾಯಿಸಬಹುದು. ಹಾಗೇ ನಿಮಗೆ ನ್ಯಾಯವಾಗಿ ದಕ್ಕಬೇಕಾದ ಹಣ ಕೂಡ ಸಿಗದೆ ಕಷ್ಟಪಡಿಸುತ್ತದೆ.  ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯಾಹ ಸುತಾನ್ವಿತಾ | ಮನುಷ್ಯೋ ಮತ್ಪ್ರಸಾದೇನ್‌ ನ ಸನ್ಶಯ ಓಂ ಎಂಬ ಮಂತ್ರವನ್ನು ಪ್ರತಿದಿನ ನೂರೆಂಟು ಬಾರಿ ಪಠಿಸಿದರೆ ಮೂರು ತಿಂಗಳಲ್ಲಿ ಶುಭವಾಗುತ್ತದೆ.

ಮೀನ ರಾಶಿಯವರಿಗೆ ಹಲ್ಲಿ ಕಂಡರೆ ಭಯ, ನಿಮಗೆ ಯಾವ ಭಯ? 

ಮೀನ ರಾಶಿ
ನಿಮಗೆ ಹಣವನ್ನು ಉಳಿಸಿಕೊಳ್ಳುವ ಕಲೆ ಗೊತ್ತಿಲ್ಲ ಹಣ ಉಳಿಸುವುದು ಒಂದು ವಿದ್ಯೆಯೂ ಹೌದು, ಕಲೆಯೂ ಹೌದು. ಕೆಲವೊಮ್ಮೆ ನಿಮ್ಮ ಸಾಮರ್ಥ್ಯದ ಮಿತಿಗೆ ಮೀರಿದ ವೆಚ್ಚವನ್ನು ನೀವು ಮಾಡುವುದರಿಂದಾಗಿ, ಸಾಲವನ್ನು ಮಾಡಬೇಕಾಗುತ್ತದೆ. ಆದರೆ ಸಾಲ ಕಟ್ಟಲು ಸಾಕಷ್ಟು ಸಂಪನ್ಮೂಲ ಇರುವುದಿಲ್ಲ ಎಂಬುದೂ ನಿಜ. ನೀವು ಓಂ ಶ್ರಿಂಗ್ ಹ್ರಿಂಗ್ ಕ್ಲಿಂಗ್‌ ಶ್ರಿಂಗ್‌ ಸಿದ್ಧಾ ಲಕ್ಷ್ಮೈ ನಮಃ ಎಂಬ ಸಿದ್ಧಲಕ್ಷ್ಮೀ ಮಂತ್ರವನ್ನು ದಿನಕ್ಕೆ ನೂರೆಂಟು ಬಾರಿ ಜಪಿಸುವುದರಿಂದ ಜೀವನದಲ್ಲಿ ಲಾಭದತ್ತ ಚಲಿಸಬಹುದು.

ಗ್ರಹದೋಷದಿಂದ ಸಂಬಂಧ ಹಾಳು, ಸರಿಮಾಡಿಕೊಳ್ಳಲು ಹೀಗೆ ಮಾಡಿ..! 

ಮೆಲಿನ ಲಕ್ಷ್ಮಿ ಮಂತ್ರಗಳನ್ನು ಪಠಿಸುವಾಗ ಕೈಯಲ್ಲಿ ಮಣಿಮಾಲೆಯನ್ನೋ ಅಥವಾ ಕಮಲದ ಬೀಜದಿಂದ ತಯಾರಿಸಿದ ಮಾಲೆಯನ್ನೋ ಹಿಡಿದು ಲಕ್ಷ್ಮಿಯನ್ನು ಆರಾಧಿಸಬೇಕು. ಇದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ನಿಮ್ಮ ಮನೆಯ ಸಿರಿ, ಸಂಪತ್ತು, ಐಶ್ವರ್ಯ ವೃದ್ಧಿಸುತ್ತದೆ.

PREV
click me!

Recommended Stories

Baba Vanga Prediction 2026: ಯಂತ್ರಗಳು ಮನುಷ್ಯರನ್ನು ತಿನ್ನುತ್ತವೆ! ಬಾಬಾ ವಂಗಾ ಭಯಂಕರ ಭವಿಷ್ಯವಾಣಿ!
ವೃಶ್ಚಿಕ ರಾಶಿಯಲ್ಲಿ ಡಬಲ್ ರಾಜಯೋಗ, ಈ 3 ರಾಶಿಗೆ ಅದೃಷ್ಟ ಚಿನ್ನದಂತೆ, ಫುಲ್‌ ಜಾಕ್‌ಪಾಟ್‌